HOME » NEWS » Tech » TIKTOK REGAINS TOP SPOT ON APP STORE AND GOOGLE PLAY IN INDIA OFFERS RS 1 LAKH CASH REWARD TO USERS EVERY DAY

ಹೊಸ ಆಫರ್​​​ನೊಂದಿಗೆ ಮತ್ತೆ ಬಂದಿದೆ ಟಿಕ್​-ಟಾಕ್; ಒಂದು ಲಕ್ಷ ರೂ ನಿಮ್ಮದಾಗಿಸಿ!

ಭಾರತದ ಟಿಕ್​​ಟಾಕ್​ ಎಂಟರ್​ಟೈನ್​ಮೆಂಟ್​​ ಸ್ಟ್ರಾಟಜಿ ಮತ್ತು ಪಾಲುದಾರಾದ ಸುಮೇದಾಸ್ ರಾಜಗೋಪಾಲ್ ಮಾತನಾಡಿ ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಜನರು TikTok ಗೆ ಬೆಂಬಲ ಮತ್ತು ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಟಿಕ್​ಟಾಕ್​ನೊಂದಗೆ ನಮ್ಮ ಪ್ರಯಾಣವನ್ನು ಮುಂದುವರೆಸಲು ನಾವು ಉತ್ಸುಕರಾಗಿದ್ದೇವೆ. ಸಾಕಷ್ಟು ಬಳಕೆದಾರರು ಬೆಂಬಲವನ್ನೂ ನೀಡಿದ್ದಾರೆ. ನಮ್ಮ ಬಳಕೆದಾರರ ಸುರಕ್ಷತೆಯನ್ನು ರಕ್ಷಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

news18
Updated:June 2, 2020, 4:26 PM IST
ಹೊಸ ಆಫರ್​​​ನೊಂದಿಗೆ ಮತ್ತೆ ಬಂದಿದೆ ಟಿಕ್​-ಟಾಕ್; ಒಂದು ಲಕ್ಷ ರೂ ನಿಮ್ಮದಾಗಿಸಿ!
ಟಿಕ್​-ಟಾಕ್
  • News18
  • Last Updated: June 2, 2020, 4:26 PM IST
  • Share this:
ಭಾರತದಲ್ಲಿ ನಿಷೇಧದಿಂದ ತೆರವುಗೊಂಡಿದ್ದ ಟಿಕ್​-ಟಾಕ್​ ವಿಡಿಯೋ ಆ್ಯಪ್​ ಮತ್ತೊಮ್ಮೆ ತಲೆಯೆತ್ತಿದೆ. ಮದ್ರಾಸ್​ ಹೈಕೋರ್ಟ್​ ಹೇರಿದ್ದ ನಿಷೇಧವನ್ನು ತೆರವುಗೊಳಿಸಿ ಇದೀಗ ಗೂಗಲ್​ ಪ್ಲೇಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ನಲ್ಲೂ ಕಾಣಿಸಿಕೊಂಡಿದೆ. ಅಶ್ಲೀಲತೆಯನ್ನು ಪ್ರಚೋದನೆ ಮಾಡುವ ಕಾರಣಕ್ಕೆ ಹೈಕೋರ್ಟ್​ ಈ ಆ್ಯಪ್​ ಅನ್ನು ಬ್ಯಾನ್​ ಮಾಡಿತ್ತು. ಈ ನಿಟ್ಟಿನಲ್ಲಿ ಟಿಕ್​-ಟಾಕ್ ತನ್ನ ಮಾರುಕಟ್ಟೆಯಲ್ಲಿ ಮಾಕಡೆ ಮಲಗಿತ್ತು. ಆದರೆ ಮದ್ರಾಸ್​ ಹೈಕೋರ್ಟ್​ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ ನಂತರ ಪುನಚ್ಚೇತನಗೊಂಡಿದೆ.

ಸದ್ಯ ಬಳಕೆದಾರರನ್ನು ಹೆಚ್ಚಿಸುವ ಸಲುವಾಗಿ ಟಿಕ್​-ಟಾಕ್ ಹೊಸ ಸುವರ್ಣ ಅವಕಾಶವನ್ನು ಒದಗಿಸುತ್ತಿದೆ. ಬಳಕೆದಾರರು ತಮ್ಮ ಸಾಮಾಜಿಕ ತಾಣದಲ್ಲಿ #ReturnofTikTok ಎಂಬ ಹ್ಯಾಶ್​ ಟ್ಯಾಗ್​ ನಮೂದಿಸಿ ಶೇರ್​ ಮಾಡಿದರೆ 1 ಲಕ್ಷ ರೂಪಾಯಿ  ಬಹುಮಾನ ಗೆಲ್ಲುವ ಅವಕಾಶ ನೀಡುತ್ತಿದೆ. ​ಈ ಹ್ಯಾಶ್​ ಟ್ಯಾಗ್​ ಕ್ಲಿಕ್​ ಮಾಡಿದರೆ ಟಿಕ್​-ಟಾಕ್​ ಮೈಕ್ರೊಸೈಟ್​ ಪೇಜ್​ಗೆ ತೆರಳುತ್ತದೆ. ನಂತರ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಪ್ರೊಮೊಷನ್​ ನೀಡಿದ 3 ಜನರಿಗೆ ಬಹುಮಾನ ನೀಡಲಾಗುತ್ತದೆ.ಇದು ಮೇ.16ರ ವರೆಗೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ದಿವಂಗತ ಶಿವಳ್ಳಿಯವರನ್ನು ನೆನೆದು ಕಣ್ಣೀರು ಹಾಕಿದ್ದೆನೆ ಹೊರತು ಓಟಿಗಾಗಿ ಅಲ್ಲ ; ಡಿ.ಕೆ. ಶಿವಕುಮಾರ್

ಈ ಕುರಿತು ಭಾರತದ ಟಿಕ್​​ಟಾಕ್​ ಎಂಟರ್​ಟೈನ್​ಮೆಂಟ್​​ ಸ್ಟ್ರಾಟಜಿ ಮತ್ತು ಪಾಲುದಾರಾದ ಸುಮೇದಾಸ್ ರಾಜಗೋಪಾಲ್ ಮಾತನಾಡಿ 'ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಜನರು ಟಿಕ್​-ಟಾಕ್ ಗೆ ಬೆಂಬಲ ಮತ್ತು ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಟಿಕ್​ಟಾಕ್​ನೊಂದಿಗೆ ನಮ್ಮ ಪ್ರಯಾಣವನ್ನು ಮುಂದುವರೆಸಲು ನಾವು ಉತ್ಸುಕರಾಗಿದ್ದೇವೆ. ಸಾಕಷ್ಟು ಬಳಕೆದಾರರು ಬೆಂಬಲವನ್ನೂ ನೀಡಿದ್ದಾರೆ. ನಮ್ಮ ಬಳಕೆದಾರರ ಸುರಕ್ಷತೆಯನ್ನು ರಕ್ಷಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಅಂತೆಯೇ, ಭಾರತದಲ್ಲಿ ಟಿಕ್​-ಟಾಕ್​ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ತಿಂಗಳಿಗೆ 120 ಮಿಲಿಯನ್​ ಜನರು ಟಿಕ್​ಟಾಕ್ ಅನ್ನು​ ಡೌನ್​ಲೋಡ್​ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
First published: May 10, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories