Smartphone Rules: ಹೊಸ ಫೋನ್​ ಖರೀದಿಸುವವರಿಗೆ ಈ ಸಮಸ್ಯೆಗಳು ಇನ್ಮುಂದೆ ಎದುರಾಗಲ್ಲ! ಈ ಆ್ಯಪ್​ಗಳು ಬ್ಯಾನ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದುವರೆಗೆ ಯಾವುದೇ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಲಿ ಅದರಲ್ಲಿ ಗೂಗಲ್​ನ ಹಲವಾರು ಆ್ಯಪ್​ಗಳು ಇದ್ದೇ ಇರುತ್ತದೆ. ಟೆಕ್​ ವಲಯದಲ್ಲಿ ಗೂಗಲ್​ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಆದರೆ ಈಗ ಸರ್ಕಾರದ ಕೆಲವೊಂದು ನಿಯಮಗಳಿಂದ ಗೂಗಲ್​ ಸ್ವಲ್ಪ ಈ ಹಿಂದೆ ಸರಿಯುತ್ತಿದೆ. ಹಾಗಿದ್ರೆ ಮುಂದೆ ಬರುವಂತಹ ಸ್ಮಾರ್ಟ್​ಫೋನ್​ಗಳಲ್ಲಿ ಏನೆಲ್ಲಾ ಬದಲಾವಣೆಯಾಗುತ್ತವೆ ಎಂದು ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

    ಇತ್ತೀಚೆಗೆ ಟೆಕ್​ ವಲಯ ಭಾರೀ ಅಭಿವೃದ್ಧಿ ಹಂತದಲ್ಲಿದೆ. ದಿನ ಕಳೆದಂತೆ ಸ್ಮಾರ್ಟ್​​ಫೋನ್​ಗಳಲ್ಲಾಗಿರಬಹುದು (Smartphones), ಟೆಕ್​ ಡಿವೈಸ್​ಗಳಲ್ಲಾಗಿರಬಹುದು ಹೊಸ ಹೊಸ ಫೀಚರ್ಸ್​ಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ಟೆಕ್‌ ವಲಯಕ್ಕೆ (Technology) ಸಂಬಂಧಿಸಿದಂತೆ ಕೆಲವು ವಿಶೇಷ ಕಾನೂನುಗಳನ್ನು ಪಾಲನೆ ಮಾಡಬೇಕು.ಈ ಕಾನೂನಿನ ವಿರುದ್ಧ ಯಾವುದೇ ಕಂಪೆನಿಗಳಾಗಲಿ, ಯಾರೇ ವ್ಯಕ್ತಿಯಾಗಲಿ ನಡೆದುಕೊಂಡರು ಶಿಕ್ಷೆಗೆ ಗುರಿಯಾಗುವುದಂತೂ ಗ್ಯಾರಂಟಿ. ಆದ್ರಿಂದ ಇನ್ಮು ಮುಂದೆ ಬರುವಂತಹ ಸ್ಮಾರ್ಟ್​​ಫೋನ್​ಗಳಲ್ಲಿ ಹೊಸ ನಿಯಮಗಳು (New Rules) ಜಾರಿಯಾಗಲಿದ್ದು, ಗ್ರಾಹಕರಿಗೆ ಇನ್ಮುಂದೆ ಆರಾಮವಾಗಿ ಫೋನ್​ಗಳನ್ನು ಖರೀದಿ ಮಾಡ್ಬಹುದು.


    ಇದುವರೆಗೆ ಯಾವುದೇ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಲಿ ಅದರಲ್ಲಿ ಗೂಗಲ್​ನ ಹಲವಾರು ಆ್ಯಪ್​ಗಳು ಇದ್ದೇ ಇರುತ್ತದೆ. ಟೆಕ್​ ವಲಯದಲ್ಲಿ ಗೂಗಲ್​ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಆದರೆ ಈಗ ಸರ್ಕಾರದ ಕೆಲವೊಂದು ನಿಯಮಗಳಿಂದ ಗೂಗಲ್​ ಸ್ವಲ್ಪ ಈ ಹಿಂದೆ ಸರಿಯುತ್ತಿದೆ. ಹಾಗಿದ್ರೆ ಮುಂದೆ ಬರುವಂತಹ ಸ್ಮಾರ್ಟ್​ಫೋನ್​ಗಳಲ್ಲಿ ಏನೆಲ್ಲಾ ಬದಲಾವಣೆಯಾಗುತ್ತವೆ ಎಂದು ಈ ಲೇಖನದ ಮೂಲಕ ತಿಳಿಯಿರಿ.


    ಗೂಗಲ್​ಗೆ ಸುಪ್ರೀಂ ಕೋರ್ಟ್​ನಿಂದ ಕಠಿಣ ಕ್ರಮ


    ಗೂಗಲ್‌ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿಬರುತ್ತಿದ್ದು, ಈ ಕಾರಣಕ್ಕಾಗಿ ಗೂಗಲ್ ಇಂಡಿಯಾ ವಿರುದ್ಧ ನೀಡಿದ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪು ಹೊರಬಿದ್ದ ನಂತರ ಮಾರುಕಟ್ಟೆಗೆ ಬರುವ ಯಾವುದೇ ಫೋನ್‌ಗಳು ಗೂಗಲ್‌ ಮಾಲೀಕತ್ವದ ಆ್ಯಪ್​ಗಳು ಇರುವುದಿಲ್ಲ ಎಂದು ವರದಿಯಾಗಿದೆ.


    ಇದನ್ನೂ ಓದಿ: ಇನ್​​ಸ್ಟಾಗ್ರಾಮ್​ನಲ್ಲಿ ಮ್ಯೂಸಿಕ್​ ಜೊತೆ ಸ್ಟೋರಿ ಡೌನ್​ಲೋಡ್​ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್​


    ಹೊಸ ಆಂಡ್ರಾಯ್ಡ್​ ಫೋನ್​ನಲ್ಲಿ ಏನೆಲ್ಲಾ ಇರಲಿವೆ?


    ಗೂಗಲ್​ ಈವರೆಗೆ ಬಹಳಷ್ಟು ಸ್ಮಾರ್ಟ್​​ಫೋನ್​ ಬ್ರಾಂಡ್​​ಗಳಲ್ಲಿ ತನ್ನ ಪ್ರಾಬಲ್ಯತೆಯನ್ನು ಆಕರ್ಮಿಸಿತ್ತು. ಆದರೆ, ಇನ್ಮುಂದೆ ಯಾವುದೇ ಫೋನ್‌ನ ತಯಾರಕರು ತಮಗೆ ಇಷ್ಟ ಇರುವ ಕಂಪೆನಿಯ ಆ್ಯಪ್​ಗಳನ್ನು ಪೂರ್ವದಲ್ಲಿಯೇ ಇನ್‌ಸ್ಟಾಲ್‌ ಮಾಡಿಟ್ಟುಕೊಂಡು ನೀಡುತ್ತದೆ. ಜೊತೆಗೆ ಫೋನ್ ಖರೀದಿ ಮಾಡಿದ ಮೇಲೆ ಬಳಕೆದಾರರು ಸಹ ತಮಗೆ ಇಷ್ಟವಾದ ಆ್ಯಪ್​ಗಳನ್ನು ಸಹ ಇನ್‌ಸ್ಟಾಲ್‌ ಮಾಡುವಂತಹ ಅವಕಾಶ ಕಲ್ಪಿಸಲಾಗುತ್ತದೆ. ಈ ಬದಲಾವಣೆಗಳು ಇತ್ತೀಚಿನ CCI ಆದೇಶಕ್ಕೆ ತಕ್ಕಂತೆ ಬದಲಾಗುತ್ತದೆ.


    ಸಾಂಕೇತಿಕ ಚಿತ್ರ


    ಯಾವೆಲ್ಲಾ ಅಪ್ಲಿಕೇಶನ್​ಗಳಿಗೆ ಕ್ರಮ?


    ಮಾರುಕಟ್ಟೆಯಲ್ಲಿ ಬಳಕೆಗೆ ತಕ್ಕಂತೆ ವಿವಿಧ ರೀತಿಯ ಆ್ಯಪ್​ಗಳು ಲಭ್ಯವಿದ್ದು, ಅದರಲ್ಲಿ ಗೂಗಲ್‌ ಆ್ಯಪ್​ಗಳು ಸಹ ಒಂದು. ಆದರೆ, ಯಾವುದೇ ಹೊಸ ಫೋನ್‌ನಲ್ಲಿ ತನ್ನ ಪ್ರಾಬಲ್ಯತೆಯ ಜೊತೆಗೆ ಕೆಲವೊಂದು ಸುಳ್ಳು ಫೀಚರ್ಸ್​​ಗಳನ್ನು ಪ್ರದರ್ಶಿಸುತ್ತಿದ್ದ ಗೂಗಲ್‌ನ ಪ್ರಮುಖ ಆ್ಯಪ್​ಗಳಾದ ಕ್ರೋಮ್‌, ಗೂಗಲ್ ಪೇ, ಜಿ-ಮೇಲ್‌ ಹಾಗೂ ಗೂಗಲ್‌ ಮ್ಯಾಪ್‌ ಆ್ಯಪ್​ಗಳನ್ನು ಪೂರ್ವದಲ್ಲಿಯೇ ಇನ್‌ಸ್ಟಾಲ್‌ ಮಾಡಿಸುತ್ತಿತ್ತು. ಆದರೆ ಇದರಿಂದ ಬಳಕೆದಾರರು ಬೇರೆ ಆ್ಯಪ್​ಗಳನ್ನು ಬಳಕೆ ಮಾಡುತ್ತಿರಲಿಲ್ಲ. ಆದರೆ ಈ ಆ್ಯಪ್​ಗಳಲ್ಲಿ ಆದಂತಹ ಕೆಲವು ವಂಚನೆಗಳಿಂದ ಗೂಗಲ್​ ಸರಿಯಾಗಿ ನಿಗಾ ವಹಿಸದ ಕಾರಣ ಸರ್ಕಾರ ಇದರ ಮೇಲೆ ಕ್ರಮ ವಹಿಸಿದೆ.




    ಈ ಬಗ್ಗೆ ಗೂಗಲ್​ನ ಅಭಿಪ್ರಾಯ


    ಭಾರತದಲ್ಲಿ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಾವು ನಮ್ಮ ಬದ್ಧತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಆಂಡ್ರಾಯ್ಡ್‌ ಮತ್ತು ಗೂಗಲ್‌ ಪ್ಲೇ ಗಾಗಿ ಭಾರತದ ಸ್ಪರ್ಧಾತ್ಮಕ ಆಯೋಗದ ಇತ್ತೀಚಿನ ನಿರ್ದೇಶನಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗಿದೆ. ಜೊತೆಗೆ ನಾವು ಅವರ ನಿರ್ದೇಶನಗಳನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂಬುದನ್ನು CCI ಗೆ ತಿಳಿಸಿದ್ದೇವೆ ಎಂದು ಗೂಗಲ್‌ ತಿಳಿಸಿದೆ.

    Published by:Prajwal B
    First published: