HOME » NEWS » Tech » THIS BRACELET WHICH WILL GIVE YOU AN ELECTRIC SHOCK IF YOU EAT TOO MUCH FAST FOOD TO TRY AND CURE YOU OF BAD HABITS HG

Electric Shock Bracelet: ಡಯೆಟ್​ ಮಾಡುವವರಿಗೆ ಬೆಸ್ಟ್​​! ಜಾಸ್ತಿ ತಿಂದರೆ ಶಾಕ್​ ನೀಡುತ್ತೆ ಈ ಬೆಲ್ಟ್​!

ತೂಕ ಇಳಿಸಿಕೊಳ್ಳಬೇಕು ಎಂದುಕೊಂಡರು ಹಸಿವು ತಾಳತಾರದೆ ಮಿತಿ ಮೀರಿ ಆಹಾರ ಸೇವನೆ ಮಾಡುತ್ತೇವೆ.  ಆದರೆ ಅಮೆಜಾನ್​​​ನಲ್ಲಿ ಲಭ್ಯವಿರುವ ಪಾವ್ಲೋಕ್​ ಬೇಲ್ಟ್​ ನಿಮ್ಮ ಆಹಾರದ ಸೇವನೆಯನ್ನು ನಿಯಂತ್ರಿಸುತ್ತದೆ. 

news18-kannada
Updated:April 2, 2020, 7:12 AM IST
Electric Shock Bracelet: ಡಯೆಟ್​ ಮಾಡುವವರಿಗೆ ಬೆಸ್ಟ್​​! ಜಾಸ್ತಿ ತಿಂದರೆ ಶಾಕ್​ ನೀಡುತ್ತೆ ಈ ಬೆಲ್ಟ್​!
Electric Shock Bracelet
  • Share this:
ನೀವು ತೂಕದ ಸಮಸ್ಯೆಯಿಂದ ಬಳಲುತ್ತಿದ್ದೀರಾ.? ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದೀರಾ? ಹಾಗಿದ್ದರೆ, ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಇ- ಕಾಮರ್ಸ್​ ಮಳಿಗೆಯಾದ ಅಮೆಜಾನ್​ ಬ್ರೇಸ್​ ಲೈಟ್​ವೊಂದನ್ನು ಮಾರಾಟ ಮಾಡುತ್ತಿದ್ದು, ತೂಕ ಇಳಿಸಿಕೊಳ್ಳಲು ಪರದಾಡುತ್ತಿರುವವರಿಗೆ ಪರಿಹಾರವನ್ನು ನೀಡಿದೆ.

ತೂಕ ಇಳಿಸಿಕೊಳ್ಳಬೇಕು ಎಂದುಕೊಂಡರು ಹಸಿವು ತಾಳತಾರದೆ ಮಿತಿ ಮೀರಿ ಆಹಾರ ಸೇವನೆ ಮಾಡುತ್ತೇವೆ.  ಆದರೆ ಅಮೆಜಾನ್​​​ನಲ್ಲಿ ಲಭ್ಯವಿರುವ ಪಾವ್ಲೋಕ್​ ಬೇಲ್ಟ್​ ನಿಮ್ಮ ಆಹಾರದ ಸೇವನೆಯನ್ನು ನಿಯಂತ್ರಿಸುತ್ತದೆ. ಮಿತಿಗಿಂತ ಹೆಚ್ಚು ಆಹಾರವನ್ನು ತಿಂದರೆ ವಿದ್ಯುತ್​ ಶಾಕ್​ ನೀಡುತ್ತದೆ. ಹಾಗಾಗೀ, ಬಳಕೆದಾರನ ಆಹಾರವನ್ನು ನಿಯಂತ್ರಿಸಲು ಈ ಬ್ರೇಸ್​​ ಲೈಟ್​ ಮಿತಿಗಿಂತ ಹೆಚ್ಚು ತಿಂದರೆ​ 350 ವೋಲ್ಟ್​​ ವಿದ್ಯುತ್​​ ಶಾಕ್​ ಅನ್ನು ನೀಡುತ್ತದೆ.

ಪಾವ್ಲೋಕ್​ ಬ್ರೇಸ್​ ಲೈಟ್​ ಬಳಕೆ ಮಾಡುವವರಿಗೆ ಆ್ಯಪ್​ ಕೂಡ ಲಭ್ಯವಿದೆ. ಈ ಆ್ಯಪ್​ ಬಳಿಸಿದಾಗ ತಾವು ಸೇವಿಸಿದ ಆಹಾರದ ಕ್ಯಾಲೊರಿಯನ್ನು ಪರಿಶೀಲಿಸಬಹುದಾಗಿದೆ. ಅಂತೆಯೇ, ಕ್ಯಾಲೊರಿ ಹೆಚ್ಚಾದಂತೆ ಬ್ರೇಸ್​ ಲೈಟ್​ ಎಚ್ಚರಿಕೆಯನ್ನು ನೀಡುತ್ತದೆ.

ಅಮೆಜಾನ್​ನಲ್ಲಿ ಲಭ್ಯವಿರುವ ಈ ಬ್ರೆಸ್​ ಲೈಟ್​ನ ಬಳಕೆಯಿಂದ ಇಂಟರ್​ನೆಟ್​, ಟಿ.ವಿ ವೀಕ್ಷಣೆ, ವಿಡಿಯೋ ಗೇಮ್ಸ್​ ಮೇಲೆಯೂ ನಿಗಾ ವಹಿಸುತ್ತದೆ. ಅತಿಯಾದ ಟಿ.ವಿ ವೀಕ್ಷಣೆ, ಇಂಟರ್ ನೆಟ್​ ಬಳಕೆ ಮಾಡಿದರೆ ಎಚ್ಚರಿಸುತ್ತದೆ.​

ಇನ್ನು ತೂಕ ಇಳಿಕೆ ಮಾಡಲು ಮತ್ತು ಡಯೆಟ್​ ಮಾಡುವವರಿಗೆ ಈ ಬೆಲ್ಟ್​ ಹೆಚ್ಚು ಉಪಯೋಗವಾಗಿದ್ದು, ದೈನಂದಿನ ಬಳಕೆಗೆ ಮತ್ತು ಆಹಾರದಲ್ಲಿನ ನಿಯಂತ್ರಣಕ್ಕೆ ಈ ಬೆಲ್ಟ್​ ಸಹಾಯಕ. ಅಮೆಜಾನ್​ನಲ್ಲಿ ಲಭ್ಯವಿರುವ ಪಾವ್ಲೋಕ್​  ಬ್ರೇಸ್​ ಲೈಟ್​ ಬೆಲೆ 20,499 ರೂ.ಗಳಾಗಿದೆ.

ಇದನ್ನೂ ಓದಿ: ಕೊರೋನಾಗೆ ತುತ್ತಾಗಿದ್ದೇನೆಂದು ಏಪ್ರಿಲ್​ ಫೂಲ್​ ಮಾಡಿದ ಗಾಯಕ! ಮುಂದೇನಾಯ್ತ?
First published: April 2, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories