ವಾಟ್ಸಾಪ್​ ಹ್ಯಾಂಗ್​ ಮಾಡುವ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ!


Updated:May 8, 2018, 1:16 PM IST
ವಾಟ್ಸಾಪ್​ ಹ್ಯಾಂಗ್​ ಮಾಡುವ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ!
Men pose with smartphones in front of displayed Whatsapp logo in this illustration September 14, 2017. REUTERS/Dado Ruvic

Updated: May 8, 2018, 1:16 PM IST
ನ್ಯೂಯಾರ್ಕ್: ತಂತ್ರಜ್ಞಾನ ಬೆಳೆದಂತೆ ದಿನಕ್ಕೊಂದು ಅಪ್​ಡೇಟ್​ಗಳು, ಹೊಸ ಹೊಸ ಬಗ್ಸ್​ಗಳು ಇದಕ್ಕೊಂದು ಪರಿಹಾರ, ಹೀಗೇ ದಿನಕ್ಕೊಂದು ಬದಲಾವಣೆ ಆಗುತ್ತಲೇ ಇರುತ್ತವೆ. ಇದಕ್ಕೆ ಪೂರಕದಂತೆ ಇತ್ತೀಚೆಗೆ ವಾಟ್ಸಾಪ್​ನಲ್ಲಿ ಹ್ಯಾಂಗ್​ ಮಾಡುವಂತಹ ಮೆಸೇಜ್​ ವೈರಲ್​ ಆಗಿದೆ.

ಕಳೆದ ಕೆಲ ದಿನಗಳಿಂದ “If you touch the black point then your WhatsApp will hang” ಎಂಬ ಮೆಸೇಜ್​ನೊಂದಿಗೆ ಕಪ್ಪು ಚುಕ್ಕಿಯ ಮೆಸೇಜ್​ ಫಾರ್ವರ್ಡ್​ ಆಗುತ್ತಿದೆ. ಒಂದು ವೇಳೆ ಈ ಚುಕ್ಕೆಯನ್ನು ಒತ್ತಿದರೆ ನಿಮ್ಮ ಮೊಬೈಲ್​ ಹ್ಯಾಂಗ್​ ಆಗುತ್ತದೆ. ಈ ಮೆಸೇಜ್​ಗೆ ಪೂರಕವೆಂಬಂತೆ ಚೆಂಡಿನ ಎಮೊಜಿ ಹಾಕಿರುವ ಮೆಸೇಜ್​ ಕೂಡಾ ಇದೇ ರೀತಿ ಹ್ಯಾಂಗ್​ ಮಾಡುತ್ತದೆ. ಮಾಹಿತಿಗಳ ಪ್ರಕಾರ ಟೆಕ್ಕಿಗಳು ಈ ಸಮಸ್ಯೆಗೆ ಕಾರಣ ಹುಡುಕಿದ್ದು ಮೊಬೈಲ್​ ಹ್ಯಾಂಗ್​ ಆಗಲು ಈ ಮೆಸೇಜ್​ಗಳಲ್ಲಿ ಆರ್​ಎಲ್​ಎಮ್​ ಅಥವಾ ASCII ಎಂಬ ಕೋಡ್​ ಬಳಕೆ ಮಾಡಿರುವುದು.

ಈ ಎಮೊಜಿ ಅಥವಾ ಕಪ್ಪು ಚುಕ್ಕೆಯಲ್ಲಿ ಕೋಡರ್​ಗಳು ಸಹಸ್ರಾರು ಪದಗಳನ್ನು ASCIIಗೆ ಕನ್ವರ್ಟ್​ ಮಾಡಿ ದಾಖಲು ಮಾಡಿರುತ್ತಾರೆ. ಬಳಿಕ ಈ ಮೆಸೇಜ್​ನನ್ನು ಸಾಮಾಜಿ ಜಾಲತಾಣದಲ್ಲಿ ಹರಿಬಿಡುತ್ತಾರೆ. ಮೆಸೇಜ್​ ಓದಿ ಬಳಿಕ ಈ ಕಪ್ಪು ಚುಕ್ಕೆಯನ್ನು ಒತ್ತಿದರೆ ಅದು ಎಕ್ಸ್​ಪೋರ್ಟ್​ ಆಗಲು ಮುಂದಾಗುತ್ತದೆ. ಈ ವೇಳೆ ವಾಟ್ಸಾಪ್​ ಹ್ಯಾಂಗ್​ ಆಗಬಹುದು.

ಇದರೊಂದಿಗೆ ಚೆಂಡಿನ ಎಮೊಜಿ ಹಾಗೂ ನಗುವ ಚಿತ್ರವಿರುವ ಮೆಸೇಜ್​ ಕೂಡಾ ವೈರಲ್​ ಆಗಿದೆ. ಸದ್ಯ ಈ ಮೆಸೇಜ್​ಗಳು​ ಆಂಡ್ರಾಯ್ಡ್​ ಮತ್ತು ಆ್ಯಪಲ್​ ಆಪರೇಟಿಂಗ್​ ಸಿಸ್ಟಂಗಳಲ್ಲಿ ಹೆಚ್ಚು ವೈರಲ್​ ಆಗಿದೆ. ಇದೀಗ ಎಲ್ಲಾ ತಂತ್ರಜ್ಞರು ಇದಕ್ಕೆ ಪರಿಹಾರ ಕಂಡು ಹುಡುಕಲು ಮುಂದಾಗಿದ್ದಾರೆ.

 

 
First published:May 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626