ವಿಪಿಎನ್​ ಆ್ಯಪ್​​ ಬಳಸುತ್ತಿದ್ದೀರಾ?; ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಿವೆ ಈ ಆ್ಯಪ್​​ಗಳು

VPN Apps: ನೋಮ್​​​ ರೆಟೆಮ್​​​​ ನೇತೃತ್ವದ ಪಿಪಿಎನ್​​​ ಮೆಂಟರ್​​ ಸಂಶೋಧನ ತಂಡ  ಈ ಬಗ್ಗೆ ಅಧ್ಯಯನ ನಡೆಸಿದ್ದು, ಸುಮಾರು ಏಳು ವಿಪಿಎನ್​ ಆ್ಯಪ್​ಗಳ ಪಟ್ಟಿಯನ್ನು ತೆರೆದಿಟ್ಟಿದೆ. ಈ ಆ್ಯಪ್​ಗಳು ಸುಮಾರು 20 ಮಿಲಿಯನ್​ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದೆ ಎಂದು ಹೇಳಿದೆ.

ವಿಪಿಎನ್​ ಆ್ಯಪ್​​

ವಿಪಿಎನ್​ ಆ್ಯಪ್​​

 • Share this:
  ಅನೇಕ ಸ್ಮಾರ್ಟ್​ಫೋನ್ ಬಳಕೆದಾರರು ವಿಪಿಎನ್( ವರ್ಚುವಲ್ ಪ್ರೈವೇಟ್ ನೆಟ್​ವರ್ಕ್​​) ಅಳವಡಿಸಿಕೊಂಡು ಇಂಟರ್​ನೆಟ್​ ಸೇವೆಯನ್ನು  ಬಳಸುತ್ತಾರೆ. ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ವಿಪಿಎನ್​ ಆ್ಯಪ್​ಗಳಿವೆ. ಅವುಗಳನ್ನು ಬಳಸಿಕೊಂಡು ಸುಲಭವಾಗಿ ಇಂಟರ್​​​ನೆಟ್​ ಸೇವೆಯನ್ನು ಪಡೆಯುತ್ತಾರೆ. ಆದರೀಗ ಹೊರಬಿದ್ದ ಮಾಹಿತಿ ಪ್ರಕಾರ ಕೆಲವು ವಿಪಿಎನ್​ ಆ್ಯಪ್​​​ಗಳು  ಬಳಕೆದಾರರಿಗೆ ಗೊತ್ತಿಲ್ಲದೆ ಅವರ ಮಾಹಿತಿಯನ್ನು ಎಗರಿಸುತ್ತಿದೆ ಎಂದು ತಿಳಿದು ಬಂದಿದೆ.

  ನೋಮ್​​​ ರೆಟೆಮ್​​​​ ನೇತೃತ್ವದ ಪಿಪಿಎನ್​​​ ಮೆಂಟರ್​​ ಸಂಶೋಧನ ತಂಡ  ಈ ಬಗ್ಗೆ ಅಧ್ಯಯನ ನಡೆಸಿದ್ದು, ಸುಮಾರು ಏಳು ವಿಪಿಎನ್​ ಆ್ಯಪ್​ಗಳ ಪಟ್ಟಿಯನ್ನು ತೆರೆದಿಟ್ಟಿದೆ. ಈ ಆ್ಯಪ್​ಗಳು ಸುಮಾರು 20 ಮಿಲಿಯನ್​ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದೆ ಎಂದು ಹೇಳಿದೆ.

  ವಿಪಿಎನ್​​​ ಆ್ಯಪ್​ಗಳು:

  ಯುಎಫ್‌ಒ ವಿಪಿಎನ್, ಫಾಸ್ಟ್ ವಿಪಿಎನ್, ಫ್ರೀ ವಿಪಿಎನ್, ಸೂಪರ್ ವಿಪಿಎನ್, ಫ್ಲ್ಯಾಶ್ ವಿಪಿಎನ್, ಸೆಕ್ಯೂರ್​ ವಿಪಿಎನ್ ಮತ್ತು ರಾಬಿಟ್​​ ವಿಪಿಎನ್ ಆ್ಯಪ್​ 20 ಮಿಲಿಯನ್ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಿದೆ. ಒಟ್ಟು 1.2 ಟಿಬಿ ಡೇಟಾವನ್ನು ಸೋರಿಕೆ ಮಾಡಿದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

  ನೋಮ್​​​ ರೆಟೆಮ್​​​​ ನೇತೃತ್ವದ ಪಿಪಿಎನ್​​​ ಮೆಂಟರ್​​ ಸಂಶೋಧನ ತಂಡ ಈ ಬಗ್ಗೆ ಮಾಹಿತಿ ನೀಡಿದ್ದು, ವಿಪಿಎನ್​ ಆ್ಯಪ್​ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿದೆ. ಸಂಗ್ರಹಿಸಿದ ಡೇಟಾಗಳು ಆನ್​ಲೈನ್​​ನಲ್ಲಿ ಸೋರಿಕೆಯಾಗಿದೆ. ಕುತೂಹಲಕಾರಿ ವಿಚಾರವೆಂದರೆ, ವಿಪಿಎನ್​​ ಸೇವೆಗಳು ನೋ-ಲಾಗ್​​ ಎಂಬ ಆಯ್ಕೆಯನ್ನು ತೋರಿಸುತ್ತದೆ. ಅಷ್ಟು ಮಾತ್ರವಲ್ಲದೆ, ಬಳಕೆದಾರರನ ಚಟುವಟಿಕೆ ದಾಖಲೆಗಳನ್ನು ಇರಿಸಿಕೊಳ್ಳದಂತೆ ಸೂಚಿಸುತ್ತದೆ. ಆದರೆ ಇದೀಗ ವಿಪಿಎನ್​ ಆ್ಯಪ್​ಗಳು ಬಳಕೆದಾರರ ಮಾಹಿತಿಯನ್ನು ಎಗರಿಸುತ್ತಿರುವ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ.

  ಗೂಗಲ್​ ಪ್ಲೇ ಸ್ಟೋರ್​​ ಮತ್ತು ಆ್ಯಪ್​​ ಸ್ಟೋರ್​ನಲ್ಲಿ ಉತ್ತಮ ರೇಟಿಂಗ್​ ಹೊಂದಿರುವ ವಿಪಿಎನ್​ ಆ್ಯಪ್​ಗಳು ನಂಬಲಾಗದಷ್ಟು ಜನಪ್ರಿಯವಾಗಿದೆ. ಹ್ಯಾಂಕ್​ಕಾಂಗ್​ ಮೂಲದ ನೌನೆಟ್​ಮೊಬಿ ಅಭಿವೃದ್ಧಿ ಪಡಿಸಿದ ಸೂಪರ್​​ ವಿಪಿಎನ್​​ ಗೂಗಲ್​ ಪ್ಲೇ ಸ್ಟೋರ್​​ನಲ್ಲಿ 4.6 ರೇಟಿಂಗ್​ನಲ್ಲಿ ಕಾಣಿಸಿಕೊಂಡಿದೆ. ಆಪಲ್ ಸ್ಟೋರ್​ನಲ್ಲಿ 4.9 ರೇಟಿಂಗ್​ ಪಡೆದಿದೆ.

  ಸಮುದ್ರ ಆಳದಲ್ಲಿ ಪತ್ತೆಯಾಯ್ತು 14 ಕಾಲಿನ ಹೊಸ ಜೀವಿ!

  ಅಂತೆಯೇ ಡ್ರೀಮ್​​ಫೈ ಎಚ್​​ಕೆ ಲಿಮಿಟೆಡ್​​ ಅಭಿವೃದ್ಧಿ ಪಡಿಸಿದ ಯುಎಫ್​ಒ ಪಿಪಿಎನ್​​​​​ ಗೂಗಲ್​ ಪ್ಲೇ ಸ್ಟೋರ್​​​ನಲ್ಲಿ 4.5 ರೇಟಿಂಗ್​ ಪಡೆದಿದೆ. ಆ್ಯಪ್​​ ಸ್ಟೋರ್​ನಲ್ಲಿ 4.8 ರೇಟಿಂಗ್​ ಹೊಂದಿದೆ. ಆದರೀಗ ಇಷ್ಟೆಲ್ಲಾ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ, ವಿಪಿಎನ್​ ಆ್ಯಪ್​ಗಳ ಬಣ್ಣ ಬಯಲಾಗಿದೆ.

  ಅಳಿಯನನ್ನೇ ಮದುವೆಯಾದ ಅತ್ತೆಯ ಜೀವನದಲ್ಲಿ ಈಗ ಹೊಸ ಟ್ವಿಸ್ಟ್​; ಏನದು?; ಈ ಸ್ಟೋರಿ ಓದಿ

  ಹಾಗಾಗಿ ಬಳಕೆದಾರರು ಈ ಏಳು ವಿಪಿಎನ್​ ಆ್ಯಪ್​​​ಗಳನ್ನು ಬಳಸದಂತೆ ಸಂಶೋಧನ ತಂಡ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಬಳಕೆದಾರರ ಮಾಹಿತಿಯನ್ನು ಎಗರಿಸುವ ಈ ಆ್ಯಪ್​​ಗಳನ್ನು ಕೈ ಬಿಡುವಂತೆ ತಿಳಿಸಿದೆ.
  Published by:Harshith AS
  First published: