ಹೊಸ ವರ್ಷದ ಅಂಗವಾಗಿ ಪ್ರಸಿದ್ಧ ಟೆಲಿಕಾಂ ಕಂಪನಿಗಳು (Telecom Company) ಗ್ರಾಹಕರಿಗಾಗಿ ವೀಶೆಷ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plans) ಪರಿಚಯಿಸುತ್ತಿದೆ. ಇದರ ಜೊತೆಗೆ ಕೆಲವೊಂದು ಕಂಪನಿಗಳು 5ಜಿ (5G) ಸೇವೆಯನ್ನು ಗ್ರಾಹಕರಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ಎಲ್ಲದರ ನಡುವೆ ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರು ಬೇಸರವನ್ನುಂಟು ಮಾಡುವಂತಹ ರೀಚಾರ್ಜ್ ಪ್ಲ್ಯಾನ್ ಅನ್ನು ನಿಲ್ಲಿಸುವ ಯೋಜನೆಯಲ್ಲಿದೆ. ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಲ್ಲಿ ಸರ್ಕಾರಿ ಕಂಪನಿಯೆಂದರೆ ಅದು ಬಿಎಸ್ಎನ್ಎಲ್. ಇದು ತನ್ನ ಅಗ್ಗದ ರೀಚಾರ್ಜ್ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಆದರೆ ಇದೀಗ ತನ್ನ ಕಂಪನಿಯ ಭಾರೀ ಅಗ್ಗದ ಪ್ಲ್ಯಾನ್ ಅನ್ನು ನಿಲ್ಲಿಸುವ ಯೋಜನೆಯಲ್ಲಿದೆ.
ಹೊಸ ವರ್ಷದಲ್ಲಿ ಬಿಎಸ್ಎನ್ಎಲ್ ಗ್ರಾಹಕರಿಗೆ ಆಘಾತಕಾರಿ ಮಾಹಿತಿಯೊಂದನ್ನು ನೀಡಿದೆ. ಅದರಂತೆ ಪ್ರಮುಖ ಮೂರು ರೀಚಾರ್ಜ್ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳನ್ನು ಬಿಎಸ್ಎನ್ಎಲ್ ಇದ್ದಕ್ಕಿದ್ದಂತೆ ನಿಲ್ಲಿಸಿದೆ. ಹಾಗೆಯೇ ಈ ಯೋಜನೆಗಳನ್ನು 1 ಜನವರಿ 2023 ರಿಂದ ವೆಬ್ಸೈಟ್ನಿಂದ ತೆಗೆದುಹಾಕಲಾಗಿದ್ದು, ಇನ್ಮುಂದೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ರವಾನೆ ಮಾಡಿದೆ.
ಕೈಬಿಡುವ ರೀಚಾರ್ಜ್ ಪ್ಲ್ಯಾನ್ಗಳು ಯಾವುದೆಲ್ಲಾ?
ಬಿಎಸ್ಎನ್ಎಲ್ನ ಅಗ್ಗದ ದರದ ಬ್ರಾಡ್ಬ್ಯಾಂಡ್ ರೀಚಾರ್ಜ್ ಪ್ಲ್ಯಾನ್ಗಳಾದ 275 ರೂ. ನ ಎರಡು ರೀಚಾರ್ಜ್ ಯೋಜನೆ ಹಗೂ 775 ರೂ. ನ ರೀಚಾರ್ಜ್ ಪ್ಲ್ಯಾನ್ಗಳನ್ನು ಶಾಶ್ವತವಾಗಿ ಬಂದ್ ಮಾಡುವುದಾಗಿ ಘೋಷಿಸಿದೆ. ಬಿಎಸ್ಎನ್ಎಲ್ ಈ ಯೋಜನೆಗಳು ಕೆಲವು ಸಮಯದವರೆಗೆ ಮಾತ್ರ ಇರುತ್ತದೆ ಎಮದು ತಿಳಿಸುವುದರ ಜೊತೆಗೆ ಕಳೆದ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15 ರಂದು ಬಿಡುಗಡೆ ಮಾಡಿತ್ತು. ಆದರೆ, ಇನ್ನು ಜನವರಿ 1, 2023 ರಿಂದ ಈ ರೀಚಾರ್ಜ್ ಪ್ಲ್ಯಾನ್ ಲಭ್ಯವಿರುವುದಿಲ್ಲ.
ಇದನ್ನೂ ಓದಿ: ಅಪರಿಚಿತರಿಗೆ ನಿಮ್ಮ ಮೊಬೈಲ್ ಕೊಡುವ ಮುನ್ನ ಎಚ್ಚರ!
ಬಿಎಸ್ಎನ್ಎಲ್ನ 275 ರೂಪಾಯಿ ಯೋಜನೆ
ಬಿಎಸ್ಎನ್ಎಲ್ನ 275 ರೂಪಅಯಿ ಯೋಜನೆಯಲ್ಲಿ ಎರಡು ರೀತಿಯ ಪ್ಲ್ಯಾನ್ಗಳಿದ್ದು, ಇದರಲ್ಲಿ ಬಳಕೆದಾರರು ಒಟ್ಟಾರೆ ಒಂದು ತಿಂಗಳಲ್ಲಿ 3300 ಜಿಬಿ ಡೇಟಾವನ್ನು ನೀಡಲಾಗುತ್ತಿತ್ತು. ಹಾಗೆಯೇ ಈ ಪ್ಲ್ಯಾನ್ನಲ್ಲಿ ಡೌನ್ಲೋಡ್ ಮತ್ತು ಅಪ್ಲೋಡ್ ವೇಗವನ್ನು 60Mbps ವೇಗದಲ್ಲಿ ಒದಗಿಸಲಾಗುತ್ತಿತ್ತು. ಆದರೆ, ಈ ಎರಡೂ ಯೋಜನೆಗಳಲ್ಲಿ ಯಾವುದೇ ಓಟಿಟಿ ಪ್ರಯೋಜನವನ್ನು ನೀಡಲಾಗುತ್ತಿರಲಿಲ್ಲ. ಆದರೂ ಸಹ ಈ ಪ್ಲ್ಯಾನ್ಗಳು ಹೆಚ್ಚು ಪ್ರಚಲಿತದಲ್ಲಿದ್ದವು.
ಬಿಎಸ್ಎನ್ಎಲ್ನ 775 ರೂಪಾಯಿಯ ಯೋಜನೆ
775 ರೂ. ಗಳ ಮತ್ತೊಂದು ಪ್ಲ್ಯಾನ್ ಸಹ ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ತಿಳಿಸಿದೆ. ಈ ಯೋಜನೆಯಲ್ಲಿ 3300GB (3.3TB) ಡೇಟಾವನ್ನು 100Mbps ವೇಗದಲ್ಲಿ ನೀಡಲಾಗುತ್ತಿತ್ತು. ಹಾಗೆಯೇ ಈ ಯೋಜನೆಯಲ್ಲಿ ವಿಶೇಷವಾಗಿ ಓಟಿಟಿ ಪ್ರಯೋಜನ ಮತ್ತು 75 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಆದರೆ, ಈ ಅಗ್ಗದ ಪ್ಲ್ಯಾನ್ಗಳು ಇನ್ಮುಂದೆ ಲಭ್ಯವಾಗದೆ ಇರುವುದು ಹಲವಾರು ಗ್ರಾಹಕರಿಗೆ ಬೇಸರದ ಸುದ್ದಿಯಾಗಿದೆ.
ಬಿಎಸ್ಎನ್ಎಲ್ನ ಹಲವು ರೀತಿಯ ಪ್ಲ್ಯಾನ್ಗಳು
ಇನ್ನು ಬಿಎಸ್ಎನ್ಎಲ್ನ ಬ್ರಾಡ್ಬ್ಯಾಂಡ್ ಬಗ್ಗೆ ಹೇಳುವುದಾದರೆ ಇದರಲ್ಲಿ 1 ತಿಂಗಳು, 6 ತಿಂಗಳು, 12 ತಿಂಗಳು ಮತ್ತು 24 ತಿಂಗಳುಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ, ಇದರಲ್ಲಿ ಎಂಟ್ರಿ ಪ್ಲ್ಯಾನ್ ಬೆಲೆ 329 ರೂಪಾಯಿಗಳಿಂದ ಆರಂಭವಾಗಲಿದ್ದು, ಈ ಯೋಜನೆಯಲ್ಲಿ 1000GB ಡೇಟಾವನ್ನು 20Mbps ವೇಗದಲ್ಲಿ ಪಡೆಯಬಹುದಾಗಿದೆ. ಹಾಗೆಯೇ, ಸ್ಥಳೀಯ ಮತ್ತು ಎಸ್ಟಿಡಿ ಸಂಖ್ಯೆಗಳಲ್ಲಿ ಉಚಿತ ಅನ್ಲಿಮಿಟೆಡ್ ಕಾಲ್ ಮಾಡುವ ಅವಕಾಶ ಇರುತ್ತದೆ.
ಇನ್ನು ಸಾಮಾನ್ಯ ರೀಚಾರ್ಜ್ ಪ್ಲ್ಯಾನ್ಗಳಾದ 399 ರೂಪಾಯಿ ಯೋಜನೆಯಲ್ಲಿ 1000ಜಿಬಿ ಡೇಟಾವನ್ನು 30Mbps ವೇಗದಲ್ಲಿ ನೀಡಲಾಗುತ್ತದೆ.
ಇನ್ನು 449 ರೂ. ರೀಚಾರ್ಜ್ ಪ್ಯಾಕ್ನಲ್ಲಿ 30Mbps ವೇಗದ ನೆಟ್ ಸಿಗಲಿದೆ. ಜೊತೆಗೆ ಈ ಯೋಜನೆಯಲ್ಲಿ 3300GB ಡೇಟಾ ಲಭ್ಯವಿದೆ. ಇನ್ನು ಮತ್ತೊಂದು ಪ್ಲ್ಯಾನ್ ಆದ 449ರೂ. ಗಳ ರೀಚಾರ್ಜ್ ಪ್ಲ್ಯಾನ್ನಲ್ಲಿ 3300GB ಡೇಟಾ ಆಯ್ಕೆ ನೀಡಲಾಗಿದ್ದು, 40Mbps ನಲ್ಲಿನ ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದು. ಹಾಗೆಯೇ ಈ ಪ್ಲ್ಯಾನ್ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ