WhatsApp Plus ಬಳಕೆದಾರರೇ ಎಚ್ಚರ! ನಿಮ್ಮ ಮಾಹಿತಿ ಸೋರಿಕೆಯಾಗಿರಬಹುದು


Updated:April 5, 2018, 12:42 PM IST
WhatsApp Plus ಬಳಕೆದಾರರೇ ಎಚ್ಚರ! ನಿಮ್ಮ ಮಾಹಿತಿ ಸೋರಿಕೆಯಾಗಿರಬಹುದು

Updated: April 5, 2018, 12:42 PM IST
ಬೆಂಗಳೂರು (ಏ.05): ವಾಟ್ಸಾಪ್​ ಬಳಕೆದಾರರೆ, ನಿಮಗೆ ಯಾರಾದರೂ ಹೊಸ ಆವೃತ್ತಿಯ ವಾಟ್ಸಾಪ್​ ಎಂದು ಹೇಳಿ 'ವಾಟ್ಸಾಪ್​ ಪ್ಲಸ್'​ ಎಂಬ ಅಪ್ಲಿಕೇಶನ್​ ಬಳಸುವಂತೆ ಸೂಚಿಸಿದರೆ  ಈ ಅಪ್ಲಿಕೇಶನ್​ ಡೌನ್ ಲೋಡ್ ಮಾಡುವ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಏಕೆಂದರೆ ಕಳೆದ ಹಲವು ದಿನಗಳಿಂದ ವಾಟ್ಸಾಪ್​ ಪ್ಲಸ್​ ಎಂಬ ಎಪಿಕೆ ಪೈಲ್​ ಆಧಾರಿತ ಅಪ್ಲಿಕೇಶನ್​ ಇಂಟರ್​ನೆಟ್​ನಲ್ಲಿ ಯತೇಚ್ಛವಾಗಿ ಬಳಕೆಯಾಗುತ್ತಿದ್ದು, ಮೇಲ್ನೋಟಕ್ಕೆ ಈ ಅಪ್ಲಿಕೇಶನ್​ ಪ್ರಸಕ್ತ ಗೂಗಲ್​ ಪ್ಲೇಸ್ಟೋರ್​ನಲ್ಲಿ ದೊರೆಯುವ ವಾಟ್ಸಾಪ್​ಗಿಂತ ಕೊಂಚ ಭಿನ್ನತೆಯನ್ನು ಕಾಯ್ದುಕೊಂಡಿದೆ. ಆದರೆ ತಜ್ಱರ ಪ್ರಕಾರ ವಾಟ್ಸಾಪ್​ ಪ್ಲಸ್​ ವೈರಸ್​ ತುಂಬಿದ ಅಪ್ಲಿಕೇಶನ್​ ಆಗಿದ್ದು, ನಿಮ್ಮ ಖಾಸಾಗಿ ಮಾಹಿತಿಗೆ ಖನ್ನ ಹಾಕಬಹುದು ಎನ್ನಲಾಗಿದೆ.

ಮಾಲ್ವೇರ್​ಬೈಟ್​ ಲ್ಯಾಬ್​ ತಜ್ಱರ ಪ್ರಕಾರ ವಾಟ್ಸಾಪ್​ ಪ್ಲಸ್​​ ಅಪ್ಲಿಕೇಶನ್​ ಮೂಲ ವಾಟ್ಸಾಪ್​ನ ಫೀಚರ್​ ಹೊಂದಿದೆ, ಆದರೆ ಇದು ಪ್ಲೇ ಸ್ಟೋರ್​ನಲ್ಲಿ ಮಾತ್ರ ಲಭ್ಯವಿಲ್ಲ. ಈ ಅಪ್ಲಿಕೇಶನ್​ ಬಂಗಾರದ ಬಣ್ಣದಲ್ಲಿದ್ದು, ಒಂದು ಬಾರಿ ಇದನ್ನು ನೀವು ಡೌನ್​ಲೋಡ್ ಮಾಡಿಕೊಂಡಲ್ಲಿ ಸಂಪೂರ್ಣ ಖಾಸಗಿ ಮಾಹಿತಿಯೂ ಕೂಡ ಸೋರಿಕೆಯಾಗುವ ಸಂಭವವಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ನೀವು ಈಗಾಗಲೇ ಈ ಅಪ್ಲಿಕೇಶನ್​ ಬಳಸಿಕೊಳ್ಳುತ್ತಿದ್ದರೆ ಈ ಕೂಡಲೇ ವಾಟ್ಸಾಪ್​ ಪ್ಲಸ್​ನ್ನು ಅನ್​ ಇನ್ಸ್ಟಾಲ್​ ಮಾಡಿ ಎಂದು ತಜ್ಱರು ಸಲಹೆ ನೀಡಿದ್ದಾರೆ.
First published:April 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ