TikTok: ಚೀನಾದಿಂದ ಅಂತರ ಕಾಪಾಡಿಕೊಳ್ಳಲು ಮುಂದಾದ ಬೈಟೆಡ್ಯಾನ್ಸ್; ಹೊಸ ನಿರ್ವಹಣ ಮಂಡಳಿ ಸ್ಥಾಪಿಸಲು ಮುಂದಾದ ಟಿಕ್​ಟಾಕ್​​

TikTok: ಟಿಕ್​ಟಾಕ್​ ಇದೀಗ ಹೊಸ ನಿರ್ವಹಣ ಮಂಡಳಿಯನ್ನು ರಚಿಸಲು ಮುಂದಾಗಿದೆ. ಅದರ ಜೊತೆಗೆ ಬೀಜಿಂಗ್​ನಿಂದ ತನ್ನ ಕಾರ್ಯಚರಣೆಯನ್ನು ದೂರವಿರಿಸುವ ಚಿಂತನೆಗೆ ಬಂದಿದ್ದು, ಪ್ರತ್ಯೇಕ ಕಚೇರಿಯನ್ನು ಸ್ಥಾಪಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಟಿಕ್​ಟಾಕ್​ ಸಂಸ್ಥೆಯ ಸಂಬಂಧಿತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

news18-kannada
Updated:July 10, 2020, 3:34 PM IST
TikTok: ಚೀನಾದಿಂದ ಅಂತರ ಕಾಪಾಡಿಕೊಳ್ಳಲು ಮುಂದಾದ ಬೈಟೆಡ್ಯಾನ್ಸ್; ಹೊಸ ನಿರ್ವಹಣ ಮಂಡಳಿ ಸ್ಥಾಪಿಸಲು ಮುಂದಾದ ಟಿಕ್​ಟಾಕ್​​
ಟಿಕ್​ಟಾಕ್​
  • Share this:
ಇತ್ತೀಚೆಗೆ ಚೀನಾ ಮೂಲದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಬ್ಯಾನ್​ ಮಾಡಿದೆ. ಇದರಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮತ್ತು ಜನಪ್ರಿಯತೆ ಗಳಿಸಿರುವ ಬೈಟೆಡ್ಯಾನ್ಸ್​ ಒಡೆತನದ ಟಿಕ್​ಟಾಕ್​ ಕೂಡ ಇತ್ತು. ಆಂತಕರಿಕ ಮತ್ತು ಬ್ಯಾಹ್ಯ ಭದ್ರತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹಾಗಾಗಿ ಟಿಕ್​ಟಾಕ್​ ಭಾರತೀಯ ಬಳಕೆದಾರರನ್ನು ಕಳೆದುಕೊಂಡಿತ್ತು. ಭಾರತ ತೆಗೆದುಕೊಂಡ ನಿರ್ಣಯವನ್ನು ಗಮನಿಸಿದ ಅಮೆರಿಕ ಕೂಡ ತನ್ನ ದೇಶದಲ್ಲಿ ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಮಾಡುವ ಚಿಂತನೆಗೆ ಬಂದಿದೆ. ಹೀಗಿರುವಾಗ ಟಿಕ್​ಟಾಕ್​ ತನ್ನ ವ್ಯವಹಾರದ ಸಾಂಸ್ಥಿಕ ರಚನೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಲು ಮುಂದಾಗಿದೆ. ಈ ಬಗ್ಗೆ ಬೈಟೆಡ್ಯಾನ್ಸ್​​​ ಲಿಮಿಡೆಟ್​ ವರದಿ ಮಾಡಿದೆ.

ಟಿಕ್​ಟಾಕ್​ ಇದೀಗ ಹೊಸ ನಿರ್ವಹಣ ಮಂಡಳಿಯನ್ನು ರಚಿಸಲು ಮುಂದಾಗಿದೆ. ಅದರ ಜೊತೆಗೆ ಬೀಜಿಂಗ್​ನಿಂದ ತನ್ನ ಕಾರ್ಯಚರಣೆಯನ್ನು ದೂರವಿರಿಸುವ ಚಿಂತನೆಗೆ ಬಂದಿದ್ದು, ಪ್ರತ್ಯೇಕ ಕಚೇರಿಯನ್ನು ಸ್ಥಾಪಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಟಿಕ್​ಟಾಕ್​ ಸಂಸ್ಥೆಯ ಸಂಬಂಧಿತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಟಿಕ್​ಟಾಕ್​ ಲಾಸ್​ ಏಂಜಲೀಸ್​​, ನ್ಯೂಯಾರ್ಕ್​, ಲಂಡನ್​, ಡಬ್ಲಿನ್​​ ಮತ್ತು ಸಿಂಗಾಪುರದಲ್ಲಿ ತನ್ನ ಕಚೇರಿಯನ್ನು ಹೊಂದಿದೆ. ಆದರೆ, ಬೈಟೆಡ್ಯಾನ್ಸ್​​  ಪ್ರಧಾನ ಕಚೇರಿ ಚೀನಾದ ಬೀಜಿಂಗ್​ ಕೇಮನ್​ ದ್ವೀಪದಲ್ಲಿದೆ. ಅಲ್ಲಿಂದಲೇ ಟಿಕ್​ಟಾಕ್​  ಕಾರ್ಯನಿರ್ವಹಿಸುತ್ತಿತ್ತು.

ಇತ್ತೀಚೆಗೆ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಅಧಿಕೃತ ಹೇಳಿಕೆ ನೀಡಿರುವ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಹಲವು ಕಾರಣಾಂತರಗಳಿಂದ ಚೀನಾದ ಆ್ಯಪ್​​ಗಳನ್ನು ಬ್ಯಾನ್​​ ಮಾಡುವ ಪ್ರಸ್ತಾಪ ನಮ್ಮ ಮುಂದಿದೆ ಎಂದಿದ್ದರು.

ಅಮೆರಿಕ ಅಧ್ಯಕ್ಷ ಡ್ರೊನಾಲ್ಡ್​ ಟ್ರಂಪ್​ ಕೂಡ ಈ ಬಗ್ಗೆ ಮಂಗಳವಾರದಂದು ಮಾತನಾಡಿದ್ದರು. ಕೊರೋನಾ ವೈರಸ್​ ಅನ್ನು ನಿರ್ವಹಿಸುವ ಬಗ್ಗೆ ಮತ್ತು ಅದರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವ ಒಂದು ಮಾರ್ಗವಾಗಿ ಯುಎಸ್​​ಎನಲ್ಲಿ ಟಿಕ್​ಟಾಕ್​ ಆ್ಯಪ್​ ನಿಷೇಧಿಸುವುದನ್ನು ಆಡಳಿತವು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ ಈ ಹಿಂದಿನಿಂದಲೂ ಟಿಕ್​ಟಾಕ್​ ಬಗ್ಗೆ ಪರಿಶೀಲನೆ ನಡೆಸುತ್ತಾ ಬಂದಿದೆ. ಕಳೆದ ವಾರ ಯುಎಸ್​ ಫೆಡರಲ್​​ ಟ್ರೇಡ್​​ ಕಮಿಷನ್​ ಮತ್ತು ನ್ಯಾಯಾಂಗ ಇಲಾಖೆ ಟಿಕ್​ಟಾಕ್​​ ಡಾಟಾ ಬಗ್ಗೆ ಪರಿಶೀಲನೆ ನಡೆಸಿದೆ. ಈ ವೇಳೆ ಪೋಷಕರ ಅನುಮತಿಯಿಲ್ಲದೆ 13 ವರ್ಷದ ಮಾಹಿತಿಯನ್ನು ಟಿಕ್​ಟಾಕ್​​ ಸಂಗ್ರಹಿಸಿದೆ ಎಂದು ಹೇಳಿದೆ.

 ಟಿಕ್​ಟಾಕ್​ 2 ಶತಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿತ್ತು. ಅಮೆರಿಕದಲ್ಲಿ ಅನೇಕರು ಈ ಆ್ಯಪ್​ ಅನ್ನು ಬಳಸುತ್ತಿದ್ದಾರೆ. ಆದರೀಗ ವೈಯ್ಯಕ್ತಿಕ ಡೇಟಾ ಕಸಿದುಕೊಳ್ಳುವಿಕೆ ಮತ್ತು ಕೊರೋನಾ ಅವಾಂತರ ಸೃಷ್ಠಿಸಿದ ಚೀನಾ ಕುರಿತಾಗಿ ಅಮೆರಿಕ ಟಿಕ್​ಟಾಕ್​ ಬ್ಯಾನ್​ ಬಗ್ಗೆ ಅಧಿಕೃತ ನಿರ್ಣಯವನ್ನು ಕೈಗೊಳ್ಳಲಿದೆ. ಆ ಮೂಲಕ ಚೀನಾಗೆ ಶಾಕ್ ನೀಡಲಿದೆ.

ಮತ್ತೊಂದೆಡೆ ಅಮೆರಿಕ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಟಿಕ್​​​​ಟಾಕ್​ ಇದೆ. ಹೀಗಾಗಿ ತನ್ನ ಬೀಜಿಂಗ್​ನಲ್ಲಿರುವ ಕಾರ್ಯಾಲಯವನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುವ ನಿರ್ಣಯಕ್ಕೆ ಮುಂದಾಗಿದೆ.
Published by: Harshith AS
First published: July 10, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading