Smartphones: 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ 5000mAh ಬ್ಯಾಟರಿಯ ಈ ಸ್ಮಾರ್ಟ್​ಫೋನ್​ಗಳು!

Best Smartphones: ಉತ್ತಮ ಬ್ಯಾಟರಿ ಸಾಮರ್ಥ್ಯವಿರುವ 20,000 ರೂ. ದೊಳಗಿನ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದಾಗಿದ್ದು ಡಿವೈಸ್‌ಗಳ ವಿವರ ಇಲ್ಲಿದೆ.

ಸ್ಮಾರ್ಟ್​ಫೋನ್​

ಸ್ಮಾರ್ಟ್​ಫೋನ್​

  • Share this:
    ಸ್ಮಾರ್ಟ್‌ಫೋನ್ (Smartphone) ಖರೀದಿ ಮಾಡುವಾಗ ನಾವು ಮುಖ್ಯವಾಗಿ ಗಮನದಲ್ಲಿರಿಸಬೇಕಾದ ಅಂಶವೆಂದರೆ ಡಿವೈಸ್ ಬ್ಯಾಟರಿಯಾಗಿದೆ (Battery). ಫೋನ್ ಕ್ಯಾಮೆರಾ (Phone Camera), ಸಂಗ್ರಹಣೆ ಇವೆಲ್ಲವೂ ಅತ್ಯುತ್ತಮವಾಗಿದ್ದು ಬ್ಯಾಟರಿ ವಿಭಾಗದಲ್ಲಿ ಡಿವೈಸ್ ವಿಫಲತೆ ಅನುಭವಿಸಿದರೆ ಇದು ಅತ್ಯಂತ ಕೆಟ್ಟ ಸ್ಥಿತಿಯಾಗಿ ಮಾರ್ಪಡಬಹುದು. ಇತ್ತೀಚಿನ ದಿನಗಳಲ್ಲಿ ಉತ್ತಮ ಬ್ಯಾಟರಿ ಬಾಳ್ವಿಕೆ ಇರುವ ಡಿವೈಸ್‌ಗಳು ಕೂಡ ಮಾರುಕಟ್ಟೆಗೆ ಕಾಲಿಟ್ಟಿದ್ದು, ಕೊಂಚ ಹೆಚ್ಚು ಹಣ ನೀಡಿ ಇದನ್ನು ಖರೀದಿಸಬಹುದು. ಆದರೆ ಇಂತಹ ಡಿವೈಸ್‌ಗಳಿಂದ ನಿಮಗೆ ನಷ್ಟ ಖಂಡಿತ ಉಂಟಾಗುವುದಿಲ್ಲ. ಉತ್ತಮ ಬ್ಯಾಟರಿ ಸಾಮರ್ಥ್ಯವಿರುವ 20,000 ರೂ. ದೊಳಗಿನ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದಾಗಿದ್ದು ಡಿವೈಸ್‌ಗಳ ವಿವರ ಇಲ್ಲಿದೆ.

    ಈ ಡಿವೈಸ್‌ಗಳು 5,000 mAh ಬ್ಯಾಟರಿ ಹೊಂದಿದ್ದು ನೀವು ಮಧ್ಯಮ ಬಳಕೆದಾರರಾಗಿದ್ದರೆ ಒಂದು ದಿನಕ್ಕಿಂತ ಹೆಚ್ಚು ಸಮಯ ಬರಲಿದೆ. ಹಾಗಿದ್ದರೆ 5000mAh ಬ್ಯಾಟರಿಯ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ನೀವು ಇದನ್ನು 20,000 ರೂ. ಗಳ ಒಳಗೆ ಖರೀದಿಸಬಹುದು.

    ರೆಡ್‌ಮಿ ನೋಟ್ 10S (Redmi Note 10S):

    ರೆಡ್‌ಮಿ ನೋಟ್ 10S ಶ್ಯೋಮಿ ಸೀರೀಸ್‌ನ ಹಲವಾರು ಫೋನ್‌ಗಳಲ್ಲಿ ಒಂದಾಗಿದೆ. 33W ವೇಗದ ಚಾರ್ಜಿಂಗ್ ಬೆಂಬಲಿಸುವ 5000mAh ಬ್ಯಾಟರಿ ಒದಗಿಸುತ್ತದೆ. ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಮೊದಲಾದ ಆ್ಯಪ್‌ಗಳನ್ನು ಬಳಸುವ ಜೊತೆಗೆ ಮನರಂಜನೆ ಪಡೆದುಕೊಳ್ಳಬಹುದಾಗಿದೆ. ರೆಡ್‌ಮಿ ನೋಟ್ 10S ತನ್ನ ವೈಶಿಷ್ಟ್ಯಗಳಿಗಾಗಿ ಉತ್ತಮ ಡಿವೈಸ್ ಆಗಿದೆ. ಈ ಡಿವೈಸ್‌ನ ಬೆಲೆ 14,999 ರೂ. ಗಳಾಗಿದೆ.

    ಇದನ್ನು ಓದಿ: Apple: ಎಂಜಿನಿಯರ್, ಡೆವಲಪರ್‌ಗಳಿಗೆ ಆ್ಯಪಲ್‌ ಕಂಪನಿ ನೀಡುವ ಸಂಬಳ ಎಷ್ಟು? ವಿವರ ಇಲ್ಲಿದೆ

    ರಿಯಲ್‌ಮಿ 8s (Realme 8s):

    ರಿಯಲ್‌ಮಿ ಇತ್ತೀಚೆಗೆ 8-ಸೀರೀಸ್‌ನಲ್ಲಿ 8s ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಫೋನ್ 5000mAh ಬ್ಯಾಟರಿ ಹೊಂದಿದ್ದು, ಬಂಡಲ್ ಚಾರ್ಜರ್ ಮೂಲಕ 33W ವೇಗದ ಚಾರ್ಜಿಂಗ್‌ ಬೆಂಬಲ ಹೊಂದಿದೆ. ನೆಟ್‌ಫ್ಲಿಕ್ಸ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಆ್ಯಪ್‌ಗಳನ್ನು ಬಳಸುವುದರೊಂದಿಗೆ ನೀವು ಗೇಮ್‌ಗಳನ್ನು ಆಡಬಹುದು. ಈ ಡಿವೈಸ್ ಕೂಡ 5ಜಿ ಫೋನ್ ಆಗಿದ್ದು ರೆಡ್‌ಮಿ ನೋಟ್ 10S ಗಿಂತ ವಿಶಿಷ್ಟವಾಗಿದೆ. ಡಿವೈಸ್ ಬೆಲೆ 17,999 ರೂ. ಆಗಿದೆ.

    ರಿಯಲ್‌ಮಿ ನರ್ಜೊ 30 (Realme Narzo 30):

    ರಿಯಲ್‌ಮಿ ನರ್ಜೊ ಸೀರೀಸ್ ಉತ್ತಮ ವಿಶೇಷತೆಗಳನ್ನು ಹೊಂದಿದೆ. ನರ್ಜೊ 30 ದೀರ್ಘಾವಧಿಯ 5000mAh ಬ್ಯಾಟರಿ ಒಳಗೊಂಡಿದೆ. ನೀವು ನಿಮ್ಮ ಬೇರೆ ಬೇರೆ ಸಾಮಾಜಿಕ ಆ್ಯಪ್‌ಗಳನ್ನು ಬಳಸುವುದರ ಜೊತೆಗೆ ಚಲನಚಿತ್ರಗಳನ್ನು ವೀಕ್ಷಿಸಿ ಇನ್ನಿತರ ಮನರಂಜನೆಗಳನ್ನು ಹೊಂದಬಹುದು. ಡಿವೈಸ್ ಬೆಲೆ 13,499 ರೂ. ಗಳಾಗಿದೆ.

    ಇದನ್ನು ಓದಿ: 5G ಪ್ರಯೋಗಕ್ಕಾಗಿ Reliance Jio ಜೊತೆ ಕೈಜೋಡಿಸಿದ Redmi India

    ಮೋಟೋರೋಲಾ ಮೋಟೋ ಜಿ9 (Motorola Moto G9)

    5000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮೋಟೋರೋಲಾವನ್ನು ಪಟ್ಟಿಯಲ್ಲಿ ಸೇರಿಸಲೇಬೇಕು. Moto G9, 5000mAh ಬ್ಯಾಟರಿ ಹೊಂದಿದ್ದು ಒಂದು ದಿನದ ಬ್ಯಾಟರಿ ಸಾಮರ್ಥ್ಯ ಒದಗಿಸಲಿದೆ. ಮಧ್ಯಮ ಬಳಕೆಗೆ ಈ ಡಿವೈಸ್ ಉತ್ತಮವಾಗಿದ್ದು, ಆದರೆ ನೀವು ಹೆಚ್ಚು ಸಮಯ ಡಿವೈಸ್ ಬಳಸುತ್ತೀರಿ ಎಂದಾದಲ್ಲಿ ಇದು ಇನ್ನಷ್ಟು ಕಾರ್ಯನಿರ್ವಹಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂಬ ಸಲಹೆಯನ್ನು ನಾವು ನೀಡುತ್ತಿದ್ದೇವೆ. ಮೋಟೋರೋಲಾ ಮೋಟೋ G9 ಉನ್ನತ ಮಟ್ಟದ ಬಜೆಟ್ ಫೋನ್ ಆಗಿದ್ದು, ಇದು ನಿಮಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ, ಸ್ನ್ಯಾಪ್‌ಡ್ರ್ಯಾಗನ್‌ 662 ಪ್ರೊಸೆಸರ್‌ ಅನ್ನು ಡಿವೈಸ್ ಒಳಗೊಂಡಿದೆ. ಡಿವೈಸ್ ಬೆಲೆ 10,999 ರೂ. ಗಳಾಗಿದೆ.
    Published by:Harshith AS
    First published: