news18-kannada Updated:October 7, 2020, 7:28 PM IST
ಮಾಸ್ಕ್ಫೋನ್
ಕೋವಿಡ್ ಕಾಲದಲ್ಲಿ ಮಾಸ್ಕ್ಗಳ ಬಳಕೆ ಹೆಚ್ಚಾಗಿದೆ. ವಿಧ ವಿಧವಾದ ಮಾಸ್ಕ್ಗಳು ಮಾರುಕಟ್ಟೆಗೆ ಬರುತ್ತಿದೆ. ಜನರನ್ನು ಆಕರ್ಷಿಸುತ್ತಿದೆ. ಆದರೀಗ ಮಾಸ್ಕ್ ಜೊತೆಗೆ ವಯರ್ಲೆಸ್ ಇಯರ್ಫೋನ್ ಕೂಡ ಬರುತ್ತಿದೆ ಎಂದರೆ ನಂಬುತ್ತೀರಾ?. ಅಂತಹದೊಂದು ಎನ್95 ಮಾಸ್ಕ್ ಮಾರುಕಟ್ಟೆಗೆ ಬಂದಿದೆ.
ಕೋವಿಡ್ ಸಂದರ್ಭದಲ್ಲಿ ಚಿನ್ನದ ಮಾಸ್ಕ್ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಕೆಲವು ಸಂಶೋಧಕರು ಟೆಕ್ನಾಲಜಿ ಬಳಸಿಕೊಂಡು ಮಾಸ್ಕ್ ತಯಾರಿಸಿದ್ದು ಆಗಿದೆ. ಇದೀಗ ಮಾಸ್ಕ್ ಜೊತೆಗೆ ವಯರ್ಲೆಸ್ ಇಯರ್ ಫೋನ್ ಅಳವಡಿಸಿಕೊಂಡು ಆಳಿಸುವಂತೆ ಎನ್95 ಮಾಸ್ಕ್ ಅನ್ನು ಸಿದ್ಧಪಡಿಸಿದ್ದಾರೆ. ಇದರ ಹೆಸರು ಮಾಸ್ಕ್ಫೋನ್ ಎಂದಾಗಿದೆ.
ಬಹಳ ವಿಚಿತ್ರವಾಗಿರುವ ಈ ಮಾಸ್ಕ್ಫೋನ್ನಲ್ಲಿ ಪಿಎಮ್ 2.5 ಮತ್ತು ಎನ್95/ಎಫ್ಎಫ್ಪಿ2 ಫಿಲ್ಟರ್ ಅಳವಡಿಸಲಾಗಿದೆ. ಜೊತೆಗೆ ಐಪಿಎಕ್ಸ್ 5 ಫ್ಯಾಬ್ರಿಕ್ ಬಳಸಲಾಗಿದೆ. ಅಷ್ಟು ಮಾತ್ರವಲ್ಲ ನೀರಿನಿಂದ ತೊಳೆಯಬಹುದಾಗಿದೆ.
ಮಾಸ್ಕ್ಫೋನನ್ನು ಒಂದು ಬಾರಿ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಬಳಸಬಹುದಾಗಿದೆ. ಸಂಗೀತ, ಕರೆಗಳನ್ನು ಅನುಮತಿಸುವ ಆಯ್ಕೆ ಇದರಲ್ಲಿದೆ. ಮಾಸ್ಕಿನ ಮೇಲೆ ಬಲಭಾಗದಲ್ಲಿ ಮೂರು ಬಟನ್ಗಳನ್ನು ನೀಡಲಾಗಿದೆ. ಇದರ ಮೂಲಕ ಪಾಸ್/ಪ್ಲೇ ಮಾಡಬಹುದಾಗಿದೆ.
ಅಷ್ಟು ಮಾತ್ರವಲ್ಲದೆ, ಮಾಸ್ಕ್ಫೋನ್ ಮೂಲಕ ಅಲೆಕ್ಸಾವನ್ನು ಬಳಸಬಹುದಾಗಿದೆ. ಅಂತೆಯೇ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಬಳಸಬಹುದಾಗಿದೆ. ಇನ್ನು ಮಾಸ್ಕ್ ಬೆಲೆ 49 ಡಾಲರ್ ಆಗಿದೆ. ಅಂದರೆ ಭಾರತದ 3,600 ರೂ.ಗೆ ಆಗಿದೆ.
Published by:
Harshith AS
First published:
October 7, 2020, 7:27 PM IST