• Home
  • »
  • News
  • »
  • tech
  • »
  • Tech Tips: ಹೊಸ ಹೆಡ್​​ಫೋನ್​ ತಗೋಬೇಕು ಅಂದ್ಕೊಂಡಿದ್ದೀರಾ? ಈ 5 ಪಾಯಿಂಟ್ಸ್​ ಬಗ್ಗೆ ಮೊದಲು ತಿಳಿದುಕೊಳ್ಳಿ!

Tech Tips: ಹೊಸ ಹೆಡ್​​ಫೋನ್​ ತಗೋಬೇಕು ಅಂದ್ಕೊಂಡಿದ್ದೀರಾ? ಈ 5 ಪಾಯಿಂಟ್ಸ್​ ಬಗ್ಗೆ ಮೊದಲು ತಿಳಿದುಕೊಳ್ಳಿ!

ಹೆಡ್​​ಫೋನ್ಸ್​

ಹೆಡ್​​ಫೋನ್ಸ್​

ಈ ಹೆಡ್​​ಫೋನ್​ನಂತಹ ಸ್ಮಾರ್ಟ್​​ ಡಿವೈಸ್​ಗಳಿಗೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಮಾರುಕಟ್ಟೆಗೆ ಸಾಕಷ್ಟು ಹೆಡ್​ಫೋನ್​ಗಳು ಬಿಡುಗಡೆಯಾಗಿವೆ. ಆದರೆ ಈ ಹೆಡ್​ಫೋನ್​ಗಳನ್ನು ಖರೀದಿ ಮಾಡಬೇಕಾದರೆ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮೂಲಕ ನಿಮಗೆ ಉತ್ತಮ ಗುಣಮಟ್ಟದ ಹೆಡ್​ಫೋನ್​ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​​ಫೋನ್​ಗಳು (Smartphones) ಅಗತ್ಯ ಸಾಧನವಾಗಿಬಿಟ್ಟಿದೆ. ಹೌದು ಆದರೆ ಇದರ ಜೊತೆಗೆ ಕೆಲವೊಂದು ಗ್ಯಾಜೆಟ್ಸ್​ಗಳು (Gadgets) ಕೂಡ ಅಗತ್ಯವಾದ ಸಾಧನದಂತಾಗಿದೆ. ಟೆಕ್​​ ಮಾರುಕಟ್ಟೆಯಲ್ಲಿ ಈ ಗ್ಯಾಜೆಟ್ಸ್​ಗಳಿಗೆ ಮಾತ್ರ ಎಲ್ಲಿಲ್ಲದ ಬೇಡಿಕೆ. ಹೆಡ್​ಫೋನ್ಸ್​ ಆಗಿರಬಹುದು, ಇಯರ್​ಫೋನ್​ಗಳು, ಸೌಂಡ್​ಬಾರ್​ಗಳು ಇವೆಲ್ಲವುಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಸಾಧನಗಳಾಗಿವೆ, ಇದಕ್ಕೆ ಮುಖ್ಯಕಾರಣ ಇದು ಹೊಂದಿರುವಂತಹ ಫೀಚರ್ಸ್​​ಗಳಂಆನೇ ಹೇಳ್ಬಹುದು. ಹಿಂದೆಲ್ಲಾ ಸ್ಮಾರ್ಟ್​​​ಫೋನ್​ಗಳ ಜೊತೆಗೆ ಒಂದು ಇಯರ್​ಫೋನ್​ಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವೈರ್​​​ ಜೊತೆ ಇದ್ದಂತಹ ಇಯರ್​ಫೋನ್​ಗಳು ಬದಲಾಗಿ ವೈರ್​ಲೆಸ್​​ ಹೆಡ್​ಫೋನ್​ಗಳಾಗಿದೆ (Wireless Headphone). ಇದು ಕೇವಲ ಬ್ಲೂಟೂತ್​ ಜೊತೆಗೆ ಕನೆಕ್ಟ್​ ಆಗುವ ಮೂಲಕ ಕಾರ್ಯನಿರ್ವಹಿಸುತ್ತದೆ.


    ಹೌದು, ಈ ಹೆಡ್​​ಫೋನ್​ನಂತಹ ಸ್ಮಾರ್ಟ್​​ ಡಿವೈಸ್​ಗಳಿಗೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಮಾರುಕಟ್ಟೆಗೆ ಸಾಕಷ್ಟು ಹೆಡ್​ಫೋನ್​ಗಳು ಬಿಡುಗಡೆಯಾಗಿವೆ. ಆದರೆ ಈ ಹೆಡ್​ಫೋನ್​ಗಳನ್ನು ಖರೀದಿ ಮಾಡಬೇಕಾದರೆ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮೂಲಕ ನಿಮಗೆ ಉತ್ತಮ ಗುಣಮಟ್ಟದ ಹೆಡ್​ಫೋನ್​ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.


    ಕನೆಕ್ಟಿವಿಟಿ ಆಯ್ಕೆಗಳನ್ನು ಗಮನಿಸಿ


    ಮುಖ್ಯವಾಗಿ ಯಾವುದೆ ವೈರ್​ಲೆಸ್​ ಹೆಡ್​ಫೋನ್​ಗಳನ್ನು ಖರೀದಿಸುವ ಮೊದಲು ಆ ಸಾಧನದ ಕನೆಕ್ಟಿಂಗ್​ ಫೀಚರ್ಸ್​​ ಅನ್ನು ನೋಡಿ. ಹೆಡ್​​ಫೋನ್​ಗಳು ಮುಖ್ಯವಾಗಿ ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​ ಎರಡಕ್ಕೂ ಕನೆಕ್ಟ್​ ಆಗುವಂತಹ ಫೀಚರ್​ ಅನ್ನು ಹೊಂದಿರಬೇಕು.




    ಇದರಿಂದ ನಿಮ್ಮ ಸ್ಮಾರ್ಟ್​​ಫೋನ್​ಗಳಿಗೆ ವೇಗವಾಗಿ ಬ್ಲೂಟೂತ್​ ಕನೆಕ್ಟಿಂಗ್​ ಫೀಚರ್​ ಅನ್ನು ಹೊಂದಿರಬೇಕು. ಜೊತೆಗೆ ಹೆಡ್​ಫೋನ್​ನಲ್ಲೇ ವಾಲ್ಯೂಮ್​ ಬಟನ್​ ಇರಬೇಕು. ಇದರಿಂದ ಪದೇ ಪದೇ ಮೊಬೈಲ್​​ ಅನ್ನು ಬಳಕೆ ಮಾಡುವ ಅಗತ್ಯವಿರುವುದಿಲ್ಲ. ಈ ಮೂಲಕ ಬೇಕಾದ ಸಂದರ್ಭದಲ್ಲಿ ನಮಗೆ ಸೌಂಡ್​ ವಾಲ್ಯೂಮ್​ಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.


    ಬ್ಯಾಟರಿ ಬ್ಯಾಕಪ್​ ಚೆಕ್​ ಮಾಡಿ


    ವೈರ್​ಲೆಸ್​ ಸಾಧನಗಳಿಗೆ ಅಗತ್ಯವಾಗಿ ಬೇಕಾದ ಫೀಚರ್​​ ಎಂದರೆ ಬ್ಯಾಟರಿ ಬ್ಯಾಕಪ್​. ಏಕೆಂದರೆ ವೈರ್​ಲೆಸ್​ ಸಾಧನಗಳನ್ನು ಒಮ್ಮೆ ಚಾರ್ಜ್​ ಮಾಡಿದ್ರೆ ಮತ್ತೆ ಹೊರಗಡೆ ಹೋದಾಗ ಚಾರ್ಜ್ ಮಾಡಲು ಅವಕಾಶವಿರುವುದಿಲ್ಲ ಅದಕ್ಕಾಗಿ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿರುವುದು ಅಗತ್ಯವಾಗಿದೆ.


    ಹೆಡ್​​ಫೋನ್ಸ್​


    ಹೆಡ್‌ಫೋನ್‌ಗೆ ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಪ್ಲೇ ಮೋಡ್‌ನಲ್ಲಿ ಕನಿಷ್ಠ ಸುಮಾರು 6-8 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಇದ್ದರೆ ಉತ್ತಮ. ಬ್ಯಾಟರಿ ಸಾಮರ್ಥ್ಯ ಅತ್ಯುತ್ತಮವಾಗಿರದಿದ್ದರೇ ಹೆಡ್‌ಫೋನ್‌ ಇದ್ದು ಇಲ್ಲದಂತಾಗಿ ಬಿಡುತ್ತದೆ. ಇನ್ನು ಚಾರ್ಜ್​ನಲ್ಲಿ ಲೈಟ್​ ಅಳವಡಿಕೆ ಇದ್ದರೆ ಚಾರ್ಜ್​ ಎಷ್ಟಿದೆ ಎಂಬುದನ್ನು ತಿಳಿಯಲು ಸಹಕಾರಿಯಾಗುತ್ತದೆ.


    ಆಡಿಯೋ ಫೀಚರ್ಸ್​


    ಹೆಡ್​​ಫೋನ್​ ಅನ್ನು ಖರೀದಿ ಮಾಡಬೇಕಾದರೆ ಅದರ ಗುಣಮಟ್ಟ ಹೇಗಿದೆ ಎಂಬುದನ್ನು  ತಿಳಿದುಕೊಳ್ಳಿ. ಸೌಂಡ್‌ಗೆ ಸಂಬಂಧಿಸಿದ ಕೆಲವು ಬೇಸಿಕ್ ಅಂಶಗಳಗನ್ನು ಚೆಕ್‌ ಮಾಡಿಕೊಳ್ಳಬೇಕು. ಖರೀದಿಸುವ ಹೆಡ್‌ಫೋನ್‌ನಲ್ಲಿ ಆಡಿಯೋ ಡ್ರೈವರ್‌ಗಳ ಸಾಮರ್ಥ್ಯ ಎಷ್ಟಿದೆ. ಡೈನಾಮಿಕ್ ಬಾಸ್‌ ಸೌಂಡ್‌ ಹೇಗಿದೆ. ಹೆಚ್‌ಡಿ ಕ್ವಾಲಿಟಿ ಸೌಂಡ್‌ ಫೀಚರ್‌ ಅನ್ನು ಒಳಗೊಂಡಿದೆಯಾ ಇಂತಹ ಫೀಚರ್ಸ್​ ಅನ್ನು ಮೊದಲು ಗಮನಿಸಿ. ಹೆಚ್​ಡಿ ಸೌಂಡ್​ ಮತ್ತು ಆಡಿಯೋ ಡ್ರೈವರ್ಸ್​​​ ಸಾಮರ್ಥ್ಯ ಹೆಚ್ಚಿದ್ದರೆ ನಿಮ್ಮ ಹೆಡ್​ಫೋನ್​ನ ಸೌಂಡ್​ನ ಗುಣಮಟ್ಟ ಸಹ ಉತ್ತಮವಾಗಿರುತ್ತದೆ.


    ವಿನ್ಯಾಸ ನೋಡಿಕೊಳ್ಳಿ


    ಇತ್ತೀಚಿನ ವೈರ್​ಲೆಸ್​ ಹೆಡ್​ಫೋನ್​ಗಳು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಾಗಿದೆ. ಅದೇ ರೀತಿ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಆದರೆ ಕೆಲವೊಂದು ಬಳಕೆದಾರರಿಗೆ ಅವರ ಕಿವಿಯ ಸೈಜ್​ಗೆ ತಕ್ಕಂತೆ ಹೆಡ್​ಫೋನ್​ಗಳು ಇದ್ದರೆ ಉತ್ತಮ. ಇಲ್ಲವಾದರೆ ಅದು ನಿಮಗೆ ಸೂಕ್ತವೆನಿಸುವುದಿಲ್ಲ. ಯಾರೇ ಆಗಲಿ ಹೆಡ್​ಫೋನ್​ಗಳನ್ನು ಕಾಲ್​ನಲ್ಲಿ ಮಾತನಾಡಲು, ಮ್ಯೂಸಿಕ್​ ಕೇಳಲು ಖರೀದಿಸುತ್ತಾರೆ. ಆದರೆ ಅದು ನಮ್ಮ ಕಿವಿಗೆ ಸರಿಯಾಗದಿದ್ದರೆ ಅದರಿಂದ ತುಂಬಾನೇ ಕಿರಿಕಿರಿಯಾಗುತ್ತದೆ. ಅದಕ್ಕಾಗಿ ವಿನ್ಯಾಸವನ್ನು ನೋಡಿಕೊಂಡು ಖರೀದಿ ಮಾಡಿ.


    ಇದನ್ನೂ ಓದಿ: ಏರ್​ಟೆಲ್​ ಗ್ರಾಹಕರಿಗೆ ಗುಡ್​ ನ್ಯೂಸ್! 2ಜಿಬಿ ಡೇಟಾ ಫ್ರೀ


    ಬೆಲೆಗೆ ತಕ್ಕಂತೆ ಡಿವೈಸ್ ಇರಲಿ 


    ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್​ ಬೆಲೆಯ ಹೆಡ್​ಫೋನ್​ಗಳು ಬಿಡುಗಡೆ ಆಗಿದೆ. ಆದರೆ ಎಲ್ಲವೂ ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿರುವುದಿಲ್ಲ. ಆದರೆ ಯಾವುದೇ ಹೆಡ್​ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಬೇಕಾದರೆ ಅದರ ಫೀಚರ್ಸ್​ಗೆ ತಕ್ಕಂತೆ ಬೆಲೆ ನಿಗದಿ ಮಾಡುತ್ತಾರೆ. ಅದೇ ರೀತಿ ಗ್ರಾಹಕರು ಕೂಡ ಖರೀದಿಸುವಾಗ ಈ ಫೀಚರ್ಸ್​​ಗಳನ್ನು ನೋಡಿಕೊಮಡು ಯೋಗ್ಯವಾದ ಬೆಲೆಯನ್ನು ಅದಕ್ಕೆ ನೀಡಿ.

    Published by:Prajwal B
    First published: