ಟಿಕ್​ ಟಾಕ್​ ಸಂಸ್ಥೆಯಿಂದ ಹೊರಬರಲಿದೆ ಸ್ಮಾರ್ಟ್​ಫೋನ್​; ಇದರ ವಿಶೇಷತೆಗಳೇನು ಗೊತ್ತಾ?

TIK-TOK: ಬೈಟೆಡ್ಯಾನ್ಸ್​ ಸಂಸ್ಥೆ ಸದ್ಯ ಜನಪ್ರೀಯತೆ ಪಡೆಯುತ್ತಿದೆ. ಜೊತೆಗೆ ಹಲವು ಆ್ಯಪ್​ಗಳನ್ನು ಹೊಂದಿದೆ. ಈ ಜನಪ್ರಿಯತೆಯನ್ನು ಬಳಸಿಕೊಂಡು ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಸುಲಭವಾಗಿ ಗುರುತಿಸಿಕೊಳ್ಳಬಹುದು ಎನ್ನುವ ಆಲೋಚನೆ ಸಂಸ್ಥೆಯದ್ದು.

news18
Updated:May 28, 2019, 4:04 PM IST
ಟಿಕ್​ ಟಾಕ್​ ಸಂಸ್ಥೆಯಿಂದ ಹೊರಬರಲಿದೆ ಸ್ಮಾರ್ಟ್​ಫೋನ್​; ಇದರ ವಿಶೇಷತೆಗಳೇನು ಗೊತ್ತಾ?
ಟಿಕ್​ ಟಾಕ್​
  • News18
  • Last Updated: May 28, 2019, 4:04 PM IST
  • Share this:
ಚೀನಾದ ಬೈಟೆಡ್ಯಾನ್ಸ್ ಸಂಸ್ಥೆಯ​ ವಿಡಿಯೋ ಮೇಕಿಂಗ್​​ ಆ್ಯಪ್​ ‘ಟಿಕ್​ ಟಾಕ್‘​ ಇದೀಗ ಮತ್ತೊಂದು ಮಹತ್ತರ ಹೆಜ್ಚೆಯನ್ನಿಡಲು ಮುಂದಾಗಿದೆ. ಜನಪ್ರಿಯಗೊಂಡ ಬೆನ್ನಲ್ಲೇ ಕಂಪನಿ ಸ್ವಂತ ಸ್ಮಾರ್ಟ್​ಫೋನ್​ ತಯಾರಿಸುವ ಯೋಜನೆ ಹಾಕಿಕೊಂಡಿದೆ.

ಟಿಕ್​ ಟಾಕ್​ ಆ್ಯಪ್​ ಅಶ್ಲೀಲತೆಯನ್ನು ಬಿಂಬಿಸುತ್ತದೆ ಎನ್ನುವ ಕಾರಣಕ್ಕೆ ಮದ್ರಾಸ್​ ಹೈಕೋರ್ಟ್​ ಆ್ಯಪ್​ ಮೇಲೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಆದರೆ, ಹೈಕೋರ್ಟ್​ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿತ್ತು. ಇದಾದ ಬೆನ್ನಲ್ಲೇ, ಕೇಂದ್ರ ಮಾಹಿತಿ ಹಕ್ಕು ಸಚಿವಾಲಯ ಟಿಕ್​ ಟಾಕ್​ ಆ್ಯಪ್​ಅನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕುವಂತೆ ಗೂಗಲ್​ಗೆ ನಿರ್ದೇಶಿಸಿತ್ತು. ಇನ್ನುಮುಂದೆ ಆ್ಯಪ್​ನಲ್ಲಿ ಅಶ್ಲೀಲತೆಯನ್ನು ವಿಜ್ರಂಭಿಸುವುದಿಲ್ಲ ಎಂದು ಟಿಕ್​ ಟಾಕ್​ ಸಂಸ್ಥೆ ಆಶ್ವಾಸನೆ ನೀಡಿದ ನಂತರ ಆ್ಯಪ್​ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೋರ್ಟ್​ ಹಿಂಪಡೆದಿತ್ತು. ಈ ಬೆಳವಣಿಗೆಯಿಂದಾಗಿ ಟಿಕ್​ಟಾಕ್​  ಅನೇಕ ಬಳಕೆದಾರರನ್ನು ಕಳೆದುಕೊಂಡಿತ್ತು. ಇದೀಗ ಮತ್ತೆ  ಕಂಬ್ಯಾಕ್ ಮಾಡಲು ಹೊಸ ಯೋಜನೆಯನ್ನು ರೂಪಿಸಿಕೊಂಡು ಸ್ಮಾರ್ಟ್​ಫೋನ್​ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದೆ. 

ಇದನ್ನೂ ಓದು: ಜಿಂದಾಲ್​ಗೆ ಭೂಮಿ ಪರಭಾರೆ; ಇದು ಸರ್ಕಾರದ ಅತೀ ಕೆಟ್ಟ ನಿರ್ಣಯ, ಕೂಡಲೇ ಇದನ್ನು ಕೈಬಿಡಬೇಕು – ಎಚ್​.ಕೆ.ಪಾಟೀಲ್ ಆಗ್ರಹ

ಬೈಟೆಡ್ಯಾನ್ಸ್​ ಸಂಸ್ಥೆ ಸದ್ಯ ಜನಪ್ರೀಯತೆ ಪಡೆಯುತ್ತಿದೆ. ಜೊತೆಗೆ ಹಲವು ಆ್ಯಪ್​ಗಳನ್ನು ಹೊಂದಿದೆ. ಈ ಜನಪ್ರಿಯತೆಯನ್ನು ಬಳಸಿಕೊಂಡು ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಸುಲಭವಾಗಿ ಗುರುತಿಸಿಕೊಳ್ಳಬಹುದು ಎನ್ನುವ ಆಲೋಚನೆ ಸಂಸ್ಥೆಯದ್ದು. ಅಂದಹಾಗೆ, ಈ ಮೊಬೈಲ್​ ಬೆಲೆ ಎಷ್ಟಿರಲಿದೆ, ಇದರ ವಿಶೇಷತೆಗಳೇನು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

ಬೈಟೆಡ್ಯಾನ್ಸ್​ ಸಂಸ್ಥೆ ಜನವರಿ ತಿಂಗಳಿನಲ್ಲಿ ‘ಸ್ಮಾರ್ಟಿಸನ್‘​​​ ಹೆಸರಿನ ಸ್ಮಾರ್ಟ್​ಫೋನ್​ ತಯಾರಿಕಾ ಸಂಸ್ಥೆಯ  ಉದ್ಯೋಗಿಗಳನ್ನು ತನ್ನ ಸಂಸ್ಥೆಗೆ ಸೇರಿಸಿಕೊಂಡಿತ್ತು. ಸ್ಮಾರ್ಟ್​ಪೋನ್​ ತಯಾರಿಕೆ ಬಗ್ಗೆ ಯೋಜನೆ ರೂಪಿಸಲು ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿತ್ತು ಎನ್ನುವ ಮಾತುಗಳು ಅಂದು ಕೇಳಿ ಬಂದಿದ್ದವು. ಈಗ ಅದು ನಿಜವಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್​​​ಸ್ಟಾಗ್ರಾಂನಲ್ಲೂ ಹಿಂಬಾಲಿಸಿ

First published: May 28, 2019, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading