ಮಳೆಗಾಲದಲ್ಲಿ ನಿಮ್ಮ ಗ್ಯಾಜೆಟ್‍ಗಳನ್ನು ರಕ್ಷಿಸುತ್ತವೆ ಈ ಹೊಸ ಪರಿಕರಗಳು..!

ಬೇಸಿಗೆ ಕಾಲ, ಚಳಿಗಾಲದಲ್ಲಿ ಹೊರಗೆ ಹೋದ ಸಂದರ್ಭದಲ್ಲಿ ಅಥವ ಇನ್ನಿತರೆ ವೇಳೆ ಗ್ಯಾಜೆಟ್​ಗಳನ್ನು ಸಂರಕ್ಷಿಸುವುದು ಕಷ್ಟಕರವೆನಿಸುವುದಿಲ್ಲ. ಆದರೆ ಮಳೆಗಾಲ ಹಾಗಲ್ಲ. ಗ್ಯಾಜೆಟ್​ಗಳ ಕಾಳಜಿ ಮಾಡಲೇಬೇಕು. ಹಾಗಾಗಿ ಇವುಗಳ ಸಂರಕ್ಷಣೆಗೆಂದು ಕೆಲವು ಹೊಸ ಉತ್ಪಾದಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಪ್ರತಿನಿತ್ಯ ಗ್ಯಾಜೆಟ್ ಗಳನ್ನು ಬಳಕೆ ಮಾಡುತ್ತಲೇ ಇರುತ್ತೇವೆ. ಒಂದಲ್ಲ ಒಂದು ಗ್ಯಾಜೆಟ್​ನ ದಾಸರಾಗಿರುವ ನಾವು ಅವುಗಳನ್ನು ಕೆಲವೊಮ್ಮೆ  ಹೋದಲೆಲ್ಲ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ನಮಗೆ ಬೇಕಾದ ಗ್ಯಾಜೆಟ್​ಗಳನ್ನು ಪ್ರತಿದಿನ ಮನೆಯಲ್ಲಿ ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ. ಸಂದರ್ಭಕ್ಕನುಗುಣವಾಗಿ ಅದನ್ನು ಬಳಕೆ ಮಾಡಲೇಬೇಕಾಗುತ್ತದೆ. ಬೇಸಿಗೆ ಕಾಲ, ಚಳಿಗಾಲದಲ್ಲಿ ಹೊರಗೆ ಹೋದ ಸಂದರ್ಭದಲ್ಲಿ ಅಥವಾ ಇನ್ನಿತರೆ ವೇಳೆ ಗ್ಯಾಜೆಟ್​ಗಳನ್ನು ಸಂರಕ್ಷಿಸುವುದು ಕಷ್ಟಕರವೆನಿಸುವುದಿಲ್ಲ. ಆದರೆ ಮಳೆಗಾಲ ಹಾಗಲ್ಲ. ಗ್ಯಾಜೆಟ್​ಗಳ ಕಾಳಜಿ ಮಾಡಲೇಬೇಕು. ಹಾಗಾಗಿ ಇವುಗಳ ಸಂರಕ್ಷಣೆಗೆಂದು ಕೆಲವು ಹೊಸ  ಪ್ರಾಡಕ್ಟ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ಅಂದರೆ ಕೆಲವು ವಾಟರ್‌ ಪ್ರೂಫ್‌ ಗ್ಯಾಜೆಟ್‍ಗಳು ಹಾಗೂ ಪರಿಕರಗಳು ಮಾರುಕಟ್ಟೆಗೆ ಬಂದಿವೆ. ಅದು ಯಾವುವು ಎಂದು ತಿಳಿಯೋಣ

1. ವಾಟರ್ ಪ್ರೂಫ್ (ಜಲ ನಿರೋಧಕ) ಇಯರ್ ಫೋನ್
ಕೆಲವೊಮ್ಮೆ ಕರೆ ಸ್ವೀಕರಿಸಲು ನಾವು ಇಯರ್ ಫೋನ್​ ಬಳಕೆ ಮಾಡಲೇಬೇಕಾಗುತ್ತದೆ. ಎಲ್ಲ ಸಮಯದಲ್ಲೂ ಫೋನ್ ಬಳಕೆ ಕಷ್ಟ ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ವಾಟರ್ ಪ್ರೂಫ್ ಇಯರ್ ಫೋನ್ ಬಳಕೆಗೆ ಬರುತ್ತದೆ. ಹೆಡ್‍ಸೆಟ್ ಮೂಲಕ ಸಂಗೀತ ಕೇಳುವಾಗ ಅಥವಾ ಮಾತನಾಡುವಾಗ ನಿಮ್ಮ ಫೋನ್ ಅನ್ನು ರಕ್ಷಣಾತ್ಮಕ ಚೀಲ ಅಥವಾ ಜಲನಿರೋಧಕ ಬ್ಯಾಗಿನಲ್ಲಿ ಇರಿಸಬಹುದು. ಇದು ನಿಮ್ಮ ಫೋನ್‍ಗೆ ಯಾವುದೇ ಹಾನಿ ಉಂಟಾಗದಂತೆ ನೋಡಿಕೊಳ್ಳುತ್ತದೆ.

extracting the most from your oneplus 9 pro camera from dual native isos to dol hdr 2x2 ocl and more
ಸಾಂದರ್ಭಿಕ ಚಿತ್ರ


2. ಮೊಬೈಲ್‍ಗಾಗಿ ವಾಟರ್ ಪ್ರೂಫ್ ಪೌಚ್
ನಮ್ಮ ದಿನನಿತ್ಯದ ಸಂಪರ್ಕ ಹಾಗೂ ವ್ಯವಹಾರಕ್ಕಾಗಿ ಮೊಬೈಲ್ ಬಳಸುವುದರಿಂದ ಇವುಗಳನ್ನು ಮನೆಯಲ್ಲಿಟ್ಟು ಹೋಗಲು ಸಾಧ್ಯವಿಲ್ಲ. ಹಾಗಾಗಿ ಇದರ ಕಾಳಜಿ ಮುಖ್ಯವಾಗುತ್ತದೆ. ಧೂಳು, ಸ್ಕ್ರ್ಯಾಚ್‌ನಿಂದ ರಕ್ಷಣೆ ಪಡೆಯಲು ಮೊಬೈಲ್ ಪೌಚ್ ಬಳಸುತ್ತಿದ್ದರೂ ಇದು ಮಳೆಯಿಂದ ರಕ್ಷಣೆ ನೀಡುವುದಿಲ್ಲ. ಹಾಗಾಗಿ ವಾಟರ್ ಪ್ರೂಫ್ ಪೌಚ್ ಸ್ಮಾರ್ಟ್‍ಫೋನ್ ಒದ್ದೆಯಾಗದಂತೆ ರಕ್ಷಿಸುತ್ತದೆ. ಪೌಚ್ ಒಳಗಿರುವ ಸಿಲಿಕಾ ಜೆಲ್ ಹೆಚ್ಚುವರಿ ತೇವಾಂಶ ಹೀರಿಕೊಳ್ಳುತ್ತದೆ.

ಇದನ್ನೂ ಓದಿ: ರಿಲೀಸ್​ಗೆ ಸಜ್ಜಾಗುತ್ತಿದೆ ಸಾಯಿ ಪಲ್ಲವಿ-ನಾನಿ ಅಭಿನಯದ ಶ್ಯಾಮ್​ ಸಿಂಗ ರಾಯ್​ ಚಿತ್ರ

3. ವಾಟರ್ ಪ್ರೂಫ್ ಲ್ಯಾಪ್‍ಟಾಪ್ ಸ್ಲೀವ್
ಕೆಲಸದ ನಿಮಿತ್ತ ಲ್ಯಾಪ್‍ಟಾಪ್ ತೆಗೆದುಕೊಂಡು ಓಡಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಳೆಹನಿಗಳು ಮದರ್‌ಬೋರ್ಡ್‌ಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ವಾಟರ್ ಪ್ರೂಫ್ ಲ್ಯಾಪ್‍ಟಾಪ್ ಸ್ಲೀವ್ ಬಳಸಿದರೆ ಮಳೆಗಾಲದಲ್ಲಿ ಲ್ಯಾಪ್‍ಟಾಪ್‍ಗೆ ತೊಂದರೆಯಾಗದಂತೆ ತಡೆಯಬಹುದು.

4. ಕ್ಯಾಮರಾ ಲೆನ್ಸ್ ರಕ್ಷಣಾ ಪೌಚ್
ಪ್ರತಿ ಛಾಯಾಗ್ರಾಹಕರಿಗೆ ಕ್ಯಾಮರಾ ಲೆನ್ಸ್ ಜೀವಾಳ ಹಾಗೂ ಬದುಕು. ಅಕಸ್ಮಾತ್ ಲೆನ್ಸ್ ಕೊಂಚವಾದರೂ ಹಾಳಾದರೂ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಫೋಟೋಗ್ರಾಫರ್‌ಗಳು ಕೆಲಸದ ಜೊತೆಗೆ ಲೆನ್ಸ್ ಬಗ್ಗೆ ಕಾಳಜಿ ತೋರಲೇಬೇಕಾಗುತ್ತದೆ. ಎಲ್ಲಾ ಲೆನ್ಸ್ ವಾಟರ್ ಪ್ರೂಫ್ ಆಗಿಲ್ಲದ ಕಾರಣ ಛಾಯಾಗ್ರಾಹಕರು ಕ್ಯಾಮರಾ ಲೆನ್ಸ್ ರಕ್ಷಣಾ ಪೌಚ್ ಬಳಸುವುದು ಉತ್ತಮ.

5. ಸಿಲಿಕಾನ್ ಕೀಬೋರ್ಡ್ ಪ್ರೊಟೆಕ್ಟರ್
ಕೀಬೋರ್ಡ್ ರಕ್ಷಣೆಗೆ ಜಿಪ್ ಲಾಕ್ ಇರುವುದನ್ನು ಇಷ್ಟಪಡದವರು ಈ ಸಿಲಿಕಾನ್‌ ಕೀಬೋರ್ಡ್ ಪ್ರೊಟೆಕ್ಟರ್ ಬಳಸಬಹುದು. ಇದು ಮಳೆ ನೀರು ಒಳಹೋಗದಂತೆ ತಡೆಯುವುದಲ್ಲದೇ ಲ್ಯಾಪ್‍ಟಾಪ್ ಹಾರ್ಡ್‍ವೇರ್ಗೆ‌ ತೊಂದರೆಯಾಗದಂತೆ ಕಾಪಾಡುತ್ತದೆ.

ಇದನ್ನೂ ಓದಿ: ಒಟಿಟಿ ವೇದಿಕೆಯಲ್ಲಿ ಲಾಂಚ್ ಆಗಲಿದೆ​ ಹಿಂದಿ ಬಿಗ್ ಬಾಸ್​ ಸೀಸ್​ನ್​ 15: ನಿರೂಪಣೆ ಮಾಡಲಿದ್ದಾರೆ ಕರಣ್​ ಜೋಹರ್​(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: