ಹವಾಮಾನ (Weather) ಬದಲಾಗುವುದು ಸಾಮಾನ್ಯ ಹಾಗೇ ಇದಲ್ಲಿ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಎಂಬ ಮೂರು ರೀತಿಯಲ್ಲಿ ಬದಲಾಗುತ್ತದೆ. ಚಳಿಗಾಲದಲ್ಲಿ (Winter) ಅನೇಕರು ಚಳಿಯನ್ನು ತಡೆದುಕೊಳ್ಳಲಾಗದೆ ಸ್ವೆಟರ್- (Sweater), ಹೀಟರ್ (Heater) ಈ ರೀತಿಯ ಸಾಧನಗಳನ್ನು ಬಳಸುತ್ತಾರೆ. ಆದರೆ ಇದು ಮನೆಯಲ್ಲಿ ಮಾತ್ರ ಬಳಸಬಹುದಾಗಿದೆ. ಸ್ವೆಟರ್ ಒಮ್ಮೆಗೆ ಚಳಿಯನ್ನು ನಿಯಂತ್ರಿಸುತ್ತದೆ ಆದರೆ ಎಲ್ಲಾ ಸಮಯದಲ್ಲೂ ಇದು ಉಪಯೋಗವಾಗುವುದಿಲ್ಲ. ಆದರೆ ಇದೀಗ ಟೆಕ್ನಾಲಜಿ ಕಂಪನಿಯೊಂದು ಪಾಕೆಟ್ ಹೀಟರ್ ಅನ್ನು ಪರಿಚಯಿಸಿದೆ. ಈ ಮೂಲಕ ಚಳಿಗಾಲದಲ್ಲಿ ಈ ಪಾಕೆಟ್ ಹೀಟರ್ (Pocket Heater) ಅನ್ನು ಇಟ್ಟುಕೊಂಡು ಎಲ್ಲಿ ಬೇಕಾದರು ಸುತ್ತಾಡಬಹುದಾಗಿದೆ.
ಚಳಿಗಾಲ ಬಂದರೆ ಸಾಕು ಅದನ್ನು ಹೇಗಪ್ಪಾ ತಡೆಯುವುದು ಅಂತಾ ಕಾಯ್ತಾ ಇರ್ತಾರೆ. ಇದೀಗ ಟೆಕ್ನಾಲಜಿ ಕಂಪನಿಯೊಂದು ಪಾಕೆಟ್ ಹೀಟರ್ ಅನ್ನು ಪರಿಚಯಿಸಿದ್ದು. ಇದನ್ನು ಪಾಕೆಟ್ನಲ್ಲೇ ಇಟ್ಟುಕೊಂಡು ದೇಹವನ್ನು ಬಿಸಿ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ ಇದರ ಸ್ಪೆಷಲ್ ಫೀಚರ್ ಏನು ಎಂಬುದನ್ನು ಇಲ್ಲಿ ಓದಿ.
ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್
ಇದೀಗ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವಂತಹ ಪಾಕೆಟ್ ಹೀಟರ್ನ ಹೆಸರು ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ ಎಂಬುದಾಗಿದೆ. ಈ ಪಾಕೆಟ್ ಹೀಟರ್ ಅನ್ನು ಅಮೆಜಾನ್ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು. ಇದು ಚಳಿಗಾಲದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್! ಎಷ್ಟಿದೆ ಗೊತ್ತಾ ಡಿಸ್ಕೌಂಟ್?
ಫ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್
ಈ ಪ್ಲೇಸ್ಹ್ಯಾಬ್ ಪಾಕೆಟ್ ಹೀಟರ್ ಅನ್ನು ಎಲ್ಲಿ ಬೇಕಾದರು ಕೊಂಡೊಯ್ಯಬಹುದಾಗಿದೆ. ಇದನ್ನು ಮನೆಯಲ್ಲಿರಬೇಕಾದರು ಬೆಡ್ರೂಮ್, ಲಿವಿಂಗ್ ರೂಮ್ಗಳಲ್ಲಿ ಇಟ್ಟುಕೊಂಡು ಬಳಸಬಹುದಾಗಿದೆ. ಇನ್ನು ಹೊರಗಡೆ ಹೋಗಬೇಕಾದರೆ ಪಾಕೆಟ್ನಲ್ಲಿ ಇಟ್ಟುಕೊಂಡು ನಿಮ್ಮ ದೇಹವನ್ನು ಬೆಚ್ಚಗಿರಿಸುವಂತೆ ಇದು ಮಾಡುತ್ತದೆ. ಈ ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ 5200mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಚಾರ್ಜಿಂಗ್ ಕೇಬಲ್ ಅನ್ನು ಕೂಡ ನೀಡಲಾಗಿದೆ. ಎಲ್ಲಿ ಬೇಕಾದರು ಚಾರ್ಜ್ ಮಾಡಿಕೊಳ್ಳುವಂತಹ ಅವಕಾಶವನ್ನು ಇದು ನೀಡುತ್ತದೆ.
ಯಾವ ರೀತಿ ಬಳಸುವುದು?
ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ ಅನ್ನು ನಾವು ಪಾಕೆಟ್ನಲ್ಲಿ ಅಥವಾ ಎಲ್ಲಿ ಯಾದರೂ ಕೊಂಡುಹೋಗುವಾಗ ಅದರ ಪವರ್ ಬಟನ್ ಆನ್ ಮಾಡುವ ಮೂಲಕ ಈ ಸಾಧನವನ್ನು ಕಾರ್ಯನಿರ್ವಹಿಸುವಂತೆ ಕೆಲಸಮಾಡುತ್ತದೆ.
ಅಮೆಜಾನ್ನಲ್ಲಿ ಲಭ್ಯ
ಈ ಪ್ಲೇಸ್ಹ್ಯಾಬ್ ಗೋಲ್ಡನ್ ಪಾಕೆಟ್ ಹೀಟರ್ ಅನ್ನು ಗ್ರಾಹಕರು ಪ್ರಮುಖ ಇಕಾಮರ್ಸ್ ವೆಬ್ಸೈಟ್ ಆಗಿರುವ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ.
ಇದೇ ರೀತಿಯ ಹೀಟರ್ ಜ್ಯಾಕೆಟ್ ಕೂಡ ಮಾರುಕಟ್ಟೆಯಲ್ಲಿದೆ
ಹೀಟರ್ ಜ್ಯಾಕೆಟ್ ಫೀಚರ್ಸ್
ಇದರ ಹೆಸರು ಐಹೆಚ್ಜಿ ಹೀಟೆಡ್ ವೆಸ್ಟ್ ಎಂಬುದಾಗಿದೆ. ನೀವು ಇದರ ಹೆಸರಿನಿಂದಲೇ ವಿಶೇಷತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಇದು ಸಾಮಾನ್ಯ ಜಾಕೆಟ್ಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಸಾಮಾನ್ಯ ಜಾಕೆಟ್ಗೆ ಹೋಲಿಸಿದರೆ ಈ ಹೀಟೆಡ್ ಜಾಕೆಟ್ ವಿಶೇಷವಾದ ಉತ್ತಮ ವೈಶಿಷ್ಟ್ಯವನ್ನು ಹೊಂದಿದೆ.
ಈ ಜಾಕೆಟ್ ಬೇರೆ ಬೇರೆ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಈ ಜಾಕೆಟ್ ಅನ್ನು ಉತ್ಪಾದಿಸಿ ಮಾರಾಟಮಾಡುತ್ತಿದ್ದಾರೆ. ಇದಲ್ಲದೆ ಇದು ಅಮೆಜಾನ್ನಿಂದ ಕೇವಲ ₹ 3709 ಕ್ಕೆ ಖರೀದಿಸಬಹುದು. ಈ ಜಾಕೆಟ್ ಈಗಿನ ತಂತ್ರಜ್ಞಾನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸ ಉತ್ಪನ್ನವಾಗಿದ್ದು. ಜನರನ್ನು ಬೇಗನೆ ಆಕರ್ಷಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ