• Home
  • »
  • News
  • »
  • tech
  • »
  • Tech Tips: ಜಿಯೋ 5G ಸೇವೆಯನ್ನು ಬೆಂಬಲಿಸುತ್ತಿಲ್ಲ ಶಿಯೋಮಿಯ ಈ ಎರಡು ಫೋನ್‌ಗಳು! ಖರೀದಿಸೋ ಮುನ್ನ ಹುಷಾರ್

Tech Tips: ಜಿಯೋ 5G ಸೇವೆಯನ್ನು ಬೆಂಬಲಿಸುತ್ತಿಲ್ಲ ಶಿಯೋಮಿಯ ಈ ಎರಡು ಫೋನ್‌ಗಳು! ಖರೀದಿಸೋ ಮುನ್ನ ಹುಷಾರ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವೊಂದು ಸ್ಮಾರ್ಟ್​ಫೋನ್ ಕಂಪೆನಿಗಳು ಸಹ ಜಿಯೋ ಜೊತೆಗೆ 5ಜಿಗಾಗಿ ಪಾಲುದಾರಿಕೆ ಮಾಡಿಕೊಂಡಿದೆ. ಅದರಲ್ಲಿ ಶಿಯೋಮಿ ಕಂಪೆನಿ ಸಹ ಒಂದು. ಆದರೆ ಶಿಯೋಮಿ ಕಂಪೆನಿಯಿಂದ ಬಿಡುಗಡೆಯಾದ ಎರಡು ಸ್ಮಾರ್ಟ್​​​ಫೋನ್​​ಗಳಲ್ಲಿ ಜಿಯೋ 5ಜಿ ಸೇವೆ ಕಾರ್ಯನಿರ್ವಹಿಸುದಿಲ್ಲವಂತೆ. ಹಾಗಿದ್ರೆ ಆ ಸ್ಮಾರ್ಟ್​ಫೋನ್​ಗಳು ಯಾವುದು ಎಂಬುದನ್ನು  ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
  • Share this:

    ರಿಲಯನ್ಸ್ ಜಿಯೋ (Reliance Jio) ಭಾರತದಾದ್ಯಂತ 5ji ಸ್ವತಂತ್ರ (SA) ನೆಟ್‌ವರ್ಕ್‌ಗಳನ್ನು ಪ್ರಾರಂಭಿಸಿವೆ. ಏರ್‌ಟೆಲ್ (Airtel) ಹಾಗೂ ರಿಲಯನ್ಸ್ ಜಿಯೋದಂತಹ ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆ ಪ್ರಯೋಗವನ್ನು ಆರಂಭಿಸಿ ಹಲವು ತಿಂಗಳುಗಳೇ ಕಳೆದಿದೆ. ಕರ್ನಾಟಕದ ನಗರಗಳು ಸೇರಿ ಹಲವೆಡೆ 5ಜಿ ಸೇವೆ ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲ, ಜಿಯೋ ತನ್ನ 5ಜಿ ಸೇವೆಯ (5G Network) ರಿಚಾರ್ಜ್ ದರ, ವ್ಯಾಲಿಡಿಟಿ ಮೊದಲಾದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಅಧಿಕೃತವಾಗಿ ದೇಶದಲ್ಲಿ ತನ್ನ 5ಜಿ ಸೇವೆಯನ್ನು ಆರಂಭ ಮಾಡಿದೆ.


    ಇದಲ್ಲದೆ ಕೆಲವೊಂದು ಸ್ಮಾರ್ಟ್​ಫೋನ್ ಕಂಪೆನಿಗಳು ಸಹ ಜಿಯೋ ಜೊತೆಗೆ 5ಜಿಗಾಗಿ ಪಾಲುದಾರಿಕೆ ಮಾಡಿಕೊಂಡಿದೆ. ಅದರಲ್ಲಿ ಶಿಯೋಮಿ ಕಂಪೆನಿ ಸಹ ಒಂದು. ಆದರೆ ಶಿಯೋಮಿ ಕಂಪೆನಿಯಿಂದ ಬಿಡುಗಡೆಯಾದ ಎರಡು ಸ್ಮಾರ್ಟ್​​​ಫೋನ್​​ಗಳಲ್ಲಿ ಜಿಯೋ 5ಜಿ ಸೇವೆ ಕಾರ್ಯನಿರ್ವಹಿಸುದಿಲ್ಲವಂತೆ. ಹಾಗಿದ್ರೆ ಆ ಸ್ಮಾರ್ಟ್​ಫೋನ್​ಗಳು ಯಾವುದು ಎಂಬುದನ್ನು  ಈ ಲೇಖನದ ಮೂಲಕ ತಿಳಿಯಿರಿ.


    ಹಲವು 5G ಸ್ಮಾರ್ಟ್ ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಜಿಯೋ 5G


    ಆದರೆ ದುರದೃಷ್ಟವಶಾತ್‌ ಕೆಲವು ಸ್ಮಾರ್ಟ್ ಫೋನ್‌ಗಳಲ್ಲಿ ಜಿಯೋ 5G ಕಾರ್ಯ ನಿರ್ವಹಿಸುತ್ತಿಲ್ಲವಂತೆ. ಭಾರತದಲ್ಲಿ ಸ್ಮಾರ್ಟ್ ಫೋನ್ ಪರಿಸರ ವ್ಯವಸ್ಥೆಯು 5G SA ಗೆ ಸಿದ್ಧವಾಗಿಲ್ಲ.




    ಹೀಗಾಗಿ OEM ಗಳು (ಮೂಲ ಉಪಕರಣ ತಯಾರಕರು) ಜಿಯೋದ 5G SA ಅನ್ನು ಬೆಂಬಲಿಸಲು ಭಾರತದಲ್ಲಿ ತಮ್ಮ 5G ಸಾಧನಗಳಿಗೆ OTA (ಓವರ್-ದಿ-ಏರ್) ನವೀಕರಣಗಳನ್ನು ಹೊರತರುವ ಮಾರ್ಗಕ್ಕೆ ಮೊರೆ ಹೋಗಿದ್ದಾರೆ.


    ಜಿಯೋ ಭಾರತದಲ್ಲಿ ನೂರಾರು ಮಿಲಿಯನ್ ಗ್ರಾಹಕರನ್ನು ಹೊಂದಿದೆ ಮತ್ತು ಆದ್ದರಿಂದ OEM ಗಳು ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.


    5G ಸೇವೆ ಬೆಂಬಲಿಸುತ್ತಿಲ್ಲ ಶಿಯೋಮಿ ಫೋನ್‌ಗಳು


    ಹೌದು, ದೇಶದಾದ್ಯಂತ 5G SA ಗೆ ಭಾರಿ ನಿರೀಕ್ಷೆ ಇತ್ತು, ಆದರೆ ಈಗ ಭಾರತದಲ್ಲಿ ಹಲವು ಮೊಬೈಲ್‌ಗಳು ಈ ಸೇವೆಯನ್ನು ಬೆಂಬಲಿಸುವಲ್ಲಿ ಸಮರ್ಥವಾಗಿದೆಯಂತೆ. ಅದರಲ್ಲೂ ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಶಿಯೋಮಿಯ ಕೆಲವು ಆವೃತ್ತಿಗಳು 5G ಯನ್ನು ಬೆಂಬಲಿಸುತ್ತಿಲ್ಲ.


    ಸಾಂಕೇತಿಕ ಚಿತ್ರ


    5G ಸೇವೆ ಬೆಂಬಲಿಸುವುದಾಗಿ ಹೇಳಿ ಮಾರಾಟ ಮಾಡಿದ್ದ ಶಿಯೋಮಿ


    ಶಿಯೋಮಿ ಭಾರತದಲ್ಲಿ ಲಕ್ಷಾಂತರ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ, ಮಾರಾಟ ಕೂಡ ಮಾಡಿದೆ. ಅವುಗಳಲ್ಲಿ ಹೆಚ್ಚಿನವು 5G ಸ್ಟ್ಯಾಂಡ್‌ಲೋನ್ ಅನ್ನು ಬೆಂಬಲಿಸುವುದಿಲ್ಲ.


    ಈ ಫೋನ್ ಗಳನ್ನು 5G ಫೋನ್ ಎಂದು ಹೇಳಿಕೊಳ್ಳಲಾಗುತ್ತದೆಯಾದರೂ, Jio 5Gಯನ್ನು ಈ ಫೋನ್ ಗಳು ಸಪೋರ್ಟ್ ಮಾಡುತ್ತಿಲ್ಲ.


    ಶಿಯೋಮಿ ಮೊದಲಿಗೆ ತನ್ನ ಉತ್ಪನ್ನಗಳನ್ನು 5G ಸಾಧನಗಳು ಎಂದು ಹೇಳಿಕೊಂಡಿತ್ತು. ಇದೇ ಭರವಸೆ ಮೇಲೆ ಗ್ರಾಹಕರೂ ಕೂಡ ಫೋನ್‌ಗಳನ್ನು ಖರೀದಿ ಮಾಡಿದ್ದರು. ಆದರೆ ಈಗ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ.


    ಶಿಯೋಮಿ ಎಮ್​ಐ 10 ಮತ್ತು ಶಿಯೋಮಿ ಎಮ್​ಐ 10ಐ ಈ ಎರಡೂ ಫೋನ್‌ಗಳು 5ಜಿಯನ್ನು ಬೆಂಬಲಿಸುತ್ತಿಲ್ಲ


    ಶಿಯೋಮಿಯಲ್ಲಿ ಈ ಎರಡು ಮುಖ್ಯ ಫೋನ್‌ಗಳಲ್ಲಿ 5G ಕಾರ್ಯ ನಿರ್ವಹಿಸುತ್ತಿಲ್ಲ. ಅವು ಯಾವುವೆಂದರೆ ಶಿಯೋಮಿ ಎಮ್​ಐ 10 ಮತ್ತು ಶಿಯೋಮಿ ಎಮ್​ಐ 10ಐ, ಈ ಎರಡೂ ಫೋನ್‌ಗಳು ಸದ್ಯ ಜಿಯೋದ 5ಜಿ ಸೇವೆಯನ್ನು ಬೆಂಬಲಿಸುತ್ತಿಲ್ಲ. ಯಾಕೆಂದರೆ ಮೊದಲೇ ಹೇಳಿದ ಹಾಗೆ ಜಿಯೋ 5ಜಿ ಸ್ಟ್ಯಾಂಡ್‌ಲೋನ್ ನೆಟ್ ವರ್ಕ್ ಆಗಿದೆ.


    ಭಾರಿ ಹಣ ನೀಡಿ ಕೈ ಸುಟ್ಟುಕೊಂಡ ಗ್ರಾಹಕರು


    ಶಿಯೋಮಿ ಎಮ್​ಐ 10 ಮತ್ತು ಶಿಯೋಮಿ ಎಮ್​ಐ 10ಐ ಫೋನ್‌ಗಳಲ್ಲಿ 5G ಸೇವೆ ಲಭ್ಯವಿದೆ ಎಂದು ಭರವಸೆ ನೀಡಿ ಶಿಯೋಮಿ ಗ್ರಾಹಕರಿಗೆ ಮಾರಟ ಮಾಡಿದ್ದು, ಅದನ್ನು ನಂಬಿ ಫೋನ್‌ ಖರೀದಿ ಮಾಡಿದ ಗ್ರಾಹಕರಿಗೆ ಈ ಫೋನ್‌ಗಳು 5G ಸೇವೆಯನ್ನು ಬೆಂಬಲಿಸದಿರುವುದು ಆತಂಕ ಮೂಡಿಸಿದೆ.


    ಅದರಲ್ಲೂ ಈ ಎರಡೂ ಫೋನ್‌ಗಳು ದುಬಾರಿಯಾಗಿದ್ದು, ಕೈಗೆಟುಕುವ ಸ್ಮಾರ್ಟ್‌ಫೋನ್ ಅಲ್ಲ. ಹಾಗಾಗಿ 5G ಮತ್ತು ಭವಿಷ್ಯದ ಭದ್ರತೆಯ ಭರವಸೆಯೊಂದಿಗೆ ಎರಡೂ ಸಾಧನಗಳನ್ನು ಖರೀದಿಸಿದ ಜಿಯೋ ಬಳಕೆದಾರರು ಭಾರಿ ಹಣ ತೆತ್ತು ಕೈಸುಟ್ಟು ಕೊಂಡಂತಾಗಿದೆ.


    ಇದನ್ನೂ ಓದಿ: ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್​ 5 ಸ್ಮಾರ್ಟ್​ಫೋನ್​ಗಳಿವು!


    ಆದರೆ ಮಾರುಕಟ್ಟೆಯಲ್ಲಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಏರ್‌ಟೆಲ್‌ನ 5G ಅನ್ನು ಬೆಂಬಲಿಸುತ್ತವೆ. ಏಕೆಂದರೆ ಏರ್‌ಟೆಲ್ 5G ಸ್ವತಂತ್ರವಲ್ಲದ (NSA) ನೆಟ್‌ವರ್ಕ್‌ಗಳನ್ನು ನಿಯೋಜಿಸುತ್ತಿದೆ ಮತ್ತು 5G NSA ಅನ್ನು ಟೆಕ್ ಪರಿಸರ ವ್ಯವಸ್ಥೆಯಲ್ಲಿನ ಹೆಚ್ಚಿನ ಸಾಧನಗಳು ಬೆಂಬಲಿಸುತ್ತವೆ.

    Published by:Prajwal B
    First published: