ಶಾಕಿಂಗ್​ ನ್ಯೂಸ್​! 12 ಕೋಟಿ ಫೇಸ್​ಬುಕ್​ ಬಳಕೇದಾರರ ಮಾಹಿತಿ ಸೋರಿಕೆ!


Updated:June 29, 2018, 4:07 PM IST
ಶಾಕಿಂಗ್​ ನ್ಯೂಸ್​! 12 ಕೋಟಿ ಫೇಸ್​ಬುಕ್​ ಬಳಕೇದಾರರ ಮಾಹಿತಿ ಸೋರಿಕೆ!
PC: medium

Updated: June 29, 2018, 4:07 PM IST
ಇತ್ತೀಚೆಗೆ ನೀವು ಫೇಸ್​ಬುಕ್​ ಖಾತೆಯಲ್ಲಿ ಯಾವ ರೀತಿಯ ಹೀರೋ ಲುಕ್​ ನಿಮಗಿದೆ, ಯಾವ ವಯಸ್ಸಿನಲ್ಲಿ ನೀವು ಮರಣ ಹೊಂದಬಹುದು, ನಿಮ್ಮ ಹಿಂದೆ ಎಷ್ಟು ಹುಡುಗರು/ಹುಡುಗಿಯರು ಬಿದ್ದಿದ್ದಾರೆ ಈ ರೀತಿಯ ಹಲವಾರು ಪ್ರಶ್ನೆಗಳನ್ನು ಕೇಳವ ಆ್ಯಪ್​ ಕುರಿತು ನಿಮಗೆ ಮಾಹಿತಿ ಇರಬಹುದು. ಆದರೆ ಈ ರೀತಿಯ ಆ್ಯಪ್​ಗಳನ್ನು ಬಳಸುವ ಮುನ್ನ ಯೋಚಿಸಿ. ಏಕೆಂದರೆ "Nametests" ಎಂಬ ಆ್ಯಪ್​ನಿಂದಾಗಿ 120 ದಶಲಕ್ಷ ಜನರ ಖಾಸಗಿ ಮಾಹಿತಿ ಸೋರಿಕೆಯಾಗಿದೆ.

ಹೌದು ಕೆಲ ದಿನಗಳ ಹಿಂದೆ ರಾಜಕೀಯ ಸ್ಟ್ರಾಟಜಿ ಕಂಪನಿ ಕೇಂಬ್ರಿಡ್ಜ್​ ಅನೆಲೆಟಿಕಾಗೆ 87 ದಶಲಕ್ಷ ಜನರ ಮಾಹಿತಿ ಸೋರಿಕೆ ಮಾಡಿದ್ದ ಫೇಸ್​ಬುಕ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಖ್ಯಾತ್​ ಕ್ವಿಜ್​ "Nametests" ಜತೆ ಸೇರಿ ಸುಮಾರು 12 ಸಾವಿರ ಕೋಟಿ ಜನರ ಮಾಹಿತಿ ಸೋರಿಕೆ ಮಾಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಜ್ಞ ಇಂಟಿ ಡಿ ಸೆಕುಲೇರ್ ಫೇಸ್​ಬುಕ್​ ನ ನ್ಯೂಯನ್ಯತೆಯನ್ನು ಬಯಲಿಗೆಳೆದಿದ್ದಾರೆ. ಕೇಂಬ್ರಿಡ್ಜ್​ ಹಗರಣದ ಬಳಿಕ ಫೇಸ್​ಬುಕ್​ ತನ್ನಲ್ಲಿರುವ ದೋಷಗಳನ್ನು ಬಯಲಿಗೆಳೆದವರಿಗೆ ಎಂಟು ಸಾವಿರ ಡಾಲರ್​ ಬಹುಮಾನ ನೀಡುವುದಾಗಿ ಸಂಸ್ಥೆ ಹೇಳಿಕೊಂಡಿತ್ತು. ಈ ಚಾಲೆಂಜ್​ನ್ನು ಸ್ವೀಕರಿಸಿದ ಇಂಟಿ ದೋಷವನ್ನು ಬಯಲಿಗೆಳೆದಿದ್ದಾರೆ.

ಈ ಕುರಿತು Medium,ನೊಂದಿಗೆ ಬರೆದುಕೊಂಡಿರುವ ಇಂಟಿ, ಫೇಸ್​ಬುಕ್​ನಲ್ಲಿ ಎರಡು ಕೋಟಿಗೂ ಅಧಿಕ ಲೈಕ್ಸ್​ ಹೊಂದಿರುವ ನೇಮ್​ಟೆಸ್ಟ್ಸ್​ ಪೇಜ್​ ಯಾವುದೇ ಭಯವಿಲ್ಲದೇ ಮೂರನೇ ವ್ಯಕ್ತಿಯ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಪ್ರತಿಯೊಬ್ಬ ವ್ಯಕ್ತಿ ಹೆಸರು, ಹುಟ್ಟಿದ ದಿನಾಂಕ, ಫೇಸ್​ಬುಕ್​ ಫ್ರೆಂಡ್​ ಲಿಸ್ಟ್​, ಸ್ಟೇಟಸ್​ ಎಲ್ಲವನ್ನೂ ತನ್ನಲ್ಲಿ ದಾಖಲಿಸಿಕೊಂಡಿರುತ್ತದೆ. ಈ ಅಪ್ಲಿಕೇಶನ್​ ಸ್ಥಗಿತಗೊಂಡು ವರ್ಷಗಳೇ ಕಳೆದರೂ ಯಾವುದೇ ಮಾಹಿತಿ ಮಾತ್ರಾ ಸೋರುವುದನ್ನು ತಡೆಯಲಿಲ್ಲ.

ಈ ರೀತಿ ದಾಖಲಾದ ಮಾಹಿತಿಯನ್ನು ಯಾರು ಬೇಕಾದರೂ ನಕಲಿ ವೆಬ್​ ತಾಣವೊಂದನ್ನು ಸೃಷ್ಠಿಸಿ ಪಡೆದುಕೊಳ್ಳಲು ಅನುವು ಮಾಡುತ್ತದೆ, ಪ್ರಸಕ್ತ ಈ ದೋಷವನ್ನು ಸಂಸ್ಥೆ ಹಾಗೂ ಫೇಸ್​ಬುಕ್​ ಎರಡೂ ಸರಿಪಡಿಸಿಕೊಂಡಿರುದ್ದನ್ನು ದೃಢೀಕರಿಸಿವೆ ಎಂದು ಇಂಟಿ ಹೇಳಿದ್ದಾರೆ.

ಈ ದೋಷದ ಕುರಿತು ಇಂಟಿ ಎಪ್ರಿಲ್​ನಲ್ಲೇ ಮಾಹಿತಿ ನೀಡಿದ್ದರಂತೆ, ಆದರೆ ಫೇಸ್​ಬುಕ್​ ಜೂನ್ ಅಂತ್ಯದಲ್ಲಿ ದೋಷವನ್ನು ಸರಿದೂಗಿಸಿದೆ ಎಂದು ಹೇಳಿದ್ದಾರೆ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...