Dating Appನಲ್ಲಿ 300 ಬಾರಿ ಪ್ರಯತ್ನಿಸಿದರೂ ಸಂಗಾತಿ ಸಿಕ್ಕಿಲ್ಲ.. ಅದಕ್ಕಾಗಿ ಈತ ಏನು ಮಾಡಿದ ಗೊತ್ತಾ?

Dating App: ಡೇಟಿಂಗ್ ಆ್ಯಪ್ ಅನ್ನು ಹಲವು ವರ್ಷಗಳಿಂದ ಬಳಸಿದರೂ ಕೂಡ ಸಂಗಾತಿ ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತದನಂತರ ಇಲ್ಲೊಬ್ಬ ವ್ಯಕ್ತಿ ಒಂದು ಹೊಸ ಡೇಟಿಂಗ್ ಅಪ್ಲಿಕೇಶನ್ ಅನ್ನು ರಚಿಸಿರುವ ಇಂಟರೆಸ್ಟಿಂಗ್ ಕಥೆ ಇದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಈಗೆಲ್ಲಾ ಪರಸ್ಪರ ನೇರ ಸಂವಹನ,(Communication) ಭೇಟಿ, ನೋಟಕ್ಕಿಂತ ಆನ್‌ಲೈನ್‌ ಮೂಲಕವೇ ಎಲ್ಲಾ ನಡೆದುಹೋಗಿ ಬಿಡುತ್ತದೆ. ಪ್ರೀತಿ, ಪ್ರೇಮ,(Love Dating) ಪರಿಚಯ, ಗೆಳೆತನ ಇಷ್ಟೇ ಯಾಕೆ ಎಂಗೇಜ್‌ಮೆಂಟ್, ಮದುವೆ, ವಿಚ್ಛೇದನ ಕೂಡ ಈಗ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಡೇಟಿಂಗ್, ಚಾಟಿಂಗ್‌ಗೆ ಅಂತಾನೇ ಅದೆಷ್ಟೋ ಆ್ಯಪ್‌ಗಳು ಬಂದು ಬಿಟ್ಟಿವೆ. ಡೇಟಿಂಗ್ ಅಪ್ಲಿಕೇಶನ್‌ಗಳು, ಸಾಮಾಜಿಕ ಜಾಲತಾಣಗಳ ಮೂಲಕ ಡೇಟಿಂಗ್, ಪ್ರೀತಿ ಮಾಡುವ ಮೋಹಕ (Romantic) ಚಟುವಟಿಕೆಗಳು ನಡೆಯುತ್ತಿವೆ. ಮದುವೆಗೆ ವಧು-ವರಗಳನ್ನು ಹುಡುಕುವ ಆ್ಯಪ್‌ಗಳು ಪ್ರಸ್ತುತ ಇವೆ. ಇವುಗಳ ಮೂಲಕ ನಮ್ಮ ಆಯ್ಕೆಯ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಇನ್ನೂ ಡೇಟಿಂಗ್ ಆ್ಯಪ್‌ಗಳು (Dating Apps) ಪ್ರೀತಿ, ಪ್ರಣಯ, ಸಮಯ ಕಳೆಯಲು ಸಹಕಾರಿಯಾಗಿದೆ.

ಸಂಗಾತಿ ಆಯ್ಕೆ ವಿಫಲ

ಡೇಟಿಂಗ್ ಆ್ಯಪ್‌ಗಳಲ್ಲಿ ನಮ್ಮ ಆಯ್ಕೆಯ ಸಂಗಾಂತಿ ಸಿಕ್ಕೇ ಬಿಡುತ್ತಾರಂತಲ್ಲ, ಅಲ್ಲೂ ಕೂಡ ಎಷ್ಟೋ ಭಾರಿ ವಿಫಲರಾಗುತ್ತೇವೆ. ಇಲ್ಲೊಬ್ಬರ ಕಥೆಯೂ ಇದೇ ನೋಡಿ. ಡೇಟಿಂಗ್ ಆ್ಯಪ್ ಅನ್ನು ಹಲವು ವರ್ಷಗಳಿಂದ ಬಳಸಿದರೂ ಕೂಡ ಸಂಗಾತಿ ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತದನಂತರ ಇಲ್ಲೊಬ್ಬ ವ್ಯಕ್ತಿ ಒಂದು ಹೊಸ ಡೇಟಿಂಗ್ ಅಪ್ಲಿಕೇಶನ್ ಅನ್ನು ರಚಿಸಿರುವ ಇಂಟರೆಸ್ಟಿಂಗ್ ಕಥೆ ಇದು.

ಡೇಟಿಂಗ್ ಆ್ಯಪ್ ನಮಗೆ ಹೊಂದುವ ಸ್ನೇಹಿತರನ್ನು ಒಂದು ನಿರ್ದಿಷ್ಟ ಸಮಯದಲ್ಲಿ ಭೇಟಿ ಮಾಡಿಸುವುದಾಗಿದೆ. ಆದರೆ ಜೋಶ್ ಎಂಬ ವ್ಯಕ್ತಿ 300 ಬಾರಿ ಪ್ರಯತ್ನಿಸಿದರೂ ಕೂಡ ಕಾರಣಾಂತರಗಳಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲವಂತೆ. ಅವಶ್ಯಕತೆಯೇ ಆವಿಷ್ಕಾರದ ತಾಯಿ ಎಂಬ ಮಾತಿನಂತೆ ಅವರು ನನ್ನಂತೆ ಬೇರೆಯವರಿಗೆ ತೊಂದರೆ ಆಗಬಾರದು ಎಂದು ವಿಭಿನ್ನ ಡೇಟಿಂಗ್ ಆ್ಯಪ್ ಅನ್ನು ಕಂಡುಹಿಡಿದಿದ್ದಾರೆ.

ಡೇಟಿಂಗ್‌ಗೆ ಪ್ರಯತ್ನಿಸಿ ಕೈ ಬಿಟ್ಟಿದ್ದಾರೆ

ಟಿಂಡರ್‌ ಒಂದು ಡೇಟಿಂಗ್ ಆ್ಯಪ್. ದಿ ಮಿರರ್ ವರದಿ ಪ್ರಕಾರ, ಜೋಶ್ (ಈಗ 31) ಅವರು ಟಿಂಡರ್ ಅನ್ನು ಇಪ್ಪತ್ತರ ವಯಸ್ಸಿನಲ್ಲಿಯೇ ಡೌನ್ಲೋಡ್‌ ಮಾಡಿ ಈ ಅಪ್ಲಿಕೇಷನ್ ಅನ್ನು ಬಳಸುತ್ತಿದ್ದರು. ಹಾಗೂ, ಈ ಆ್ಯಪ್‌ನ ಆರಂಭಿಕ ಬಳಕೆದಾರರಲ್ಲಿ ಜೋಶ್ ಒಬ್ಬರು.

ಇದನ್ನೂ ಓದಿ: Apps: ನಿಮ್ಮ ಸ್ಮಾರ್ಟ್​ಫೋನಿನಲ್ಲಿ ನಿದ್ದೆ ಕದಿಯೋ ಈ ಆ್ಯಪ್​ಗಳಿದೆಯಾ ಚೆಕ್ ಮಾಡಿ

ಟಿಂಡರ್ ಆ್ಯಪ್ ಮೂಲಕ ಜೋಶ್ ಹಲವು ಭಾರಿ ಡೇಟಿಂಗ್‌ಗೆ ಸಜ್ಜಾಗಿದ್ದರಂತೆ, ಆದರೆ ಎಲ್ಲಾ ಬಾರಿಯೂ ಇವರು ಡೇಟಿಂಗ್ ಮಾಡಲು ವಿಫಲರಾಗಿದ್ದಾರೆ. ಕೇವಲ ಟಿಂಡರ್ ಆ್ಯಪ್ ಅಲ್ಲದೇ ಹಿಂಜ್, ಬಂಬಲ್ ಡೇಟಿಂಗ್ ಆ್ಯಪ್‌ಗಳನ್ನು ಬಳಸಿದರೂ ಕೂಡ ಪ್ರಯೋಜನವಾಗಿಲ್ಲವಂತೆ. ಸುಮಾರು 300 ಬಾರಿ ಇವರು ಡೇಟಿಂಗ್‌ಗೆ ಪ್ರಯತ್ನಿಸಿ ಕೈ ಬಿಟ್ಟಿದ್ದಾರೆ. ಹೀಗಾಗಿ ಇದರಿಂದ ಬೇಸತ್ತು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡುವ ಕಲ್ಪನೆಯನ್ನು ಬಿಟ್ಟರಂತೆ.

ಈ ಆ್ಯಪ್ ಸಹಾಯಕಾರಿ

ಬಳಿಕ ಜೋಶ್ ಚೆಲ್ಸಿಯಾದ ಬಾರ್‌ನಲ್ಲಿ ಚಾಂಪಿಯನ್ಸ್ ಲೀಗ್ ಫೈನಲ್ ಅನ್ನು ವೀಕ್ಷಿಸುತ್ತಿರುವಾಗ ಗೆಳೆಯರೊಬ್ಬರು ಲಿಸಾ ಎಂಬ ಮಹಿಳೆಯನ್ನು ಪರಿಚಯಿಸಿದರಂತೆ. ಅಲ್ಲಿಂದ ಲಿಸಾ ಮತ್ತು ಜೋಶ್ ನಡುವೆ ಪ್ರೀತಿಯಾಗಿ ಮದುವೆಯಾಗಿ ಖುಷಿಯಾಗಿದ್ದಾರಂತೆ. ಮದುವೆ ನಂತರ ಅವರು ಆ್ಯಪ್ ಒಂದನ್ನು ಕಂಡುಹಿಡಿಯಲು ಆರಂಭಿಸಿದರು.

ಸುಮಾರು ತಿಂಗಳ ಬಳಿಕ ಬ್ಲಾಕ್ ಎಂಬ ಅಪ್ಲಿಕೇಶನ್ ಕಂಡುಹಿಡಿದರು. ಇದು ಡೇಟಿಂಗ್ ಮಾಡಲು ನಾವು ಇರುವ ಸಮಾರಂಭ ಅಥವಾ ಬೇರೆ ಯಾವುದಾದರು ಜಾಗದಲ್ಲಿದ್ದರೆ ಅಲ್ಲಿಂದನೇ ಸಂಗಾತಿಯನ್ನು ಹುಡುಕಿಕೊಡುತ್ತದೆ. ಹೋಟೆಲ್, ರೆಸ್ಟೋರೆಂಟ್, ಸ್ಟೇಡಿಯಂನಲ್ಲಿಯೇ ಹುಡುಕಿಕೊಡುತ್ತದೆ. ಈ ಆ್ಯಪ್ ಜನರಿಗೆ ಉತ್ತಮ ಸಹಾಯವಾಗುತ್ತದೆ ಎಂದು ಜೋಶ್ ಹೇಳಿದ್ದಾರೆ.

ಇದನ್ನೂ ಓದಿ: Online Education: ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಸಹಕಾರಿಯಾಗಿವೆ 5 ಆ್ಯಪ್‌ಗಳು; ಇಲ್ಲಿದೆ ನೋಡಿ ಫುಲ್‌ ಡೀಟೈಲ್ಸ್

ನಿರ್ದಿಷ್ಟ ಸ್ಥಳಗಳಿಗೆ ಬರಲು ಮತ್ತು ಹಾಜರಾಗಲು ಜನರಿಗೆ ಬಹುಮಾನ ನೀಡಲಾಗುತ್ತದೆ ಎಂದು ಜೋಶ್ ವಿವರಿಸಿದ್ದಾರೆ. ಈ ಆ್ಯಪ್‌ನಲ್ಲಿ ಹಲವು ಸುರಕ್ಷ ಕ್ರಮಗಳನ್ನು ಅನುಸರಿಸಿದ್ದಾರೆ. ಮಹಿಳೆಯರಿಗೆ ಇದು ಸುರಕ್ಷಿತ ಡೇಟಿಂಗ್ ಆ್ಯಪ್ ಆಗಿದೆಯಂತೆ. ಆ್ಯಪ್ ಡೌನ್‌ಲೋಡ್ ಮಾಡುವಾಗ ಎಲ್ಲಾ ರೀತಿಯ ವೆರಿಫಿಕೇಷನ್ ಮಾಡಿದ ನಂತರ ಪ್ರೊಫೈಲ್ ಸೃಷ್ಠಿಮಾಡಿಕೊಳ್ಳಬಹುದು ಎಂದು ಜೋಶ್ ವಿವರಿಸಿದ್ದಾರೆ.
Published by:vanithasanjevani vanithasanjevani
First published: