• Home
 • »
 • News
 • »
 • tech
 • »
 • ‌Virus Attack: ಬ್ಯಾಂಕ್‌ ಖಾತೆಗೆ ವೈರಸ್ ಬಿಡ್ತಾರಂತೆ ಸೈಬರ್ ಚೋರರು! ನಿಮ್ಮ ಹಣ ಪರರ ಪಾಲಾಗಬಹುದು ಹುಷಾರ್!

‌Virus Attack: ಬ್ಯಾಂಕ್‌ ಖಾತೆಗೆ ವೈರಸ್ ಬಿಡ್ತಾರಂತೆ ಸೈಬರ್ ಚೋರರು! ನಿಮ್ಮ ಹಣ ಪರರ ಪಾಲಾಗಬಹುದು ಹುಷಾರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡ್ರಿನಿಕ್‌ ಮಾಲ್‌ವೇರ್‌ ಬ್ಯಾಂಕಿಂಗ್ ಡಾಟಾಗಳಿಗೆ ಕನ್ನ ಹಾಕುವ ಸಾಧ್ಯತೆ ಇದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಈ ಅಪ್ಲಿಕೇಶನ್‌ ಯಾವ ರೀತಿ ಬ್ಯಾಂಕ್‌ ಅಕೌಂಟ್‌ಗಳಿಗೆ ದಾಳಿ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

 • Share this:

  ಅಂದಿನಿಂದಲೂ ತಂತ್ರಜ್ಞರು ನಿಮ್ಮ ಮೊಬೈಲ್‌ (Mobile), ಬ್ಯಾಂಕ್‌ ಖಾತೆಗಳ (Bank Account) ಬಗ್ಗೆ ಎಚ್ಚರವಿರಲಿ ಎಂದು ಹೇಳುತ್ತಲೇ ಬರುತ್ತಿದ್ದರು. ಆದರೆ ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದೆಯೇ ಏನಾದರೊಂದು ಅವಾಂತರಗಳು ಆಗುತ್ತವೆ. ಇದೀಗ ಡ್ರಿನಿಕ್‌ ಮಾಲ್‌ವೇರ್ (Drinik malware) ಅಪ್​ಗ್ರೇಡೆಡ್ ವರ್ಷನ್‌ನ ದಾಳಿಯಿಂದಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ 18 ಬ್ಯಾಂಕ್​ಗಳ ಗ್ರಾಹಕರ ಡಾಟಾಗಳು ಅಪಾಯದಲ್ಲಿವೆ ಎಂದು ವರದಿಯಾಗಿದೆ. ವಿಶ್ಲೇಷಕರ ಪ್ರಕಾರ, ಮಾಲ್​ವೇರ್ ಸದ್ಯ ಆ್ಯಂಡ್ರಾಯ್ಡ್ ಟ್ರೋಜನ್ (Android Trojan) ಆಗಿ ಪರಿವರ್ತನೆಗೊಂಡಿದ್ದು, ಮಹತ್ವದ ವೈಯಕ್ತಿಕ ವಿಚಾರಗಳು ಹಾಗೂ ಬ್ಯಾಂಕಿಂಗ್ ಡಾಟಾಗಳಿಗೆ ಕನ್ನ ಹಾಕುವ ಸಾಧ್ಯತೆ ಇದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.


  ಈ ಡ್ರಿನಿಕ್‌ ಮಾಲ್‌ವೇರ್‌ ಎಂಬ ಅಪ್ಲಿಕೇಶನ್‌ ಯಾವ ರೀತಿ ಬ್ಯಾಂಕ್‌ ಅಕೌಂಟ್‌ಗಳಿಗೆ ದಾಳಿ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ


  2016ರಲ್ಲೇ ಕನ್ನ ಹಾಕಿತ್ತು ಮಾಲ್‌ವೇರ್‌


  ಡ್ರಿನಿಕ್‌ ಮಾಲ್​ವೇರ್ 2016ರಲ್ಲೇ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಟಕೊಟ್ಟಿತ್ತು. ಆಗ ಎಸ್​ಎಂಎಸ್​ಗಳ ಮೂಲಕ ಗ್ರಾಹಕರ ಡಾಟಾವನ್ನು ಕದಿಯುತ್ತಿದ್ದ ಮಾಲ್​ವೇರ್ ಈಗ ಇನ್ನಷ್ಟು ಸುಧಾರಿತಗೊಂಡು ಮರಳಿದೆ. ಪ್ರಸ್ತುತ ಸ್ಕ್ರೀನ್​ ರೆಕಾರ್ಡಿಂಗ್, ಕೀಲಾಗಿಂಗ್, ಆಕ್ಸೆಸಿಬಿಲಿಟಿ ಸೇವೆಗಳ ದುರಪಯೋಗ ಮಾಡಿ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.‌


  This virus will completely empty your bank account What is a virus
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ


  ಬ್ಯಾಂಕ್‌ಗಳನ್ನು ಅಥವಾ ಗ್ರಾಹಕರನ್ನು ಗುರಿಯಾಗಿಸುವುದು:


  ಮಾಧ್ಯಮಗಳ ವರದಿಯ ಪ್ರಕಾರ ಡ್ರಿನಿಕ್‌ ಮಾಲ್‌ವೇರ್‌ ಇನ್ನಷ್ಟು ಅಭಿವೃದ್ಧಿಯಾಗಿದೆ. ಇದು ಎಪಿಕೆ ಹೆಸರಿನ ಐಅಸಿಸ್ಟ್‌ ಎಂಬ ಅಪ್ಲಿಕೇಶನ್‌ ಮೂಲಕ ಗ್ರಾಹಕರನ್ನು ತಲುಪುತ್ತದೆ. ಐಅಸಿಸ್ಟ್‌ ಎಂಬುದು ಭಾರತೀಯ ತೆರಿಗೆ ಇಲಾಖೆಯ ಅಧಿಕೃತ ತೆರಿಗೆ ನಿರ್ವಹಣಾ ಟೂಲ್‌ ಆಗಿದೆ.


  ಆದರೆ ನೀವು ಒಮ್ಮೆ ಮಾಲ್‌ವೇರ್‌ ಒಳಗೊಂಡ ಐಅಸಿಸ್ಟ್‌ ಅನ್ನು ನಿಮ್ಮ ಉಪಯೋಗಕ್ಕಾಗಿ ಇನ್‌ಸ್ಟಾಲ್‌ ಮಾಡಿಕೊಂಡರೆ ನಂತರ ಅದು ಮೊದಲಿಗೆ ನಿಮಗೆ ಎಸ್‌ಎಮ್‌ಎಸ್‌ ಕಳುಹಿಸುವ ಮೂಲಕ ನಿಮಗೆ ಓದಲು ಅನುಮತಿಸುತ್ತದೆ. ಇತರ ಮಾಹಿತಿಗಳನ್ನು ನೀಡುವ ಮೂಲಕ ನಿಮ್ಮ ಎಕ್ಟರ್ನಲ್‌ ಸ್ಟೋರೇಜ್‌ ಅನ್ನು ಕೂಡ ಓಪನ್‌ ಮಾಡಲ್‌ ಅನುಮತಿಯನ್ನು ಕೇಳುತ್ತದೆ.


  This virus will completely empty your bank account What is a virus
  ಸಾಂದರ್ಭಿಕ ಚಿತ್ರ


  ಇದು ಬ್ಯಾಂಕಿಂಗ್‌ನಂತೆಯೇ ಕಾರ್ಯನಿರ್ವಹಿಸಿ ನಿಮ್ಮ ಖಾತೆಗಳ ಮೇಲೆ ದಾಳಿಯನ್ನು ಮಾಡುತ್ತದೆ. ಒಮ್ಮೆ ಗ್ರಾಹಕರು ಎಲ್ಲದಕ್ಕೂ ಅನುಮತಿ ಕೊಟ್ಟರೆ ನಿಮ್ಮ ಗೂಗಲ್‌ ಪ್ಲೇನಲ್ಲಿ ನಿಮ್ಮ ಒಡೆತನವನ್ನು ಡಿಸೇಬಲ್‌ ಮಾಡುತ್ತದೆ. ನಂತರ ಅದು ಅದರ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.


  ಇದನ್ನೂ ಓದಿ: ಇಂದು ರಾಷ್ಟ್ರೀಯ ಇಂಟರ್‌ನೆಟ್ ದಿನ, ಇನ್ನಾದರೂ ಅಂತರ್ಜಾಲ ಸೇವೆಗೆ ಸಿಗುತ್ತಾ ವೇಗ?


  ನಂತರ ನಕಲಿ ಪೇಜ್​ಗಳನ್ನು ತೆರೆಯುವ ಬದಲು ಭಾರತೀಯ ಆದಾಯ ತೆರಿಗೆ ಇಲಾಖೆಯ ನೈಜ ಸೈಟ್​ ಅನ್ನು ಲೋಡ್ ಆಗುವಂತೆ ಮಾಡುತ್ತದೆ. ಲಾಗಿನ್ ಪೇಜ್​ ಅನ್ನು ತೋರಿಸುವ ಮೊದಲು ಮಾಲ್​ವೇರ್‌, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಥೆಂಟಿಕೇಷನ್ ಸ್ಕ್ರೀನ್​ ಅನ್ನು ಡಿಸ್​ಪ್ಲೇ ಮಾಡುತ್ತದೆ. ಸಂತ್ರಸ್ತರು ಪಿನ್ ಎಂಟರ್ ಮಾಡಿದ ಕೂಡಲೇ ಮಾಲ್​ವೇರ್, ಮೀಡಿಯಾ ಪ್ರೊಜೆಕ್ಷನ್ ಬಳಸಿಕೊಂಡು ಸ್ಕ್ರೀನ್​ರೆಕಾರ್ಡಿಂಗ್ ಮೂಲಕ ಬಯೋಮೆಟ್ರಿಕ್ ಪಿನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಜೊತೆಗೆ ಕೀಸ್ಟ್ರೋಕ್​ಗಳನ್ನೂ ಸಂಗ್ರಹಿಸುತ್ತದೆ. ನಂತರ ಕದ್ದ ಮಾಹಿತಿಯನ್ನು C&C ಸರ್ವರ್​ಗೆ ಕಳುಹಿಸುತ್ತದೆ.


  ಇದು ಬ್ಯಾಂಕ್‌ ಅಕೌಂಟ್‌ಗಳಿಗೆ ಆದಂತಹ ವೈರಸ್‌ ದಾಳಿಯಾಗಿದೆ.ಇದರಿಂದ ನಿಮ್ಮಅಕೌಂಟ್‌ನ ಡಾಟಾ ಇನ್ನೋಬ್ಬರ ಪಾಲಿನ ಕೈಸೇರಲಿದೆ ಎಂದು ವರದಿಯಾಗಿದ್ದು. ನಂತರ ಹಂತ ಹಂತದಲ್ಲಿ ನಿಮ್ಮ ಖಾತೆಯ ಮೊತ್ತವನ್ನು ಕದಿಯಬಹುದೆಂದು ತಿಳಿಸಿದ್ದಾರೆ.

  Published by:Harshith AS
  First published: