HOME » NEWS » Tech » THESE WEBSITES SELL USED OLD SMARTPHONES ONLINE BEST PRICE HG

ಹಳೆಯ ಸ್ಮಾರ್ಟ್​ಫೋನನ್ನು ಉತ್ತಮ ಬೆಲೆಗೆ​ ಮಾರಾಟ ಮಾಡಲು ಯಾವ ವೆಬ್​ಸೈಟ್​ ಬೆಸ್ಟ್​?

ಹಳೆಯ ಫೋನ್​ ಮಾರಾಟ ಮಾಡಲು ನಾನಾ ವೆಬ್​ಸೈಟ್​​ಗಳಿವೆ ಅದರ ಮೂಲಕ ಸರಿಯಾದ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

news18-kannada
Updated:March 31, 2021, 8:40 AM IST
ಹಳೆಯ ಸ್ಮಾರ್ಟ್​ಫೋನನ್ನು ಉತ್ತಮ ಬೆಲೆಗೆ​ ಮಾರಾಟ ಮಾಡಲು ಯಾವ ವೆಬ್​ಸೈಟ್​ ಬೆಸ್ಟ್​?
Realme GT 5G smartphone
  • Share this:
ಹೊಸ ವಿನ್ಯಾಸ, ವಿಶೇಷತೆಯನ್ನು ಒಳಗೊಂಡಿರುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಧಾವಿಸುತ್ತಿರುತ್ತದೆ. ಕ್ಯಾಮರಾ, ಬ್ಯಾಟರಿ, ಫೀಚರ್​ ವಿಷಯದಲ್ಲಿ ಒಂದಕ್ಕೊಂದು ವಿಭಿನ್ನವಾಗಿರುತ್ತದೆ. ಇದನ್ನು ಗಮನಿಸಿ ಆಯಾ ಸಮಯಕ್ಕೆ ಗ್ರಾಹಕರು ಇಷ್ಟದ ಸ್ಮಾರ್ಟ್​ಫೋನ್ ಖರೀದಿಸುತ್ತಾರೆ.

ಕೆಲವರಿಗಂತೂ ಹೊಸ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಪ್ರವೇಶಿಸಿದರೆ ಸಾಕು ಮೊದಲು ತಾನೇ ಖರೀದಿಸಬೇಕೆಂಬ ಹಂಬಲವಿರುತ್ತದೆ. ಹಾಗಾಗಿ ನೂತನ ಫೋನನ್ನು ಖರೀದಿಸುತ್ತಾರೆ. ಹೀಗೆ ಖರೀದಿಸಿದಾಗ ಹಳೆಯ ಸ್ಮಾರ್ಟ್​ಫೋನ್​ ಗತಿಯೇನು?. ಕೆಲವರು ಹೊಸ ಫೋನ್ ಬಂದಾಗ ಹಳೆಯ ಫೋನನ್ನು ಮಾರಾಟ ಮಾಡಲು ಮುಂದಾಗುತ್ತಾರೆ.

ಇನ್ನು ಕೆಲವರಿಗೆ ಹಳೆಯ ಫೋನನ್ನು ಹೇಗೆ ಮಾರಾಟ ಮಾಡಬೇಕು? ಅದಕ್ಕೆ ಬೆಲೆ ಎಷ್ಟು ಸಿಗಬಹುದು? ಎಂಬ ಅಂದಾಜು ಸಹ ಇರುವುದಿಲ್ಲ. ಹಾಗಾಗಿ ಸಿಕ್ಕ ಸಿಕ್ಕವರಲ್ಲಿ ಕೇಳಿ ಕೊನೆಗೆ ಕಡಿಮೆ ಹಣಕ್ಕೆ ಮಾರಾಟ ಮಾಡಿ ಬಿಡುತ್ತಾರೆ. ಆದರೆ ಹಾಗೆ ಮಾಡುವ ಬದಲು ಅದಕ್ಕೆ ಸೂಕ್ತವಾದ ಬೆಲೆಯೊಂದಿಗೆ ಮಾರಾಟ ಮಾಡಬಹುದಾಗಿದೆ.

ಹಳೆಯ ಫೋನ್​ ಮಾರಾಟ ಮಾಡಲು ನಾನಾ ವೆಬ್​ಸೈಟ್​​ಗಳಿವೆ ಅದರ ಮೂಲಕ ಸರಿಯಾದ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಯಂತ್ರ

ಹಳೆಯ ಸ್ಮಾರ್ಟ್​ಫೊನ್​ ಮಾರಾಟ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ. http://www.yaantra.com/ ಮೂಲಕ ಎಲೆಕ್ಟ್ರಾನಿಕ್​ ಗ್ಯಾಜೆಟ್​ ಮಾರಾಟ ಮಾಡಬಹುದಾಗಿದೆ.

ಕ್ಯಾಶಿಫೈಹಳೆಯ ಗ್ಯಾಜೆಟ್​ಗಳನ್ನು ನಿರ್ದಿಷ್ಟ ಮೊತ್ತಕ್ಕೆ ಮಾರಾಟ ಮಾಡಲು ಕ್ಯಾಶಿಫೈ ವೇದಿಕೆ ಸೃಷ್ಟಿಸಿದೆ.  https://www.cashify.in/ ಮೂಲಕ ಮಾರಾಟ ಮಾಡಬಹುದಾಗಿದೆ. ಸ್ಮಾರ್ಟ್​ಫೋನ್​ ಮಾತ್ರವಲ್ಲದೆ, ಟಿವಿ, ಲ್ಯಾಪ್​ಟಾಪ್​ ಮುಂತಾದವುಗಳನ್ನಿ ಇಲ್ಲಿ ಸೇಲ್​ ಮಾಡಬಹುದು.

ಇನ್​​ಸ್ಟಾಕ್ಯಾಶ್​​

ಇದರ ಮೂಲಕ ಹಳೆಯ ಸ್ಮಾರ್ಟ್​ಫೋನನ್ನು ಮಾರಾಟ ಮಾಡಬಹುದು. ಆದರೆ ಅದಕ್ಕೂ ಮೊದಲಿಗೆ https://getinstacash.in/ ಲಾಗ್​ ಇನ್​​ ಆಗುವ ಮೂಲಕ ವಿವರವನ್ನು ನಮೂದಿಸಬೇಕು. ನಂತರ ಕಂಪನಿ ನೌಕಕರು ಮನೆಯ ಬಂದು ಗ್ಯಾಜೆಟ್​ ಸಂಗ್ರಹಿಸುತ್ತಾರೆ. ನಂತರ ಅದರಲ್ಲಿ ನಿಮ್ಮ ಹೆಸರನ್ನು ನಮೂದಿಸಿದಾಗ ತಕ್ಷಣವೇ ಇನ್​ಸ್ಟಾಕ್ಯಾಶ್​ ಹಣವನ್ನು ನೀಡುತ್ತದೆ.

ಕರ್ಮರಿಸೈಕ್ಲಿಂಗ್​

ಅನೇಕರು ಹಳೆಯ ಸ್ಮಾರ್ಟ್​ಫೋನ್​ ಮಾರಾಟ ಮಾಡಲು ಸೂಕ್ತವಾದ ವೇದಿಕೆ ಹುಡುಕುತ್ತಿದ್ದಾರೆ. ಆದರೆ ಅವರಿಗೆ http://www.karmarecycling.in/contact-us.php ಉತ್ತಮ ಆಯ್ಕೆಯಾಗಿದೆ. ಇದರ ಮೂಲಕ ಹಳೆಯ ಗ್ಯಾಜೆಟ್ ವಸ್ತುಗಳನ್ನು ಸೇಲ್​ ಮಾಡಬಹುದಾಗಿದೆ. ಈಗಾಗಲೇ ಬಹುತೇಕರು ಈ ವೆಬ್​ಸೈಟ್​ ಬಳಸುವ ಮೂಲಕ ತಮ್ಮ ಗ್ಯಾಜೆಟ್​ಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ.
Published by: Harshith AS
First published: March 31, 2021, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories