ನಾವೆಲ್ಲರೂ ಇದೀಗ 2022ರ ಕೊನೆಯ ಹಂತದಲ್ಲಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷ (News Year) ಬಂದಾಗುತ್ತೆ. ಆದರೆ ಹಿಂದಿನ ವರ್ಷಗಳನ್ನೊಮ್ಮೆ ಮೆಲುಕು ಹಾಕಿ ನೋಡಿದಾಗ ಟೆಕ್ ವಲಯದಲ್ಲಿ (Tech Market) ಬಹಳಷ್ಟು ಬದಲಾವಣೆಯಾಗಿರುವುದನ್ನು ನೋಡಬಹುದು. ಸಾಕಷ್ಟು ಟೆಕ್ ಕಂಪನಿಗಳಲ್ಲಿ (Tech Company) ಬದಲಾವಣೆಯಾಗುತ್ತಾ ಇರುತ್ತದೆ ಆದರೆ ಈ ವರ್ಷ ಅಂದರೆ 2022ರಲ್ಲಿ ಕೆಲವೊಂದು ಟೆಕ್ ಡಿವೈಸ್ಗಳನ್ನು ಶಾಶ್ವತವಾಗಿ ನಿಲ್ಲಿಸಲಾಗಿದೆ. ಅದೇ ರೀತಿ ಈ ವರ್ಷ ಹಲವಾರು ಹೊಸ ಹೊಸ ಟೆಕ್ ಡಿವೈಸ್ಗಳು ಬಿಡುಗಡೆಯಾಗಿದೆ. ಇದು ಮಾರುಕಟ್ಟೆಯಲ್ಲಿ ಬಹಳಷ್ಟು ಸದ್ದು ಮಾಡಿದ್ದು, ಈ ಹಿಂದೆ ಬಿಡುಗಡೆಯಾದ ಕೆಲ ಡಿವೈಸ್ಗಳಿಗೆ (Tech Devices) ಬೆಲೆಯೇ ಇಲ್ಲದಂತೆ ಆಗಿದೆ.
2022ರ ವರ್ಷ ಟೆಕ್ನಾಲಜಿ ಯುಗದ ಚೇತರಿಕೆಯ ವರ್ಷ ಅಂತಾನೇ ಹೇಳ್ಬಹುದು. ಆದರೆ ಈ ವರ್ಷದಲ್ಲಿ ಕೆಲವೊಂದು ಡಿವೈಸ್ಗಳನ್ನು ಟೆಕ್ ಕಂಪನಿ ಬ್ಯಾನ್ ಮಾಡುವುದಾಗಿ ನಿರ್ಧರಿಸಿದೆ. ಹಾಗಿದ್ರೆ ಯಾವುದು ಆ ಡಿವೈಸ್ಗಳು ಎಂಬುದನ್ನುಈ ಲೇಖನದ ಮೂಲಕ ತಿಳಿಯಿರಿ.
ಐಪ್ಯಾಡ್ ಟಚ್
ಒಂದು ಸಮಯದಲ್ಲಿ ಟೆಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದ ಐಪ್ಯಾಡ್ ಟಚ್ ಉತ್ಪಾದನೆ ಇನ್ಮುಂದೆ ಆ್ಯಪಲ್ ಕಂಪನಿ ಮಾಡುವುದಿಲ್ಲ ಎಂದು ಹೇಳುವುದಿಲ್ಲ. ಅಂದರೆ ಇನ್ಮುಂದೆ ಐಪ್ಯಾಡ್ ಟಚ್ ಡಿವೈಸ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್, ಹೊಸ ಫೀಚರ್ಸ್ ಹೀಗಿದೆ
2001 ರಲ್ಲಿ ಸ್ಟೀವ್ ಜಾಬ್ಸ್ ಪರಿಚಯಿಸಿದ ಐಪ್ಯಾಡ್ ಐಕಾನಿಕ್ ಮ್ಯೂಸಿಕ್ ಪ್ಲೇಯರ್, ಐಫೋನ್ ಪ್ರಾರಂಭವಾದಾಗ ಜನಪ್ರಿಯತೆಯ ಉತ್ತುಂಗಕ್ಕೇರಿತು. ಆದರೆ ನಂತರದ ದಿನಗಳಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು. ಇನ್ನು ಐಪಾಡ್ ಟಚ್ ಅಪ್ಲಿಕೇಶನ್ಗಳು ಮತ್ತು ಗೇಮ್ಸ್ ಆಡುವವರಿಗೆ ಉತ್ತಮ ಅನುಭವವನ್ನು ನೀಡುವಂತಹ ಎಂಟ್ರಿ ಲೆವೆಲ್ ಮ್ಯೂಸಿಕ್ ಪ್ಲೇಯರ್ ಡಿವೈಸ್ ಇದಾಗಿದೆ.
ಬ್ಲ್ಯಾಕ್ಬೆರಿ
ಬ್ಲ್ಯಾಕ್ಬೆರಿ ಎಂಬ ಹೆಸರು ಟೆಕ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ ಕಂಪನಿಯೆಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಟೆಕ್ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾದ ಕಂಪನಿ ಒಂದಿದ್ದರೆ ಅದು ಬ್ಲ್ಯಾಕ್ಬೆರಿ ಕಂಪನಿ. ಇದೀಗ 2022ರಲ್ಲಿ ಶಾಶ್ವತವಾಗಿ ಬಂದ್ ಆದ ಟೆಕ್ ಕಂಪನಿಗಳಲ್ಲಿ ಒಂದಾಗಿದೆ.
ಇನ್ನು ಈ ಕಂಪನಿಯ ಡಿವೈಸ್ಗಳನ್ನು ರನ್ ಮಾಡುವ ಯಾವುದೇ ಸಾಫ್ಟವೇರ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಇನ್ಮುಂದೆ ಬ್ಲ್ಯಾಕ್ಬೆರಿ ಫೋನ್ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಗೂಗಲ್ ಸ್ಟೇಡಿಯಾ
ಗೂಗಲ್ ಕಂಪನಿ ಇತ್ತೀಚಿಗೆ ಕ್ಲೌಡ್ ಆಧಾರಿತ ಗೇಮಿಂಗ್ ಸೇವೆಗಾಗಿ ಗೂಗಲ್ ಸ್ಟೇಡಿಯಾವನ್ನು ಇತ್ತೀಚೆಗೆ ಪರಿಚಯಿಸಿತ್ತು. ಆದರೆ ಇದೀಗ ಅಷ್ಟೇ ವೇಗದಲ್ಲಿ ಇದು ಅಂತಿಮವಾಗಿ ಬಂದ್ ಆಗಿದೆ. ಅಂದರೆ ಗೇಮರ್ಗಳ ಅನುಕೂಲಕ್ಕಾಗಿ ಸಿದ್ದಪಡಿಸಿದ್ದ ಗೂಗಲ್ ಸ್ಟೇಡಿಯಾ ಜನರನ್ನು ಸೆಳೆಯುವಲ್ಲಿ ವಿಫಲವಾದ ಕಾರಣ ಅದನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಇದೇ ವರ್ಷ ಘೋಷಣೆಯನ್ನು ಮಾಡಿದೆ.
ಇದರಿಂದ ಇನ್ಮುಂದೆ ಗೂಗಲ್ ಸ್ಟೇಡಿಯಾ ಲಭ್ಯವಾಗುವುದಿಲ್ಲ. ಟೆಕ್ ಮಾರುಕಟ್ಟೆಗೆ ಗೇಮರ್ಗಳನ್ನು ಸೆಳೆಯುವ ಕಾರಣಕ್ಕೆ ಹೊಸ ಡಿವೈಸ್ಗಳು ಬರುತ್ತಾ ಇರುತ್ತವೆ. ಆದರೆ ಈ ಸಾಲಿನಲ್ಲಿ ಗೂಗಲ್ ಸ್ಟೇಡಿಯಾ ಕೂಡ ಒಂದಾಗಿತ್ತು. ಆದರೆ ಇನ್ಮುಂದೆ ಇದು ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಟೆಕ್ ಮಾರುಕಟ್ಟೆಯ ಬೆಳವಣಿಗೆಗೆ ಸಾಕಷ್ಟು ಕಂಪನಿಗಳು ಸಾಕ್ಷಿಯಾಗಿವೆ. ಆದರೆ ಕೆಲ ಬದಲಾವಣೆಗಳಿಂದ ಆ ಕಂಪನಿಗಳು ಸ್ಥಗಿತಗೊಂಡಿವೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ