ಮೊಬೈಲ್​ ಡಿಸ್​ಪ್ಲೇ ಒಡೆಯದಿರಲು ಹೊಸ ಮೊಬೈಲ್​ ಕೇಸ್​


Updated:July 2, 2018, 5:54 PM IST
ಮೊಬೈಲ್​ ಡಿಸ್​ಪ್ಲೇ ಒಡೆಯದಿರಲು ಹೊಸ ಮೊಬೈಲ್​ ಕೇಸ್​

Updated: July 2, 2018, 5:54 PM IST
ಮೊಬೈಲ್​ನ ಮೇಲ್ಮೈ  ಪದರ ಒಡೆದು ಹೋಗುವುದರಿಂದ ಬೇಸತ್ತಿರುವವರಿಗೆಲ್ಲಾ ಸಂತಸದ ಸುದ್ದಿ, ಜರ್ಮೆನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಹೊಸ ಪ್ಯಾನೆಲ್​ ಕಂಡು ಹಿಡಿದಿದ್ದು, ಇದನ್ನು ಅಳವಡಿಸಿದ ಮೊಬೈಲ್​ ಕೆಳಕ್ಕೆ ಬಿದ್ದರೂ ನಾಲ್ಕು ಬದಿಯಿಂದಲೂ ಸಣ್ಣ ಕಾಲಿನಂತಿರುವ ಸ್ಪ್ರಿಂಗ್​ಗಳನ್ನು ಒಳಗೊಂಡ ಕ್ಲಿಪ್​ಗಳು ಮೊಬೈಲ್​ನ್ನು ರಕ್ಷಿಸುತ್ತದೆ.

ಫಿಲಿಪ್​ ಫ್ರೆಂಜೆಲ್​ ಎಂಬ ವಿದ್ಯಾರ್ಥಿ ಈ ನೂತನ ಆವಿಷ್ಕಾರ ಮಾಡಿದ್ದು ಈ ಮೊಬೈಲ್​ ಕೇಸ್​ನಲ್ಲಿ ಸೆನ್ಸಾರ್​ ಅಳವಡಿಕೆ ಮಾಡಲಾಗಿದೆ. ಇದು ನಿಮ್ಮ ಮೊಬೈಲ್​ ಕೆಳಕ್ಕೆ ಬೀಳುತ್ತಿದ್ದಂತೆಯೇ ಸ್ಪ್ರಿಂಗ್​ವೊಂದು ಹೊರಕ್ಕೆ ಬರುತ್ತದೆ. ಬೀಳುತ್ತಿರುವ ಮೊಬೈಲ್​ ನೆಲಕ್ಕೆ ತಾಗದಂತೆ ರಕ್ಷಿಸುತ್ತದೆ. ಇದರಿಂದ ಮೊಬೈಲ್​ ಡಿಸ್​ಪ್ಲೇಯನ್ನು ನಾವು ರಕ್ಷಿಸಬಹುದು.

ಅಲ್ಲದೇ ಈ ಸ್ಪ್ರಿಂಗ್​ಗಳನ್ನು ಮರುಬಳಕೆ ಮಾಡುವ ಅವಕಾಶ ಕೂಡಾ ನೀಡಲಾಗಿದೆ. ಈ ಕೇಸ್​ಗೆ "AD Case" ಎಂದು ಕರೆಯಲಾಗಿದೆ. ಕೇಸ್​ನ ನಿರ್ಮಾತೃ ಫ್ರೆಂಜಲ್​ಗೆ ಜರ್ಮನ್ ಮೆಕಾಟ್ರಾನಿಕ್ಸ್ ಸೊಸೈಟಿಯಲ್ಲಿ ಪ್ರಶಸ್ತಿ ಕೂಡಾ ಲಭಿಸಿದೆ.

ಇದರೊಂದಿಗೆ ಫ್ರೆಂಜಲ್​ ತನ್ನದೇ ಹೊಸ ಸಂಸ್ಥೆಯನ್ನು ತನ್ನ ಸ್ನೇಹಿತನೊಂದಿಗೆ ಹುಟ್ಟುಹಾಕಿದ್ದು, ಶೀಘ್ರದಲ್ಲೇ ತಮ್ಮ ಕಂಪನಿಯ ಹೆಸರಿನಲ್ಲೇ ಈ ಮೊಬೈಲ್​ ಕೇಸ್​ನ್ನು ಮಾರುಕಟ್ಟೆಗೆ ತರಲು ತೀರ್ಮಾನಿಸಿರುವುದಾಗಿ ದಿ ಟೆಲಿಗ್ರಾಫ್​ ವರದಿ ಮಾಡಿದೆ.
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...