• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Samsung Smartphones: ಬಿಡುಗಡೆಗೂ ಮೊದಲೇ ಲೀಕ್ ಆಯ್ತು ಈ ಸ್ಮಾರ್ಟ್​​ಫೋನ್​ ಫೀಚರ್ಸ್​! 200ಎಮ್​ಪಿ ಕ್ಯಾಮೆರಾ ಸೆನ್ಸಾರ್​

Samsung Smartphones: ಬಿಡುಗಡೆಗೂ ಮೊದಲೇ ಲೀಕ್ ಆಯ್ತು ಈ ಸ್ಮಾರ್ಟ್​​ಫೋನ್​ ಫೀಚರ್ಸ್​! 200ಎಮ್​ಪಿ ಕ್ಯಾಮೆರಾ ಸೆನ್ಸಾರ್​

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸೀರಿಸ್​​ನಿಂದ ಬಿಡುಗಡೆಯಾಗುವ ಸ್ಮಾರ್ಟ್​​​ಫೋನ್​ಗಳಲ್ಲಿ ಗ್ಯಾಲಕ್ಸಿ ಎಸ್​​23 ಅಲ್ಟ್ರಾ ಸ್ಮಾರ್ಟ್​ಫೋನ್​ ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿರುತ್ತದೆ ಎಂದು ಸುದ್ದಿಯಾಗಿತ್ತು. ಅದೇ ರೀತಿ ಈ ಸ್ಮಾರ್ಟ್​​ಫೋನ್​ ಫೀಚರ್ಸ್​ ಸೋಶಿಯಲ್​ ಮೀಡಿಯಾದಲ್ಲಿ ಸೋರಿಕೆಯಾಗಿದೆ

ಮುಂದೆ ಓದಿ ...
  • Share this:

    ಮೊಬೈಲ್​​ ಮಾರುಕಟ್ಟೆಯಲ್ಲಿ (Mobile Market) ಇದುವರೆಗೆ ಹಲವಾರು ಕಂಪೆನಿಗಳು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದಲ್ಲದೆ ಮಾರುಕಟ್ಟೆಗೆ ಹೊಸ ಹೊಸ ಕಂಪೆನಿಗಳು ಸಹ ಲಗ್ಗೆಯಿಡುತ್ತಿದೆ. ಆದರೆ ಹಿಂದಿನಿಂದ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಂತಹ ಮೊಬೈಲ್​ಗಳು ಈಗಲೂ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಲೇ ಇದೆ. ಜನಪ್ರಿಯ ಮೊಬೈಲ್​ ಕಂಪೆನಿಗಳಲ್ಲಿ ಒಂದಾದ ಸ್ಯಾಮ್​ಸಂಗ್ (Samsung)​ ಈ ಹಿಂದೆ ತನ್ನ ಬ್ರಾಂಡ್​​ನ ಅಡಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸೀರಿಸ್​ನ (Samsung Galaxy S23 Ultra) ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅದರಲ್ಲೂ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್​ ತನ್ನ ಹೆಸರಲ್ಲೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. 


    ಹೌದು, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸೀರಿಸ್​​ನಿಂದ ಬಿಡುಗಡೆಯಾಗುವ ಸ್ಮಾರ್ಟ್​​​ಫೋನ್​ಗಳಲ್ಲಿ ಗ್ಯಾಲಕ್ಸಿ ಎಸ್​​23 ಅಲ್ಟ್ರಾ ಸ್ಮಾರ್ಟ್​ಫೋನ್​ ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿರುತ್ತದೆ ಎಂದು ಸುದ್ದಿಯಾಗಿತ್ತು. ಅದೇ ರೀತಿ ಈ ಸ್ಮಾರ್ಟ್​​ಫೋನ್​ ಫೀಚರ್ಸ್​ ಸೋಶಿಯಲ್​ ಮೀಡಿಯಾದಲ್ಲಿ ಸೋರಿಕೆಯಾಗಿದೆ


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್ ಫೀಚರ್ಸ್​​


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್‌ಫೋನ್ ಬೊಟಾನಿಕ್ ಗ್ರೀನ್, ಕಾಟನ್ ಫ್ಲವರ್, ಮಿಸ್ಟಿ ಲಿಲಾಕ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಬರುವುದು ಖಚಿತವಾಗಿದೆ. ಇನ್ನು ಈ ಹೊಸ ಸ್ಮಾರ್ಟ್‌ಫೋನ್​ ಪ್ರೊಸೆಸರ್​ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು ಸ್ನಾಪ್​ಡ್ರಾಗನ್​ 8 ಜೆನ್​ 2 ಪ್ರೊಸೆಸರ್ ಹೊಂದಿರಲಿದ್ದು, ಕರ್ವ್ಡ್ ಡಿಸ್‌ಪ್ಲೇ ಮತ್ತು ಮ್ಯಾಟ್ ಫಿನಿಶ್‌ನೊಂದಿಗೆ ಎಲ್ಇಡಿ ಫ್ಲ್ಯಾಷ್ ಲೈಟ್​​ ಜೊತೆಗೆ ನಾಲ್ಕು ಕ್ಯಾಮೆರಾ ಸೆನ್ಸಾರ್​​ಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್​​​ಫೋನ್​ನ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್​ ಅನ್ನು ಇದು ಹೊಂದಿದೆ.




    ಕ್ಯಾಮೆರಾ ಫೀಚರ್ಸ್​


    ಸ್ಯಾಮ್​ಸಂಗ್​ ಕಂಪೆನಿಯಿಂದ ಬಿಡುಗಡೆಯಾಗುವ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್​ ಇದೀಗ ಕ್ಯಾಮೆರಾ ಫೀಚರ್ಸ್​​ ಬಹಿರಂಗವಾಗಿದೆ. ಈ ಮಾಹಿತಿಯಂತೆ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್‌ಫೋನ್ 200 ಮೆಗಾಪಿಕ್ಸೆಲ್​ ಸಾಮರ್ಥ್ಯದ ಸ್ಯಾಮ್‌ಸಂಗ್ ಹೆಚ್​​ಪಿ2 ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್


    ಇನ್ನು ಇದರಲ್ಲಿ 12 ಮೆಗಾಪಿಕ್ಸೆಲ್​ ಸೋನಿ IMX564 ಅಲ್ಟ್ರಾ ವೈಡ್ ಕ್ಯಾಮೆರಾ, 10 ಮೆಗಾಪಿಕ್ಸೆಲ್​ ಸೋನಿ IMX756 ಟೆಲಿಫೋಟೊ ಮತ್ತು 10 ಮೆಗಾಪಿಕ್ಸೆಲ್​ ಸೋನಿ IMX756 10x ಟೆಲಿಫೋಟೊ ಸೆನ್ಸಾರ್​​ಗಳನ್ನು ಈ ಸ್ಮಾರ್ಟ್​​ಫೋನ್ ಹೊಂದಿರುತ್ತದೆ ಮತ್ತು 200 ಮಿಲಿಯನ್ ಪಿಕ್ಸೆಲ್‌ಗಳನ್ನು ಆಟೋಫೋಕಸಿಂಗ್ ಸಿಸ್ಟಮ್‌ ಅನ್ನು ಒಳಗೊಂಡಿರುತ್ತದೆ ಎಂದು ಕಂಪೆನಿ ಹೇಳಿದೆ.


    ಬ್ಯಾಟರಿ ಫೀಚರ್ಸ್​


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್​ ಮುಖ್ಯವಾಗಿ 5000mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿರುತ್ತದೆ. ಈ ಬ್ಯಾಟರಿಯು 45W ವೇಗದ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿರುತ್ತದೆ.


    ಬೆಲೆ ಮತ್ತು ಲಭ್ಯತೆ


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್ ಅನ್ನು  $1,400 ಅಂದರೆ ಭಾರತದಲ್ಲಿ ಸುಮಾರು ರೂ. 1,13,400 ಎಂದು ಗುರುತಿಸಲಾಗಿದೆ. ಈ ಬೆಲೆಯನ್ನು ಹೊಂದಿರುವ ಸ್ಮಾರ್ಟ್​​ಫೋನ್​​ 12 ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್​ ಆಯ್ಕೆಯನ್ನು ಹೊಂದಿರುತ್ತದೆ. ಇನ್ನು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್​ ಖರೀದಿಸುವ ಪ್ಲ್ಯಾನ್​ನಲ್ಲಿದ್ದವರಿಗೆ ಸ್ಯಾಮ್​ಸಂಗ್​ನ ಅಧಿಕೃತ ವೆಬ್​ಸೈಟ್​ ಮೂಲಕ ಪ್ರೀಬುಕಿಂಗ್ ಮಾಡುವ ಮೂಲಕ ಖರೀದಿಸಬಹುದಾಗಿದೆ.


    ಇದನ್ನೂ ಓದಿ: 5ಜಿ ಫೋನ್ ಖರೀದಿಸುವವರಿಗೆ ಗುಡ್​ ನ್ಯೂಸ್​! ಫ್ಲಿಪ್​ಕಾರ್ಟ್​​ನಲ್ಲಿ ಸ್ಮಾರ್ಟ್​​ಫೋನ್​ಗಳ ಮೇಲೆ ಬಂಪರ್ ಆಫರ್


    ಫೆಬ್ರವರಿಯಲ್ಲಿ ರಿಲೀಸ್​


    ಇನ್ನು ಸ್ಯಾಮ್​ಸಂಗ್​ ಕಂಪೆನಿ ಆಯೋಜಿಸಿರುವ ಗ್ಯಾಲಕ್ಸಿ ಅನ್​​ಪ್ಯಾಕ್ಡ್​ 2023 ಕಾರ್ಯಕ್ರಮ ದೇಶದಲ್ಲಿ ಇದೇ ಫೆಬ್ರವರಿ 1 ರಂದು ರಾತ್ರಿ 11.30 ಕ್ಕೆ ಆರಂಭವಾಗುತ್ತದೆ. ಇನ್ನು ಈ ಕಾರ್ಯಕ್ರಮದಲ್ಲಿ  ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ ಎಸ್​​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

    Published by:Prajwal B
    First published: