Angry Birds: ಮತ್ತೆ ಫೇಮಸ್ ಆಗುತ್ತಿದೆ Game, ಈ ಮೂರು 'ಹಕ್ಕಿ'ಗಳ ಹಿಂದೆ ಬಿದ್ದ ಜನರು!

ಮೂರು ಜನಪ್ರಿಯ ಕ್ರೀಡೆಗಳಾದ ಆ್ಯಂಗ್ರಿಬರ್ಡ್ಸ್ 2, ಆ್ಯಂಗ್ರಿಬರ್ಡ್ಸ್ ಡ್ರೀಮ್ ಬ್ಲಾಸ್ಟ್ ಮತ್ತು ಆ್ಯಂಗ್ರಿಬರ್ಡ್ಸ್ ಫ್ರೆಂಡ್ಸ್ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಜನಪ್ರಿಯ ಗೇಮ್ ಆ್ಯಂಗ್ರಿ ಬರ್ಡ್ಸ್

ಜನಪ್ರಿಯ ಗೇಮ್ ಆ್ಯಂಗ್ರಿ ಬರ್ಡ್ಸ್

 • Share this:
  ಆ್ಯಂಗ್ರಿಬರ್ಡ್ (Angry Birds) ಮತ್ತೆ ಜನಪ್ರಿಯತೆ (Popularity) ಪಡೆಯುತ್ತಿದೆ!! ಕೆಲವು ವರ್ಷ ಕುಗ್ಗಿದ್ದ ಈ ಆ್ಯಂಗ್ರಿಬರ್ಡ್ಸ್ ಆಟದ (Game) ಜನಪ್ರಿಯತೆ, ಕಳೆದ ತ್ರೈಮಾಸಿಕದಲ್ಲಿ ಕೊಂಚ ಬೆಳವಣಿಗೆ ದಾಖಲಿಸಿದೆ ಎಂದು ಅದನ್ನು ಅಭಿವೃದ್ಧಿ ಪಡಿಸಿರುವ ರೋವಿಯೊ (Rovio) ಸಂಸ್ಥೆ ತಿಳಿಸಿದೆ. ಕಳೆದ ಕೆಲ ವರ್ಷಗಳಿಂದ ಈ ಆಟದ ಸರಣಿಯಲ್ಲಿ(Game Series) ಹಲವಾರು ಮಾದರಿಗಳನ್ನು (Models) ಪರಿಚಯಿಸಲಾಗಿದೆ. ಈ ಪೈಕಿ ಮೂರು ಮಾದರಿಗಳು ಸಖತ್ ಹಿಟ್ (Hit) ಆಗಿದ್ದು ಅದನ್ನು ಅಭಿವೃದ್ಧಿ ಪಡಿಸಿರುವವರಿಗೆ ಯಥೇಚ್ಛ ಆದಾಯ ತರುತ್ತಿವೆ. ದಶಕದ ಹಿಂದೆ ಪರಿಚಯವಾಗಿದ್ದ ಆ್ಯಂಗ್ರಿಬರ್ಡ್ ಕ್ರೀಡೆಯ ಮುಂದುವರಿದ ಭಾಗವಾಗಿರುವ ಆ್ಯಂಗ್ರಿಬರ್ಡ್ಸ್ 2 ಈ ಪೈಕಿ ಒಂದು. ಇನ್ನುಳಿದ ಎರಡು ಮಾದರಿಗಳು: ಆ್ಯಂಗ್ರಿಬರ್ಡ್ಸ್ ಡ್ರೀಮ್ ಬ್ಲಾಸ್ಟ್ ಮತ್ತು ಆ್ಯಂಗ್ರಿಬರ್ಡ್ಸ್ ಫ್ರೆಂಡ್ಸ್.

  3 ‘ಹಕ್ಕಿ’ಗಳ ಹಿಂದೆ ಬಿದ್ದಿರುವ ಜನರು!

  "ನಮ್ಮ ಎಲ್ಲ ಮೂರು ಜನಪ್ರಿಯ ಕ್ರೀಡೆಗಳಾದ ಆ್ಯಂಗ್ರಿಬರ್ಡ್ಸ್ 2, ಆ್ಯಂಗ್ರಿಬರ್ಡ್ಸ್ ಡ್ರೀಮ್ ಬ್ಲಾಸ್ಟ್ ಮತ್ತು ಆ್ಯಂಗ್ರಿಬರ್ಡ್ಸ್ ಫ್ರೆಂಡ್ಸ್ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸುತ್ತಿವೆ ಎಂದು ಹೆಲ್ಸಿಂಕಿ ಮೂಲದ ಮೊಬೈಲ್ ಗೇಮ್ ಅಭಿವೃದ್ಧಿಕಾರ ರೋವಿಯೊ ಹೇಳಿದ್ದಾರೆ. ಈ ವರ್ಷ ಕೂಡಾ ಈ ಬೆಳವಣಿಗೆ ಉನ್ನತ ಮಟ್ಟದಲ್ಲಿಯೇ ಇರಲಿದೆ ಎಂದು ರೋವಿಯೊ ನಿರೀಕ್ಷಿಸಿದ್ದಾರೆ.

  ಕಳೆದ ವರ್ಷ ಟರ್ಕಿಯ ರೂಬಿ ಗೇಮ್ಸ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಈ ಸ್ಟುಡಿಯೊವು ಮೂಮಿನ್ಸ್ ಕಾರ್ಟೂನ್ ಪಾತ್ರಗಳನ್ನು ಒಳಗೊಂಡಿರುವ ಮೊಬೈಲ್ ಗೇಮ್ ಅನ್ನು ಕೆಲವು ಪುಸ್ತಕಗಳು ಹಾಗೂ ಹಾಸ್ಯಮಯ ಎಳೆಯನ್ನು ಆಧರಿಸಿ ಸೃಷ್ಟಿಸುತ್ತಿದೆ.

  ಮೂರು ತಿಂಗಳುಗಳಲ್ಲಿ ಹೆಚ್ಚಾದ ಜನಪ್ರಿಯತೆ

  "2019ರ ಮೊದಲ ತ್ರೈಮಾಸಿಕದಿಂದ ಗರಿಷ್ಠ ಮುಂಗಡ ಕಾಯ್ದಿರಿಸುವಿಕೆಯನ್ನು ಕಂಡಿರುವ ಆ್ಯಂಗ್ರಿಬರ್ಡ್ಸ್ 2, ಪ್ರತಿ ವರ್ಷ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದೆ. ಆ್ಯಂಗ್ರಿಬರ್ಡ್ಸ್ ಡ್ರೀಮ್ ಬ್ಲಾಸ್ಟ್ ಕೂಡಾ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ದಾಖಲಿಸಿದ್ದು, ರೋವಿಯೊ ಪಾಲಿಗೆ ಮತ್ತೊಂದು ಸ್ಥಿರ ಸ್ತಂಭವಾಗಿದೆ. 2019ರಲ್ಲಿ ಪರಿಚಯವಾದಂದಿನಿಂದ ಇಲ್ಲಿಯವರೆಗೆ 180 ಮಿಲಿಯನ್ ಯೂರೋ ಸಂಪಾದಿಸಿದ್ದು, ಈಗಲೂ ಸದೃಢ ಬೆಳವಣಿಗೆಯನ್ನು ತೋರಿಸುತ್ತಿದೆ" ಎಂದು ರೋವಿಯೊ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸ್ ಪೆಲ್ಲೆಟಿಯರ್ ತಿಳಿಸಿದ್ದಾರೆ.

  ಇದನ್ನೂ ಓದಿ: Flipkart​​ನಲ್ಲಿ ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ಗಳ ಮೇಲೆ ಭಾರೀ ರಿಯಾಯಿತಿ! ಈ ಅವಕಾಶ ಮಿಸ್​ ಮಾಡ್ಬೇಡಿ

  ಹಳೆಯ ಗೇಮ್‌ಗಳೂ ಮುಂದುವರೆಯುತ್ತವೆ

  "ಇದರೊಂದಿಗೆ, ನಮ್ಮ ಹಳೆಯ ಮೂರು ನೇರಪ್ರಸಾರದ ಕ್ರೀಡೆಗಳನ್ನು ನೋಡುವುದು ಅದ್ಭುತವಾದ ಅನುಭವ ನೀಡುತ್ತಿದ್ದು, ಆ್ಯಂಗ್ರಿಬರ್ಡ್ಸ್ ಫ್ರೆಂಡ್ಸ್ ಸತತ ಐದನೆಯ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದರಲ್ಲಿರುವ ಸಮಯಾನುಸಾರವಾದ ಕಂಟೆಂಟ್ ಹಾಗೂ ನಾವು ನೀಡಿದ್ದ ವಿಶೇಷ ಕೊಡುಗೆಗಳು ಎಂದು ಅಲೆಕ್ಸ್ ಪೆಲ್ಲೆಟಿಯರ್ ಹೇಳಿದ್ದಾರೆ.

  ತಾನು ಈ ವರ್ಷ ಉನ್ನತ ಮಟ್ಟದ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದರೂ, ವರ್ಷದಿಂದ ವರ್ಷಕ್ಕೆ ಕಾರ್ಯನಿರ್ವಹಣಾ ಲಾಭವನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದು ಹೊಸ ಕ್ರೀಡೆಗಳ ಅಭಿವೃದ್ಧಿ ಮತ್ತು ಮಾರುಕಟ್ಟೆಗಾಗಿ ಹೂಡಿಕೆ ಮಾಡಬೇಕಿದೆ ಎಂದು ರೋವಿಯೊ ಹೇಳಿಕೊಂಡಿದೆ.

  ಹೊಸದಾಗಿ ಶುರುವಾದ ‘ಆ್ಯಂಗ್ರಿಬರ್ಡ್ಸ್’ ಜರ್ನಿ

  ಈ ಮೂರು ಹೆಸರುಗಳು ಕಳೆದ ವರ್ಷದವಾಗಿದ್ದು, ಈ ವರ್ಷ ಆ್ಯಂಗ್ರಿಬರ್ಡ್ಸ್ ಜರ್ನಿ ಎಂಬ ಹೊಸ ಹೆಸರಿನ ಕ್ರೀಡೆಯನ್ನು ರೋವಿಯೊ ಬಿಡುಗಡೆ ಮಾಡಿದೆ. ಈ ಕ್ರೀಡೆಯು ರಸಪ್ರಶ್ನೆಯಂತೆ ಇದ್ದು, ಇದರೊಳಗೆ ಕತೆಯ ಎಳೆಯನ್ನು ಅಡಗಿಸಿಡಲಾಗಿದೆ. ಸದ್ಯ ಈ ಕ್ರೀಡೆ ಆ್ಯಂಡ್ರಾಯ್ಡ್ ಗೂಗಲ್ ಪ್ಲೇ ಮತ್ತು ಐಫೋನ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಆ್ಯಂಗ್ರಿಬರ್ಡ್ಸ್ ಹಕ್ಕುದಾರಿಕೆಯು ಮೊಬೈಲ್ ಕ್ರೀಡೆಗಳೊಂದಿಗೆ ಸಿನಿಮಾಗಳನ್ನು ಹೊಂದಿದೆ ಎಂಬುದು ಗಮನಾರ್ಹ ಸಂಗತಿ.

  "ನಾವು ನಮ್ಮ ವಿನ್ಯಾಸ ಮತ್ತು ಸ್ವಾಧೀನ ಪ್ರಯತ್ನಗಳನ್ನು ಮುಂದುವರಿಸಲಿದ್ದು, ಸಾಮಾನ್ಯ ಕ್ರೀಡೆಗಳಿಂದಲೇ ಹೊಸ ಆದಾಯ ಮೂಲಗಳ ಬೆಳವಣಿಗೆ, ವೀಕ್ಷಕರ ಜಾಲದ ಬೆಳವಣಿಗೆ ಹಾಗೂ ನಮ್ಮ ಕ್ರೀಡಾ ಖಾತೆ ಮತ್ತು ಸ್ಟುಡಿಯೊದೊಂದಿಗೆ ಮೌಲ್ಯವನ್ನು ವೃದ್ಧಿಸಲು ಬಯಸುತ್ತೇವೆ" ಎಂದು ರೋವಿಯೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸ್ ಪೆಲ್ಲೆಟಿಯರ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: Iphone ಬಳಕೆದಾರರಿಗೆ WhatsApp ಕಡೆಯಿಂದ ಸಿಹಿ ಸುದ್ದಿ.. ಏನದು ಗೊತ್ತಾ?

  ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ರೋವಿಯೊ ಚಾಲ್ತಿಯಲ್ಲಿರುವ ಕಾರ್ಯನಿರ್ವಹಣಾ ಲಾಭ 13.1 ಕೋಟಿ ಯೂರೊ ಎಂದು ವರದಿ ಮಾಡಿದ್ದು, ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 75ರಷ್ಟು ಬೆಳವಣಿಗೆಯನ್ನು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೋವಿಯೊ ತನ್ನ ಪ್ರತಿ ಶೇರಿನ ಮೇಲೆ 0.12 ಯೂರೊ ಡಿವಿಡೆಂಡ್ ನೀಡುವ ಪ್ರಸ್ತಾವನೆ ಹೊಂದಿದೆ.
  Published by:Annappa Achari
  First published: