ಇತ್ತೀಚೆಗೆ ಸ್ಮಾರ್ಟ್ಫೋನ್ಗಳು (Smartphones) ಎಲ್ಲರ ಅಗತ್ಯ ಸಾಧನವಾಗಿಬಿಟ್ಟಿದೆ. ಅದ್ರಲ್ಲೂ ಐಫೋನ್‌ಗಳು ಮಾತ್ರ ಎಲ್ಲರ ಬೇಡಿಕೆಯ ಸ್ಮಾರ್ಟ್ಫೋನ್ಗಳಾಗಿದೆ. ಹೆಚ್ಚಿನ ಜನರಿಗೆ ಜೀವನದಲ್ಲಿ ಒಮ್ಮೆಯಾದರೂ ಐಫೋನ್ (IPhone) ಖರೀದಿ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಇದರ ಬೆಲೆ ದುಬಾರಿಯಾಗಿರುವುದಿಂದ ಐಫೋನ್ಗಳನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈಗಾಗಲೆ ಐಫೋನ್ ಹೊಂದಿರುವವರಿಗೆ ಶಾಕ್ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ. ಆ್ಯಪಲ್ ಡಿವೈಸ್‌ಗಳನ್ನು (Apple Device) ಖರೀದಿ ಮಾಡಿದರೆ ನಿಮ್ಮ ಡೇಟಾ ಹಾಗೂ ಇನ್ನಿತರೆ ಖಾಸಗಿ ಮಾಹಿತಿಗಳು ಸೇಫ್ ಎಂದು ನೀವು ಅಂದುಕೊಂಡಿರಬಹುದು. ಆದರೆ, ಇದು ಈಗ ಸುಳ್ಳಾಗಿದೆ. ಯಾಕೆಂದರೆ ಇಲ್ಲೋರ್ವ ಐಫೋನ್ ಬಳಕೆದಾರರು ಬರೋಬ್ಬರಿ 8 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಐಫೋನ್‌ಗಳು ಅದರ ವಿನ್ಯಾಸಕ್ಕೆ ಮತ್ತು ಫೀಚರ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಆದರೆ ಇಲ್ಲೊಬ್ಬರು ಮಹಿಳೆ ಐಫೋನ್ನಿಂದ ತಮ್ಮ ಡೇಟಾ ಎಲ್ಲವನ್ನು ಕಳೆದುಕೊಂಡಿದ್ದಾರೆ.
ಈ ಘಟನೆ ನಡೆದ ಸ್ಥಳ
ಇನ್ನು ಈ ಘಟನೆ ನಡೆದದ್ದು ಅಮೆರಿಕಾದ ಮಿಡ್ಟೌನ್ ಮ್ಯಾನ್ಹ್ಯಾಟನ್ನಲ್ಲಿ. ರೆಹಾನ್ ಅಯಾಸ್ ಎಂಬ ಮಹಿಳೆ ಬಾರ್‌ನಲ್ಲಿ ಥ್ಯಾಂಕ್ಸ್‌ಗಿವಿಂಗ್ ವಾರಾಂತ್ಯವನ್ನು ಆಚರಿಸುವ ವೇಳೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಈ ಸಂದರ್ಭದಲ್ಲಿ ರೆಹಾನ್ ಅಯಾಸ್ ಅವರ ಐಫೋನ್ 13 ಪ್ರೋ ಮ್ಯಾಕ್ಸ್ ಅನ್ನು ಓರ್ವ ಕಳ್ಳ ಕದ್ದಿದ್ದಾನೆ. ಬಳಿಕ ಆಕೆಯ ಬ್ಯಾಂಕ್‌ನಿಂದ USD 10,000 ಗಳನ್ನು ದೋಚಿದ್ದಾನೆ. ಇದು ಭಾರತದಲ್ಲಿ 8 ಲಕ್ಷ ರೂಪಾಯಿಯನ್ನು ಹೊಂದಿದೆ.
ಇದನ್ನೂ ಓದಿ: ಈ ಆ್ಯಪ್ ಮೂಲಕ ಇನ್ಮುಂದೆ ಮನೆಯಿಂದಲೇ ವೈದ್ಯರ ಸಲಹೆ ಪಡೆಯಿರಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸಿಮ್ ಬ್ಲಾಕ್ ಮಾಡಿದ ಮಹಿಳೆ
ಸಾಮಾನ್ಯವಾಗಿ ಯಾರೇ ಆಗಲಿ ಮೊಬೈಲ್ ಕಳೆದುಕೊಂಡರೆ ಮೊದಲು ಸಿಮ್ ಬ್ಲಾಕ್ ಮಾಡುತ್ತಾರೆ. ಹಾಗೆಯೇ ಇನ್ನೂ ಕೆಲವು ಮಾರ್ಗಗಳ ಮೂಲಕ ಮೊಬೈಲ್ ಅನ್ನು ಬ್ಲಾಕ್ ಮಾಡಲು ಮುಂದಾಗುತ್ತಾರೆ. ಇದೇ ಮಾದರಿಯಲ್ಲಿ ವರ್ಕ್‌ಫೋರ್ಸ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ನಲ್ಲಿ ಹಿರಿಯ ಅರ್ಥಶಾಸ್ತ್ರಜ್ಞೆಯಾಗಿ ಕೆಲಸ ಮಾಡುವ ಈ ಮಹಿಳೆ ಸಹ ಪ್ರಯತ್ನಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಕೆಗೆ ತನ್ನ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವೇ ಆಗಲಿಲ್ಲ.
ಬ್ಯಾಂಕ್‌ನಿಂದ 8 ಲಕ್ಷ ಹಣ ಡೆಬಿಟ್
ಇನ್ನು ರೆಹಾನ್ ಅಯಾಸ್ ಅವರು ಆ ಫೋನ್ ನಲ್ಲಿ ಹಲವಾರು ಫೋಟೋಗಳು ಹಾಗೂ ಬ್ಯಾಂಕ್ ವಿವರಗಳನ್ನು ಸೇವ್ ಮಾಡಿ ಇಟ್ಟಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಏನೂ ಮಾಡಲು ಸಾಧ್ಯವಾಗದಿದ್ದಾಗ ಹಾಗೇ ಸುಮ್ಮನಾಗಿದ್ದಾರೆ. ಇದಾದ 24 ಗಂಟೆಗಳಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ ಸುಮಾರು USD 10,000 ಡೆಬಿಟ್ ಆಗಿದೆ. ಇನ್ನು ಈ ಬಗ್ಗೆ ಬಂದು ಮೆಸೇಜ್ ನಿಂದ ಅಯಾಸ್ ಅವರು ಬೆಚ್ಚಿ ಬಿದ್ದಿದ್ದಾರೆ.
ಏನಾಯ್ತು?
ಸಾಮಾನ್ಯವಾಗಿ ಐಫೋನ್‌ಗಳು ಕಳ್ಳತನವಾದಾಗ ಈ ರೀತಿಯ ಹಲವಾರು ಪ್ರಕರಣಗಳು ಜರುಗುತ್ತವೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಫೋನ್ ಅನ್ನು ಕದಿಯಲು ಕಳ್ಳರು ಯಾವಾಗ ಹೊಂಚು ಹಾಕುತ್ತಾರೋ ಆ ವೇಳೆ ಬಳಕೆದಾರರು ಯಾವೆಲ್ಲಾ ಪಾಸ್‌ವರ್ಡ್‌ಗಳನ್ನು ಎಂಟ್ರಿ ಮಾಡುತ್ತಾರೆ ಎಂದು ಸಹ ಅವರು ಗಮನಿಸುತ್ತಿರುತ್ತಾರೆ. ಇವೆಲ್ಲವನ್ನು ಗಮನಿಸಿದ ನಂತರ ಅವರು ತಕ್ಷಣ ಮೊಬೈಲ್ ಕದ್ದು, ನಿಮ್ಮ ಮೊಬೈಲ್ಗೆ ಲಾಗಿನ್ ಆಗುತ್ತಾರೆ.
ಲಾಗಿನ್ ಆದ ನಂತರದಲ್ಲಿ ಕಳ್ಳರು ಪಾಸ್‌ವರ್ಡ್ ಅನ್ನು ಬದಲಾಯಿಸಲು ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಇದು ಬದಲಾವಣೆ ಮಾಡಲು ತುಂಬಾ ಸುಲಭ ಆದರೆ ಫೋನ್ ಕಳೆದುಕೊಂಡವರು ಮಾತ್ರ ಪರದಾಡುತ್ತಿರುತ್ತಾರೆ. ಇನ್ನು ಈ ಸಂದರ್ಭದಲ್ಲಿ ಫೋನ್ ಕಳೆದುಕೊಂಡವರಿಗೆ ಯಾವುದೇ ರೀತಿಯಲ್ಲಿ ತಮ್ಮ ಮೊಬೈಲ್ಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಇವೆಲ್ಲಾ ಆದ ನಂತರ ಕಳ್ಳರು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಲು ಮುಂದಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ