HOME » NEWS » Tech » TIKTOK AND 58 OTHER CHINESE APPS TO BE PERMANENTLY BANNED IN INDIA HG

ಟಿಕ್ ​ಟಾಕ್​​ ಸೇರಿದಂತೆ ಚೀನಾ ಮೂಲಕ 58 ಆ್ಯಪ್​ಗಳಿಗೆ ಶಾಶ್ವತ ನಿಷೇಧ ಹೇರಿದ ಕೇಂದ್ರ ಸರ್ಕಾರ

Chinese apps: ಎಲೆಕ್ಟ್ರಾನಿಕ್ಸ್​​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನಪ್ರಿಯ ವಿಡಿಯೋ  ಅಪ್ಲಿಕೇಶನ್​​ ಟಿಕ್​ ಟಾಕ್​ ಮತ್ತು ಇತರ 58 ಚೀನಿ ಅಪ್ಲಿಕೇಶನ್​​ಗಳಿಗೆ ಶಾಶ್ವತ ನಿಷೇಧ ಹೇರಲು ನೋಟಿಸ್​​ ನೀಡಿದೆ.

news18-kannada
Updated:January 27, 2021, 2:35 PM IST
ಟಿಕ್ ​ಟಾಕ್​​ ಸೇರಿದಂತೆ ಚೀನಾ ಮೂಲಕ 58 ಆ್ಯಪ್​ಗಳಿಗೆ ಶಾಶ್ವತ ನಿಷೇಧ ಹೇರಿದ ಕೇಂದ್ರ ಸರ್ಕಾರ
ಟಿಕ್​ ಟಾಕ್
  • Share this:
ಕಳೆದ ವರ್ಷ ಕೇಂದ್ರ ಸರ್ಕಾರ ಚೀನಾ ಮೂಲಕ ಟಿಕ್​ಟಾಕ್​ ಸೇರಿದಂತೆ ಕೆಲವು ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು. ಆಂತರಿಕ ಹಾಗೂ ಬಾಹ್ಯ ದೃಷ್ಟಿಕೋನವನ್ನು ಹರಿಸಿ ಈ ನಿರ್ಧಾರವನ್ನು ಕೈಗೊಂಡಿತ್ತು. ಆದರ ನಡುವೆ ಚೀನಾದ ಮೂಲಕ ಕೆಲವು ಆ್ಯಪ್​ಗಳು ಮತ್ತೆ ಭಾರತದಲ್ಲಿ ಕಾರ್ಯರಂಭಿಸಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೀಗ ಮೋದಿ ಸರ್ಕಾರ ಚೀನಾ ಮೂಲಕ 59 ಆ್ಯಪ್​ಗಳಿಗೆ ಶಾಶ್ವತ ನಿಷೇಧ ಹೇರಿದೆ.

ಎಲೆಕ್ಟ್ರಾನಿಕ್ಸ್​​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನಪ್ರಿಯ ವಿಡಿಯೋ  ಅಪ್ಲಿಕೇಶನ್​​ ಟಿಕ್​ ಟಾಕ್​ ಮತ್ತು ಇತರ 58 ಚೀನಿ ಅಪ್ಲಿಕೇಶನ್​​ಗಳಿಗೆ ಶಾಶ್ವತ ನಿಷೇಧ ಹೇರಲು ನೋಟಿಸ್​​ ನೀಡಿದೆ.

ಕೇಂದ್ರ ಸರ್ಕಾರ ಟಿಕ್​ಟಾಕ್​, ವಿಚಾಟ್​​ ಮತ್ತು ಆಲಿಬಾಬದ ಯುಸಿ ಬ್ರೌಸರ್​ಗಳನ್ನು ಒಳಗೊಂಡಿರುವ 59 ಅಪ್ಲಿಕೇಶನ್​ಗಳಿಗೆ ನಿಷೇಧ ಹೇರಿದಾಗ ಅದರ ಸುರಕ್ಷತೆ ಮತ್ತು ಗೌಪ್ಯತೆ ಬಗ್ಗೆ ಮಾಹಿತಿ ನೀಡಲು ಸೂಚಿಸಿತ್ತು.

ಆದರೆ ಚೀನಿ ಡೆವಲಪರ್ಸ್​​ ತಮ್ಮ ಆ್ಯಪ್​ಗಳ ಸುರಕ್ಷತೆ ಮತ್ತು ಗೌಪ್ಯತೆಯು ಕೇಂದ್ರ ಸರ್ಕಾರಕ್ಕೆ ಸಮಾಧಾನ ತರಲಿಲ್ಲ. ಹಾಗಾಗಿ 59 ಅಪ್ಲಿಕೇಶನ್​ಗಳನ್ನು ಕೇಂದ್ರ ಸರ್ಕಾರ ಶಾಶ್ವತ ನಿಷೇಧಕ್ಕೆ ಮುಂದಾಗಿದೆ.

ಚೀನಿ ಸೈನಿಕರು ಹಿಮಾಲಯನ್​ ಗಡಿ ಪ್ರದೇಶದಲ್ಲಿ ಭಾರತದ ಸೈನಿiಕರ ಮೇಲೆ ದಾಳಿ ಮಾಡಿದ್ದರು. ಇದರಿಂದ ಭಾರತದ 20 ಹುತಾತ್ಮರಾದರು. ಆ ಬಳಿಕ ಚೀನಾ ಮೂಲದ 59 ಅಪ್ಲಿಕೇಶನ್​ ಅನ್ನು ಭಾರತ ನಿಷೇಧಿಸಿತ್ತು. ಈ ಪ್ರಕ್ರಿಯೆಯನ್ನು ‘ಡಿಜಿಟಲ್​ ಸ್ಟ್ರೈಕ್’​ ಎಂದು ಕರೆಯಲಾಗುತ್ತಿದೆ.
Youtube Video

ಅಷ್ಟು ಮಾತ್ರವಲ್ಲದೆ, ಭಾರತೀಯರು ಬಳಸುತ್ತಿದ್ದ ಚೀನಾ ಮೂಲಕ 118 ಆ್ಯಪ್​ಗಳನ್ನು ನಿಷೇಧಿಸಿದೆ. ಸದ್ಯ ಕಂಪನಿಯು ನೋಟಿಸನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡಲಿದೆ.
Published by: Harshith AS
First published: January 27, 2021, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories