ಇನ್ಮುಂದೆ ಗೂಗಲ್​ನ ಈ ಸೇವೆ ಲಭ್ಯವಿರಲ್ಲ; ಫೋಟೋ, ವಿಡಿಯೋಗಳಿದ್ದರೆ ಸೇವ್ ಮಾಡಿಕೊಳ್ಳಿ!

ಸಂಸ್ಥೆ ಈ ರೀತಿ ನಿರ್ಧಾರಕ್ಕೆ ಬರಲು ಮೂಲ ಕಾರಂ ಹ್ಯಾಕಿಂಗ್​. ಈ ಮೊದಲು ಬರೋಬ್ಬರಿ 5 ಕೋಟಿ ಗೂಗಲ್​+ ಬಳಕೆದಾರರ ಖಾತೆಗಳ ಮಾಹಿತಿ ಸೋರಿಕೆ ಆಗಿತ್ತು. ಇದರಿಂದ ಎಚ್ಚೆತ್ತ ಸಂಸ್ಥೆ ಈ ಸೇವೆಯನ್ನೇ ರದ್ದು ಮಾಡುವ ನಿರ್ಧಾರಕ್ಕೆ ಬಂದಿತ್ತು.

Rajesh Duggumane | news18
Updated:February 7, 2019, 2:31 PM IST
ಇನ್ಮುಂದೆ ಗೂಗಲ್​ನ ಈ ಸೇವೆ ಲಭ್ಯವಿರಲ್ಲ; ಫೋಟೋ, ವಿಡಿಯೋಗಳಿದ್ದರೆ ಸೇವ್ ಮಾಡಿಕೊಳ್ಳಿ!
ಸಾಂದರ್ಭಿಕ ಚಿತ್ರ
Rajesh Duggumane | news18
Updated: February 7, 2019, 2:31 PM IST
ಆನ್​ಲೈನ್​ ದಿಗ್ಗಜ ಗೂಗಲ್​ ಸಂಸ್ಥೆ ಜಿ-ಮೇಲ್​, ಗೂಗಲ್​ ಮ್ಯಾಪ್, ಗೂಗಲ್​ ಡ್ರೈವ್​​ ಸೇರಿ ಸಾಕಷ್ಟು ಸೇವೆಗಳನ್ನು ನೀಡುತ್ತಿದೆ​. ಆದರೆ, ಈಗ ಗೂಗಲ್​ ತನ್ನ ಸೇವೆಯೊಂದನ್ನು ರದ್ದು ಮಾಡಲು ಮುಂದಾಗಿದೆ. ಅಷ್ಟಕ್ಕೂ ಯಾವುದು ಆ ಸೇವೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

2011ರಲ್ಲಿ ಆರಂಭಗೊಂಡಿದ್ದ ಗೂಗಲ್​+​ ಇನ್ನುಮುಂದೆ ಬಳಕೆಗೆ ಲಭ್ಯವಿರುವುದಿಲ್ಲ. ಈ ಬಗ್ಗೆ ಕಳೆದ ಅಕ್ಟೋಬರ್​ ತಿಂಗಳಲ್ಲೇ ಗೂಗಲ್​ ಘೋಷಣೆ ಮಾಡಿತ್ತು. ಏಪ್ರಿಲ್​ 2ರಿಂದ ಈ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಈ ಘೋಷಣೆ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಸಂಸ್ಥೆ ಈ ರೀತಿ ನಿರ್ಧಾರಕ್ಕೆ ಬರಲು ಮೂಲ ಕಾರಣ ಹ್ಯಾಕಿಂಗ್​. ಈ ಮೊದಲು ಬರೋಬ್ಬರಿ 5 ಕೋಟಿ ಗೂಗಲ್​+ ಬಳಕೆದಾರರ ಖಾತೆಗಳ ಮಾಹಿತಿ ಸೋರಿಕೆ ಆಗಿತ್ತು. ಇದರಿಂದ ಎಚ್ಚೆತ್ತ ಸಂಸ್ಥೆ ಈ ಸೇವೆಯನ್ನೇ ರದ್ದು ಮಾಡುವ ನಿರ್ಧಾರಕ್ಕೆ ಬಂದಿತ್ತು. ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೂಡ ನೀಡಿತ್ತು.

ಇದನ್ನೂ ಓದಿ: ಕ್ಸಿಯಾಮಿ ಕಂಪೆನಿ ಪುರಷರಿಗಾಗಿ ಪರಿಚಯಿಸುತ್ತಿದೆ ಇಕೋ ಸ್ಪೋಟ್ಸ್​​​ ಶೂ

ಗೂಗಲ್​ ಪ್ಲಸ್​ನಲ್ಲಿ ಅಪ್​ಲೋಡ್​ ಮಾಡಿದ ಫೋಟೋ ಹಾಗೂ ವಿಡಿಯೋಗಳ ಗತಿ? ಈ ಬಗ್ಗೆಯೂ ಸಂಸ್ಥೆ ಸ್ಪಷ್ಟನೆ ನೀಡಿದೆ. ಗೂಗಲ್​ ಪ್ಲಸ್​ ಖಾತೆಗಳು ಡಿಲೀಟ್​ ಆದ ನಂತರದಲ್ಲಿ ಅವುಗಳಲ್ಲಿರುವ ಫೋಟೋ ಹಾಗೂ ವಿಡಿಯೋಗಳು ಕೂಡ ಡಿಲೀಟ್​ ಆಗಲಿವೆ. ಹಾಗಾಗಿ ಮೊದಲೇ ಬ್ಯಾಕಅಪ್​ ತೆಗೆದಿಟ್ಟುಕೊಳ್ಳಿ ಎಂದು ಸಂಸ್ಥೆ ಸೂಚಿಸಿದೆ.

“ಏಪ್ರಿಲ್​ 2ರಿಂದ ಗೂಗಲ್+ ಸೇವೆ ಲಭ್ಯವಿರುವುದಿಲ್ಲ. ಆ ತಿಂಗಳಿಂದ ಹೊಸ ಖಾತೆ ತೆರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಅದರಲ್ಲಿರುವ ಫೋಟೋಗಳೂ ದೊರೆಯುವುದಿಲ್ಲ,” ಎಂದು ಸಂಸ್ಥೆ ತಿಳಿಸಿದೆ.

ಗೂಗಲ್ + ಸೇವೆ 2011ರಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿತ್ತಾದರೂ, ನಂತರದ ದಿನಗಳಲ್ಲಿ ತನ್ನ ಮಾರುಕಟ್ಟೆ ಕಳೆದುಕೊಂಡಿತ್ತು. ಆರಂಭದಲ್ಲಿ 45 ಕೋಟಿ ಇದ್ದ ಬಳಕೆ ದಾರರ ಸಂಖ್ಯೆ 2011ರಲ್ಲಿ 11 ಕೋಟಿಗೆ ಇಳಿಕೆ ಆಗಿತ್ತು. ಗೂಗಲ್​+ ಮುಚ್ಚಲು ಇದೂ ಒಂದು ಕಾರಣ ಎನ್ನಲಾಗುತ್ತಿದೆ.
Loading...

ಇದನ್ನೂ ಓದಿ: 2019ರ ಆ್ಯಂಡ್ರಾಯ್ಡ್​​ ಫೋನ್​ಗಳ ಎಮೋಜಿ ಪಟ್ಟಿಯಲ್ಲಿ ‘ಹಿಂದು‘ ದೇವಸ್ಥಾನ ಸೇರಿ ಹಲವು ಹೊಸ ಸೇರ್ಪಡೆ

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ