ಟಿಕ್​ಟಾಕ್​​ ಪರಿಚಯಿಸಿದ ಬೈಟೆಡಾನ್ಸ್ ಕಂಪೆನಿ ಸಿದ್ಧಪಡಿಸಿದೆ ಹೊಸ ಸ್ಮಾರ್ಟ್​ಫೋನ್​; ಸದ್ಯದಲ್ಲೇ ಮಾರುಕಟ್ಟೆಗೆ

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಸ್ಮಾರ್ಟ್​ಫೋನ್​ 6.39 ಇಂಚಿನ ಫುಲ್​ ಹೆಚ್​ಡಿ+ ಅಮೋಲ್ಡ್​ ಡಿಸ್​ಪ್ಲೇ ನೀಡಲಾಗಿದೆ.

news18-kannada
Updated:November 2, 2019, 7:09 PM IST
ಟಿಕ್​ಟಾಕ್​​ ಪರಿಚಯಿಸಿದ ಬೈಟೆಡಾನ್ಸ್ ಕಂಪೆನಿ ಸಿದ್ಧಪಡಿಸಿದೆ ಹೊಸ ಸ್ಮಾರ್ಟ್​ಫೋನ್​; ಸದ್ಯದಲ್ಲೇ ಮಾರುಕಟ್ಟೆಗೆ
ಸ್ಮಾರ್ಟಿಸನ್​ ಜಿಯಾಂಗು ಪ್ರೊ 3
  • Share this:
ಈಗಾಗಲೇ ಜನಪ್ರಿಯ ವಿಡಿಯೋ ಶೇರಿಂಗ್​ ​ಟಿಕ್​ಟಾಕ್ ಆ್ಯಪ್​ ಕಂಡುಹಿಡಿದ ಬೈಟೆಡಾನ್ಸ್​ ಕಂಪೆನಿ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಹೆಸರಿನ ಹೊಸ ಸ್ಮಾರ್ಟ್​ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ.

ಮೂಲಗಳ ಪ್ರಕಾರ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಸ್ಮಾರ್ಟ್​ಫೋನ್​ 2020ರಲ್ಲಿ ಮಾರುಕಟ್ಟೆಗೆ ಬರಲಿದೆ. ಹೊಸ ಫೀಚರ್​ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಸ್ಮಾರ್ಟ್​ಫೋನ್​ ಸ್ನಾಪ್​ಡ್ರ್ಯಾಗನ್​​​ 855+ ಎಸ್​ಒಸಿ ಪ್ರೊಸೆಸರ್​ ಹೊಂದಿದ್ದು, 4 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಟಿಕ್​ಟಾಕ್​ ಆ್ಯಪ್​ ಅನ್ನು ಇದರಲ್ಲಿ ನೀಡಲಾಗಿದೆ. ಮಾತ್ರವಲ್ಲದೆ ಸಿಂಗಲ್​ ಸ್ವೈಪ್​ ಲಾಕ್​ ಆಯ್ಕೆಯನ್ನು ಹೊಂದಿದೆ.

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ವಿಶೇಷತೆ;

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಸ್ಮಾರ್ಟ್​ಫೋನ್​ 6.39 ಇಂಚಿನ ಫುಲ್​ ಹೆಚ್​ಡಿ+ ಅಮೋಲ್ಡ್​ ಡಿಸ್​ಪ್ಲೇ ನೀಡಲಾಗಿದೆ. ಸ್ನಾಪ್​ಡ್ರ್ಯಾಗನ್​ 855+ ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗಾಗಿ 8GB RAM​​ + 128GB ಸ್ಟೊರೇಜ್ ಆಯ್ಕೆಯಲ್ಲಿ, 8GB RAM​ + 256 ಸ್ಟೊರೇಜ್​ನಲ್ಲಿ ಮತ್ತು 12GB RAM​ ಮತ್ತು 256GB ಸ್ಟೊರೇಜ್​ನಲ್ಲಿ ಸಿಗಲಿದೆ.

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3


ನೂತನ ಸ್ಮಾರ್ಟ್​ಫೋನಿನಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು + 13 ಮೆಗಾಫಿಕ್ಸೆಲ್​ ವೈಡ್​ ಆ್ಯಂಗಲ್​ ಕ್ಯಾಮೆರಾ + 8 ಮೆಗಾಫಿಕ್ಸೆಲ್​ ಟೆಲಿಫೋಟೋ + 5 ಮೆಗಾಫಿಕ್ಸೆಲ್​ ಮಾಕ್ರೊ ಕ್ಯಾಮೆರಾ​ ನೀಡಲಾಗಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಬ್ಲೂಟೂತ್​, ವೈ-ಫೈ, ಜಿಪಿಎಸ್​ ನೀಡಲಾಗಿದೆ. 4000mAh​ ಬ್ಯಾಟರಿ ಅಳವಡಿಸಲಾಗಿದೆ.ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ;

-8ಜಿಬಿ ರ್ಯಾಮ್​​ + 128 ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ 29 ಸಾವಿರ ಎಂದು ಅಂದಾಜಿಸಲಾಗಿದೆ.

-8ಜಿಬಿ ರ್ಯಾಮ್​ + 256 ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 32 ಸಾವಿರ.

-12ಜಿಬಿ ರ್ಯಾಮ್​ ಮತ್ತು 256ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ 36 ಸಾವಿರ ಎಂದು ಅಂದಾಜಿಸಲಾಗಿದೆ.
First published:November 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading