Video: ಸ್ಯಾಮ್​ಸಂಗ್​ ಮಡಚುವ ಫೋನ್​ ಮಾರಾಟ ಆರಂಭ; ಇದರ ಬೆಲೆಯೆಷ್ಟು ಗೊತ್ತಾ?

ಸ್ಯಾಮ್​ಸಂಗ್​ ‘ಗ್ಯಾಲಕ್ಸಿ  ಪೋಲ್ಡ್‘​ ಸ್ಮಾರ್ಟ್​ಫೋನ್​ ಇನ್ಫಿನಿಟಿ ಫ್ಲೆಕ್ಸ್ ಹೆಸರಿನ ಎರಡು ಡಿಸ್​ಪ್ಲೇ ಹೊಂದಿದೆ. ಮೊದಲನೆಯ ಡಿಸ್​ಪ್ಲೇ 4.6 ಇಂಚು ಹೊಂದಿದ್ದರೆ, ಎರಡನೇ ಡಿಸ್​ಪ್ಲೇ 7.3 ಇಂಚು ಹೊಂದಿದೆ

news18-kannada
Updated:September 7, 2019, 2:43 PM IST
Video: ಸ್ಯಾಮ್​ಸಂಗ್​ ಮಡಚುವ ಫೋನ್​ ಮಾರಾಟ ಆರಂಭ; ಇದರ ಬೆಲೆಯೆಷ್ಟು ಗೊತ್ತಾ?
ಸ್ಯಾಮ್​ಸಂಗ್​ ‘ಗ್ಯಾಲಕ್ಸಿ  ಪೋಲ್ಡ್‘​ ಸ್ಮಾರ್ಟ್​ಫೋನ್​
  • Share this:
ಸ್ಯಾಮ್​ಸಂಗ್​ ಕಂಪೆನಿ ನೂತನವಾಗಿ ತಯಾರಿಸಿದ 'ಗ್ಯಾಲಕ್ಸಿ ಪೋಲ್ಡ್' (ಮಡಚುವ ಫೋನ್​)​ ಸ್ಮಾರ್ಟ್​ಫೋನ್​ ಮಾರಾಟ ದಕ್ಷಿಣ ಕೊರಿಯಾದಲ್ಲಿ ಆರಂಭವಾಗಿದೆ. ನೂತನ ಸ್ಮಾರ್ಟ್​ಫೋನ್​ ಬೆಲೆಯನ್ನು 1.40 ಲಕ್ಷ ರೂ. ಎಂದು ನಿಗದಿ ಪಡಿಸಿದ್ದು, ಇನ್ನೆರಡು ವಾರಗಳಲ್ಲಿ ಬ್ರಿಟನ್​, ಫ್ರಾನ್ಸ್​ ಮತ್ತು ಜರ್ಮನಿ ​ಈ ಸ್ಮಾರ್ಟ್​ಫೋನ್​ ಅನ್ನು ಮಾರಾಟ ಮಾಡಲಿದೆ. ಯು.ಎಸ್​ನಲ್ಲಿ ಈ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಸ್ಯಾಮ್​ಸಂಗ್​ ‘ಗ್ಯಾಲಕ್ಸಿ  ಪೋಲ್ಡ್‘​ ಸ್ಮಾರ್ಟ್​ಫೋನ್​ ಇನ್ಫಿನಿಟಿ ಫ್ಲೆಕ್ಸ್ ಹೆಸರಿನ ಎರಡು ಡಿಸ್​ಪ್ಲೇ ಹೊಂದಿದೆ. ಮೊದಲನೆಯ ಡಿಸ್​ಪ್ಲೇ 4.6 ಇಂಚು ಹೊಂದಿದ್ದರೆ, ಎರಡನೇ ಡಿಸ್​ಪ್ಲೇ 7.3 ಇಂಚು ಹೊಂದಿದೆ. ​ ಸ್ಮಾರ್ಟ್​ಫೋನ್​ ಮುಂಭಾಗದಲ್ಲಿ ಮೂರು ಕ್ಯಾಮೆರಾಕ್ಕೆ ಸಪೋರ್ಟ್​ ಮಾಡುವಂತ ನೋಚ್​ ಹಾಗೂ ಹಿಂಭಾಗದಲ್ಲಿ ಮೂರು ಕ್ಯಾಮೆರಾವನ್ನು ನೀಡಲಾಗಿದೆ.ಇದನ್ನೂ ಓದಿ: ಮುಂಬೈನಲ್ಲಿ ಮೆಟ್ರೋ ಕೋಚ್ ಉದ್ಘಾಟನೆಯಲ್ಲಿ ಮೋದಿ; ಇಸ್ರೋ ವಿಜ್ಞಾನಿಗಳ ಗುಣಗಾನ ಮಾಡಿದ ಪ್ರಧಾನಿ

ಸ್ಯಾಮ್​ಸಂಗ್​ ಪೋಲ್ಡೆಬಲ್​ ಸ್ಮಾರ್ಟ್​ಫೋನ್​ 7nm​ ಆಕ್ಟಾ ಕೋರ್​ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತಿದೆ. 12GB RAM​ ಮತ್ತು 512GB ಸ್ಟೊರೇಜ್​ ಅನ್ನು ಹೊಂದಿದೆ. ಜೊತೆಗೆ ದೀರ್ಘಕಾಲದ ಬಳಕೆಗಾಗಿ 4380mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ. ವೇಗವಾಗಿ ಚಾರ್ಜ್​ ಆಗಲು Qc2.0 ವೇಗದ ತಂತ್ರಜ್ನಾನವನ್ನು ಅಳವಡಿಸಿಕೊಂಡಿದೆ.
First published: September 7, 2019, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading