ಇದು ಟೆಕ್ನಾಲಜಿ (Technology) ಯುಗ. ದಿನ ಹೋದಂತೆ ಮಾರುಕಟ್ಟೆಗೆ ಹೊಸ ಹೊಸ ಮಾದರರಿ ಟೆಕ್ ಡಿವೈಸ್ಗಳು ಬರುತ್ತಲೇ ಇದೆ. ಈ ಮಧ್ಯೆ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು ಮಾರುಕಟ್ಟೆಯಲ್ಲಿ ವ್ಯಾಪಕವಾದ ಅಭಿವೃದ್ಧಿಯಲ್ಲಿರುವಾಗ, ಇವುಗಳ ಜೊತೆಗ ಇಯರ್ಬಡ್ಸ್ಗಳು ಸಹ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ. ಹಿಂದೆಲ್ಲಾ ಯಾವುದೇ ಮೀಟಿಂಗ್, ಸಿನಿಮಾ, ಹಾಡು ಕೇಳ್ಬೇಕು ಅಂದ್ರೆ ಇಯರ್ಫೋನ್ಗಳನ್ನು (Earphones) ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಇಯರ್ಬಡ್ಸ್ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದರ ವಿನ್ಯಾಸ, ಫೀಚರ್ಗಳಿಂದ ಮನಸೋತು ಗ್ರಾಹಕರು ಇಯರ್ಬಡ್ಸ್ಗಳನ್ನೇ ಖರೀದಿಸಲು ಮುಂದಾಗುತ್ತಾರೆ. ಆದರೆ ಕೆಲವೊಂದು ಇಯರ್ಬಡ್ಸ್ (Earbuds)ಗಳು ಬೆಲೆ ಹೆಚ್ಚಿದ್ದರು ಅದರ ಫೀಚರ್ಸ್ ಒಳ್ಳೆಯದಾಗಿರಲ್ಲ. ಆದರೆ ಖರೀದಿಸುವಾಗ ಗಮನಿಸಬೇಕಾದ ಕೆಲವೊಂದು ಅಂಶಗಳಿಗಳಿವೆ.
ಹೌದು, ಹೆಚ್ಚಿನ ಜನರು ಕೇವಲ ವಿನ್ಯಾಸಗಳನ್ನು ನೋಡಿ ಇಯರ್ಬಡ್ಸ್ಗಳನ್ನು ಖರೀದಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ಫೀಚರ್ಸ್ ನೋಡಿ ಖರೀದಿಸ್ಬೇಕೆಂದು ಗೊತ್ತೇ ಇರಲ್ಲ. ಆದರೆ ಈ ಫೀಚರ್ಸ್ ನೋಡಿಕೊಂಡು ಇಯರ್ಬಡ್ಸ್ ಅನ್ನು ಖರೀದಿಸಿದ್ರೆ ನೀವು ದೀರ್ಘಕಾಲ ಬಳಸಬಹುದು.
ಬ್ಯಾಟರಿ ಫೀಚರ್ಸ್
ಯಾರೇ ಆಗಲಿ ಇಯರ್ಬಡ್ಸ್ಗಳನ್ನು ಖರೀದಿಸುವಾಗ ನೋಡಬೇಕಾದ ಮುಖ್ಯ ವಿಷಯವೆಂದರೆ ಅದು ಬ್ಯಾಟರಿ ಫೀಚರ್ಸ್. ಹೆಚ್ಚಿನ ಇಯರ್ಬಡ್ಸ್ಗಳು 3 ರಿಂದ 10 ಗಂಟೆಯವರೆಗೂ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಆದರೆ ಕೆಲವೊಂದು ಇಯರ್ಬಡ್ಸ್ಗಳು ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನೇ ಹೊಂದಿರುವುದಿಲ್ಲ. ಆದ್ದರಿಂದು ಇಯರ್ಬಡ್ಸ್ ಅನ್ನು ಖರೀದಿಸುವಾಗ ಆ ಸಾಧನದ ಬ್ಯಾಟರಿ ಫೀಚರ್ಸ್ ಅನ್ನು ನೋಡ್ಕೊಂಡು ಖರೀದಿಸ್ಬೇಕು.
ಇದನ್ನೂ ಓದಿ: ಪೇಟಿಯಮ್ನಲ್ಲಿ ರೆಫರ್ ಆ್ಯಂಡ್ ವಿನ್ ಆಫರ್! ಐಫೋನ್, ಒನ್ಪ್ಲಸ್ ಸ್ಮಾರ್ಟ್ಫೋನ್ ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ
ನಾಯ್ಸ್ ಕ್ಯಾನ್ಸಲಿಂಗ್ ಫೀಚರ್
ಇನ್ನು ಇಯರ್ಬಡ್ಸ್ನಲ್ಲಿ ಕಾರ್ಯನಿರ್ವಹಿಸುವಂತಹ ಮುಖ್ಯ ಫೀಚರ್ ಎಂದರೆ ಅದು ನಾಯ್ಸ್ ಕ್ಯಾನ್ಸಲಿಂಗ್ ಫೀಚರ್. ಈ ಮೂಲಕ ಯಾವುದೇ ಮ್ಯೂಸಿಕ್ ಕೇಳುವಾಗ, ಕರೆಯಲ್ಲಿ ಮಾತನಾಡುವಾಗ ಯಾವುದೇ ಹೊಗಿನ ಸೌಂಡ್ ಕೇಳುವುದಿಲ್ಲ. ಯಾವುದೇ ಇಯರ್ಬಡ್ಸ್ ಖರೀದಿಸುವಾಗ ಈ ಫೀಚರ್ ಅನ್ನು ಮೊದಲು ನೋಡಿಕೊಳ್ಳುವುದು ಉತ್ತಮ. ಇದರಿಂದ ಯಾವುದೇ ಸಂದರ್ಭದಲ್ಲೂ ಉಪಯೋಗವೇ ಅಲ್ಲದೇ ಸಮಸ್ಯೆಗಳಾಗುವುದಿಲ್ಲ. ಆದ್ದರಿಂದ ಇಯರ್ಬಡ್ಸ್ಗಳನ್ನು ಖರೀದಸ್ಬೇಕಾದ್ರೆ ಈ ಫೀಚರ್ ಅನ್ನು ಮೊದಲು ನೋಡಿಕೊಳ್ಳಬೇಕು.
ಬ್ಲೂಟೂತ್ ಮಲ್ಟಿಪಾಯಿಂಟ್
ಈ ಫೀಚರ್ ಈಗಿನ ಕೆಲವೊಂದು ಇಯರ್ಬಡ್ಸ್ಗಳಲ್ಲಿ ಮಾತ್ರ ನಾವು ಕಾಣಬಹುದು. ಏಕೆಂದರೆ ಈ ಫೀಚರ್ ಮೂಲಕ ಏಕಕಾಲದಲ್ಲಿ ಎರಡು ಡಿವೈಸ್ಗಳಿಗೂ ಕನೆಕ್ಟ್ ಮಾಡಿಕೊಳ್ಳಬಹುದು. ಇದರಿಂದ ಸ್ಮಾರ್ಟ್ಫೋನ್ಗೆ ಕನೆಕ್ಟ್ ಆಗಿದ್ದಾಗ ಜೊತೆಗೆ ಲ್ಯಾಪ್ಟಾಪ್ಗಳಿಗೂ ಕನೆಕ್ಟ್ ಮಾಡಬಹುದು. ಈ ಫೀಚರ್ ನೀವು ಖರೀದಿಸುವ ಇಯರ್ಬಡ್ಸ್ನಲ್ಲಿದ್ದರೆ ಉತ್ತಮ.
ಚಾರ್ಜಿಂಗ್ ಪೋರ್ಟ್ ಗಮನಿಸಿ
ಯಾವುದೇ ಡಿವೈಸ್ ಆಗಲೀ ಚಾರ್ಜ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಇಯರ್ಬಡ್ಸ್ನಲ್ಲಿ ಬರುವಂತಹ ಚಾರ್ಜಿಂಗ್ ಕೇಸ್ಗಳನ್ನು ಯಾವ ಮಾದರಿಯಲ್ಲಿ ಚಾರ್ಜ್ ಮಾಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಆದ್ರಿಂದ ಇಯರ್ಬಡ್ಸ್ಗಳನ್ನು ಖರೀದಿಸುವಾ ಚಾರ್ಜಿಂಗ್ ಪೋರ್ಟ್ ಬಗ್ಗೆ ಗಮನಹರಿಸಬೇಕು. ಈಗಿನ ಸಾಧನಗಳಲ್ಲಿ ಹೆಚ್ಚಾಗಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದ್ದರೆ, ಕೆಲವು ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಬಳಸುತ್ತವೆ, ಆ್ಯಪಲ್ ಸಾಧನಗಳಲ್ಲಿ ಲೈಟ್ನಿಂಗ್ ಪೋರ್ಟ್ ಇರುತ್ತದೆ. ಹೀಗಾಗಿ, ನಮಗೆ ಯಾವುದು ಸೂಕ್ತವೋ ಆ ಸಾಧನವನ್ನು ಖರೀದಿಸಿದ್ರೆ ಉತ್ತಮ.
ಇನ್ನು ಈ ಎಲ್ಲಾ ಫೀಚರ್ಸ್ಗಳನ್ನು ಗಮನಿಸಿದ ನಂತರ ನೀವು ಇಯರ್ಬಡ್ಸ್ನ ವಿನ್ಯಾಸವನ್ನು ನೋಡ್ಬೇಕು. ಜೊತೆಗೆ ಬೆಲೆಯನ್ನು ನಿಗದಿ ಮಾಡ್ಬೇಕು. ಆದ್ದರಿಂದ ಇಯರ್ಬಡ್ಸ್ಗಳನ್ನು ಖರೀದಿಸುವಾ ಈ ಎಲ್ಲಾ ಟಿಪ್ಸ್ಗಳನ್ನು ಫಾಲೋ ಮಾಡಿದ್ರೆ ಗುಣಮಟ್ಟದ ಇಯರ್ಬಡ್ಸ್ ಅನ್ನು ಖರೀದಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ