ಸಿಸಿ ಕ್ಯಾಮೆರಾದಿಂದ (CC Camera) ಅನೇಕ ಪ್ರಯೋಜನವಿದೆ. ಅದರಲ್ಲೂ ನಗರ ವಾಸಿಗಳಿಗೆ ಕಳ್ಳರಿಂದ ರಕ್ಷಿಸಿಕೊಳ್ಳಲು, ಮನೆಯ ವಾಹನ ಕಳ್ಳತನ (Thievery) ವಾಗದಂತೆ ನೋಡಲು ಹೀಗೆ ನಾನಾ ಕಾರಣಗಳಿಗಾಗಿ ಸಿಸಿ ಕ್ಯಾಮೆರಾ ಅಳವಡಿಸುವುದು ಅವಶ್ಯಕ ಮತ್ತು ರಕ್ಷಣೆ (Protection) ಒದಗಿಸಲು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿನಂತೆ ಕೆಲಸ ಮಾಡುತ್ತದೆ.
ಈಗಂತೂ ಕಳ್ಳರ ಕಾಟ ಹೆಚ್ಚಾಗಿ ಕಂಡುಬರುತ್ತಿವೆ. ಕಣ್ಣೆದುರೆ ಕೈಚಳಕ ತೋರಿಸಿ ಕದ್ದು ಪರಾರಿಯಾಗುವ ಅನೇಕ ಘಟನೆಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಅದರೆ ಮನೆಯಲ್ಲೊಂದು ಸಿಸಿ ಕ್ಯಾಮೆರಾ ಅಳವಡಿಸಿದರೆ ಇಂತಹ ಸಮಸ್ಯೆಗೆ ಮುಕ್ತಿ ನೀಡಬಹುದು. ಸಿಸಿ ಕ್ಯಾಮೆರಾ ಅಳವಡಿಸಿರುವುದು ಕಂಡು ಬಂದರೆ ಯಾವ ಕಳ್ಳನು ಮನೆಯತ್ತ ತಲೆ ಹಾಕಲಾರ.
ಪೇಟೆ-ಪಟ್ಟಣಗಳಲ್ಲಿ ಸಿಸಿ ಕ್ಯಾಮೆರಾದ ಬಳಕೆ ಅವಶ್ಯಕ ಅದರಲ್ಲೂ. ಸಿಟಿಗಳಲ್ಲೂ ಟ್ರಾಫಿಕ್ ಪೊಲೀಸರು ಇದರ ಸಹಾಯದ ಪಡೆಯುವ ಮೂಲಕ ರಸ್ತೆ ಅಪಘಾತ ಮತ್ತು ನಿಯಮ ಉಲ್ಲಂಘನೆಯಂತಹ ಕೇಸ್ಗಳನ್ನು ಹಿಡಿಯಲು ಸಿಸಿ ಕ್ಯಾಮೆರಾ ನೆರವಾಗುತ್ತದೆ. ಹೀಗೆ ಹೇಳುತ್ತಾ ಹೋದರೆ ಸಿಸಿ ಕ್ಯಾಮೆರಾದಿಂದ ಬಹು ಪ್ರಯೋಜನವಿದೆ. ನೀವು ವಾಸಿಸುವ ಸ್ಥಳ ಅಷ್ಟೊಂದು ಸುರಕ್ಷಿತವಾಗಿಲ್ಲದಿದ್ದರೆ ಸಿಸಿ ಕ್ಯಾಮೆರಾ ಅಳವಡಿಸುವುದು ಸೂಕ್ತ. ಅದರಂತೆ ಗೋದ್ರೆಜ್ ಕಂಪನಿ ಕೂಡ ಹೊಸತಾದ ವೈಫೈ ಕ್ಯಾಮೆರಾವೊಂದನ್ನು ಪರಿಚಯಿಸಿದೆ. ನೂತನ ಕ್ಯಾಮೆರಾ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ..
ಗೋದ್ರೆಜ್ (Godrej) ಕಂಪನಿ ಪರಿಚಯಿಸಿರುವ ಸ್ಪಾಟ್ಲೈಟ್ ಪಿಟಿ ಕ್ಯಾಮೆರಾ (Spotlight PT Camera) ಹೆಸರಿನ ವೈಫ್ ಕ್ಯಾಮೆರಾ ಅಳವಡಿಸಿದರೆ ಸಾಕಷ್ಟು ಪ್ರಯೋಜನವಿದೆ. ಇದಕ್ಕಾಗಿ ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿದ್ದರಾಯಿತು. ಮನೆಯ ಒಳಗಡೆ, ಮನೆಯ ಹೊರಗಡೆ, ಕಚೇರಿಯಲ್ಲಿ ಅಳವಡಿಸಬಹುದಾಗಿದೆ. ಸ್ಮಾರ್ಟ್ಫೋನ್ (Smart phone) ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ಧ್ವನಿಯನ್ನು ಕೂಡ ರವಾನಿಸುವ ತಂತ್ರಜ್ನಾನ ಇದರಲ್ಲಿದೆ.
ನಗರ ಪ್ರದೇಶದಲ್ಲಿ ವಾಸಿಸುವ ಜನರು ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಮನೆಗೆ ಬರುವವರಿಗೆ ಈ ಸಿಸಿ ಕ್ಯಾಮೆರಾ ಬಹಳ ಉಪಯುಕ್ತವಾಗಿದೆ. ಎಲ್ಲಾವನ್ನು ಕುಳಿತಲ್ಲಿಂದಲೇ ನೋಡಬಹುದಾಗಿದೆ.
ಅಂದಹಾಗೆಯೇ ಗೋದ್ರೆಜ್ ಸ್ಪಾಟ್ಲೈಟ್ ಪಿಟಿ ಮತ್ತು ಸ್ಪಾಟ್ಲೈಟ್ ಫಿಕ್ಸ್ಡ್ ಎಂಬ ಎರಡು ನಮೂನೆಯಲ್ಲಿ ವೈಫೈ ಕ್ಯಾಮೆರಾ ಲಭ್ಯವಿದೆ. ನೂತನ ಕ್ಯಾಮೆರಾಗಳ ವಿಶೇಷವೆಂದರೆ ಬೇಕಾದ ಕಡೆಗೆ ತಿರುಗಿಸಬಹುದಾಗಿದೆ.
ಅಳವಡಿಸುವುದು ಹೇಗೆ?
ಸ್ಪಾಟ್ಲೈಟ್ ಪಿಟಿ ಕ್ಯಾಮೆರಾವನ್ನು ಅಳವಡಿಸಲು ಹೆಚ್ಚೇನು ಚಿಂತಿಸಬೇಕಾಗಿಲ್ಲ. ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿದ್ದರೆ ಮೊಬೈಲ್ ಮೂಲಕ ಎಲ್ಲವನ್ನೂ ನಿಯಂತ್ರಿಸಬಹುದು. ಇನ್ನು ಸ್ಟಾಟ್ಲೈಟ್ ಪಿಟಿ ಕ್ಯಾಮೆರಾವನ್ನು ಗೋಡೆಯ ಮೇಲೆ ಮೊಳೆ ಹೊಡೆದು ಅಳವಡಿಸಬಹುದಾಗಿದೆ. ಪ್ಲಗ್ ಪಾಯಿಂಟ್ ಬಳಿ ಅಥವಾ ಬಲ್ಪ್ ಹೋಲ್ಡರ್ ಪಾಯಿಂಟ್ ಬಳಿ ಕೂರಿಸಬಹುದು.
ಇದನ್ನು ಓದಿ: WhatsApp ಪರಿಚಯಿಸಲಿದೆ ಹೊಸ ವೈಶಿಷ್ಟ್ಯ.. ಬಳಕೆದಾರಿಗಾಗಿ ಏನೆಲ್ಲಾ ಮಾಡ್ತಿದೆ ನೋಡಿ
ಸ್ಮಾರ್ಟ್ಫೋನಿನಲ್ಲಿ ಗೋದ್ರೆಜ್ ಸ್ಟಾಟ್ಲೈಟ್ ಆ್ಯಪ್ ಅಳವಡಿಸಿಕೊಳ್ಳುವ ಮೂಲಕ ವೈಫೈ ಸಂಪರ್ಕಿಸಿ ಬಳಸಬಹುದಾಗಿದೆ. ಅದರಲ್ಲಿರುವ ಪ್ಲಸ್ ಗುರುತನ್ನು ಒತ್ತುವ ಮೂಲಕ ಕ್ಯಾಮೆರಾ ಹಿಂಭಾಗದಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಯಾಮೆರಾ ಬಳಸಬಹುದಾಗಿದೆ.
ಹೇಗೆ ಕೆಲಸ ಮಾಡುತ್ತದೆ?
ವೈಫೈ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುವುದಿಲ್ಲ. ಸ್ಮಾರ್ಟ್ಫೋನ್ ಮಾತ್ರವಲ್ಲದೆ ಕಂಪ್ಯೂಟರ್ ಮೂಲಕವೂ ದೃಶ್ಯವನ್ನು ವೀಕ್ಷಿಸಬಹುದಾಗಿದೆ. 110 ಡಿಗ್ರಿಯಲ್ಲಿ ಎಲ್ಲವನ್ನು ವೀಕ್ಷಿಸಬಹುದಾಗಿದೆ.
ಇದರಲ್ಲಿ ಮೋಷನ್ ಸೆನ್ಸರ್ ಎಂಬ ವೈಶಿಷ್ಟ್ಯತೆ ಅಳವಡಿಸಲಾಗಿದೆ. ಅಂದರೆ ವ್ಯಕ್ತಿಗಳು ಚಲಿಸಿದರೆ ಅಥವಾ ಅಸಹಜ ಚಲನೆ ಕಂಡುಬಂದರೆ ಮೊಬೈಲ್ ಆ್ಯಪ್ಗೆ ನೋಟಿಫಿಕಕೇಶನ್ ಹೋಗುತ್ತದೆ. ಆಂತರಿಕವಾಗಿ 128ಜಿಬಿ ಸಾಮರ್ಥ್ಯದ ಮೆಮೊರಿ ಕಾರ್ಡ್ ಅಳವಡಿಸಬಹುದಾ ಆಯ್ಕೆ ಇದರಲ್ಲಿದೆ. ಕ್ಲೌಡ್ನಲ್ಲೂ ಕೂ ವಿಡಿಯೋ ದೃಶ್ಯವನ್ನು ಇರಿಸಿಕೊಳ್ಳಬಹುದಾಗಿದೆ, ಆದರೆ ಇದಕ್ಕೆ ಹಣ ಪಾವತಿಸಬೇಕು.
ಇದನ್ನು ಓದಿ: Instagram: ಬಳಕೆದಾರರ ಗಮನಕ್ಕೆ ತಾರದೆ ಮುಖ್ಯವಾದ ವೈಶಿಷ್ಟ್ಯವೊಂದನ್ನು ತೆಗೆದು ಹಾಕಿದ ಇನ್ಸ್ಟಾಗ್ರಾಮ್!
ಇನ್ನು ರಾತ್ರಿ ದೃಶ್ಯವೂ ಚೆನ್ನಾಗಿ ಕಾಣಿಸುತ್ತೆ. ಸುಮಾರು 30 ಅಡಿ ಊರದಿಂದಲೂ ಸ್ಪಷ್ಟಚಿತ್ರ ಗೋಚರಿಸುತ್ತದೆ. ಮೈಕ್ ಮತ್ತು ಸ್ಪೀಕರ್ ಇರುವುದರಿಂದ ಬಹಳ ಪ್ರಯೋಜಕಾರಿಯಾಗಲಿದೆ. ಅಂದಹಾಗೆಯೇ ಇದರ ಬೆಲೆ 5999 ರೂ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ