ಜಗತ್ತಿನಾದ್ಯಂತ ಹಲವಾರು ಕಾರು ಕಂಪೆನಿಗಳು ಐಷರಾಮಿ ಕಾರುಗಳನ್ನು ಮಾರಾಟ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ ವಿಶೇಷವೆಂದರೆ ದುಬಾರಿ ಕಾರಿನ ಬೆಲೆಗಿಂತ ಕಾರಿನ ಕೀಗಳು ಮಾರಾಟವಾಗುತ್ತಿರುವುದು ಸದ್ಯದ ಟ್ರೆಂಡಿಂಗ್ ವಿಚಾರ. ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಬುಗಾಟಿ, ರೋಲ್ಸ್ ರಾಯ್ಸ್, ಬೆಂಟ್ಲಿ, ಮಸೆರಿಟಿ, ಮೆಕ್ಲೆರನ್ ಮುಂತಾದ ಕಾರುಗಳು ಕೋಟಿ ಬೆಲೆಯಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಆದರೆ ದುಬಾರಿ ಕಾರುಗಳನ್ನು ಹಿಂದಿಕ್ಕುವ ಕಾರಿನ ಕೀ ಬೆಲೆಯು ಅಚ್ಚರಿ ಉಂಟು ಮಾಡುವುದಲ್ಲಿ ಯಾವುದೇ ಸಂದೇಹವಿಲ್ಲ.
ಅವೈನ್ ಎಂಬ ಸಂಸ್ಥೆ ಐಷಾರಾಮಿ ಕಾರುಗಳ ಬೆಲೆಗೆ ತಕ್ಕಂತೆ ಕಾರಿನ ಕೀಯನ್ನು ವಿಭಿನ್ನವಾಗಿ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದೆ. ಕಾರುಗಳ ಬೆಲೆಗೆ ತಕ್ಕಂತೆ ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 3 ಲಕ್ಷದಿಂದ 4 ಕೋಟಿಯಷ್ಟು ಬೆಲೆಬಾಳುವ ಕಾರಿನ ಕೀ ಮಾದರಿಗಳನ್ನು ಅವೈನ್ ಸಂಸ್ಥೆ ಉತ್ಪಾದಿಸುತ್ತಿದೆ.
ಅವೈನ್ ಸಂಸ್ಥೆ ತಯಾರಿಸುವ ಕಾರು ಕೀಗಳಿಗೆ ಉತ್ಕೃಷ್ಟ ಗುಣಮಟ್ಟದ ಬಂಗಾರ ಮತ್ತು ವಜ್ರದ ಹರಳು ಉಪಯೋಗಿಸಲಾಗುತ್ತಿದ್ದು, ಕಾರಿನ ಬೆಲೆಗೆ ತಕ್ಕಂತೆ ಕೀಗಳನ್ನು ಮಾರಾಟ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ