TikTok: ಟಿಕ್ ಟಾಕ್ ಅಸಲಿ ಮುಖ ಬಯಲು; ಮೊಬೈಲ್​ನಿಂದ 30 ಸೆಕೆಂಡ್​ಗೊಮ್ಮೆ ಚೀನಾ ಸೇರುತ್ತೆ ನಿಮ್ಮ ಮಾಹಿತಿ!

ಸಂಶೋಧಕರು ಹೇಳುವ ಪ್ರಕಾರ ಟಿಕ್​ ಟಾಕ್​ ಸೋಶಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಎಂದು ಹೇಳಿಕೊಂಡು ಬಂದರೂ ಅದರ ಅಸಲಿ ಮುಖ ಬೇರೆಯೆ ಇದೆಯಂತೆ! ಇದು ಮೊಬೈಲ್​ನ ಮಾಹಿತಿಯನ್ನು ಅನಾಯಾಸವಾಗಿ ಕದ್ದು ಬಿಡುತ್ತದೆ.

news18-kannada
Updated:July 2, 2020, 10:47 AM IST
TikTok: ಟಿಕ್ ಟಾಕ್ ಅಸಲಿ ಮುಖ ಬಯಲು; ಮೊಬೈಲ್​ನಿಂದ 30 ಸೆಕೆಂಡ್​ಗೊಮ್ಮೆ ಚೀನಾ ಸೇರುತ್ತೆ ನಿಮ್ಮ ಮಾಹಿತಿ!
ಸಾಂದರ್ಭಿಕ ಚಿತ್ರ
  • Share this:
ಭಾರತದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿದ್ದ ಟಿಕ್​ ಟಾಕ್​ ಸೋಷಿಯಲ್​ ಪ್ಲಾಟ್​ ಫಾರ್ಮ್​ ಅಲ್ಲ. ಅದು ಮಾಹಿತಿ ಕದ್ದು ಮಾರಾಟ ಮಾಡಲೆಂದೇ ಬಂದ ಆ್ಯಪ್​ ಆಗಿತ್ತು ಎನ್ನುವ ಭಯಾನಕ ಸತ್ಯ ಅಧ್ಯಯನದಿಂದ ಹೊರ ಬಿದ್ದಿದೆ.

ಟಿಕ್​ ಟಾಕ್​ ಆ್ಯಪ್​ ಮಾಹಿತಿ ಕದಿಯುತ್ತಿದೆ ಎನ್ನುವ ದೂರು ಬಂದಿದ್ದು ಇಂದು ನಿನ್ನೆಯಲ್ಲ. ಈ ಬಗ್ಗೆ ಈ ಮೊದಲು ಸಾಕಷ್ಟು ಮಂದಿ ಹೇಳಿಕೊಂಡಿದ್ದವು. ಆದರೆ, ಇದಕ್ಕೆ ಸೂಕ್ತ ದಾಖಲೆಗಳನ್ನು ಇಡಲು ಸಾಧ್ಯವಾಗಿರಲಿಲ್ಲ. ಈಗ ರೆಡ್ಡಿಟ್​ ಸಂಸ್ಥೆಯ ಕೆಲ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದು, ಟಿಕ್​ ಟಾಕ್​ ಮಾಹಿತಿ ಕಳ್ಳ ಎನ್ನುವುದನ್ನು ದಾಖಲೆ ಸಮೇತ ಬಹಿರಂಗ ಮಾಡಿದ್ದಾರೆ.

ಸಂಶೋಧಕರು ಹೇಳುವ ಪ್ರಕಾರ ಟಿಕ್​ ಟಾಕ್​ ಸೋಶಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಎಂದು ಹೇಳಿಕೊಂಡು ಬಂದರೂ ಅದರ ಅಸಲಿ ಮುಖ ಬೇರೆಯೆ ಇದೆಯಂತೆ! ಇದು ಮೊಬೈಲ್​ನ ಮಾಹಿತಿಯನ್ನು ಅನಾಯಾಸವಾಗಿ ಕದ್ದು ಬಿಡುತ್ತದೆ. ನೀವು ಬಳಕೆ ಮಾಡುತ್ತಿರುವ ಮೊಬೈಲ್​ ಆ್ಯಪ್​ಗಳಲ್ಲಿರುವ ಮಾಹಿತಿ, ಐಪಿ ಅಡ್ರೆಸ್​, ವೈಫೈ ಆಕ್ಸೆಸ್​ ಪಾಯಿಂಟ್​ ಹೆಸರು, ನಿಮ್ಮ ಮೊಬೈಲ್​ ರೂಟ್ ಆಗಿದೆಯೋ ಅಥವಾ ಇಲ್ಲವೋ ಎನ್ನುವ ಮಾಹಿತಿಯನ್ನು ಕೂಡ ಕಲೆ ಹಾಕಿ ಬೇರೆಯವರಿಗೆ ನೀಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಸಿಂಗಲ್ ನಂಬರ್ ಪ್ಲೇಟ್​ಗಾಗಿ ಈತ ನೀಡಿದ್ದು 60 ಕೋಟಿ ರೂ..!

30 ಸೆಕೆಂಡ್​ಗೆ ಒಮ್ಮೆ ಮಾಹಿತಿ ರವಾನೆ:

ಬಹುಶಃ ಇದನ್ನು ನೀವು ನಂಬಲಿಕ್ಕಿಲ್ಲ. ಟಿಕ್​ ಟಾಕ್​ ಆ್ಯಪ್​ ನಿಮ್ಮ ಮೊಬೈಲ್​ನಿಂದ ಪ್ರತಿ 30 ಸೆಕೆಂಡ್​ಗೆ ಒಮ್ಮೆ ಮಾಹಿತಿ ರವಾನೆ ಮಾಡುತ್ತದೆಯಂತೆ! ಹೌದು, ಲೊಕೇಷನ್​ಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿ 30 ಸೆಕೆಂಡ್​ಗೆ ಒಮ್ಮೆ ರವಾನೆ ಮಾಡುತ್ತದೆ ಈ ಆ್ಯಪ್ ! ಈ ಎಲ್ಲ ಕಾರಣಗಳಿಗೆ ಆ್ಯಪ್ಅನ್ನು ಬ್ಯಾನ್ ಮಾಡಲಾಗಿದೆ.

ಟಿಕ್​ ಟಾಕ್​ನದ್ದೇ ಮೇಲುಗೈ:ಅಧ್ಯಯನ ತಂಡ ಖ್ಯಾತ ಸಾಮಾಜಿಕ ಜಾಲತಾಣಗಳಾದ ಟಿಕ್​ ಟ್ವಿಟ್ಟರ್​, ಫೇಸ್​ಬುಕ್​ ಮೊದಲಾದ ಆ್ಯಪ್​ಗಳು ಎಷ್ಟು ಪ್ರಮಾಣದಲ್ಲಿ ಮಾಹಿತಿ ಕಲೆ ಹಾಕುತ್ತವೆ ಎನ್ನುವ ಕುರಿತು ಅಧ್ಯಯನ ನಡೆಸಿತ್ತು. ಆದರೆ, ಈ ಖ್ಯಾತ ಆ್ಯಪ್​ಗಳು ಮಾಹಿತಿ ಕಲೆ ಹಾಕುತ್ತಿರುವ ಬಗ್ಗೆ ಯಾವುದೇ ದಾಖಲೆ ಸಿಕ್ಕಿಲ್ಲ. ಹೀಗಾಗಿ, ಉಳಿದೆಲ್ಲ ಆ್ಯಪ್​ಗಳಿಗೆ ಹೋಲಿಸಿದರೆ ಟಿಕ್​ ಟಾಕ್​ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಕದ್ದಿದೆಯಂತೆ.

ಪಾಸ್​​ವರ್ಡ್​ಗಳಿಗೂ ಬೀಳುತ್ತೆ ಕತ್ತರಿ:

ನಿಮ್ಮ ಮೊಬೈಲ್​ನಲ್ಲಿ ಬ್ಯಾಂಕ್​ಗೆ ಸಂಬಂಧಿಸಿದ ಸಾಕಷ್ಟು ಆ್ಯಪ್​ಗಳು ಇರುತ್ತವೆ. ಟಿಕ್​ ಟಾಕ್​ ಆ್ಯಪ್​ ಈ ಆ್ಯಪ್​ಗಳಿಂದ ಮಾಹಿತಿಯನ್ನು ಕಲೆ ಹಾಕುವ ಸಾಮರ್ಥ್ಯ ಹೊಂದಿದೆಯಂತೆ! ಹೀಗಾಗಿ, ನಿಮ್ಮ ಪಾಸ್​ವರ್ಡ್​ಗಳು ಸುಲಭವಾಗಿ ಕಳ್ಳತನವಾಗಿ ಬಿಡಬಹುದು.

 
First published: July 2, 2020, 9:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading