Dosa Printer: ಮಾರುಕಟ್ಟೆಗೆ ಬಂದಿದೆ ದೋಸೆ ಪ್ರಿಂಟ್​ ಮಾಡುವ ಯಂತ್ರ! ಖರೀದಿಸಲು ಕ್ಯೂ ನಿಂತ ಮಹಿಳೆಯರು

ಅಂದಹಾಗೆಯೇ, ಈ ಮಿಷನ್​ಗೆ ‘‘ದೋಸಾ ಪ್ರಿಂಟರ್’’​ ಎಂದು ಕರೆಯಲಾಗುತ್ತಿದೆ. ನೀವು ಅಂಗಡಿಗಳಲ್ಲಿ ಪುಸ್ತಕ ಅಥವಾ ಹಾಳೆಯನ್ನು ಪ್ರಿಂಟ್​ ಮಾಡುವಂತೆಯೇ ಇದು ದೋಸೆಯ್ನು ಚೌಕಾಕಾರದಲ್ಲಿ ಪ್ರಿಂಟ್​ ಮಾಡುತ್ತದೆ. ಬಿಸಿ ಬಿಸಿಯಾದ ರೆಡಿಯಾದ ದೋಸೆಯ ವಿಡಿಯೋ ಇದೀಗ ವೈರಲ್​ ಆಗುತ್ತಿದೆ.

ದೋಸಾ ಪ್ರಿಂಟರ್

ದೋಸಾ ಪ್ರಿಂಟರ್

 • Share this:
  ದೋಸೆ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರಿಗೆ ನೀರು ದೋಸೆ (Neer Dosa) ಇಷ್ಟವಾದ್ರೆ, ಇನ್ನು ಕೆಲವರಿಗೆ ರಾಗಿ ದೋಸೆ, ಮತ್ತೆ ಹಲವರಿಗೆ ಮಸಾಲೆ ದೋಸೆ (Masala Dosa) ಇಷ್ಟವಾಗುತ್ತೆ. ಹಾಗಾಗಿ ಜನಪ್ರಿಯ ಹೋಟೆಲ್​ಗೆ (Hotel) ತೆರಳಿ ಅಲ್ಲಿ ಸಿದ್ಧಪಡಿಸುವ ದೋಸೆಯನ್ನು ಸವಿಯುತ್ತಾರೆ. ಆದರೆ ಬಹುತೇಕ ಮಹಿಳೆಯರು ಇದನ್ನು ಮನೆಯಲ್ಲಿ ಸಿದ್ಧಪಡಿಸಲು ಹಿಂದೇಟು ಹಾಕುತ್ತಾರೆ. ಯಾಕಂದ್ರೆ, ದೋಸೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ದೋಸೆಯನ್ನು ಹೋಟೆಲ್​ಗಳಿಗೆ ಹೋಗಿ ಸವಿಯುವವರ ಸಂಖ್ಯೆ ಹೆಚ್ಚು. ಆದರೀಗ ದೋಸೆಯನ್ನು ಮನೆಯಲ್ಲಿಯೇ ಮಾಡಲೆಂದು ಹೊಸ ದೋಸೆ ಮಾಡುವ ಯಂತ್ರ​ವೊಂದು (mission) ಮಾರುಕಟ್ಟೆಗೆ ಬಂದಿದೆ. ಇದನ್ನು ಖರೀದಿಸಿ, ದೋಸೆ ಹಿಟ್ಟನ್ನು ಅದಕ್ಕೆ ಹಾಕಿದ್ರೆ ಸಾಕು. ಯಾವ ವಿಧದ ದೋಸೆ ಬೇಕು? ಅದನ್ನು ತಯಾರಿಸಿ ಕೊಡುತ್ತೆ. ತುಪ್ಪ ದೋಸೆ, ರಾಗಿ ದೋಸೆಯನ್ನು ನಿಮಿಷಾರ್ಧದಲ್ಲೆ ತಯಾರಿಸುತ್ತೆ ಈ ಯಂತ್ರ.

  ತಂತ್ರಜ್ಞಾನ ಬೆಳೆಯುತ್ತಿದೆ ಎಂಬುದಕ್ಕೆ ಇದನ್ನೇ ಉದಾಹರಣೆಯಾಗಿ ಕೊಡಬಹುದು. ಹಿಂದೆಲ್ಲಾ ದೋಸೆ ಹಿಟ್ಟು ಮಾಡಲು ಕಡಿಯುವ ಕಲ್ಲು ಬಳಸುತ್ತಿದ್ದರು. ಆ ಬಳಿಕ ಮಿಕ್ಸಿ, ಗ್ರೈಂಡರ್​ಗಳು ಮಾರುಕಟ್ಟೆಗೆ ಧಾವಿಸಿತು. ದೋಸೆಯ ರೆಡಿಮೆಡ್​ ಹಿಟ್ಟು ಕೂಡ ಮಾರುಕಟ್ಟೆಯಲ್ಲಿದೆ. ಆದರೀಗ ದೋಸೆ ಮಾಡಿಕೊಡುವ ಮಿಷನ್​ ಮಾರುಕಟ್ಟೆಗೆ ಬಂದಿದೆ. ಸದ್ಯ ಇದರ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್​ ಆಗುತ್ತಿದೆ. ಮಹಿಳೆಯರಂತೂ ಈ ವಿಡಿಯೋ ಕಂಡು ಖರೀದಿಸುವ ಪ್ಲಾನ್​ ಹಾಕಿಕೊಂಡಿದ್ದಾರೆ.

  ಅಂದಹಾಗೆಯೇ, ಈ ಮಿಷನ್​ಗೆ ‘‘ದೋಸಾ ಪ್ರಿಂಟರ್’’​ ಎಂದು ಕರೆಯಲಾಗುತ್ತಿದೆ. ನೀವು ಅಂಗಡಿಗಳಲ್ಲಿ ಪುಸ್ತಕ ಅಥವಾ ಹಾಳೆಯನ್ನು ಪ್ರಿಂಟ್​ ಮಾಡುವಂತೆಯೇ ಇದು ದೋಸೆಯನ್ನು ಚೌಕಾಕಾರದಲ್ಲಿ ಪ್ರಿಂಟ್​ ಮಾಡುತ್ತದೆ. ಬಿಸಿ ಬಿಸಿಯಾದ ರೆಡಿಯಾದ ದೋಸೆಯ ವಿಡಿಯೋ ಇದೀಗ ವೈರಲ್​ ಆಗುತ್ತಿದೆ.

  ಮೊದಲೇ ಹೇಳಿದಂತೆ ಟ್ವಿಟ್ಟರ್​ನಲ್ಲಿ ಈ ದೋಸಾ ಪ್ರಿಂಟರ್​ ವಿಡಿಯೋ ವೈರಲ್​ ಆಗುತ್ತಿದೆ. ಸಮಂತಾ ಎಂಬ ಬಳಕೆದಾರರು ಈ ಯಂತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ಜನರನ್ನು ಆಚ್ಚರಿಯತ್ತ ದೂಡಿದಂತಿದೆ. ಸದ್ಯದಲ್ಲೇ ಬಹುತೇಕರ ಮನೆಯಲ್ಲಿ ಈ ಯಂತ್ರ ಬರಲಿದೆ ಎಂಬುದು ವಿಡಿಯೋಗೆ ಬಂದ ಕಾಮೆಂಟ್​ ನೋಡಿದರೆ ಗೊತ್ತಾಗುತ್ತದೆ.

  ವೈರಲ್​ ಆಗುತ್ತಿರುವ ವಿಡಿಯೋದಲ್ಲಿ, ಮಹಿಳೆ ಯಂತ್ರದ ಒಂದು ಬದಿಯಲ್ಲಿ ದೋಸೆ ಹಿಟ್ಟನ್ನು ಇಡುತ್ತಾಳೆ. ಬಳಿಕ, ಆಕೆ ದೋಸೆ ಎಷ್ಟು ದಪ್ಪ ಬೇಕು ಎಂದು ಯಂತ್ರ ಹೊಂದಿಸಿಕೊಳ್ಳುತ್ತಾಳೆ ಮತ್ತು ತನಗೆ ಎಷ್ಟು ಅವಧಿಯೊಳಗೆ ದೋಸೆ ರೆಡಿಯಾಗಬೇಕು ಎಂದು ಟೈಂ ಸೆಟ್​​ ಮಾಡುತ್ತಾಳೆ. ಕೊಂಚ ಹೊತ್ತಿನ ಬಳಿಕ ದೋಸೆ ರೆಡಿಯಾಗಿ ಬರುತ್ತದೆ. ನಂತರ ಸವಿಯುತ್ತಾಳೆ. ಅಪ್‌ಲೋಡ್ ಮಾಡಿದ ನಂತರ ವಿಡಿಯೋ ವೈರಲ್ ಆಗಿದೆ ಮತ್ತು 58K ವೀಕ್ಷಣೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

  ಇದನ್ನೂ ಓದಿ: Moto G72: ತ್ರಿವಳಿ ಕ್ಯಾಮೆರಾ, 5000mAh ಬ್ಯಾಟರಿ! ಬಿಡುಗಡೆಗೂ ಮುನ್ನ ಸೋರಿಕೆಯಾಯ್ತು ಹೊಸ ಫೋನಿನ ವಿಶೇಷತೆ

  ಅನೇಕರು ಈ ಬಗ್ಗೆ ಕಾಮೆಂಟ್​ ಬರೆದಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ, ದೋಸೆ ಎಂಬುದು ಜನಪ್ರಿಯ ಬೀದಿ ಆಹಾರವಾಗಿದ್ದು, ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರವಲ್ಲ, ಆದರೆ ನೀವು ಯಾವುದೇ ನಗರದ ಮೂಲೆ ಮೂಲೆಯಲ್ಲಿ ಸ್ಟಾಲ್ ಅನ್ನು ಕಾಣಬಹುದು. ನೀವು ಮುಂಬೈನಲ್ಲಿದ್ದರೆ ಮತ್ತು ಉತ್ತಮ ಆಹಾರ ಮತ್ತು ಉತ್ತಮ ಅನುಭವದೊಂದಿಗೆ ದಕ್ಷಿಣ ಭಾರತದ ರೆಸ್ಟೋರೆಂಟ್‌ಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಕಲ್ಬಾದೇವಿಯಲ್ಲಿ ಈ ವಿಶಿಷ್ಟ ಸ್ಥಳವನ್ನು ಪ್ರಯತ್ನಿಸಿ ಎಂದು ಬರೆದಿದ್ದಾರೆ.  ಇದನ್ನೂ ಓದಿ: Electric Vehicles: ಎಲೆಕ್ಟ್ರಿಕ್​ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್​ ಅಪ್​ಡೇಟ್​! ಸೆಪ್ಟೆಂಬರ್​ 1 ರಿಂದ ಹೊಸ ನಿಯಮ ಜಾರಿ

  ದಕ್ಷಿಣ ಮುಂಬೈನ ಮಂಗಲ್‌ದಾಸ್ ಮಾರ್ಕೆಟ್‌ನಲ್ಲಿರುವ ಶ್ರೀ ಬಾಲಾಜಿ ದೋಸೆ ತಮ್ಮ ದಕ್ಷಿಣ ಭಾರತೀಯ ಭಕ್ಷ್ಯಗಳಗೆ ಹೆಸರುವಾಸಿಯಾಗಿದೆ. ಇದೀಗ ಫ್ಲೈಯಿಂಗ್ ದೋಸೆ ಕೂಡ ಅಲ್ಲಿ ಸಿಗುತ್ತದೆ. ವಿವಿಧ ರುಚಿಕರವಾದ ದೋಸೆಗಳೊಂದಿಗೆ ಆಹಾರ ಮಳಿಗೆಯು ಅತ್ಯಂತ ಜನಪ್ರಿಯವಾಗಿದೆ. ಈ ಸ್ಥಳದ ಬಗ್ಗೆ ಹೆಚ್ಚು ಆಸಕ್ತಿದಾಯಕ ವಿಚಾರವೆಂದರೆ ಆಹಾರವನ್ನು ಬಡಿಸುವ ಶೈಲಿ.
  Published by:Harshith AS
  First published: