ನಿಮ್ಮ ವಾಹನದ ಮೈಲೇಜ್​ ಹೆಚ್ಚಿಸಿಕೊಳ್ಳುವುದು ಹೇಗೆ?

news18
Updated:April 30, 2018, 11:35 AM IST
ನಿಮ್ಮ ವಾಹನದ ಮೈಲೇಜ್​ ಹೆಚ್ಚಿಸಿಕೊಳ್ಳುವುದು ಹೇಗೆ?
Image: sandsun/Istock.com
news18
Updated: April 30, 2018, 11:35 AM IST
ನ್ಯೂಸ್​ 18 ಕನ್ನಡ 

ನವದೆಹಲಿ: ಹೆಚ್ಚಿನ ವಾಹನ ಚಾಲಕರು ಕಾರು ಖರೀದಿ ಸಂದರ್ಭದಲ್ಲಿ ಗಮನಿಸುವ ಪ್ರಮುಖ ಅಂಶಗಳಲ್ಲಿ ಮುಖ್ಯವಾದುದು ಮೈಲೇಜ್​, ಅದು ಬೈಕ್​ ಆಗಿರಲಿ ಅಥವಾ ಕಾರು ಆಗಿರಲಿ ಮೊದಲು ವಾಹನ ಖರೀದಿಸುವಾಗ ಮೈಲೇಜ್ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಹೀಗಾಗಿ ಈ ಮೈಲೆಜ್​ ಏರಿಕೆಗೆ ಇಲ್ಲಿದೆ ಕೆಲವು ಟಿಪ್ಸ್​

ಎಂಜಿನ್​ ಟ್ಯೂನ್​-ಅಪ್​
ವಾಹನದ ಎಂಜಿನ್ ಶುದ್ಧವಾಗಿಟ್ಟುಕೊಳ್ಳುವ ಮೂಲಕ ಯಂತ್ರದ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ, ಹೀಗೆ ಮಾಡುವುದರಿಂದ ಎಂಜಿನ್​ ಕ್ಷಮತೆ ವೃದ್ಧಿಯಾಗುತ್ತದೆ. ನಿಯಮಿತ ಎಂಜಿನ್ ಟ್ಯೂನ್-ಅಪ್‌ಗಳು ಮತ್ತು ವ್ಹೀಲ್ ಅಲೈನ್‌ಮೆಂಟ್‌ನಿಂದ ಪ್ರತಿ ಲೀಟರ್‌ಗೆ ಹೆಚ್ಚು ಕಿಲೋಮೀಟರ್ ಮೈಲೇಜ್​ ದೊರೆಯುತ್ತದೆ.

ನಿಯಮಿತ ಕಾರು ವೇಗ
ಬಹುತೇಕ ಕಾರುಗಳು ಗಂಟೆಗೆ 60ರಿಂದ 80 ಕೀ.ಮೀ. ವೇಗತೆಯಲ್ಲಿ ಸಂಚರಿಸಿದ್ದಲ್ಲಿ ಅತ್ಯುತ್ತಮ ಇಂಧನ ಕ್ಷಮತೆಯನ್ನು ನೀಡುತ್ತದೆ. ಒಂದು ವೇಳೆ ಗಂಟೆಗೆ 80-90 ಕೀ.ಮೀ.ಗಿಂತಲೂ ಹೆಚ್ಚು ವೇಗತೆಯಲ್ಲಿ ಚಲಿಸಿದ್ದಲ್ಲಿ ಇಂಧನ ಕ್ಷಮತೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ.

ಟೈಯರ್​ಗಳ ಅಲೈನ್​ಮೆಂಟ್​
Loading...

ಸೂಕ್ತ ರೀತಿಯಲ್ಲಿ ಟೈರ್​ಗಳ ಅಲೈನ್​ಮೆಂಟ್​ ಮಾಡುವುದರಿಂದ ದೀರ್ಘ ಕಾಲಿಕ, ಹೆಚ್ಚು ಕ್ಷಮತೆಯ ಎಂಜಿನ್​​ಗಳನ್ನು ನಾವು ಪಡೆಯಬಹುದು, ಟೈರ್​ಗೆ ಸೂಕ್ತ ಪ್ರಮಅಣದಲ್ಲಿ ಏರ್​ಫಿಲ್​ ಮಾಡುವುದರಿಂದ ಟೈರ್​ ಬಾಳಿಕೆಯೂ ಹೆಚ್ಚಾಗುತ್ತದೆ.

ಕೆಲವೊಂದು ಪಂಪ್‌ಗಳಲ್ಲಿ 'ಸ್ಪೆಷಲ್ ಇಂಧನ'ಗಳೆಂಬ ಬೋರ್ಡ್‌ಗಳನ್ನು ಲಗತ್ತಿಸಿರುವುದು ಗಮನಿಸಿರಬಹುದು. ಇದು ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದನ್ನು ಅಧಿಕೃತರು ವಾದಿಸಬಹುದು. ಆದರೆ ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತುಕೊಳ್ಳಿ. ಇದರ ಬದಲು ವಾಹನದ ಎಂಜಿನ್ ಸದಾ ಶುಚಿಯಾಗಿಡುವ, ಯಂತ್ರದೊಳಗೆ ಘರ್ಷಣೆ ತಪ್ಪಿಸುವಂತಹ ಆಯಿಲ್ ಬಳಸಿ.

ಸಿಗ್ನಲ್‌ಗಳ ಬಳಿ ಅಥವಾ ವಾಹನ ಚಾಲನೆಯಲ್ಲಿ ಇಲ್ಲದೇ ಇದ್ದಾಗ ಎಂಜಿನ್ ಆಫ್ ಮಾಡಿ, ಅತಿಯಾದ ಎಸಿ ಬಳಕೆಯೂ ಕೂಡಾ ಒಳ್ಳೆಯದಲ್ಲ, ನಿಮ್ಮ ವಾಹನದ ಏರ್ ಫಿಲ್ಟರ್​ ಬದಲಾಯಿಸಿ, ಎಮಿಷನ್​ ಸಿಸ್ಟಮ್​, ವಾಹನದ ಎಕ್ಸಾಸ್ಟ್​ ಕೂಡಾ ಸಮಯಕ್ಕೆ ತಕ್ಕಂತೆ ಬದಲಾಯಿಸುತ್ತಾ ಇರಿ. ಈ ರೀತಿ ಮಾಡುವುದರಿಂದ ಶೇ.25ರ ವರೆಗೂ ಮೈಲೆಜ್​ ಪಡೆಯಬಹದು.
First published:April 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ