iPhone: ಯಾರಿಗೂ ಗೊತ್ತಾಗದಂತೆ ಐಫೋನ್ ನಲ್ಲಿ ಚಾಟ್ ಮಾಡಬಹುದು! ಹೇಗೆ ಅಂತ ಇಲ್ಲಿದೆ ನೋಡಿ

ನೀವು ಇಂತಹ ವ್ಯಕ್ತಿಯೊಂದಿಗೆ ಇಂತಹ ದಿನ ಇಂತಹ ವಿಷಯವನ್ನು ಹಂಚಿಕೊಂಡಿದ್ದೀರಿ ಮತ್ತು ನಿಮ್ಮಿಬ್ಬರ ನಡುವೆ ಇಂತಹ ಒಂದು ಸಂಭಾಷಣೆ ನಡೆದಿದೆ ಎನ್ನುವ ಯಾವುದೇ ರೀತಿಯ ಕುರುಹು ಸಹ ಅಲ್ಲಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಬನ್ನಿ ನೀವು ನಿಮ್ಮ ಐಫೋನ್ ನಲ್ಲಿ ತೀರಾ ಖಾಸಗಿ ಸಂಭಾಷಣೆ ಹೇಗೆ ಮಾಡಬಹುದು ಅಂತ ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಈ ಮೊಬೈಲ್ ಫೋನ್ ಗಳಲ್ಲಿರುವ (Mobile Phone) ಮೆಸೇಜ್ (Message) ಮಾಡುವ ಅಪ್ಲಿಕೇಶನ್ ಗಳು (Application) ಹೇಗೆ? ಯಾವಾಗ? ಎಲ್ಲಿ ನಮ್ಮ ಎಲ್ಲಾ ಸಂಭಾಷಣೆಗಳನ್ನು ದಾಖಲಿಸಿಡುತ್ತದೆಯೋ, ಇಲ್ಲವೋ ಯಾರಿಗೆ ಗೊತ್ತು. ನಾವು ಯಾರೊಂದಿಗಾದರೂ ತುಂಬಾನೇ ಗೌಪ್ಯವಾಗಿರುವ ವಿಷಯವನ್ನು ಚಾಟ್ (Chat) ಮೂಲಕ ಹಂಚಿಕೊಂಡರೆ ನಮಗೆ ಬೇರೆ ಯಾರಾದರೂ ಇದನ್ನು ನೋಡಿ ಬಿಡುತ್ತಾರೆಯೇ ಅಂತ ಅನೇಕ ರೀತಿಯ ಸಂದೇಹ ಕಾಡಲು ಶುರುವಾಗುತ್ತದೆ. ಹಾಗಾದರೆ ಹೇಗೆ ಚಾಟ್ ಮಾಡುವುದು ಅಂತ ನೀವು ತಲೆ ಕೆಡೆಸಿಕೊಂಡಿರುತ್ತೀರಿ ಅಲ್ಲವೇ? ಸಾದಾ ಮೊಬೈಲ್ ಫೋನ್ ಗಳನ್ನು ನೀವು ಬಳಸುತ್ತಿದ್ದರೆ ಈ ವಿಷಯದ ಬಗ್ಗೆ ತುಂಬಾನೇ ಜಾಗೂರಕರಾಗಿರುವುದು ತುಂಬಾನೇ ಅವಶ್ಯಕತೆ ಇದೆ.

ಐಫೋನ್ ನಲ್ಲಿಯೂ ಖಾಸಗಿ ಮೆಸೇಜ್ ಮಾಡಬಹುದು
ಆದರೆ ನಿಮ್ಮ ಬಳಿ ಐಫೋನ್ ಇದ್ದರೆ, ನೀವು ಯಾರೊಂದಿಗಾದರೂ ತುಂಬಾನೇ ಖಾಸಗಿಯವಾಗಿ ಚಾಟ್ ಮಾಡಬಹುದು. ಇದು ಹೇಗೆ ಸಾಧ್ಯ ಅಂತೀರಾ? ಹೌದು.. ನೀವು ಐಫೋನ್ ನಲ್ಲಿ ಯಾರೊಂದಿಗಾದರೂ ತುಂಬಾನೇ ಖಾಸಗಿಯಾಗಿ ಸಂಭಾಷಣೆ ನಡೆಸಲು ಬಯಸಿದರೆ, ನೀವು ಮಾಡಬೇಕಾಗಿರುವುದು ಮೊದಲು ನೋಟ್ಸ್ ಅಪ್ಲಿಕೇಶನ್ ಅನ್ನು ತೆರೆಯುವುದು. ನೀವು ಇದುವರೆಗೂ ಈ ನೋಟ್ಸ್ ಅಪ್ಲಿಕೇಶನ್ ಅನ್ನು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮತ್ತು ಮನೆಗೆ ತರುವಂತಹ ವಸ್ತುಗಳ ಪಟ್ಟಿಯನ್ನು ಮತ್ತು ಯಾವುದಾದರೂ ನೆನಪಿನಲ್ಲಿರಿಸಿಕೊಳ್ಳಬೇಕಾಗಿರುವ ವಿಷಯವನ್ನು ಅದರಲ್ಲಿ ಬರೆದುಕೊಳ್ಳುವುದಕ್ಕೆ ಮಾತ್ರ ಬಳಸಿರಬಹುದು.

ನೋಟ್ಸ್ ಅಪ್ಲಿಕೇಶನ್ ನಿಂದ ಖಾಸಗಿ ಚಾಟ್ ಮಾಡುವುದು ಹೇಗೆ
ಆದರೆ ಈಗ ಈ ನೋಟ್ಸ್ ಅಪ್ಲಿಕೇಶನ್ ನಿಂದ ಖಾಸಗಿಯಾಗಿ ಚಾಟ್ ಸಹ ಮಾಡಬಹುದು ನೋಡಿ. ನಿಮ್ಮ ಐಫೋನ್ ನ ಆಪರೇಟಿಂಗ್ ಸಿಸ್ಟಂ ನಲ್ಲಿ ಈ ನೋಟ್ ಅನ್ನು ಹಿಡನ್ ಎಂದರೆ ಮುಚ್ಚಿಡುವ ಸಂಭಾಷಣೆ ಎಂಬ ಆಯ್ಕೆಗೆ ಹಾಕಿಕೊಳ್ಳಿರಿ. ಇದು ಒಂದು ರೀತಿಯಲ್ಲಿ ಗೂಗಲ್ ಡಾಕ್ ತರಹ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Cloudflare ಸ್ಥಗಿತ: '500 ಆಂತರಿಕ ಸರ್ವರ್ ಎರರ್' ಎದುರಿಸಿದ ವೆಬ್‌ಸೈಟ್‌ಗಳು! ಇದಕ್ಕೆ ಕಾರಣವೇನು ಗೊತ್ತಾ?

ಈ ಸಂಭಾಷಣೆ ಮಾಡಿದ ನಂತರ ಅದನ್ನು ಡಿಲಿಟ್ ಸಹ ಮಾಡಬಹುದು. ಎಂದರೆ ನೀವು ಇಂತಹ ವ್ಯಕ್ತಿಯೊಂದಿಗೆ ಇಂತಹ ದಿನ ಇಂತಹ ವಿಷಯವನ್ನು ಹಂಚಿಕೊಂಡಿದ್ದೀರಿ ಮತ್ತು ನಿಮ್ಮಿಬ್ಬರ ನಡುವೆ ಇಂತಹ ಒಂದು ಸಂಭಾಷಣೆ ನಡೆದಿದೆ ಎನ್ನುವ ಯಾವುದೇ ರೀತಿಯ ಕುರುಹು ಸಹ ಅಲ್ಲಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಬನ್ನಿ ನೀವು ನಿಮ್ಮ ಐಫೋನ್ ನಲ್ಲಿ ತೀರಾ ಖಾಸಗಿ ಸಂಭಾಷಣೆ ಹೇಗೆ ಮಾಡಬಹುದು ಅಂತ ತಿಳಿದುಕೊಳ್ಳೋಣ.

ಹಂತ 1
ಮೊದಲನೆಯದಾಗಿ ಐಫೋನ್ ನಲ್ಲಿರುವ ನೋಟ್ಸ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ಹೊಸ ನೋಟ್ ಅನ್ನು ತೆರೆಯಲು ಅಲ್ಲೇ ಕೆಳಗಿರುವಂತಹ ‘ಕಂಪೋಸ್’ ಬಟನ್ ಅನ್ನು ಒತ್ತಿರಿ. ನೀವು ಅದರಲ್ಲಿ ಏನನ್ನಾದರು ಟೈಪ್ ಮಾಡಿ, ಇಲ್ಲದೆ ಹೋದರೆ ಆ ಹೊಸ ನೋಟ್ ಡಿಲಿಟ್ ಆಗುತ್ತದೆ.

ಹಂತ 2
ಎರಡನೆಯ ಹಂತದಲ್ಲಿ ನೀವು ಯಾರೊಂದಿಗೆ ಖಾಸಗಿಯಾಗಿ ಚಾಟ್ ಮಾಡಲು ಇಷ್ಟಪಡುವಿರಿ ಅವರನ್ನು ಇದರಲ್ಲಿ ಸೇರಿಸಿಕೊಳ್ಳಿರಿ. ಇದರಿಂದ ಅವರು ನೀವು ಅಲ್ಲಿ ಟೈಪ್ ಮಾಡುವಂತಹ ಚಾಟ್ ಅನ್ನು ನೋಡಬಹುದು ಮತ್ತು ಅದನ್ನು ಅಲ್ಲಿಯೇ ಎಡಿಟ್ ಸಹ ಮಾಡಬಹುದು. ಮೇಲೆ ಇರುವ ‘ಮೋರ್’ ಬಟನ್ ಅನ್ನು ಒತ್ತಿ ನಂತರ ಆ ನೋಟ್ ಅನ್ನು ಶೇರ್ ಮಾಡಿಕೊಳ್ಳಿರಿ. ಈ ಸಂಭಾಷಣೆಯಲ್ಲಿ ನೀವು ಯಾರನ್ನು ಬೇಕೋ ಅವರನ್ನು ಮಾತ್ರ ಸೇರಿಸಿಕೊಳ್ಳಬಹುದು.

ಹಂತ 3
ಇಷ್ಟಾದ ನಂತರ ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿ ಪಾತ್ರರಾದವರ ಜೊತೆಯಲ್ಲಿ ಖಾಸಗಿಯಾಗಿ ಚಾಟ್ ಮಾಡಲು ಶುರು ಮಾಡಬಹುದು. ನೀವು ಈ ನೋಟ್ ಅನ್ನು ಲಾಕ್ ಸಹ ಮಾಡಬಹುದು.

ಇದನ್ನೂ ಓದಿ: Mobile Tips: ಸ್ಮಾರ್ಟ್​ಫೋನ್​ ಮಳೆಗೆ ಒದ್ದೆಯಾದರೆ ಚಿಂತಿಸಬೇಡಿ! ಹೀಗೆ ಮಾಡಿದ್ರೆ ಸರಿ ಆಗುತ್ತೆ

ಹಂತ 4
ಈ ನೋಟ್ ನಲ್ಲಿ ಬೇರೆ ಯಾರು ಬರದಂತೆ ಮತ್ತು ಬೇರೆಯವರು ಇಲ್ಲಿ ನಡೆಸಲಾಗುವ ಚಾಟ್ ಅನ್ನು ಎಡಿಟ್ ಮಾಡದ ರೀತಿಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು. ಇದಕ್ಕೆ ನೀವು ‘ವಿವ್ ಪಾರ್ಟಿಸಪೆಂಟ್ಸ್’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅದರಲ್ಲಿರುವ ‘ಮ್ಯಾನೇಜ್ ಶೇರ್ಡ್ ನೋಟ್’ ಅನ್ನು ಒತ್ತೀರಿ. ಅದರಲ್ಲಿ ನೀವು ಬೇರೆಯವರಿಗೆ ಎಡಿಟ್ ಮಾಡುವ ಅವಕಾಶವನ್ನು ತೆಗೆದುಹಾಕಬಹುದು.

ಹಂತ 5
ಕೊನೆಯದಾಗಿ ನೀವು ಆ ಚಾಟ್ ಅನ್ನು ಮುಕ್ತಾಯಗೊಳಿಸಲು ಇಚ್ಛಿಸಿದರೆ, ಅಲ್ಲೇ ಇರುವಂತಹ ‘ಸ್ಟಾಪ್ ಶೇರಿಂಗ್’ ಆಯ್ಕೆಯನ್ನು ಒತ್ತೀರಿ. ಹೀಗೆ ಮಾಡುವುದರಿಂದ ಆ ನೋಟ್ ನಲ್ಲಿರುವ ಇಡೀ ಚಾಟ್ ಸಹ ಡಿಲಿಟ್ ಆಗುತ್ತದೆ ಮತ್ತು ಇದು ನಿಮ್ಮ ಐಫೋನ್ ನಲ್ಲಿ ಅಲ್ಲದೇ ನೀವು ಚಾಟ್ ಮಾಡಿದವರ ಐಫೋನ್ ನಲ್ಲಿಯೂ ಇದು ಉಳಿಯುವುದಿಲ್ಲ.
Published by:Ashwini Prabhu
First published: