Redmi: ಭಾರತದಲ್ಲಿ ಲಭ್ಯವಾಗಲಿರುವ Redmi Note 11 Proನ ವೈಶಿಷ್ಟ್ಯಗಳು ಇವೇ ನೋಡಿ..!

Redmi Note 11 Pro: ಸೋರಿಕೆಯಾಗಿರುವ ಮಾಡೆಲ್‌ಗಳು ರೆಡ್ ಮಿ ನೋಟ್ 11 ಪ್ರೋ ಹಾಗೂ ರೆಡ್ ಮಿ 11 ಪ್ರೋ 5ಜಿ ಮಾದರಿಗಳ ಅಧಿಕೃತ ವಿನ್ಯಾಸವನ್ನು ಬಯಲು ಮಾಡಿವೆ.

Redmi Note

Redmi Note

  • Share this:
ಚೀನಾದ ರೆಡ್ ಮಿ ನೋಟ್ 11 ಪ್ರೋ ನ (Redmi Note 11 Pro) ಭಾರತೀಯ ಆವೃತ್ತಿಯಾದ ಶಿಯೋಮಿ 11ಐ ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವು ಚೀನಾ ಆವೃತ್ತಿಗಿಂತ(Chinese version) ಹೇಗೆ ಭಿನ್ನವಾಗಿರಬಹುದು ಎಂಬ ಭಾರತೀಯರ (Indian Version) ಕುತೂಹಲ ಕೊನೆಗೂ ತಣಿದಿದೆ. ಇನ್ನು ಯಾವುದೇ ಕಲ್ಪನೆ ಮಾಡಿಕೊಳ್ಳುವ ಅಗತ್ಯತೆ ಇಲ್ಲವಾಗಿದ್ದು, ಜಾಗತಿಕ ಪ್ರಕಟಣೆಗೂ (Global Release) ಮುನ್ನವೇ ರೆಡ್ ಮಿ ನೋಟ್ 11 ಪ್ರೋ ಮಾದರಿಗಳು ಸೋರಿಕೆಯಾಗಿವೆ. ಹಿಂದಿನ ವರ್ಷಗಳಂತೆಯೇ, ಪ್ರೋ ಸರಣಿಯಲ್ಲಿ ಈ ಬಾರಿಯೂ 2 ಮಾಡೆಲ್‌ಗಳಿರಲಿವೆ. ಒಂದು ರೆಡ್ ಮಿ ನೋಟ್ 11 ಪ್ರೋ, ಮತ್ತೊಂದು ರೆಡ್ ಮಿ ನೋಟ್ 11 ಪ್ರೋ 5ಜಿ. ಇತ್ತೀಚೆಗೆ ಸೋರಿಕೆಯಾಗಿರುವ(Leaked) ಮಾಹಿತಿಗಳ ಪೈಕಿ ಈ ಮಾಡೆಲ್‌ಗಳ ಬಹುತೇಕ ವಿಶೇಷತೆ ಹಾಗೂ ವೈಶಿಷ್ಟ್ಯಗಳೂ ಬಯಲುಗೊಂಡಿವೆ.

ಸ್ನ್ಯಾಪ್‍ಡ್ರಾಗನ್
ಶಿಯೋಮಿಯು ರೆಡ್ ಮಿ ನೋಟ್ ಸರಣಿಯಲ್ಲಿ ಕೊನೆಗೂ 5ಜಿ ತಂತ್ರಜ್ಞಾನ ಅಳವಡಿಸಿದ್ದರೂ, ಈ ಅವಕಾಶವನ್ನು ಕೇವಲ ಉತ್ಕೃಷ್ಟ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತಗೊಳಿಸುವಂತೆ ಕಾಣಿಸುತ್ತಿದೆ. ರೆಡ್ ಮಿ ನೋಟ್ 11 ಪ್ರೋ 5ಜಿ ಮಾದರಿಯು ಕ್ವಾಲ್‍ಕಾಂ ಸ್ನ್ಯಾಪ್‍ಡ್ರ್ಯಾಗನ್‌ ಚಿಪ್ ಅನ್ನು ಅವಲಂಬಿಸಿದ್ದು, ಮೋಟೋ ಜಿ71ಗೆ ಬಲ ನೀಡಿರುವ ಸ್ನ್ಯಾಪ್‍ಡ್ರಾಗನ್ 695ನಂತೆಯೇ ಇದೆ. ವದಂತಿಗಳ ಪ್ರಕಾರ ಈ ಫೋನ್‍ಗಳಿಗೆ 5ಜಿ ಸಾಮರ್ಥ್ಯದ ಸ್ನ್ಯಾಪ್‍ಡ್ರಾಗನ್ 700 ಚಿಪ್ ಅನ್ನು ಅಳವಡಿಸುವ ಸಾಧ್ಯತೆಯೂ ಇದೆ.

67 ವ್ಯಾಟ್ ಚಾರ್ಜರ್
ಮತ್ತೊಂದೆಡೆ, ರೆಡ್ ಮಿ ನೋಟ್ 11 ಪ್ರೋ 4ಜಿ ಆವೃತ್ತಿಯಲ್ಲಿ ಮೀಡಿಯಾಟೆಕ್ ಹೆಲಿಯೊ ಜಿ96 ಚಿಪ್ ಅಳವಡಿಕೆಯಾಗುವ ಸಾಧ್ಯತೆ ಇದೆ. ಎರಡೂ ಪ್ರೋ ಮಾದರಿಗಳು ತಮ್ಮ ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಹೊಂದಿರಲಿವೆ. ಇದರೊಂದಿಗೆ 180ಎಂಪಿ ಸಂವೇದಿಯನ್ನು ಹೊಂದಿರುವ ಮುಖ್ಯ ಕ್ಯಾಮೆರಾವೂ ಇರಲಿದೆ. (ಮಧ್ಯಮ ದರ್ಜೆಯ ಶಿಯೋಮಿ ಫೋನ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿರುವ ಕೊಡುಗೆ) ಎರಡೂ ಫೋನ್ ಗಳು 5000ಎಂಎಎಚ್ ಬ್ಯಾಟರಿ ನೆರವಿನೊಂದಿಗೆ ಕಾರ್ಯಾಚರಿಸಲಿದ್ದು, ಅವುಗಳಿಗೆ 67 ವ್ಯಾಟ್ ಚಾರ್ಜರ್ ಒದಗಿಸಲಾಗಿದೆ.

ಇದನ್ನೂ ಓದಿ: Redmi Note 10 Pro+ Redmi Note 11i ಎರಡರ ಹೈಬ್ರಿಡ್ ಫೋನ್ ಬರ್ತಿದೆ !

ಹೀಗಿದ್ದೂ 120 ವ್ಯಾಟ್ ತೀವ್ರತೆ ಹೊಂದಿರುವ ಚಾರ್ಜರ್‌ಗಳ ನೆರವಿನೊಂದಿಗೂ ಇವನ್ನು ಚಾರ್ಜ್ ಮಾಡಬಹುದಾಗಿದೆ. ರೆಡ್ ಮಿ ನೋಟ್ 11 ಪ್ರೋ ಹಾಗೂ ರೆಡ್ ಮಿ ನೋಟ್ 11 ಪ್ರೋ 5ಜಿ ಸ್ಮಾರ್ಟ್ ಫೋನ್ ಗಳು 6.67 ಅಗಲದ ಡಿಸ್ಪ್ಲೇ ಹೊಂದಿದ್ದು, 120 ಹರ್ಟ್ಜ್ ವೇಗದಲ್ಲಿ ಪುನಶ್ಚೇತನಗೊಳಿಸಬಹುದಾಗಬಹುದಾಗಿದೆ. ನಿರೀಕ್ಷಿಸಲಾಗಿರುವ ದರಗಳೊಂದಿಗೆ ಮತ್ಯಾವುದೇ ವಿವರಗಳು ಇದುವರೆಗೂ ಲಭ್ಯವಾಗಿಲ್ಲ.

ಶಿಯೋಮಿ 11ಐ ಮಾದರಿ
ಸೋರಿಕೆಯಾಗಿರುವ ಮಾಡೆಲ್‌ಗಳು ರೆಡ್ ಮಿ ನೋಟ್ 11 ಪ್ರೋ ಹಾಗೂ ರೆಡ್ ಮಿ 11 ಪ್ರೋ 5ಜಿ ಮಾದರಿಗಳ ಅಧಿಕೃತ ವಿನ್ಯಾಸವನ್ನು ಬಯಲು ಮಾಡಿವೆ. ರೆಡ್ ಮಿ ಇಂಡಿಯಾ ಬಿಡುಗಡೆ ಮಾಡಿರುವ ಫಸ್ಟ್‌ ಲುಕ್‌ ಜಾಹೀರಾತು, ಈ ಫೋನ್‍ಗಳು ಶಿಯೋಮಿ 11ಐ ಮಾದರಿಗಳನ್ನು ಹೋಲುತ್ತಿರುವುದನ್ನು ಎತ್ತಿ ತೋರಿಸಿದೆ. ಆದರೂ, ಈ ಫೋನ್‍ಗಳು ತೆಳುವಾಗಿದ್ದು, ಮೊನಚಾದ ಅಂಚು, ಲೋಹದಂಥ ಪ್ರತಿಫಲನಾ ಬದಿಗಳನ್ನು ಹೊಂದಿವೆ. ಚಿರಪರಿಚಿತ ಕ್ಯಾಮೆರಾ ಉಬ್ಬಿದ್ದು, ಅದು 4 ಕ್ಯಾಮೆರಾಗಳನ್ನು ಹಿಡಿದಿಟ್ಟುಕೊಂಡಿದೆ. ಈ ಫೋನ್‍ಗಳು 3 ಬಣ್ಣದಲ್ಲಿ ದೊರೆಯಲಿವೆ. ಕಪ್ಪು, ಬಿಳುಪು ಮತ್ತು ನೀಲಿ ಹಾಗೂ ನೇರಳೆ ಸಂಯೋಜನೆಯ ಬಣ್ಣಗಳನ್ನು ಹೊಂದಿವೆ. ಫೋನ್‍ನ ಮುಂಬದಿಯಲ್ಲಿ ಅಂಚಿಲ್ಲದ ಅದೇ ವಿನ್ಯಾಸ ರೂಪವನ್ನು ಮುಂದುವರಿಸಲಾಗಿದೆ.

ಇದನ್ನೂ ಓದಿ: 5G ಪ್ರಯೋಗಕ್ಕಾಗಿ Reliance Jio ಜೊತೆ ಕೈಜೋಡಿಸಿದ Redmi India

ಆದರೆ, ಕುತೂಹಲಕ್ಕೆ ಕಾರಣವಾಗಿರುವುದು ಇವುಗಳ ದರ ನಿಗದಿ. ರೆಡ್ ಮಿ ನೋಟ್ 10 ಪ್ರೋನ 4ಜಿ ಆವೃತ್ತಿಗಳ ದರವು 20,000 ರೂ. ಆಸುಪಾಸಿನಲ್ಲಿದ್ದರೆ, ನವೀಕರಿಸಲಾಗಿರುವ ವೈಶಿಷ್ಟ್ಯಗಳೊಂದಿರುವ ನೂತನ ಫೋನ್‍ಗಳ ದರ ಪಟ್ಟಿಯೂ ಇದೇ ರೀತಿಯಲ್ಲಿ ಇರುವ ಸಾಧ್ಯತೆ ಇದೆ. ಶಿಯೋಮಿ ಎಂಐ 10ಐ ಜಾಗಕ್ಕೆ ರೆಡ್ ಮಿ ನೋಟ್ 11 ಪ್ರೋ ಬರಲಿವೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಶಿಯೋಮಿ 11ಐ ಸರಣಿಯು 24,999/- ರೂ. ನಿಂದ ಶುರುವಾಗುವ ಸಾಧ್ಯತೆ ಇದೆ.
Published by:vanithasanjevani vanithasanjevani
First published: