ಸ್ಮಾರ್ಟ್ಫೋನ್ಗಳು (Smartphones) ಈಗ ಎಷ್ಟು ಉಪಯೋಗವಾಗುತ್ತಿದೆಯೆಂದರೆ ಯಾವುದೇ ಕೆಲಸವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ. ಇನ್ನು ಹೆಚ್ಚಿನ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಉತ್ತಮ ಗಾಳಿ, ವಿಶ್ರಾಂತಿಯನ್ನು ಪಡೆಯುವ ಉದ್ದೇಶದಿಂದ ಉದ್ಯಾನವನಗಳನ್ನು ಹುಡುಕುತ್ತಿರುತ್ತಾರೆ. ಆದರೆ ಎಷ್ಟೋ ಜನರು ಈಗ ತಮ್ಮ ಊರುಗಳನ್ನು ಬಿಟ್ಟು ಬೇರೆ ದೇಶಗಳಿಗೆ, ರಾಜ್ಯಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಾರೆ. ಆ ಸಂದರ್ಭದಲ್ಲಿ ಪಾರ್ಕ್ಗಳನ್ನು (Park) ಹುಡುಕುವುದು ತುಂಬಾ ಕಷ್ಟವಾಗುತ್ತದೆ. ಮನಸ್ಸಿಗೆ ಶಾಂತಿ ಪಡೆಯಲು ಹಾಗೂ ಉತ್ತಮ ಪರಿಸರದಲ್ಲಿ ಕೆಲವು ಹೊತ್ತು ಸಮಯ ಕಳೆಯಲು ಯಾರು ತಾನೆ ಬಯಸುವುದಿಲ್ಲ ಹೇಳಿ. ಆದರೆ, ಕೆಲವು ವೇಳೆ ನಮ್ಮ ಬಾಡಿಗೆ ಮನೆ ಸಮೀಪವೇ ಅಥವಾ ನಮ್ಮ ಕಚೇರಿ ಸಮೀಪವೇ ಪಾರ್ಕ್‌ಗಳು ಇದ್ದರೂ ನಮಗೆ ತಿಳಿಯುವುದಿಲ್ಲ. ಆದರೆ ಇನ್ಮುಂದೆ ಸ್ಮಾರ್ಟ್ಫೋನ್ನಲ್ಲಿಯೇ ಪಾರ್ಕ್ಗಳನ್ನು ಹುಡುಕ್ಬಹುದು (Google Maps).
ಪಾರ್ಕ್ಗಳಲ್ಲಿ ಹೆಚ್ಚಿನ ಜನರು ವಿಶ್ರಾಂತಿ ಪಡೆಯಲು, ಉತ್ತಮ ಗಾಳಿ ಪಡೆಯಲು ತೆರಳುತ್ತಾರೆ. ಅಂತಹವರಿಗೆ ಬೇರೆ ಊರುಗಳಿಗೆ ಹೋದಾಗ ಪಾರ್ಕ್ಗಳೇ ಸಿಗುವುದಿಲ್ಲ. ಹಾಗಿದ್ರೆ ನಾವಿರುವಂತಹ ಹತ್ತಿರದಲ್ಲೇ ಯಾವೆಲ್ಲಾ ಪಾರ್ಕ್ಗಳಿವೆ ಎಂದು ಗೂಗಲ್ ಮೈ ಆ್ಯಪ್ಸ್ ಮೂಲಕ ನೋಡಬಹುದು.
ಸ್ಮಾರ್ಟ್‌ಫೋನ್ ಇದ್ರೆ ಸಾಕು
ಸಾಮಾನ್ಯವಾಗಿ ಈಗಂತೂ ಎಲ್ಲರೂ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ. ಈ ಫೋನ್ ಮೂಲಕ ನಿಮ್ಮ ದೈನಂದಿನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಯ ಮಾಹಿತಿಗಳನ್ನು ಟ್ರ್ಯಾಕ್ ಮಾಡಬಹುದು. ಅದರಂತೆ ಈ ರೀತಿಯ ಚಟುವಟಿಕೆ ನಡೆಸಲು ಉದ್ಯಾನವನಗಳಿದ್ದರೆ ಇನ್ನಷ್ಟು ಅನುಕೂಲ ಅಲ್ಲವೆ? ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಹತ್ತಿರದ ಸ್ಥಳದಲ್ಲಿ ಯಾವ ಉದ್ಯಾನವನ ಇದೆ ಎಂದು ಕಂಡುಕೊಳ್ಳಬಹುದು.
ಇದನ್ನೂ ಓದಿ: ವಿಶ್ವದಾದ್ಯಂತ ಅತೀಹೆಚ್ಚು ಇಂಟರ್ನೆಟ್ ಸಮಸ್ಯೆ ಎದುರಾಗಿದ್ದು ಭಾರತದಲ್ಲಂತೆ! ಇಲ್ಲಿದೆ ಕಂಪ್ಲೀಟ್ ಮಾಹಿತಿ
ಮೈ ಮ್ಯಾಪ್ಸ್ ಡೌನ್ಲೋಡ್ ಮಾಡಿಕೊಳ್ಳಿ
ಗೂಗಲ್ ತನ್ನದೇ ಆದ ಆ್ಯಪ್ಗಳ ಮೂಲಕ ವಿವಿಧ ಸೇವೆ ನೀಡುತ್ತಿದ್ದು, ಅದರಲ್ಲಿ ಗೂಗಲ್ ಮ್ಯಾಪ್ ಹಾಗೂ ಮೈ ಮ್ಯಾಪ್ಸ್ (Google My Maps) ಅಪ್ಲಿಕೇಶನ್ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಈ ಎರಡೂ ಸೇವೆಗಳು ಒಂದೇ ರೀತಿಯದ್ದಾಗಿದ್ದರೂ ಸ್ವಲ್ಪ ಭಿನ್ನತೆ ಇದೆ. ಯಾಕೆಂದರೆ ಮೈ ಮ್ಯಾಪ್ಸ್ ಮೂಲಕ ನಕ್ಷೆಯಲ್ಲಿ ವಿವಿಧ ಸ್ಥಳಗಳನ್ನು ಗುರುತಿಸಬಹುದು, ನಿರ್ದೇಶನಗಳನ್ನು ನೋಡಬಹುದು. ಅಷ್ಟೇ ಏಕೆ ನಿಮ್ಮ ವೆಬ್‌ಸೈಟ್ ಅಥವಾ ಬ್ಲಾಗ್‌ನಲ್ಲಿ ನೀವು ಮೈ ಮ್ಯಾಪ್ಸ್ ಅನ್ನು ಎಂಬೆಡ್ ಮಾಡಬಹುದು.
ಅಪ್ಲಿಕೇಶನ್ನಲ್ಲಿ ಹತ್ತಿರದ ಪಾರ್ಕ್ಗಳನ್ನು ಸರ್ಚ್ ಮಾಡಿ
ನೀವು ನಿಮ್ಮ ಮೊಬೈಲ್ ಮೂಲಕ ಅಥವಾ ಸ್ಮಾರ್ಟ್‌ಡಿವೈಸ್ ಮೂಲಕ ಹತ್ತಿರದ ಉದ್ಯಾನವನಗಳನ್ನು ಪತ್ತೆ ಮಾಡಲು ಮೊದಲು ಮೈ ಮ್ಯಾಪ್ಸ್ ಎಂದು ಸರ್ಚ್ ಮಾಡಿ. ಇದಾದ ನಂತರ ಖಾಲಿ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕಾಣಿಸಿಕೊಳ್ಳುವ ಸರ್ಚ್ ಬಾಕ್ಸ್‌ನಲ್ಲಿ 'parks and gardens near me' ಎಂದು ನಮೂದಿಸಿ. ಈ ವೇಳೆ ನಿಮ್ಮ ಹತ್ತಿರ ಇರುವ ಎಲ್ಲಾ ಪಾರ್ಕ್‌ಗಳ ವಿವರ ನಿಮಗೆ ತಿಳಿಯುತ್ತದೆ. ಈ ವಿಭಾಗದಲ್ಲಿ ನಿಮಗೆ ಬೇಕಾದ ಪಾರ್ಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಅದರ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಇದಕ್ಕಾಗಿ ಯಾವುದೇ ಪ್ರತ್ಯೇಕ ಅಪ್ಲಿಕೇಶನ್ ಇಲ್ಲ
ನೀವು ನಿಮ್ಮ ಫೋನ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ನಲ್ಲಿ ಇದನ್ನು ಬಳಕೆ ಮಾಡಬಹುದಾಗಿದ್ದು, ಇದಕ್ಕಾಗಿ ಪ್ರತ್ಯೇಕವಾದ ಯಾವುದೇ ಆ್ಯಪ್ ಇಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಇದರ ಬಳಕೆ ಆರಂಭದಲ್ಲಿ ಕಷ್ಟ ಎನಿಸಿದರು ನಿರಂತರವಾಗಿ ಬಳಕೆ ಮಾಡಲು ಮುಂದಾದರೆ ಗೂಗಲ್ ಮ್ಯಾಪ್ಸ್‌ಗಿಂತ ಈ ಮೈ ಮ್ಯಾಪ್ಸ್ ಹೆಚ್ಚು ಸರಳವೆಂದು ಭಾವನೆ ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ