HOME » NEWS » Tech » TIPS AND TRICKS TO IMPROVE YOUR 4G LTE DATA SPEED HG

​Smartphone Tips: ಇಂಟರ್​ನೆಟ್ ವೇಗ​ ಹೆಚ್ಚಿಸಲು ಹೀಗೆ ಮಾಡಿ ನೋಡಿ..

ಮೊಬೈಲ್​ ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಸುವ ಸಲುವಾಗಿ ಕೆಲವು ಟ್ರಿಕ್ಸ್​ ಇಲ್ಲಿ ನೀಡಲಾಗಿದೆ. ಹಾಗಾಗಿ ಸ್ಮಾರ್ಟ್​ಫೋನ್​ ಬಳಕೆದಾರರು ಒಂದು ಬಾರಿ ಕೆಳಗೆ ನೀಡಲಾಗಿರುವ ಟ್ರಿಕ್ಸ್​ ಬಳಸಿ ನೋಡಿ.

news18-kannada
Updated:April 26, 2021, 5:09 PM IST
​Smartphone Tips: ಇಂಟರ್​ನೆಟ್ ವೇಗ​ ಹೆಚ್ಚಿಸಲು ಹೀಗೆ ಮಾಡಿ ನೋಡಿ..
ಸ್ಮಾರ್ಟ್​ಫೋನ್
  • Share this:
ನಿಮ್ಮ ಮೊಬೈಲ್ ಇಂಟರ್​ನೆಟ್​ ವೇಗವಾಗಿ ಕಾರ್ಯನಿರ್ವಹಿಸುತ್ತಿಲ್ವಾ? 4ಜಿ ನೆಟ್​ವರ್ಕ್​ ಇದ್ದರು ಇಂಟರ್​ನೆಟ್​ ಬಳಸಲು ಆಗುತ್ತಿಲ್ಲವೇ? ಹಾಗಿದ್ದರೆ ಚಿಂತೆ ಬೇಡ, ಮೊಬೈಲ್​ ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಸುವ ಸಲುವಾಗಿ ಕೆಲವು ಟ್ರಿಕ್ಸ್​ ಇಲ್ಲಿ ನೀಡಲಾಗಿದೆ. ಹಾಗಾಗಿ ಸ್ಮಾರ್ಟ್​ಫೋನ್​ ಬಳಕೆದಾರರು ಒಂದು ಬಾರಿ ಕೆಳಗೆ ನೀಡಲಾಗಿರುವ ಟ್ರಿಕ್ಸ್​ ಬಳಸಿ ನೋಡಿ.

ಸ್ಮಾರ್ಟ್​ಫೋನ್​ ಸೆಟ್ಟಿಂಗ್​ ಬದಲಾಯಿಸಿ:

ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಸಲು ಒಂದು ಬಾರಿ ಸೆಟ್ಟಿಂಗ್​ ಆಯ್ಕೆಗೆ ತೆರಳಬೇಕು. ಕೆಲವು ಸ್ಮಾರ್ಟ್​ಫೋನ್​ಗಳಲ್ಲಿ ಸಿಮ್​ ಹಾಕಿದ ತಕ್ಷಣ ಆಟೋಮ್ಯಾಟಿಕ್​ ಸೆಟ್ಟಿಂಗ್​ ಆಗಿ ಬಿಡುತ್ತದೆ. ಆದರೆ ಅದನ್ನು ಮ್ಯಾನುವಲಿಗೆ ಬದಲಾಯಿಸಬೇಕು. ಸ್ಟೆಟ್ಟಿಂಗ್​ ತೆರಳಿದ ಬಳಿಕ ಅಲ್ಲಿ ಫ್ರಿಪರ್ಡ್​ ಅಪ್​ ನೆಟ್​ವರ್ಕ್​ ಆಯ್ಕೆ ಕಾಣಿಸುತ್ತದೆ ಅದರಲ್ಲಿ 4ಜಿ ಅಥವಾ ಲೈಟ್​ ಆಯ್ಕೆ ಮಾಡಬೇಕು.

ಎಪಿಎನ್​ ಸೆಟ್ಟಿಂಗ್​ ಬದಲಾಯಿಸಿ:

ಎಪಿಎನ್​ ಎಂದರೆ ಎಸೆಸ್​ ಪಾಯಿಂಟ್​ ನೆಟ್​ವರ್ಕ್​ ಎಂದು . ನೆಟ್​ವರ್ಕ್​ ಸೆಟ್ಟಿಂಗ್​ ಆಯ್ಕೆಗೆ ತೆರಳಿದಾಗ ಅಲ್ಲಿ ಎಪಿಎನ್ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿದರೆ ಎಪಿಎನ್​ ಟೈಪ್​ ಕಾಣಿಸುತ್ತದೆ. ನಂತರ ಡಿಪಾಲ್ಟ್​ ಎಂದು ಕಾಣಿಸುತ್ತದೆ. ಅದರಲ್ಲಿ ಎಪಿಎನ್​ ಪ್ರೊಟೊಕಾಲ್​ ಕ್ಲಿಕ್​ ಮಾಡಿ ಐಪಿವಿ4/ ಐಪಿವಿ6 ಆಯ್ಕೆ ಮಾಡಬೇಕು.

Cache ಕ್ಲೀಯರ್​ ಮಾಡಿ:

ಆ್ಯಂಡ್ರಾಯ್ಡ್​ ಫೋನಿನಲ್ಲಿ ಅಟೋಮ್ಯಾಟಿಕ್​ ಆಗಿ Cache ಸೇವ್​ ಆಗಿರುತ್ತದೆ. ಇದನ್ನು ಆಗಾಗ ಕ್ಲೀಯರ್​ ಮಾಡಿದರೆ ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಸಲು ಸಹಾಯವಾಗುತ್ತದೆ.. ಇಲ್ಲದಿದ್ದರೆ ಸ್ಮಾರ್ಟ್​ಫೋನ್​ ನಿಧಾನವಾಗಿ ಕಾರ್ಯನಿರ್ವಹಿಸಲು ಇದು ಕಾರಣವಾಗಬಹುದು.ಆ್ಯಪ್​ ತೆರೆದಿಡಬೇಡಿ:

ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟ್ಟರ್​ ಹೀಗೆ ಕೆಲವೊಮ್ಮ ಆ್ಯಪ್​ಗಳನ್ನು ತೆರೆದಿರುತ್ತೀರಿ. ಆದರೆ ಆ್ಯಪ್​ ಬಳಸದಿದ್ದರು ಬ್ಯಾಗ್ರೌಂಟ್​ನಲ್ಲಿ ಈ ಆ್ಯಪ್​ಗಳು ಇಂಟರ್​ನೆಟ್​ ಬಳಸುತ್ತಿರುತ್ತವೆ. ಇದರಿಂದ ಇಂಟರ್​ನೆಟ್​ ನಿಧಾನವಾಗುವ ಸಾಧ್ಯತೆ ಇರುತ್ತದೆ.

ಇನ್ನು ವಾಟ್ಸ್​ಆ್ಯಪ್​ಗೆ ಬರುವ ಫೋಟೋ, ವಿಡಿಯೋ ಅಟೋ ಡೌನ್​ಲೋಡ್​ ಅಯ್ಕೆಯನ್ನು ಆಫ್​ ಮಾಡಿ. ಇದರಿಂದ ಹೆಚ್ಚಿನ ಡೇಟಾ ಮಾತ್ರವಲ್ಲದೆ ಇಂಟರ್​ನೆಟ್​ ಕೂಡ ಡೌನ್​ ಆಗುತ್ತದೆ.
Published by: Harshith AS
First published: April 26, 2021, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories