ಫೇಸ್​ಬುಕ್​ ಸ್ಥಗಿತಗೊಳಿಸುವ ಆ ಮೂರು ಆ್ಯಪ್​ ಯಾವುದು?


Updated:July 4, 2018, 12:19 PM IST
ಫೇಸ್​ಬುಕ್​ ಸ್ಥಗಿತಗೊಳಿಸುವ ಆ ಮೂರು ಆ್ಯಪ್​ ಯಾವುದು?

Updated: July 4, 2018, 12:19 PM IST
ನವದೆಹಲಿ: ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಹೆಚ್ಚು ಪ್ರಚಾರಕ್ಕೆ ಬಾರದ ತನ್ನ ಮೂರು ಆ್ಯಪ್​ಗಳನ್ನು ಮುಚ್ಚಲು ತೀರ್ಮಾನಿಸಿದೆ ಪ್ರಕಟಣೆ ಹೊರಡಿಸಿದೆ.

ಫೇಸ್​ಬುಕ್​ ಕಳೆದ ವರ್ಷ ಸ್ವಾಧೀನ ಪಡೆದುಕೊಂಡಿರುವ ಟಿಬಿಹೆಚ್​​ ಆ್ಯಪ್​ ಸೇರಿದಂತೆ ಹಲ್ಲೋ, ಮೂವ್ಸ್​ ಆ್ಯಪ್​ಗಳು ಅತ್ಯಂತ ಕಡಿಮೆ ಬಳಕೇದಾರರನ್ನು ಹೊಂದಿದ್ದು, ಹೀಗಾಗಿ ಈ ಆ್ಯಪ್​ಗಳ ಬಳಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ.

2015ರಲ್ಲಿ ಬ್ರೆಝಿಲ್​, ನೈಜೀರಿಯಾ, ಮತ್ತು ಅಮೆರಿಕದ ಆ್ಯಂಡ್ರಾಯ್ಡ್​ ಬಳಕೇದಾರರಿಗೆಂದೇ ಹಲ್ಲೋ ಆ್ಯಪ್​ ಬಿಡುಗಡೆಯಾಗಿತ್ತು, ಇದರಲ್ಲಿ ತಮ್ಮ ಮೊಬೈಲ್​ನಲ್ಲಿರುವ ಕಾಂಟಾಕ್ಟ್​​ ಬಳಸಿಕೊಂಡು ಫೇಸ್​ಬುಕ್​ನಲ್ಲಿ ವ್ಯಕ್ತಿಯನ್ನು ಹುಡುಕಬಹುದಾಗಿದೆ. ಆ್ಯಪ್​ ಮತ್ತು ಫೇಸ್​ಬುಕ್​ ತಮ್ಮ ಕಾಂಟಾಕ್ಟ್​ನ್ನು ಪರಸ್ಪರ ಸಿಂಕ್​ ಮಾಡಿಕೊಳ್ಳುತ್ತದೆ.

ಮೂವ್ಸ್​​ ಆ್ಯಪ್​ನ್ನು 2014ರಲ್ಲಿ ಖಾಸಗಿ ಸಂಸ್ಥೆಯೊಂದು ಹುಟ್ಟು ಹಾಕಿತ್ತು, ಈ ಆ್ಯಪ್​ ಫಿಟ್​ನೆಸ್​​ಗೆಂದೇ ಸಿದ್ಧ ಪಡಿಸಿದ್ದ ಆ್ಯಪ್​ ಆಗಿದ್ದು, ಆ್ಯಪ್​ನ ಬಳಕೇದಾರರ ದೈನಂದಿನ ನಡೆದಾಟದಿಂದ ಹಿಡಿದು, ಸೈಕ್ಲಿಂಗ್​, ರನ್ನಿಂಗ್​ ಎಲ್ಲವನ್ನೂ ಆ್ಯಪ್​ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತದೆ. ಈ ಆ್ಯಪನ್ನು ಫೇಸ್​ಬುಕ್​ ತನ್ನ ವಶಕ್ಕೆ ಪಡೆದುಕೊಂಡ ಬಳಿಕ ಯಾವುದೇ ಅಪ್​ಡೇಟ್​ಗಳನ್ನು ನೀಡಿಲ್ಲ. ಇದೇ ತಿಂಗಳ ಅಂತ್ಯದಲ್ಲಿ ಈ ಆ್ಯಪ್​ ಕೆಲಸ ನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆ.

ಟಿಬಿಹೆಚ್​ ಆ್ಯಪ್​ ಅಮೆರಿಕದ ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿಕೊಂಡು ಮಾಡಿರುವ ಆ್ಯಪ್​ ಆಗಿದ್ದು, ಸಾಮಾಜಿಕ ಜಾಲತಾಣದ ಬಳಕೆಗಾಗಿ ಈ ಆ್ಯಪ್​ನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷ ಈ ಆ್ಯಪ್​ನ್ನು ಫೇಸ್​ಬುಕ್​ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.

ಇದೀಗ ಈ ಎಲ್ಲಾ ಆ್ಯಪ್​ಗಳ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಆದರೆ ಇದರ ಬಳಕೇದಾರರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳುವುದಿಲ್ಲ ಎಂದು ಫೇಸ್​ಬುಕ್​ ಹೇಳಿಕೊಂಡಿದೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ