• Home
 • »
 • News
 • »
 • tech
 • »
 • Jio 5G Recharge Plans: ಜಿಯೋ 5ಜಿ ಡೇಟಾ ಗೆ ರೀಚಾರ್ಜ್​ ಮಾಡ್ಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಪ್ಲ್ಯಾನ್ ಉತ್ತಮ

Jio 5G Recharge Plans: ಜಿಯೋ 5ಜಿ ಡೇಟಾ ಗೆ ರೀಚಾರ್ಜ್​ ಮಾಡ್ಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಪ್ಲ್ಯಾನ್ ಉತ್ತಮ

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ

ಜಿಯೋ ತನ್ನ 5ಜಿ ನೆಟ್​ವರ್ಕ್​ ಸೇವೆಯನ್ನು ದೇಶದ ಹಲವು ಭಾಗಗಳಲ್ಲಿ ಈಗಾಗಲೇ ವಿಸ್ತರಿಸಿದೆ. ಆದರೆ ಹೆಚ್ಚಿನ ಜನರಿಗೆ 5ಜಿ ಡೇಟಾದ ರೀಚಾರ್ಜ್​ ಪ್ಲ್ಯಾನ್​ಗಳು ಹೇಗಿದೆ ಎಂಬುದು ಗೊತ್ತಿಲ್ಲ. ಹಾಗಿದ್ರೆ ಜಿಯೋ 5ಜಿ ಸೇವೆಯ ರೀಚಾರ್ಜ್​  ಪ್ಲ್ಯಾನ್​ಗಳ ಬಗ್ಗೆ ತಿಳಿಯಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
 • Share this:

  ಪ್ರಪಂಚದಾದ್ಯಂತ ಇದೀಗ ಸದ್ದು ಮಾಡುತ್ತಿರುವ ಸುದ್ದಿಯೆಂದರೆ 5ಜಿ ನೆಟ್​ವರ್ಕ್ (5G Network)​ ಸೇವೆ. ಇದೀಗ ಹಲವಾರು ಟಲಿಕಾಂ ಕಂಪನಿಗಳು (Telecom Company) 5ಜಿ ನೆಟ್​ವರ್ಕ್​ ಸೇವೆಯನ್ನು ದೇಶದೆಲ್ಲೆಡೆ ವಿಸ್ತರಿಸಲು ರಾತ್ರಿ ಹಗಲೆನ್ನದೆ ದುಡಿಯುತ್ತಿದೆ. ಈ ಸಂದರ್ಭದಲ್ಲೆ ದೇಶದ ನಂಬರ್ 1 ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್​ ಜಿಯೋ (Reliance Jio) 2023ರ ಡಿಸೆಂಬರ್ ಒಳಗಡೆ 5ಜಿ ನೆಟ್​ವರ್ಕ್​ ಅನ್ನು ಪ್ಯಾನ್ ಇಂಡಿಯಾ ಕವರೇಜ್​ ಮಾಡಲು ಸಿದ್ಧತೆ ನಡೆಸಿದೆ. ಸದ್ಯ ದೇಶದ ಕೆಲವು ನಗರಗಳಲ್ಲಿ ಈಗಾಗಲೇ ಜಿಯೋ ನೆಟ್​​ವರ್ಕ್​ ಸೇವೆಯನ್ನು ಪ್ರಾರಂಬಿಸಿದ್ದು ಇದರ ರೀಚಾರ್ಜ್​ ಪ್ಲ್ಯಾನ್ (Recharge Plan)​ ಹೇಗಿದೆ ಎಂಬುದನ್ನು ಇನ್ನೂ ಹಲವರಿಗೆ ತಿಳಿದಿಲ್ಲ. ಇದೀಗ ಜಿಯೋ 5ಜಿ ಡೇಟಾ ಸೌಲಭ್ಯದ ಬಗ್ಗೆ ರೀಚಾರ್ಜ್​ ಪ್ಲ್ಯಾನ್​ಗಳನ್ನು ಬಿಡುಗಡೆ ಮಾಡಿದೆ.


  ಜಿಯೋ ತನ್ನ 5ಜಿ ನೆಟ್​ವರ್ಕ್​ ಸೇವೆಯನ್ನು ದೇಶದ ಹಲವು ಭಾಗಗಳಲ್ಲಿ ಈಗಾಗಲೇ ವಿಸ್ತರಿಸಿದೆ. ಆದರೆ ಹೆಚ್ಚಿನ ಜನರಿಗೆ 5ಜಿ ಡೇಟಾದ ರೀಚಾರ್ಜ್​ ಪ್ಲ್ಯಾನ್​ಗಳು ಹೇಗಿದೆ ಎಂಬುದು ಗೊತ್ತಿಲ್ಲ. ಹಾಗಿದ್ರೆ ಜಿಯೋ 5ಜಿ ಸೇವೆಯ ರೀಚಾರ್ಜ್​  ಪ್ಲ್ಯಾನ್​ಗಳ ಬಗ್ಗೆ ತಿಳಿಯಬೇಕಾದ್ರೆ ಈ ಲೇಖನವನ್ನು ಓದಿ.


  ಜಿಯೋ 239 ರೂಪಾಯಿಯ ಪ್ರೀಪೇಯ್ಡ್​ ರೀಚಾರ್ಜ್​ ಪ್ಲ್ಯಾನ್​


  ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ವ್ಯಾಲಿಡಿಟಿ ದಿನಗಳಲ್ಲಿ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಸೌಲಭ್ಯ ಪಡೆಯಬಹುದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42 ಜಿಬಿ ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ್​ಗೆ ಉಚಿತವಾಗಿ ಅನ್ಲಿಮಿಟೆಡ್​ ಕಾಲ್​ ಮಾಡಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ ಜಿಯೋ ಆ್ಯಪ್ಸ್​ಗಳ ಸೇವೆಯನ್ನು ಬಳಸಬಹುದು.


  ಇದನ್ನೂ ಓದಿ: ವಿವೋ ಕಂಪನಿಯಿಂದ 3 ರೀತಿಯ ಸ್ಮಾರ್ಟ್​ಫೋನ್​​ಗಳು ಮಾರುಕಟ್ಟೆಗೆ ಎಂಟ್ರಿ!


  ಜಿಯೋ 299 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​


  ಜಿಯೋದ ಈ 299 ರೂಪಾಯಿ ಪ್ಲ್ಯಾನ್​​ನಲ್ಲಿ ಪ್ರತಿದಿನ 2 ಜಿಬಿ ಡೇಟಾವನ್ನು ನಿರಂತರವಾಗಿ ಬಳಸಬಹುದು. ಹಾಗೆಯೇ ಜಿಯೋ ಟು ಜಿಯೋ ಕಾಲ್ ಮತ್ತು ಜಿಯೋದಿಂದ ಇತರೆ ನೆಟ್​ವರ್ಟ್​ ಹೊಂದಿದ ಟೆಲಿಕಾಂ ಸಿಮ್​ಗಳಿಗೆ ಅನ್ಲಿಮಿಟೆಡ್​ ಉಚಿತವಾಗಿ ಕಾಲ್ ಮಾಡಬಹುದಾಗಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56ಜಿಬಿ ಡೇಟಾ ಸಿಗಲಿದೆ.


  ಜಿಯೋ ಟೆಲಿಕಾಂ


  ಜಿಯೋ 479 ರೂಪಾಯಿ ಪ್ರೀಪೇಯ್ಡ್ ರೀಚಾರ್ಜ್​​ ಪ್ಲ್ಯಾನ್​ 


  ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋ ದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್‌ ಕರೆಗಳು ಸಹ  ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಮಾಡುವಂತಹ ಅವಕಾಶವಿದೆ


  ಜಿಯೋ 533 ರೂಪಾಯಿ ಪ್ರೀಪೇಯ್ಡ್​ ರೀಚಾರ್ಜ್​ ಪ್ಲ್ಯಾನ್​


  ಜಿಯೋ ಟೆಲಿಕಾಂನ 533 ರೂಪಾಯಿಯ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಸಮಯದಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆ ಮುಗಿಯುವ ಹೊತ್ತಿಗೆ ಒಟ್ಟು 112 GB ಡೇಟಾ ಸೌಲಭ್ಯ ಪಡೆಯಬಹುದು. ಹಾಗೆಯೇ ಅನ್ಲಿಮಿಟೆಡ್​ ಉಚಿತ ಕಾಲ್​ ಮಾಡುವಂತಹ ಸೌಲಭ್ಯವೂ ಇದರಲ್ಲಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಕೂಡ ಮಾಡಬಹುದಾಗಿದೆ.


  ಜಿಯೋ ಟೆಲಿಕಾಂ


  ಜಿಯೋ 1199 ರೂಪಾಯಿ ಪ್ರೀಪೇಯ್ಡ್ ರೀಚಾರ್ಜ್​​ ಪ್ಲ್ಯಾನ್​


  ಜಿಯೋ ಟೆಲಿಕಾಂನ 1199 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿಕೊಂಡಿದೆ. ಈ ಸಂದರ್ಭದಲ್ಲಿ ಗ್ರಾಹಕರು ಪ್ರತಿದಿನ 3 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದು. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನ್ಲಿಮಿಟೆಡ್​ ಉಚಿತವಾಗಿ ಕಾಲ್ ಮಾಡಬಹುದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು