Airtag: ಆ್ಯಪಲ್ ಏರ್​ಟ್ಯಾಗ್ ಬಳಸಿ ಐಷಾರಾಮಿ ಕಾರು ಕದ್ದ ಕಳ್ಳರು!

Apple Airtag: ಕೆನಡಾದ ಯಾರ್ಕ್ ಪ್ರಾದೇಶಿಕ ಪೊಲೀಸ್ ಆಟೋ / ಕಾರ್ಗೋ ಇಲಾಖೆಯು ಕಳ್ಳರು ಏರ್​ಟ್ಯಾಗ್​ ಬಳಸಿ ವಾಹನ ಕದಿಯುತ್ತಿದ್ದಾರೆ ಎಂಬ ಕುರಿತಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ. ಆ್ಯಪಲ್ ಬಳಕೆದಾರರು ಏರ್​ಟ್ಯಾಗ್​ ಮೂಲಕ ತಮ್ಮ ಕಳೆದುಹೋದ ವಸ್ತುಗಳನ್ನು ಆಪಲ್‌ನ ಫೈಂಡ್ ಮೈ ಆಪ್ ಸಹಾಯದಿಂದ ಕಂಡುಹಿಡಿಯಬಹುದಾಗಿದೆ. ಆದರೆ ಇದೇ ಮಾರ್ಗವನ್ನು ಕಳ್ಳರು ವಾಹನಕ್ಕೆ ಅಳವಡಿಸಿ ಕಳ್ಳತನ ಮಾಡುತ್ತಿದ್ದಾರೆ.

ಏರ್‌ಟ್ಯಾಗ್ /Airtag

ಏರ್‌ಟ್ಯಾಗ್ /Airtag

  • Share this:
    ಜನಪ್ರಿಯ ಕಂಪನಿ ಆ್ಯಪಲ್​ ಏರ್​ಟ್ಯಾಗ್​ (Apple Airtag) ಪರಿಚಯಿಸುವ ಮೂಲಕ ಕಳೆದ ಹೋಗುವ ವಸ್ತುಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಬ್ಲೂಟೂತ್ ಸಕ್ರಿಯಗೊಳಿಸಿದ ಈ ಸಾಧನವನ್ನು ಕೀಚೈನ್ (KeyChain) ಆಗಿ ಬಳಸಬಹುದು ಅಥವಾ ಪರ್ಸ್‌ನಲ್ಲಿ ಇರಿಸಬಹುದು. ಈ ಮೂಲಕ ಕಳೆದು ಹೋದ ಅಥವಾ ಮರೆತು ಹೋದ ವಸ್ತುಗಳನ್ನು ಐ​ಫೋನ್​ ಮೂಲಕ ಹುಡುಕಿಕೊಡಲು ಏರ್​ಟ್ಯಾಗ್​ ಸಹಾಯ ಮಾಡುತ್ತದೆ. ಆದರೀಗ ಕಳ್ಳರು ಕೂಡ ಏರ್​ಟ್ಯಾಗ್​ ಬಳಸುವ ಮೂಲಕ ಸುಲಭವಾಗಿ ವಾಹನ ಕದಿಯಲು ಯತ್ನಿಸುತ್ತಿದ್ದಾರೆ. ಅದರಂತೆ ಕಳ್ಳರು ಐಷಾರಾಮಿ ಕಾರೊಂದನ್ನು ಏರ್​ಟ್ಯಾಗ್​ ಬಳಸಿ ಎಗರಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಕೆನಡಾದ ಯಾರ್ಕ್ ಪ್ರಾದೇಶಿಕ ಪೊಲೀಸ್ ಆಟೋ / ಕಾರ್ಗೋ ಇಲಾಖೆಯು ಕಳ್ಳರು ಏರ್​ಟ್ಯಾಗ್​ ಬಳಸಿ ವಾಹನ ಕದಿಯುತ್ತಿದ್ದಾರೆ ಎಂಬ ಕುರಿತಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ. ಆ್ಯಪಲ್ ಬಳಕೆದಾರರು ಏರ್​ಟ್ಯಾಗ್​ ಮೂಲಕ ತಮ್ಮ ಕಳೆದುಹೋದ ವಸ್ತುಗಳನ್ನು ಆಪಲ್‌ನ ಫೈಂಡ್ ಮೈ ಆಪ್ ಸಹಾಯದಿಂದ ಕಂಡುಹಿಡಿಯಬಹುದಾಗಿದೆ. ಆದರೆ ಇದೇ ಮಾರ್ಗವನ್ನು ಕಳ್ಳರು ವಾಹನಕ್ಕೆ ಅಳವಡಿಸಿ ಕಳ್ಳತನ ಮಾಡುತ್ತಿದ್ದಾರೆ.

    ಐಷಾರಾಮಿ ಕಾರು ಕಳ್ಳತನ

    ಇತ್ತೀಚೆಗೆ ಯಾರ್ಕ್ ಪ್ರದೇಶದಲ್ಲಿ ಐದು ಕಳ್ಳತನಗಳು ನಡೆದಿದೆ. ಶಂಕಿತರು ಐಷಾರಾಮಿ ಕಾರನ್ನು ಕದಿಯಲು ಕಾರಿನಲ್ಲಿ ಏರ್‌ಟ್ಯಾಗ್‌ಗಳನ್ನು ಇರಿಸಿದ್ದರು. ಮಾಲ್‌ನಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ ಕಾರಿಗೆ ಏರ್​ಟ್ಯಾಗ್​ ಅಳವಡಿಸುತ್ತಾರೆ. ಕಾರು ಹೋದ ನಂತರ ಟ್ರ್ಯಾಕ್ ಮಾಡಿ ಕಳ್ಳತನ ಮಾಡುತ್ತಾರೆ.

    ಕಳ್ಳತನ ಹೇಗೆ ಮಾಡುತ್ತಾರೆ ಗೊತ್ತಾ?

    ಕಳ್ಳನು ಸ್ಕ್ರೂಡ್ರೈವರ್ ಅಥವಾ ಇತರ ಸಾಧನವನ್ನು ಬಳಸಿಕೊಂಡು ವಾಹನ ಬಾಗಿಲು ಅಥವಾ ಪ್ರಯಾಣಿಕರ ಬಾಗಿಲಿನ ಮೂಲಕ ಕಾರನ್ನು ಪ್ರವೇಶಿಸುತ್ತಾನೆ. ಕಳ್ಳನಿಗೆ ಕಾರಿನ ತಂತ್ರಗಾರಿಕೆಯ ಬಗ್ಗೆ ಬಹಳ ತಿಳುವಳಿಕೆ ಇರುವುದರಿಂದ ಅಲಾರಾಂ ಸದ್ದು ಮಾಡುವುದಿಲ್ಲ. ಕಳ್ಳನು ಕಾರನ್ನು ಪ್ರವೇಶಿಸಿದ ನಂತರ ಫ್ಯಾಕ್ಟರಿ ಸೆಟ್ಟಿಂಗ್‌ಗಳನ್ನು ಮೆಕ್ಯಾನಿಕ್ ಮೂಲಕ ಮರು ಪ್ರೋಗ್ರಾಮ್ ಮಾಡಲಾಗುತ್ತದೆ. ಇದು ಡ್ಯಾಶ್‌ಬೋರ್ಡ್‌ನ ಕೆಳಭಾಗದಲ್ಲಿರುವ ಆನ್‌ಬೋರ್ಡ್ ಡಯಾಗ್ನೋಸ್ಟಿಕ್ಸ್ ಪೋರ್ಟ್‌ಗೆ ಸಂಪರ್ಕ ಹೊಂದಿದೆ. ಕಳ್ಳನು ತನ್ನ ಕೀಲಿಯೊಂದಿಗೆ ಕಾರಿಗೆ ಪ್ರೋಗ್ರಾಂ ಮಾಡುತ್ತಾನೆ. ಕಳ್ಳನ ಕೀಲಿಯೊಂದಿಗೆ ಕಾರನ್ನು ಪ್ರೋಗ್ರಾಮ್ ಮಾಡಿದ ನಂತರ ಕಾರನ್ನು ಕದಿಯುತ್ತಾನೆ.

    ಇದನ್ನು ಓದಿ: Love Story: 77ರ ಅಜ್ಜನ ಪ್ರೀತಿಗೆ ಬಿದ್ದ 20ರ ಹುಡುಗಿ! ಪ್ಯಾರ್​ಗೆ​ ಆಗ್ಬುಟೈತೆ!

    ಯಾರ್ಕ್ ಪ್ರಾದೇಶಿಕ ಪೊಲೀಸ್ ಆಟೋ ಮತ್ತು ಕಾರ್ಗೋ ಥೆಫ್ಟ್ ಘಟಕವು ಕಾರು ಕಳ್ಳರನ್ನು ನಿರಂತರವಾಗಿ ಹುಡುಕುತ್ತಿದೆ ಎಂದು ಹೇಳಿಕೊಂಡಿದೆ. ಕಳ್ಳರು ಸುಲಭವಾಗಿ ಕದಿಯಲು ವಿವಿಧ ತಂತ್ರಗಳನ್ನು ಬಳಸುತ್ತಾರೆ. ಕಾರು ಕಳ್ಳತನ ತಡೆಯಲು ಆ್ಯಪಲ್ ಏರ್ ಟ್ಯಾಗ್ ಬಳಸಬಹುದು ಎಂದು ಪೊಲೀಸರು ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ.



    ಕಾರು ಕಳ್ಳತನವಾಗುವುದನ್ನು ತಡೆಯುವುದು ಹೇಗೆ?

    - ಕಾರನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ, ಯಾರಿಗೂ ಗೊತ್ತಾಗದ ಜಾಗದಲ್ಲಿ ಏರ್​ಟ್ಯಾಗ್​ ಇರಿಸಿ

    - ಕಾರು ನಿಲ್ಲಿಸುವಾಗ ಸ್ಟೀರಿಂಗ್ ವೀಲ್ ಲಾಕ್ ಬಳಸಿ ಅಥವಾ ಎಚ್ಚರಿಕೆ ವ್ಯವಸ್ಥೆಯೊಂದಿಗೆ ಕ್ಯಾಮೆರಾವನ್ನು ಸ್ಥಾಪಿಸಿ.

    - ಕಾರನ್ನು ನಿಯಮಿತವಾಗಿ ಬಳಸಬೇಕು.

    - ಕಾರಿನಲ್ಲಿ ಯಾವುದೇ ಅನುಮಾನಾಸ್ಪದ ಸಾಧನ ಕಂಡುಬಂದರೆ, ತಕ್ಷಣ ಪೊಲೀಸರನ್ನು ಸಂಪರ್ಕಿಸಿ.

    ಏರ್​ಟ್ಯಾಗ್​ ಬಳಸಿ ಕಾರು ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದರು, ಆ್ಯಪಲ್ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಏರ್‌ಟ್ಯಾಗ್ ಮೂಲಕ ಚೇಸಿಂಗ್ ಮಾಡುವುದನ್ನು ತಡೆಯಲು ಕಂಪನಿಯು ಕೆಲವು ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದೆ. ಇಂತಹ ಘಟನೆಗಳನ್ನು ತಡೆಯಲು ಏರ್‌ಟ್ಯಾಗ್ ವಿರೋಧಿ ಸ್ಟಾಕಿಂಗ್ ಕಾರ್ಯವನ್ನು ಒಳಗೊಂಡಿದೆ.

    ಇದನ್ನು ಓದಿ: ಬರೀ 17 ಸಾವಿರಕ್ಕೆ BMW ಬೈಕ್​ ಖರೀದಿಸಬಹುದು, ಹೀಗೆ ಮಾಡಿದ್ರೆ ಸಾಕು ನೋಡಿ

    ಐಫೋನ್ ಬಳಕೆದಾರರ ಸುತ್ತಲೂ ಏರ್‌ಟ್ಯಾಗ್ ಇದ್ದಾಗ, ಅದನ್ನು ಐಫೋನ್ ಬಳಕೆದಾರರಿಗೆ ವರದಿ ಮಾಡಲಾಗುತ್ತದೆ. ಐಷಾರಾಮಿ ಕಾರಿನ ಮಾಲೀಕರು ಐಫೋನ್ ಹೊಂದಿಲ್ಲದಿದ್ದರೂ ಅಥವಾ ಆಪಲ್ ಫೈಂಡ್ ಮೈ ಅಪ್ಲಿಕೇಶನ್‌ನ ಅಧಿಸೂಚನೆಯನ್ನು ತಪ್ಪಿಸಿದ್ದರೂ ಸಹ, ಕಾರು ಕಳ್ಳತನವಾಗುವ ಸಾಧ್ಯತೆಯಿದೆ.
    Published by:Harshith AS
    First published: