2021ಕ್ಕೆ ಮೂರು ಹೊಸ ಸ್ಮಾರ್ಟ್​ಫೋನ್​ಗಳನ್ನ ಪರಿಚಯಿಸಲಿದೆ ನೋಕಿಯಾ?

ನೋಕಿಯಾ

ನೋಕಿಯಾ

ನೋಕಿಯಾ ಕಂಪನಿ ಕೂಡ ಹೊಸ ವರ್ಷಕ್ಕೆ ಮೂರು ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

  • Share this:

ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಹಲವು ಸ್ಮಾರ್ಟ್​ಫೋನ್​ ಕಂಪನಿಗಳು ಹೊಸ ಸ್ಮಾರ್ಟ್​ಫೋನ್​ಗಳನ್ನ ಉತ್ಪಾದಿಸಿದ್ದು, 2021ಕ್ಕೆ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿವೆ. ಅದರಂತೆ ನೋಕಿಯಾ ಕಂಪನಿ ಕೂಡ ಹೊಸ ವರ್ಷಕ್ಕೆ ಮೂರು ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.


ನೋಕಿಯಾ ಈ ವರ್ಷ ಸಿ2 ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಿ ಪರಿಚಯಿಸಿತ್ತು. ನೋಕಿಯಾ 1.3, ನೋಕಿಯಾ 5.3 ಮತ್ತು ನೋಕಿಯಾ 8.3 ಅನ್ನು ಮಾರ್ಚ್​ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಅಂತೆಯೇ ನೋಕಿಯಾ ಸಿ3 ಅನ್ನು ಅಗೋಸ್ಟ್​ ತಿಂಗಳಿನಲ್ಲಿ ಬಿಡುಗಡೆ ಮಾಡಿತು. ನೋಕಿಯಾ 2.4 ಮತ್ತು ನೋಕಿಯಾ 3.4 ಸೆಪ್ಟೆಂಬರ್​ನಲ್ಲಿ ಪರಿಚಯಿಸಿತ್ತು. ಈ ತಿಂಗಳು ನೋಕಿಯಾ ಸಿ1 ಪ್ಲಸ್​ ಮತ್ತು ನೋಕಿಯಾ 5.4 ಪರಿಚಯಿಸಿದೆ. 2021ಕ್ಕೆ 6,7 ಅಥವಾ 9 ಸಿರೀಸ್​ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.


ಹೊಸ ಸ್ಮಾರ್ಟ್​ಫೋನ್​ಗಳ ಕುರಿತಾಗಿ ಹತ್ತು ದಿನಗಳ ಹಿಂದೆಯೇ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಮೂರು ಹೊಸ ಬ್ಯಾಟರಿಗಳ ಬಗ್ಗೆ ಟೆಸ್ಟಿಂಗ್​ ನಡೆಸುತ್ತಿರುವ ವಿಚಾರ ಕೂಡ ಬೆಳಕಿಗೆ ಬಂದಿತ್ತು. WT340 (5050 mAh, DC 3.85 V, 19.44 Wh), CN110 (4470 mAh, 3.87 V, 17.29 Wh) ಮತ್ತು V730 (3900 mAh, 3.85 V, 15.015 Wh) ಬ್ಯಾಟರಿಗಳನ್ನು ಪ್ರಮಾಣಿಕರಿಸಿತ್ತು. ಇದೀಗ ಈ ಮೂರು ಬ್ಯಾಟರಿಗಳು ನೋಕಿಯಾ ಸ್ಮಾರ್ಟ್​ಫೋನ್​​ಗಳಲ್ಲಿ ಅಳವಡಿಸಲಾಗುತ್ತದೆ ಎನ್ನಲಾಗುತ್ತಿದೆ.


4500 mAh ಬ್ಯಾಟರಿಯಾಗಿರಲಿದೆ ಎನ್ನಲಾಗುತ್ತಿದೆ. ಮತ್ತೊಂದು 5 ಸಾವಿರ mAh ಬ್ಯಾಟರಿಯಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಹಾಗಾಗಿ ನೋಕಿಯಾ ಪರಿಚಯಿಸುವ ನೂತನ ಸ್ಮಾರ್ಟ್​ಫೋನ್​ಗೆ ಮುಂದಿನ ವರ್ಷದ ತನಕ ಕಾಯಬೇಕಿದೆ.

top videos
    First published: