Spent Most Money: ಅಬ್ಬಾ..! 2021ರಲ್ಲಿ ಜನರು ಹೆಚ್ಚು ಹಣ ಖರ್ಚು ಮಾಡಿದ ಆ್ಯಪ್ ಯಾವುದು ಗೊತ್ತಾ?

Apps: 2021ರಲ್ಲಿ ಜನರು ಅತಿ ಹೆಚ್ಚು ಹಣ ಖರ್ಚು ಮಾಡಿದ ಮೊಬೈಲ್ ಅಪ್ಲಿಕೇಶನ್‌ಗಳು (Mobile Application) ಯಾವುವು ಎಂಬುದನ್ನು ಸಂಶೋಧನಾ ಸಂಸ್ಥೆಯೊಂದು ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಈಗ ಬಹುತೇಕ ಎಲ್ಲರ ಬಳಿಯೂ 1 - 2 ಸ್ಮಾರ್ಟ್‌ಫೋನ್‌ಗಳಿರುತ್ತದೆ. ಸ್ಮಾರ್ಟ್‌ಫೋನ್ (Smartphone)‌ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಗೂಗಲ್‌ ಪ್ಲೇ ಸ್ಟೋರ್ (Google Play Store)‌, ಆ್ಯಪಲ್‌ ಆ್ಯಪ್‌ ಸ್ಟೋರ್‌ಗಳಲ್ಲಿ (Apple App Store) ಅಪ್ಲಿಕೇಷನ್‌ ಅಥವಾ ಆ್ಯಪ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲಿ ಕೆಲವು ಪ್ರಖ್ಯಾತ ಆ್ಯಪ್‌ಗಳನ್ನು ಕೋಟ್ಯಂತರ ಮಂದಿ ಡೌನ್ಲೋಡ್ (Download)‌ ಮಾಡಿರುತ್ತಾರೆ. ಈ ಆ್ಯಪ್‌ಗಳಲ್ಲಿ ಬಹುತೇಕ ಉಚಿತ ಅಪ್ಲಿಕೇಷನ್‌ಗಳು ಇರುತ್ತವೆಯಾದರೂ, ಕೆಲವು ಫೀಚರ್‌ ಅಥವಾ ಇತರೆ ಅಂಶಗಳಿಗಾಗಿ ಅದಕ್ಕೆ ಹಣವನ್ನೂ ನೀಡಬೇಕಾಗಿದೆ. ಇನ್ನು ಕೆಲವು ಅಪ್ಲಿಕೇಷನ್‌ಗಳು ಪೇಯ್ಡ್‌ ಆ್ಯಪ್‌ಗಳೇ ಆಗಿವೆ. ಒಟ್ಟಾರೆ 2021ರಲ್ಲಿ ಜನರು ಅತಿ ಹೆಚ್ಚು ಹಣ ಖರ್ಚು ಮಾಡಿದ ಮೊಬೈಲ್ ಅಪ್ಲಿಕೇಶನ್‌ಗಳು (Mobile Application) ಯಾವುವು ಎಂಬುದನ್ನು ಸಂಶೋಧನಾ ಸಂಸ್ಥೆಯೊಂದು ವರದಿ ಮಾಡಿದೆ.

    ಸಂಶೋಧನಾ ಸಂಸ್ಥೆ ಸೆನ್ಸರ್ ಟವರ್ಸ್ ಸ್ಟೋರ್ ಇಂಟೆಲಿಜೆನ್ಸ್ ಡೇಟಾ ಪ್ರಕಾರ, ಮೊಬೈಲ್ ಅಪ್ಲಿಕೇಶನ್‌ಗಳಿಗೆ ಸ್ಮಾರ್ಟ್‌ಫೋನ್‌ ಬಳಕೆದಾರರು ಹಣ ಸುರಿದಿರುವುದು 2021 ರಲ್ಲಿ ಮತ್ತೆ ಹೊಸ ಗರಿಷ್ಠವನ್ನು ದಾಖಲಿಸಿದೆ ಎಂದು ತಿಳಿದುಬಂದಿದೆ.

    ಟಾಪ್-100 ನಾನ್-ಗೇಮ್ ಸಬ್‌ಸ್ಕ್ರಿಪ್ಶನ್-ಆಧಾರಿತ ಅಪ್ಲಿಕೇಶನ್‌ಗಳು ತಮ್ಮ ಆದಾಯವನ್ನು ವರ್ಷದಿಂದ ವರ್ಷಕ್ಕೆ ಶೇಕಡಾ 41 ರಷ್ಟು ಹೆಚ್ಚಿಸಿಕೊಂಡಿದೆಯಂತೆ. ಅಂದರೆ 13 ಬಿಲಿಯನ್‌ ಡಾಲರ್‌ನಿಂದ (ಭಾರತೀಯ ಬೆಲೆಯಲ್ಲಿ ಸುಮಾರು 97,572 ಕೋಟಿ ರೂ. ಗಳು) 18.3 ಬಿಲಿಯನ್‌ ಡಾಲರ್‌ಗೆ (ಸುಮಾರು 1,37,300 ಕೋಟಿ ರೂ.)ಗೆ ಪ್ರಪಂಚದಾದ್ಯಂತ ಬೆಳವಣಿಗೆಯನ್ನು ಕಂಡಿದೆ ಎಂದು ಡೇಟಾ ಬಹಿರಂಗಪಡಿಸುತ್ತದೆ.

    ಟಾಪ್ 100 ಗಳಿಕೆಯ ಅಪ್ಲಿಕೇಶನ್‌ಗಳು ಕಳೆದ ವರ್ಷ ಜನರು ಆ್ಯಪ್‌ನಲ್ಲಿನ ಖರೀದಿಗಳಿಗಾಗಿ 131.6 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 14 ಪ್ರತಿಶತವನ್ನು ಗಳಿಸಿವೆ. ಇದು 2020 ರಲ್ಲಿ ಶೇಕಡಾ 11.7 ಕ್ಕಿಂತ ಹೆಚ್ಚಾಗಿದೆ ಎಂದು ಸೆನ್ಸರ್ ಟವರ್ ವರದಿ ಹೇಳಿದೆ.

    ವಿಶ್ವದಾದ್ಯಂತ ಗಳಿಸುವ ಟಾಪ್ 100 ಅಪ್ಲಿಕೇಶನ್‌ಗಳ ಪೈಕಿ 86 ಆ್ಯಪ್‌ಗಳು Q4 2021 ರಲ್ಲಿ, ಚಂದಾದಾರಿಕೆಗಳನ್ನು ನೀಡಿವೆ ಎಂದು ಸಂಶೋಧನಾ ಸಂಸ್ಥೆ ಹೇಳಿದೆ. ಇದು Q4 2020 ರಲ್ಲಿ 87 ಶೇಕಡಾ ಮತ್ತು Q4 2019 ರಲ್ಲಿ 89 ಶೇಕಡಾದಿಂದ ಕಡಿಮೆಯಾಗಿದೆ.

    ಉನ್ನತ ಚಂದಾದಾರಿಕೆ ಅಪ್ಲಿಕೇಶನ್‌ಗಳು ಆ್ಯಪ್‌ ಸ್ಟೋರ್ ಮತ್ತು Google Play Store ನಲ್ಲಿ 2 ಪಟ್ಟು ಹೆಚ್ಚು ಖರ್ಚು ಮಾಡಿದೆ ಎಂದು ವರದಿ ಹೇಳಿದೆ. 2021 ರಲ್ಲಿ ಚಂದಾದಾರಿಕೆ ಮಾದರಿಯೊಂದಿಗೆ ಟಾಪ್ 100 ನಾನ್-ಗೇಮ್ ಅಪ್ಲಿಕೇಶನ್‌ಗಳು 13.5 ಬಿಲಿಯನ್ ಡಾಲರ್‌ (ಸುಮಾರು 1,01,300 ಕೋಟಿ ರೂ. ಗಳು) ಅನ್ನು ಗಳಿಸಿವೆ - ಇದು 2020 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 31 ಪ್ರತಿಶತದಷ್ಟು ಹೆಚ್ಚಾಗಿದೆ. Google Play Store ನಲ್ಲಿ ಅಗ್ರ ಚಂದಾದಾರಿಕೆ ಅಪ್ಲಿಕೇಶನ್‌ಗಳು ಆದಾಯದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು, ಆ್ಯಪ್‌ ಸ್ಟೋರ್‌ನಲ್ಲಿನ ಟಾಪ್‌ ಅಪ್ಲಿಕೇಶನ್‌ಗಳಿಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಮೂರು ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ ಎಂದೂ ವರದಿ ಹೇಳುತ್ತದೆ.

    ತಮ್ಮ ಚಂದಾದಾರಿಕೆ ಮಾದರಿಗಳ ಮೂಲಕ ಹೆಚ್ಚು ಹಣವನ್ನು ಗಳಿಸಿದ ಉನ್ನತ ಅಪ್ಲಿಕೇಶನ್‌ಗಳಲ್ಲಿ, YouTube ಒಟ್ಟಾರೆಯಾಗಿ ಮತ್ತು Apple ಆ್ಯಪ್‌ ಸ್ಟೋರ್‌ನಲ್ಲಿ ಅಗ್ರಸ್ಥಾನದಲ್ಲಿ ಹೊರಹೊಮ್ಮಿದೆ. Google Play ಸ್ಟೋರ್‌ನಲ್ಲಿ Google One ಟಾಪ್ ಅಪ್ಲಿಕೇಶನ್ ಆಗಿತ್ತು. ಒಟ್ಟಾರೆ ಆದಾಯ, Apple App Store ಆದಾಯ ಮತ್ತು Google Play Store ಆದಾಯದ ಪ್ರಕಾರ ಟಾಪ್‌ 10 ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ ನೋಡಿ..:

    ಒಟ್ಟಾರೆ




    • ಯೂಟ್ಯೂಬ್‌

    • ಟಿಂಡರ್

    • ಪಿಕ್ಕೋಮಾ

    • Google One

    • ಡಿಸ್ನಿ +

    • ಟೆನ್ಸೆಂಟ್ ವಿಡಿಯೋ

    • iQIYI

    • HBO ಮ್ಯಾಕ್ಸ್

    • ಟ್ವಿಚ್‌

    • ಲೈನ್‌


    ಆ್ಯಪಲ್ ಆ್ಯಪ್ ಸ್ಟೋರ್




    • ಯೂಟ್ಯೂಬ್‌

    • ಟಿಂಡರ್

    • ಟೆನ್ಸೆಂಟ್ ವಿಡಿಯೋ

    • iQIYI

    • ಡಿಸ್ನಿ +

    • ಪಿಕ್ಕೋಮಾ

    • QQ ಮ್ಯೂಸಿಕ್‌

    • ಯೂಕು

    • HBO ಮ್ಯಾಕ್ಸ್

    • ಹುಲು


    ಗೂಗಲ್ ಪ್ಲೇ ಸ್ಟೋರ್




    • ಗೂಗಲ್‌ ಒನ್‌

    • ಪಿಕ್ಕೋಮಾ

    • ಡಿಸ್ನಿ +

    • HBO ಮ್ಯಾಕ್ಸ್

    • ಟ್ವಿಚ್‌

    • ಟಿಂಡರ್

    • ಪಂಡೋರಾ

    • ಲೈನ್‌

    • ಇಎಸ್‌ಪಿಎನ್‌

    • ಫೇಸ್‌ಬುಕ್‌

    Published by:Harshith AS
    First published: