ByteDance: ಸದ್ಯದಲ್ಲೇ ಬೈಟೆಡ್ಯಾನ್ಸ್ ಒಡೆತನದ ಈ ಎರಡು ಆ್ಯಪ್ಗಳು ಭಾರತದಲ್ಲಿ ಸ್ಥಗಿತ!
ವಿಗೋ ವಿಡಿಯೋ ಮತ್ತು ವಿಗೋ ಲೈಟ್ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಆಗಿದೆ. ಟಿಕ್ಟಾಕ್ನಂತೆಯೇ ಇವರೆಡು ಅಪ್ಲಿಕೇಶನ್ ಭಾರತದಲ್ಲಿ ಜನಪ್ರಿಯಗಳಿಸಿದೆ. ಶಾರ್ಟ್ ವಿಡಿಯೋಗಳನ್ನು ವೀಕ್ಷಿಸಲು, ಅಪ್ಲೋಡ್, ಲೈಕ್ ಮಾಡುವ ಅಪ್ಲಿಕೇಶನ್ ಇದಾಗಿದೆ. ಆದರೀಗ ಬೈಟೆಡ್ಯಾನ್ಸ್ ವಿಗೋ ವಿಡಿಯೋ ಮತ್ತು ವಿಗೋ ಲೈಟ್ ಅಪ್ಲಿಕೇಶನ್ ಅನ್ನು ಸ್ಥಗಿತ ಮಾಡಲಿದೆ ಎಂದು ಹೇಳಿದೆ.
news18-kannada Updated:June 15, 2020, 3:14 PM IST

ವಿಗೋ ವಿಡಿಯೋ
- News18 Kannada
- Last Updated: June 15, 2020, 3:14 PM IST
ಚೀನಾ ಮೂಲದ ಬೈಟೆಡ್ಯಾನ್ಸ್ ತನ್ನ ಒಡೆತನದ ವಿಗೋ ವಿಡಿಯೋ ಮತ್ತು ವಿಗೋ ಲೈಟ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಸ್ಥಗಿತ ಮಾಡಲು ಮುಂದಾಗಿದೆ. ಇತರೆ ವ್ಯವಹಾರವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಮತ್ತು ಕೇಂದ್ರಿಕರಿಸುವ ಸಲುವಾಗಿ ಬೈಟೆಡ್ಯಾನ್ಸ್ ಕಂಪೆನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಇವರೆಡು ಆ್ಯಪ್ಗಳು ಭಾರತೀಯರ ಬಳಕೆಗೆ ಸಿಗುವುದಿಲ್ಲ ಎಂದಿದೆ.
ವಿಗೋ ವಿಡಿಯೋ ಮತ್ತು ವಿಗೋ ಲೈಟ್ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಆಗಿದೆ. ಟಿಕ್ಟಾಕ್ನಂತೆಯೇ ಇವರೆಡು ಅಪ್ಲಿಕೇಶನ್ ಭಾರತದಲ್ಲಿ ಜನಪ್ರಿಯಗಳಿಸಿದೆ. ಶಾರ್ಟ್ ವಿಡಿಯೋಗಳನ್ನು ವೀಕ್ಷಿಸಲು, ಅಪ್ಲೋಡ್, ಲೈಕ್ ಮಾಡುವ ಅಪ್ಲಿಕೇಶನ್ ಇದಾಗಿದೆ. ಆದರೀಗ ಬೈಟೆಡ್ಯಾನ್ಸ್ ವಿಗೋ ವಿಡಿಯೋ ಮತ್ತು ವಿಗೋ ಲೈಟ್ ಅಪ್ಲಿಕೇಶನ್ ಅನ್ನು ಸ್ಥಗಿತ ಮಾಡಲಿದೆ ಎಂದು ಹೇಳಿದೆ. ಈಗಾಗಲೇ ಬ್ರೆಜಿಲ್ನಲ್ಲೂ ಇವೆರಡು ಅಪ್ಲಿಕೆಶನ್ ಅನ್ನು ಬೈಟೆಡ್ಯಾನ್ಸ್ ಸ್ಥಗಿತ ಮಾಡಿದೆ.
ಬೈಟೆಡ್ಯಾನ್ಸ್ 2017ರಲ್ಲಿ ವಿಗೋ ವಿಡಿಯೋ ಅಪ್ಲಿಕೆಶನ್ ಅನ್ನು ಬಿಡುಗಡೆ ಮಾಡಿತ್ತು. ನಂತರ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಾಣಿಸಿಕೊಂಡಿದೆ. ಪ್ರಾರಂಭದಲ್ಲಿ 10 ಕೋಟಿಗೂ ಅಧಿಕ ಜನರಿಂದ ಡೌನ್ಲೋಡ್ ಕಂಡಿದೆ. 2018ರಲ್ಲಿ ವಿಡಿಯೋ ಲೈಟ್ ಬಿಡುಗಡೆಯಾಯಿತು. 5 ಕೋಟಿಗೂ ಹೆಚ್ಚು ಜನರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ. ಟೆಕ್ ಕ್ರಂಚ್ ನೀಡಿರುವ ಮಾಹಿತಿ ಪ್ರಕಾರ ವಿಗೋ ವಿಡಿಯೋ ತಿಂಗಳಿಗೆ 40 ಲಕ್ಷ ಬಳಕೆದಾರರನ್ನು ಹೊಂದಿದೆ. ವಿಗೋ ಲೈಟ್ ತಿಂಗಳಿಗೆ 10 ಲಕ್ಷ ಬಳಕೆದಾರರನ್ನು ಹೊಂದಿದೆ ಎಂದು ಹೇಳಿದೆ.
Mi Power Bank: ಶಿಯೋಮಿ ಹೊಸ ಪವರ್ ಬ್ಯಾಂಕ್ ಮಾರುಕಟ್ಟೆಗೆ; ಕಡಿಮೆ ಅವಧಿಯಲ್ಲಿ ಫಾಸ್ಟ್ ಚಾರ್ಜಿಂಗ್!