ದೇಶದೆಲ್ಲೆಡೆ ಇದೀಗ ಮತ್ತೆ ಕೊರೊನಾ (Corona) ಕಂಟಕ ಎದುರಾಗಿದೆ. ಎರಡು ವರ್ಷದ ಹಿಂದೆ ಈ ಕೊರೊನಾ ಮಹಾಮಾರಿಯಿಂದ ಬಂದಂತಹ ಕಷ್ಟವನ್ನು ಎದುರಿಸಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಬೇಕಾದರೆ ಮತ್ತೆ ಸಂಕಷ್ಟ ಬಂದಿದೆ. ಆದರೆ ಇದಕ್ಕಾಗಿ ಸರ್ಕಾರ (Government) ಮುನ್ನೆಚ್ಚರಿಕೆಯ ಕ್ರಮವನ್ನೂ ಬಿಡುಗಡೆ ಮಾಡಿದೆ. ಆ ಆದೇಶಗಳನ್ನು ಪಾಲಿಸಿದರೆ ಮಾತ್ರ ಸಾಲದು, ಅದಕ್ಕಾಗಿ ಕೆಲವೊಂದು ಡಿವೈಸ್ಗಳು ಕೂಡ ಟೆಕ್ನಾಲಜಿ (Technology) ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಮಾರುಕಟ್ಟೆಗೆ ಕೊರೊನಾ ನಿಯಂತ್ರಣ ಮಾಡುವಂತಹ ಹಲವಾರು ಸಾಧನಗಳು ಬಂದಿದ್ದು, ಇನ್ಮುಂದೆ ಸರ್ಕಾರದ ನಿಯಮದ ಜೊತೆಗೆ ಈ ಸಾಧನಗಳನ್ನು ಉಪಯೋಗಿಸಿ ಕೊರೊನಾವನ್ನು ನಿಯಂತ್ರಿಸಬಹುದು.
ಇದೀಗ ಕೊರೊನಾ ಬರ್ತಿದೆ ಎಂಬ ಮುನ್ಸೂಚನೆ ಎಲ್ಲರ ಕಿವಿಗೂ ಬಿದ್ದಿದೆ. ಆದರೆ ಇದನ್ನು ಆರಂಭದಲ್ಲೇ ಮಟ್ಟಹಾಕಲು ಟೆಕ್ ಕಂಪನಿಗಳು ಕೆಲವೊಂದು ಕೊರೊನಾ ನಿಯಂತ್ರಣ ಡಿವೈಸ್ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಯಾವುದು ಆ ಕೊರೊನಾ ನಿಯಂತ್ರಿಸುವ ಸಾಧನಗಳೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಪಲ್ಸ್ ಆ್ಯಕ್ಸಿಮೀಟರ್
ಕೊರೊನಾ ಬಾರದಿರುವಂತೆ ಮಾಡಲು ಮುಖ್ಯವಾಗಿ ಮಾನವನ ದೇಹ ಆರೋಗ್ಯವಾಗಿರಬೇಕು. ಕೆಲವೊಮ್ಮೆ ದೇಹದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕಡಿಮೆಯಾಗುವುದು ಕೊರೊನಾ ಸೋಂಕಿನ ಲಕ್ಷಣಗಳಲ್ಲಿ ಒಂದಾಗಿದೆ. ಇದನ್ನು ಪತ್ತೆಹಚ್ಚಲು ಸಹಾಯ ಮಾಡುವ ಸಾಧನವಿದ್ದರೆ ಅದು ಪಲ್ಸ್ ಆ್ಯಕ್ಸಿಮೀಟರ್.ಇದು ವೈದ್ಯಕೀಯ ಟೆಸ್ಟ್ನ ಅಗತ್ಯವಿದೆಯೇ ಎಂದು ತಿಳಿದುಕೊಳ್ಳಬಹುದು. ಇದರ ಬೆಲೆ 500 ರೂಪಾಯಿಗಳಿಂದ ಆರಂಭವಾಗಿ 2,500 ರೂ.ಪಾಯಿಗಳ ವರೆಗೂ ಇದೆ.
ಇದನ್ನೂ ಓದಿ: ದೇಶದೆಲ್ಲೆಡೆ ಜಿಯೋ 5ಜಿ ಸೇವೆ ಲಭ್ಯ! ನಿಮ್ಮ ಮೊಬೈಲ್ನಲ್ಲಿ ಈ ಸೇವೆಯನ್ನು ಆ್ಯಕ್ಟಿವ್ ಮಾಡುವುದು ಹೇಗೆ?
ರಕ್ತದೊಟ್ಟದ ಮಾನಿಟರ್
ಯಾವುದೇ ಕಾರಣಕ್ಕೂ ಈಗ ಆಸ್ಪತ್ರೆಗೆ ಹೋದರೂ ಅಲ್ಲಿ ಮೊದಲು ಚೆಕ್ ಮಾಡುವುದೇ ರಕ್ತದಒತ್ತರಡ (ಬಿಪಿ). ಆದರೆ ಇದನ್ನು ನಾವೀಗ ಮನೆಯಲ್ಲಿಯೇ ಚೆಕ್ ಮಾಡಿಕೊಳ್ಳಬಹುದಾಗಿದೆ. ರಕ್ತದಒತ್ತಡದಿಂದ ಕೊರೊನಾ ಸೋಂಕು ಬರುವಂತಹ ಲಕ್ಷಣ ಹೆಚ್ಚಿರುತ್ತದೆ. ಆದರೆ ಇದನ್ನು ಈಗ ನೀವು ಮನೆಯಲ್ಲಿಯೇ ಚೆಕ್ ಮಾಡಿಕೊಂಡು ಎಚ್ಚರದಿಂದ ಇರಬಹುದು. ಸಾಮಾನ್ಯವಾಗಿ ಒಬ್ಬ ಮನುಷ್ಯನ ಬಿಪಿ 80 ರಿಂದ 120mm Hg ವ್ಯಾಪ್ತಿಯಲ್ಲಿರಬೇಕು. ಇದನ್ನು ಚೆಕ್ ಮಾಡುವಂತಹ ಮಾನಿಟರ್ ಇದೀಗ ಮಾರುಕಟ್ಟೆಗೆ ಬಂದಿದೆ. ಇದರ ಬೆಲೆ 2 ಸಾವಿರ ರೂಪಾಯಿಯಿಂದ 3 ಸಾವಿರ ರೂಪಾಯಿವರೆಗೆ ಇರುತ್ತದೆ.
ಐಆರ್ ಥರ್ಮಾಮೀಟರ್
ಕೊರೊನಾ ವಿಷಯದಲ್ಲಿ ಅವಶ್ಯಕವಾದ ಡಿವೈಸ್ ಎಂದರೆ ಅದು ಐಆರ್ ಥರ್ಮಾಮೀಟರ್. ಇದರ ಮೂಲಕ ದೇಹದ ಉಷ್ಣತೆಯನ್ನು 1 ರಿಂದ 2 ಇಂಚು ದೂರದಿಂದಲೇ ಅಳೆಯಬಹುದು. ಹೀಗಾಗಿ ನೀವು ಯಾರನ್ನೂ ಸ್ಪರ್ಶಿಸದೆ ಪರೀಕ್ಷೆ ಮಾಡಲಾಗುವುದರಿಂದ ಸೋಂಕಿನ ಹೆಚ್ಚಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಇದರ ಬೆಲೆ 900 ರೂಪಾಯಿಯಿಂದ ಪ್ರಾರಂಭವಾಗುತ್ತವೆ.
ಪೋರ್ಟಬಲ್ ಆಕ್ಸಿಜನ್ ಡಬ್ಬಿ
ಪೋರ್ಟಬಲ್ ಆಕ್ಸಿಜನ್ ಡಬ್ಬಿಯು ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯುವವರೆಗೆ ಉಸಿರಾಟದ ತೊಂದರೆಯನ್ನು ಪರಿಹರಿಸಿಕೊಳ್ಳಲು ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಕೇವಲ ಕೆಲವು ಸಮಯಕ್ಕೆ ಮಾತ್ರ ಬಳಕೆ ಮಾಡಬಹುದಾಂತಹ ಸಾಧನವಾಗಿದೆ.
ಗ್ಲುಕೋ ಮೀಟರ್
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪತ್ತೆಹಚ್ಚಲು ಗ್ಲುಕೋಮೀಟರ್ ಸಾಧನ ಬಹಳಷ್ಟು ಸಹಕಾರಿಯಾಗುತ್ತದೆ. ಎಲ್ಲರಿಗೂ ಗ್ಲುಕೋಮೀಟರ್ ಅಗತ್ಯವಿರುವುದಿಲ್ಲ. ಆದರೆ, ಮಧುಮೇಹ ರೋಗಿಗಳಿಗೆ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪತ್ತೆಹಚ್ಚಲು ಇದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಈ ಡಿವೈಸ್ ಅನ್ನು ಮಾರುಕಟ್ಟೆಯಲ್ಲಿ ಬೆಲೆ 500 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
ಸ್ವಯಂ ಶುಚಿಗೊಳ್ಳುವ ಮಾಸ್ಕ್
ಈಗಂತೂ ಎಲ್ಲಾ ಕಡೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನೀವು ಸ್ವಯಂ-ಶುಚಿಗೊಳ್ಳುವ ಮಾಸ್ಕ್ಗಳನ್ನು ಖರೀದಿ ಮಾಡಿದರೆ ಒಳಿತು. ಯಾಕೆಂದರೆ ಇವು ಬ್ಯಾಕ್ಟೀರಿಯಾ ವಿರೋಧಿ ಕ್ಲೋತ್ ಅನ್ನು ಇದು ಹೊಂದಿರುತ್ತದೆ. ಇವುಗಳನ್ನು ಮರುಬಳಕೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ