Google Maps Speedometer ಬಳಸಿ...ಅತಿಯಾದ ವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯಿಂದ ತಪ್ಪಿಸಿ!

Google Map: ವಿಶೇಷವಾಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಸಂದೇಶವೊಂದು ಸ್ಮಾರ್ಟ್​ಫೋನ್​ಗೆ ಬರುವುದು ಪಕ್ಕಾ. ಅದರಲ್ಲೂ ಮೆಟ್ರೋಪಾಲಿಟನ್ ನಗರಗಳಲ್ಲಿ ನಿಮ್ಮ ವಾಹನದ ಮಿತಿ, ದಾಟಿದರೆ ಇಂತಹ ತಪ್ಪುಗಳು ಬೇಗನೆ ಗೊತ್ತಾಗುತ್ತದೆ.

ಗೂಗಲ್​ ಮ್ಯಾಪ್

ಗೂಗಲ್​ ಮ್ಯಾಪ್

  • Share this:
    Google Maps Speedometer: ನೀವು ಡ್ರೈವಿಂಗ್‌ನಲ್ಲಿ (Driving) ಎಷ್ಟೇ ಪರಿಣತರಾಗಿದ್ದರೂ, ಎಷ್ಟೇ ಜಾಗರೂಕತೆಯಿಂದ ಚಾಲನೆ ಮಾಡಿದರೂ, ವಾಹನ ಚಾಲನೆ ಮತ್ತು ನಿಯಮವನ್ನು (Rules) ಉಲ್ಲಂಘನೆ ಮಾಡಿದರೆ ಸ್ಮಾರ್ಟ್​ಫೋನ್​ಗೆ (Smartphone) ಆ ಕುರಿತಾದ ಸಂದೇಶವೊಂದು ಬರುತ್ತದೆ. ಅಷ್ಟರ ಮಟ್ಟಿಗೆ ತಂತ್ರಜ್ನಾನ ಮುಂದುವರಿದಿದೆ. ಯಾರೇ ಆಗಲಿ ಯಾವುದೇ ಸ್ಥಳಗಳಿಗೆ ಹೋದಾಗ ಮೂರನೇ ಕಣ್ಣು ನಿಮ್ಮನ್ನು ಹಿಂಬಾಲಿಸುತ್ತದೆ. ಯಾವುದಾದರು ಸಣ್ಣ ತಪ್ಪು ಮಾಡಿದರು ಸಹ ನೀವು ಮೂರನೇ ಕಣ್ಣಿನಲ್ಲಿ ಬಂಧಿಸಲ್ಪಡುತ್ತೀರಿ. ವಿಶೇಷವಾಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಸಂದೇಶವೊಂದು ಸ್ಮಾರ್ಟ್​ಫೋನ್​ಗೆ ಬರುವುದು ಪಕ್ಕಾ. ಅದರಲ್ಲೂ ಮೆಟ್ರೋಪಾಲಿಟನ್ ನಗರಗಳಲ್ಲಿ ನಿಮ್ಮ ವಾಹನದ ಮಿತಿ, ದಾಟಿದರೆ ಇಂತಹ ತಪ್ಪುಗಳು ಬೇಗನೆ ಗೊತ್ತಾಗುತ್ತದೆ.

    ಸ್ಮಾರ್ಟ್‌ಫೋನ್ ಎಚ್ಚರಿಸುತ್ತದೆ

    ವಾಹನ ಚಲಾಯಿಸುವಾಗ ಸದಾ ಜಾಗೃತರಾಗಿರಬೇಕು. ಸ್ಮಾರ್ಟ್ ವಾಹನ ಬಂದ ಮೇಲಂತೂ ವಾಹನ ಚಲಾವಣೆಯ ವೇಳೆ ಏನೇ ತಪ್ಪು ಮಾಡಿದರು ಗೊತ್ತಾಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗಳು ಅಂತಹ ತಪ್ಪು ನಡೆದಾಗ ಎಚ್ಚರಿಸುತ್ತದೆ. ಹಾಗಾಗಿ ಓವರ್ ಸ್ಪೀಡ್ ತಪ್ಪಿಸಲು ಗೂಗಲ್ ಮ್ಯಾಪ್ ನ ಸಹಾಯದಿಂದ ಹೈಟೆಕ್ ವಿಧಾನವನ್ನೂ ಅಳವಡಿಸಿಕೊಂಡರೆ ಇಂತಹ ಸಮಸ್ಯೆಯಿಂದ ಪಾರಾಗುವುದಲ್ಲದೆ ಅಪಘಾತದ ಸುದ್ದಿಯೂ ಕಡಿಮೆಯಾಗುತ್ತದೆ.

    Google Map ನ ವಿಶೇಷ ವೈಶಿಷ್ಟ್ಯ

    Google Map ಸ್ಪೀಡೋಮೀಟರ್‌ನ ವೈಶಿಷ್ಟ್ಯವು ವಾಹನದ ವೇಗ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಸ್ಪೀಡೋಮೀಟರ್ ವೈಶಿಷ್ಟ್ಯವು ವಾಹನದ ವೇಗ ಮುಗಿದ ತಕ್ಷಣ ಎಚ್ಚರಿಸುತ್ತದೆ. ಅಂದರೆ ನಿಮ್ಮ ಕಾರು ನಿರ್ದಿಷ್ಟ ವೇಗದ ಮಿತಿಯನ್ನು ಮೀರಿದ ತಕ್ಷಣ ಈ ವೈಶಿಷ್ಟ್ಯವು ನಿಮ್ಮನ್ನು ಎಚ್ಚರಿಸುತ್ತದೆ.

    ಇದನ್ನು ಓದಿ: Redmi Note 11T 5G ಇಂದು ಮಾರುಕಟ್ಟೆಗೆ…ಖರೀದಿಸಲು ಕಾದು ಕುಳಿತ ಸ್ಮಾರ್ಟ್​ಫೋನ್ ಪ್ರಿಯರು!

    ಸ್ಪೀಡೋಮೀಟರ್ ಅನ್ನು ಸಕ್ರಿಯಗೊಳಿಸಿ

    ಮೊದಲು Google ನಕ್ಷೆಗಳನ್ನು ಸಕ್ರಿಯಗೊಳಿಸಿ. ಈಗ Google Map ನ ಪ್ರೊಫೈಲ್ ಅನ್ನು ಕ್ಲಿಕ್ ಮಾಡುವ ಮೂಲಕ, ಸೆಟ್ಟಿಂಗ್‌ಗಳು ಮತ್ತು ನಂತರ ನ್ಯಾವಿಗೇಷನ್ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಡ್ರೈವಿಂಗ್ ಆಯ್ಕೆಯಲ್ಲಿ ಸ್ಪೀಡೋಮೀಟರ್ ಅನ್ನು ನೋಡುತ್ತೀರಿ. ಈ ಸ್ಪೀಡೋಮೀಟರ್ ಅನ್ನು ಆನ್ ಮಾಡಬೇಕು.

    ಸ್ಪೀಡೋಮೀಟರ್ ಹೇಗೆ ಕೆಲಸ ಮಾಡುತ್ತದೆ?

    Google ನಕ್ಷೆಗಳ ಸ್ಪೀಡೋಮೀಟರ್ ಮೂಲಕ ನಿಮ್ಮ ಕಾರಿನ ವೇಗವನ್ನು ಸಹ ನೀವು ಪರಿಶೀಲಿಸಬಹುದು. ನಿರ್ದಿಷ್ಟ ವೇಗದ ಮಿತಿಯನ್ನು ಮೀರಿದಾಗ ಸ್ಪೀಡೋಮೀಟರ್ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದರ ಸಹಾಯದಿಂದ ನೀವು ಚಾಲನೆ ಮಾಡುವಾಗ ಕಾರಿನ ವೇಗದ ಕಲ್ಪನೆಯನ್ನು ಪಡೆಯಬಹುದು. ನಿಮ್ಮ ಕಾರು ಯಾವ ವೇಗದಲ್ಲಿ ಹೋಗುತ್ತಿದೆ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.

    ಇದನ್ನು ಓದಿ: ಹೊಸ ವರ್ಷಕ್ಕೆ Maruti Suzuki ಕಡೆಯಿಂದ ಭರ್ಜರಿ ಉಡುಗೊರೆ!; ಹೊಸ ರೂಪಾ ತಾಳಿ ಬರಲಿದೆ ಈ 5 ಕಾರುಗಳು

    ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ

    ನೀವು ಕಾರಿನ ನಿಗದಿತ ಮಿತಿಯನ್ನು ದಾಟಿದ ತಕ್ಷಣ, ಗೂಗಲ್ ಮ್ಯಾಪ್‌ನ ಸ್ಪೀಡೋಮೀಟರ್‌ನ ಬಣ್ಣ ಬದಲಾಗುತ್ತದೆ. ಇದರೊಂದಿಗೆ ನೀವು ನಿಮ್ಮ ಕಾರಿನ ವೇಗವನ್ನು ಕಡಿಮೆ ಮಾಡಬಹುದು ಮತ್ತು ಚಲನ್ ಮತ್ತು ಅಪಘಾತದ ಅಪಾಯವನ್ನು ತಪ್ಪಿಸಬಹುದು.
    Published by:Harshith AS
    First published: