TikToK: ಟಿಕ್​​ಟಾಕ್​ ರೇಟಿಂಗ್ ಏರಿಕೆ; 80 ಲಕ್ಷ ನೆಗೆಟಿವ್ ರಿವೀವ್ ಡಿಲೀಟ್ ಮಾಡಿದ ಗೂಗಲ್!

TikToK: ಸಾಮಾಜಿಕ ಜಾಲತಾಣದಲ್ಲಿ #Bantiktok  ಎಂಬ ಅಭಿಯಾನ ಆರಂಭವಾದ ನಂತರ ಟಿಕ್​ಟಾಕ್​ ಬಳಸುವವರ ಸಂಖ್ಯೆ ಕಡಿಮೆಯಾಗಿತ್ತು. ಜನರು ಇತರೆ ಆ್ಯಪ್​ಗಳ ಮೊರೆ ಹೋದರು. ಆದರೀಗ ಮತ್ತೆ ಟಿಕ್​ಟಾಕ್​ ಆ್ಯಪ್​ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 4.4 ರೇಟಿಂಗ್​ನಲ್ಲಿ ಕಾಣಿಸಿಕೊಂಡಿದೆ.

news18-kannada
Updated:May 29, 2020, 4:11 PM IST
TikToK: ಟಿಕ್​​ಟಾಕ್​ ರೇಟಿಂಗ್ ಏರಿಕೆ; 80 ಲಕ್ಷ ನೆಗೆಟಿವ್ ರಿವೀವ್ ಡಿಲೀಟ್ ಮಾಡಿದ ಗೂಗಲ್!
ಟಿಕ್​​ಟಾಕ್​
  • Share this:
ಇತ್ತೀಚೆಗೆ ಚೀನಾ ಮೂಲದ ವಿಡಿಯೋ ಶೇರಿಂಗ್​ ಆ್ಯಪ್​ ಟಿಕ್​ಟಾಕ್​ ಬ್ಯಾನ್​ ಆಗಬೇಕೆಂದು ಅಭಿಯಾನ ಆರಂಭವಾಗಿತ್ತು. ಸಾಕಷ್ಟು ಜನರು ಟಿಕ್​ಟಾಕ್​​ ಅನ್​ಇನ್​ಸ್ಟಾಲ್​ ಮಾಡುವ ಮೂಲಕ ಟಿಕ್​ಟಾಕ್​ ಆ್ಯಪ್​ ಬಳಸಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದರಂತೆ ಗೂಗಲ್​ ಪ್ಲೇಸ್ಟೋರ್​​ನಲ್ಲಿ ಟಿಕ್​​ಟಾಕ್​​​ ಬಳಕೆದಾರರ ಸಂಖ್ಯೆ ಕೂಡ ತೀರಾ ಇಳಿಮುಖವಾಗಿತ್ತು. 1.2 ರೇಟಿಂಗ್​ನಲ್ಲಿ ಕಾಣಿಸಿಕೊಂಡಿತ್ತು. ಆದರೀಗ ಟಿಕ್​ಟಾಕ್​ ರೇಟಿಂಗ್​​ ಮತ್ತೆ ಏರಿಕೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ #Bantiktok  ಎಂಬ ಅಭಿಯಾನ ಆರಂಭವಾದ ನಂತರ ಟಿಕ್​ಟಾಕ್​ ಬಳಸುವವರ ಸಂಖ್ಯೆ ಕಡಿಮೆಯಾಗಿತ್ತು. ಜನರು ಇತರೆ ಆ್ಯಪ್​ಗಳ ಮೊರೆ ಹೋದರು. ಆದರೀಗ ಮತ್ತೆ ಟಿಕ್​ಟಾಕ್​ ಆ್ಯಪ್​ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 4.4 ರೇಟಿಂಗ್​ನಲ್ಲಿ ಕಾಣಿಸಿಕೊಂಡಿದೆ.

ಅಭಿಯಾನದಿಂದಾಗಿ ಟಿಕ್​ಟಾಕ್​ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಗೂಗಲ್​ ಅದರ ಬೆನ್ನಿಗೆ ನಿಂತಿದೆ. ಕಳೆದ ಬಾರಿ ಟಿಕ್​ಟಾಕ್​​​ 28 ಮಿಲಿಯನ್​​ ರಿವೀವ್​​ನೊಂದಿಗೆ 1.2 ರೇಟಿಂಗ್​ನಲ್ಲಿತ್ತು. ಆನಂತರ 27 ಮಿಲಿಯನ್​​ ರಿವೀವ್​​​​​ನೊಂದಿಗೆ 1.6 ರೇಟಿಂಗ್​ಗೆ ಏರಿಕೆಯಾಯಿತು. ಆದರೀಗ ಗೂಗಲ್​ ಟಿಕ್​ಟಾಕ್​​​​​​ನಲ್ಲಿ ಕೇವಲ 20 ಮಿಲಿಯನ್​​ ರಿವೀವ್​​​​​​​ ಇದ್ದು, ರೇಟಿಂಗ್​​ 4.4ಕ್ಕೆ ಏರಿಕೆಯಾಗಿದೆ. ಟಿಕ್​ಟಾಕ್​ ಬೆನ್ನಿಗೆ ನಿಂತ ಗೂಗಲ್​​ ಸುಮಾರು 80 ಲಕ್ಷ ನೆಗೆಟಿವ್​ ರಿವೀವ್​​ಗಳನ್ನು ಡಿಲೀಟ್​ ಮಾಡಿದೆ.

ಇದೀಗ ಟಿಕ್​ಟಾಕ್​ ರೇಟಿಂಗ್​ ಏರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಟಿಕ್​ಟಾಕ್​ ಮೊದಲಿನಿಂದಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಭಾರತದಲ್ಲಿ ಸಾಕಷ್ಟು ಜನರು ಟಿಕ್​ಟಾಕ್​ ಆ್ಯಪ್​​ ಅನ್ನು ಬಳಸುತ್ತಿದ್ದರು. ಆಧರೆ ಸ್ವದೇಶಿ ವಸ್ತುಗಳ ಬಳಕೆಯನ್ನು ಮಾಡುವ ನಿಟ್ಟಿನಲ್ಲಿ ಚೀನಾ ಮೂಲದ ಟಿಕ್​ಟಾಕ್​ ಆ್ಯಪ್​ ಬಳಕೆದಾರರ ಸಂಖ್ಯೆ ಆರಂಭವಾಗಿತ್ತು. ಪ್ರಾರಂಭದಲ್ಲಿ ಟಿಕ್​ಟಾಕ್​ 4.7 ರೇಟಿಂಗ್​ನಲ್ಲಿ ಮೆರೆಯುತ್ತಿತ್ತು. ಅಭಿಯಾನದ ನಂತರ ತೀರಾ ಇಳಿಮುಖವಾಯಿತು. ಇದೀಗ ಮತ್ತೆ ಏರಿಕೆ ಕಂಡಿದೆ.

ಭಾರತದಲ್ಲಿ ಒನ್​​ಪ್ಲಸ್​ 8 ಸಿರೀಸ್​ ಸ್ಮಾರ್ಟ್​ಫೋನ್​ ಮಾರಾಟ ಪ್ರಾರಂಭ: ಬೆಲೆ ಇಲ್ಲಿದೆ

 
First published: May 29, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading