ಸ್ಯಾಮ್​ಸಂಗ್ ಗೆಲಾಕ್ಸಿ ಸ್ಮಾರ್ಟ್​ಫೋನ್ ಈಗ ಭಾರೀ ಕಡಿಮೆ ದರದಲ್ಲಿ ಲಭ್ಯ

ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ ಇದೀಗ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ. ಸ್ಯಾಮ್​ಸಂಗ್​ ಗೆಲಾಕ್ಸಿ ಸೀರೀಸ್​ನ ಜೆ6 ಮತ್ತು ಜೆ4 ಪ್ಲಸ್​ ಮೊಬೈಲ್​ಗಳ ಬೆಲೆಯನ್ನು ಕಡಿಮೆಗೊಳಿಸಿದೆ.

sushma chakre | news18
Updated:January 11, 2019, 5:58 PM IST
ಸ್ಯಾಮ್​ಸಂಗ್ ಗೆಲಾಕ್ಸಿ ಸ್ಮಾರ್ಟ್​ಫೋನ್ ಈಗ ಭಾರೀ ಕಡಿಮೆ ದರದಲ್ಲಿ ಲಭ್ಯ
ಸ್ಯಾಮ್​ಸಂಗ್​ ಗೆಲಾಕ್ಸಿ ಜೆ4 ಮತ್ತು ಜೆ6
sushma chakre | news18
Updated: January 11, 2019, 5:58 PM IST
ನೀವೇನಾದರೂ ಹೊಸ ಮೊಬೈಲ್​ ಖರೀದಿಸಲು ಯೋಚಿಸಿದ್ದೀರಾ? ಯಾವ ಮೊಬೈಲ್​ ಬೆಸ್ಟ್​ ಎಂಬ ಗೊಂದಲದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿಯಿದೆ. ಒಂದು ಕಾಲದಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಸ್ಯಾಮ್​ಸಂಗ್​ ಇದೀಗ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ. ಸ್ಯಾಮ್​ಸಂಗ್​ ಗೆಲಾಕ್ಸಿ ಸೀರೀಸ್​ನ ಜೆ6 ಮತ್ತು ಜೆ4 ಪ್ಲಸ್​ ಮೊಬೈಲ್​ಗಳ ಬೆಲೆಯನ್ನು ಕಡಿಮೆಗೊಳಿಸಿದೆ. ಹಾಗಿದ್ದರೆ ಇನ್ನೇಕೆ ತಡ?

ಮಹೇಶ್​ ಟೆಲಿಕಾಂ ನೀಡಿರುವ ಮಾಹಿತಿ ಪ್ರಕಾರ, ಸ್ಯಾಮ್​ಸಂಗ್​ ಗೆಲಾಕ್ಸಿ ಜೆ6 ಪ್ಲಸ್​ ಬೆಲೆ 2 ಸಾವಿರ ಕಡಿಮೆಯಾಗಿದೆ. 14 ಸಾವಿರ ರೂ. ಇದ್ದ ಈ ಮೊಬೈಲ್​ನ ಬೆಲೆ 12,990 ಆಗಿದೆ. ಜೆ4 ಪ್ಲಸ್​ ಮೊಬೈಲ್​ನ ಬೆಲೆ 1,500 ರೂ. ಕಡಿಮೆಯಾಗಿದ್ದು, ಈ ಮೊದಲು 9,990 ರೂ. ಬೆಲೆ ನಿಗದಿಪಡಿಸಲಾಗಿತ್ತು.

ಇದನ್ನೂ ಓದಿ: ಯಾತ್ರಿಕರ ಅನುಕೂಲಕ್ಕಾಗಿ 'ಕುಂಭ ಜಿಯೋಫೋನ್' ಬಿಡುಗಡೆ..!

ಸ್ಯಾಮ್​ಸಂಗ್ ಗೆಲಾಕ್ಸಿ ಜೆ6 ಪ್ಲಸ್​: 6 ಇಂಚು ಡಿಸ್​ಪ್ಲೇ ಹೊಂದಿರುವ ಈ ಸ್ಮಾರ್ಟ್​ಫೋನ್ ಆ್ಯಂಡ್ರಾಯ್ಡ್​ ಓರಿಯೋ ಸಾಫ್ಟ್​ವೇರ್​ ಹೊಂದಿದೆ. ಡ್ಯುಯೆಲ್​ ರೇರ್​ ಕ್ಯಾಮೆರಾ ಇದ್ದು, ಪ್ರೈಮರಿ ಸೆನ್ಸಾರ್​ 13 ಮೆಗಾ ಪಿಕ್ಸೆಲ್​ ಮತ್ತು ಸೆಕೆಂಡರಿ ಸೆನ್ಸಾರ್​ 5 ಮೆಗಾ ಪಿಕ್ಸೆಲ್ ಇರಲಿದೆ. ಫ್ರಂಟ್​ ಕ್ಯಾಮೆರಾ 8 ಮೆಗಾ ಪಿಕ್ಸೆಲ್​ ಇರಲಿದೆ. 3,300 ಎಂಎಎಚ್​ ಬ್ಯಾಟರಿ ಸೌಲಭ್ಯ ಇರಲಿದೆ.

ಇದನ್ನೂ ಓದಿ: 48MP ಕ್ಯಾಮೆರಾ ​ಫೋನ್​ಗೆ ಕೇವಲ 10 ಸಾವಿರ ರೂ..!

ಸ್ಯಾಮ್​ಸಂಗ್​ ಗೆಲಾಕ್ಸಿ ಜೆ4 ಪ್ಲಸ್: ಈ ಸ್ಮಾರ್ಟ್​ಫೋನ್ 6 ಇಂಚು ಎಚ್​ಡಿ ಡಿಸ್​ಪ್ಲೇಯನ್ನು ಹೊಂದಿದೆ. 13 ಮೆಗಾಪಿಕ್ಸೆಲ್ ರೇರ್​ ಶೂಟರ್​ ಮತ್ತು 5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರಲಿದೆ. ಇದು ಕೂಡ 3,300 ಎಂಎಎಚ್​ ಬ್ಯಾಟರಿಯನ್ನು ಹೊಂದಿದೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ