60 ಸೆಕೆಂಡ್​ನಲ್ಲೇ ಕಾರಾಗಿ ಮಾರ್ಪಾಡಾಗುವ ರೋಬೋಟ್​


Updated:April 28, 2018, 4:11 PM IST
60 ಸೆಕೆಂಡ್​ನಲ್ಲೇ ಕಾರಾಗಿ ಮಾರ್ಪಾಡಾಗುವ ರೋಬೋಟ್​

Updated: April 28, 2018, 4:11 PM IST
ಟೊಕಿಯೋ: ಟ್ರಾನ್ಸಫಾರ್ಮರ್ಸ್ ಕೆಲ ವರ್ಷಗಳ ಹಿಂದೆ ಭಾರೀ ಮಟ್ಟದಲ್ಲೇ ಸದ್ದು ಮಾಡಿದ ಚಿತ್ರ, ಈ ಚಿತ್ರದಲ್ಲಿ ರೋಬೋಟ್​ಗಳು ವೇಗದ ಕಾರಿಗಳ ರೂಪ ಪಡೆದು ವೈರಿಗಳ ನಡುವೆ ಯುದ್ಧ ನಡೆಸುವ ಮಾದರಿಯಲ್ಲೇ ಇಲ್ಲೊಂದು ರೋಬೋಟ್​ ಕಾರು ಸಿದ್ಧಗೊಂಡಿದೆ.

ಜಪಾನ್​ನಲ್ಲಿ ಇದೇ ಬುಧವಾರದಂದು ಬ್ರೇವ್​ ರೋಬೋಟಿಕ್​ ಸಂಸ್ಥೆಯ ಸಿಇಒ ಕೆಂಜಿ ಇಶಿದಾರವರು  'ಜೆ ಡೈಯಟ್​ ರೈಡ್'​ ಎಂಬ ರೋಬೋಟ್​ ಕಾರನ್ನು ಬಿಡುಗಡೆ ಮಾಡಿದ್ದಾರೆ. ಈ ರೋಬೋಟ್​ ಕೇವಲ 60 ಸೆಕೆಂಡ್​ಗಳಲ್ಲಿ ರೂಪಾಂತರಗೊಂಡು ಕಾರಾಗಿ ಮಾರ್ಪಾಡಾಗುತ್ತದೆ ಎಂದು ಕೆಂಜಿ ಹೇಳಿದ್ದಾರೆ.ಸಣ್ಣ ವಯಸ್ಸಿನಲ್ಲೇ ಇಂತಹ ವಿಭಿನ್ನ ಕನಸ್ಸನ್ನು ಕಂಡುಕೊಂಡೇ ಬೆಳೆದಿರುವ ಕೆಂಜಿ ಈ ರೋಬೋಟ್​ ನಿರ್ಮಾಣಕ್ಕಾಗಿ ಹಲವಾರು ವರ್ಷಗಳನ್ನೇ ಕಾದಿದ್ದಾರೆ. ನೀಲಿ ಮತ್ತು ಬಿಳಿ ಬಣ್ಣದ ಈ ರೋಬೋಟ್​ ಸುಮಾರು 12 ಅಡಿ ಉದ್ದವಿದೆ. ಇದರಲ್ಲಿ ಇಬ್ಬರು ಕುಳಿತು ಹೋಗಬಹುದಾಗಿದೆ. ಕೊಂಚ ದುಬಾರಿಯ ಆಟದ ಸಾಮಾನಾಗಿದ್ದರೂ ಈ ರೋಬೋಟ್​ ಬೇರೆಯವರಿಗೂ ಉತ್ತೇಜನ ನೀಡ ಬೇಕು ಎಂಬ ಉದ್ದೇಶದಿಂದಲೇ ನಾವು ಇದನ್ನು ನಿರ್ಮಾಣ ಮಾಡಿದ್ದೇವೆ ಎಂದು ಕೆಂಜಿ ಹೇಳಿದ್ದಾರೆ.

 
First published:April 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...