ಆ್ಯಪಲ್ (Apple) ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಉಳಿದಿದೆ ಮತ್ತು ಅದರ ಯಶಸ್ಸು ಮುಖ್ಯವಾಗಿ ಐಫೋನ್ (Iphone), ಮ್ಯಾಕ್ (Macbook) ಮತ್ತು ಹೆಚ್ಚಿನವುಗಳಂತಹ ಅದರ ಫ್ಲ್ಯಾಗ್ಶಿಪ್ಗಳನ್ನು ವಿನ್ಯಾಸಗೊಳಿಸುವ ಮತ್ತು ಎಂಜಿನಿಯರ್ ಮಾಡುವ ಪ್ರತಿಭೆಗಳ ಸಮೂಹಕ್ಕೆ ಸಲ್ಲುತ್ತದೆ.ಆ್ಯಪಲ್ನ ಉತ್ಪನ್ನಗಳು ಮತ್ತು ಸೇವೆಗಳು ತಾವು ನೀಡುವ ಬೆಲೆಗೆ ಉತ್ತಮ ಮೌಲ್ಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಇಲಾಖೆಗೆ ಕಂಪನಿ ಹೆಚ್ಚು ಹೂಡಿಕೆ ಮಾಡಲು ಹೆಸರುವಾಸಿಯಾಗಿದೆ.
ಸ್ವಾಭಾವಿಕವಾಗಿ, ಕಂಪನಿಯು ತನ್ನ ಉದ್ಯೋಗಿಗಳಿಗೆ, ನಿರ್ದಿಷ್ಟವಾಗಿ ಎಂಜಿನಿಯರ್ಗಳಿಗೆ ನೀಡುವ ಸಂಬಳ ಮತ್ತು ಪ್ರಯೋಜನಗಳ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಾರೆ. ಅಥವಾ ಆ ಬಗ್ಗೆ ಆಲೋಚನೆ ಮಾಡುತ್ತಿರುತ್ತಾರೆ. ಈ ಹಿನ್ನೆಲೆ, ಬ್ಯುಸಿನೆಸ್ ಇನ್ಸೈಡರ್ನ ಹೊಸ ವರದಿಯು ನಿಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತದೆ.
ಆದರೆ, ಪ್ರಕಟಣೆಯ ಸಂಶೋಧನೆಯು ಕೆಲವು ಮಿತಿಗಳನ್ನು ಹೊಂದಿದೆ. ಏಕೆಂದರೆ ಅದು ಸ್ಟಾಕ್ ಅನುದಾನದ ಮೌಲ್ಯವನ್ನು ಒಳಗೊಂಡಿಲ್ಲ. ಆದರೂ ನಾವು ಈ ಬಗ್ಗೆ ಸ್ಥೂಲ ಕಲ್ಪನೆ ಪಡೆಯುತ್ತೇವೆ.
ಆ್ಯಪಲ್ ಸೇರಿದಂತೆ ಅಮೆರಿಕದ ಕಂಪನಿಗಳು ಪಾರದರ್ಶಕತೆಗಾಗಿ ವೀಸಾಗಳಿಗೆ ಅರ್ಜಿ ಸಲ್ಲಿಸಿದಾಗ ವಿದೇಶದಿಂದ ಕಾರ್ಮಿಕರಿಗೆ ಪಾವತಿಸುವ ಮೊತ್ತ ಬಹಿರಂಗಪಡಿಸಬೇಕು ಎಂದು ವರದಿಯು ಗಮನಿಸುತ್ತದೆ. ಆದ್ದರಿಂದ, ಈ ಪ್ರಕಟಣೆಯು US ಆಫೀಸ್ ಆಫ್ ಫಾರಿನ್ ಲೇಬರ್ ಸರ್ಟಿಫಿಕೇಶನ್ (US Office of Foreign Labour Certification)ಗೆ 2021ರ 3ನೇ ತ್ರೈಮಾಸಿಕಕ್ಕೆ ಸಲ್ಲಿಸಿದ ಮಾಹಿತಿ ಸಂಗ್ರಹಿಸಿದೆ. ಆದರೆ, ಇದು ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಮತ್ತು ವಾಷಿಂಗ್ಟನ್ ಮೂಲದ ಸುಮಾರು ಸಾವಿರ ಉದ್ಯೋಗಿಗಳ ಸಂಬಳವನ್ನು ಮಾತ್ರ ಒಳಗೊಂಡಿದೆ ಮತ್ತು ಇತರ ದೇಶಗಳದ್ದಲ್ಲ.
ಸಿಸ್ಟಮ್ಗಳಿಗಾಗಿ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್ಗಳು 128,200 ಡಾಲರ್ (ಸುಮಾರು 95 ಲಕ್ಷ ರೂ.) ನಿಂದ 220,000 ಡಾಲರ್ (ಸುಮಾರು 1.63 ಕೋಟಿ ರೂ.) ನಡುವೆ ವೇತನ ಪಡೆಯುತ್ತಾರೆ ಎಂದು ವರದಿಯು ಹೈಲೈಟ್ ಮಾಡುತ್ತದೆ.
ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್ಗಳು 239,871 ಡಾಲರ್ (ಸುಮಾರು ರೂ 1.78 ಕೋಟಿ) ವರೆಗೆ ವೇತನ ಪಡೆಯುತ್ತಾರೆ, ಆದರೆ ಮೆಷಿನ್ ಲರ್ನಿಂಗ್ ಎಂಜಿನಿಯರ್ಗಳು 250,000 ಡಾಲರ್ (ಸುಮಾರು 1.86 ಕೋಟಿ ರೂ.) ವರೆಗೆ ಗಳಿಸುತ್ತಾರೆ.
ಇದನ್ನು ಓದಿ: 5G ಪ್ರಯೋಗಕ್ಕಾಗಿ Reliance Jio ಜೊತೆ ಕೈಜೋಡಿಸಿದ Redmi India
ಇದಲ್ಲದೆ, ಟೆಸ್ಟ್ಗಳಿಗೆ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್, ಪ್ರೊಡಕ್ಷನ್ ಸರ್ವೀಸ್ ಎಂಜಿನಿಯರ್, ಅಪ್ಲಿಕೇಶನ್ಗಳಿಗಾಗಿ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಕ್ರಮವಾಗಿ ಕನಿಷ್ಠ 137,275 ಡಾಲರ್ (ಸುಮಾರು 1.02 ಕೋಟಿ ರೂ.), 150,000 ಡಾಲರ್ (ಸುಮಾರು 1.11 ಕೋಟಿ ರೂ.), ಮತ್ತು 125,000 (ಸುಮಾರು 93 ಲಕ್ಷ ರೂ.) ಗಳಿಸುತ್ತಾರೆ.
ಅಲ್ಲದೆ, AR/VR ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಜಿನಿಯರ್ $120,000 (ಸುಮಾರು ರೂ. 89 ಲಕ್ಷ) ನಿಂದ 246,000 ಡಾಲರ್ (ಸುಮಾರು 1.83 ಕೋಟಿ ರೂ.) ವರೆಗೆ ಗಳಿಸುತ್ತಾರೆ ಮತ್ತು ಮೆಷಿನ್ ಲರ್ನಿಂಗ್ ರಿಸರ್ಚ್ ಎಂಜಿನಿಯರ್ 211,300 ಡಾಲರ್ (ಸುಮಾರು 1.57 ಕೋಟಿ ರೂ.) ವರೆಗೆ ಪಡೆಯುತ್ತಾರೆ ಎಂದೂ ವರದಿ ಹೇಳುತ್ತದೆ.
ಇದನ್ನು ಓದಿ: Alto Car: ಹೊಚ್ಚ ಹೊಸ ಅವತಾರದಲ್ಲಿ ಬರಲಿದೆ ಆಲ್ವೋ ಕಾರು! ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಯ್ತು ನೂತನ ಕಾರಿನ ವಿಡಿಯೋ!
ಸಂಸ್ಥೆಯ ಕಾರ್ಮಿಕರು ವೇತನ, ಕೆಲಸದ ಸಮಯ ಮತ್ತು ಕೆಲಸದ ಪರಿಸ್ಥಿತಿಗಳನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಬಹಿರಂಗವಾಗಿ ಚರ್ಚಿಸಬಹುದು ಎಂದು ಆ್ಯಪಲ್ ಇತ್ತೀಚೆಗೆ ತನ್ನ ಉದ್ಯೋಗಿಗಳಿಗೆ ತಿಳಿಸಿದೆ.
ಆ್ಯಪಲ್ ಈ ಹಿಂದೆ ಉದ್ಯೋಗಿಗಳ ನಡುವೆ ವೇತನದ ಚರ್ಚೆಯನ್ನು ನಿಲ್ಲಿಸಿದೆ ಎಂದು ಆರೋಪಿಸಿ ಸಾಫ್ಟ್ವೇರ್ ಎಂಜಿನಿಯರ್ ಚೆರ್ ಸ್ಕಾರ್ಲೆಟ್ ರಾಜೀನಾಮೆ ನೀಡಿದ ನಂತರ ಆಂತರಿಕ ಸೈಟ್ನಲ್ಲಿ ಉದ್ಯೋಗಿಗಳಿಗೆ ಈ ನೋಟ್ ಅನ್ನು ಕಳಿಸಲಾಗಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ